ಆರಂಭಿಕವಾಗಿ ನಗುಮೊಗದಿಂದ, ನಟಿಸಿದ ಬೆರಳೆಣಿಕೆಯಷ್ಟು ಪಾತ್ರಗಳಿಂದ ಸಿನಿಮಾ ಮತ್ತು ಕಿರುತೆರೆ ಪ್ರೇಕ್ಷಕರಿಗೆ ಇಷ್ಟವಾಗಿದ್ದಾಕೆ ಕೃಷಿ ತಾಪಂಡ. ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ಮಕಾಣಿಸಿಕೊಳ್ಳುತ್ತಿದ್ದ ಈ ಹುಡುಗಿ ಏಕಾಏಕಿ ವರ್ಷಗಟ್ಟಲೆ ಗಾಯಬ್ ಆಗಿ ಬಿಟ್ಟಿದ್ದಳು. ಆ ಅವಧಿಯಲ್ಲೀಕೆ ಮಾಡಿಕೊಂಡಿದ್ದದ್ದು ಪಕ್ಕಾ ಭಾನಗಡಿ ಎಂಬುದು ಜಾಹೀರಾದದ್ದು ರೊಕ್ಕದ ಕುಳ ಅರವಿಂದ್ ವೆಂಕಟೇಶ ರೆಡ್ಡಿ ಎಂಬಾತ ಸಂತ್ರಸ್ತನ ಅವತಾರದಲ್ಲಿ ಪ್ರತ್ಯಕ್ಷನಾದಾಗಲೇ. ಹಾಗೆ ಮಾಧ್ಯಮಗಳೆದುರು ಬಂದಿದ್ದ ರೆಡ್ಡಿ ಕೃಷಿ ಮಾಡಿದ್ದಳೆನ್ನಲಾದ ದೋಖಾ ಪುರಾಣವನ್ನು ಇಂಚಿಂಚಾಗಿ ಹಂಚಿಕೊಂಡಿದ್ದ. ಆತನ ಮಾತುಗಳಲ್ಲಿ ಪ್ರಾಮಾಣಿಕತೆಯ ಪಸೆ ಇದ್ದುದರಿಂದ, ಕೃಷಿಯ ಕಡೆಯಿಂದಾಗಿರೋ ತಪ್ಪುಗಳೇ ಢಾಳಾಗಿದ್ದದ್ದರಿಂದ ನಗುಮೊಗದ ಹಿಂದೆಯೂ ಕರಾಳ ಆಸ್ತವವಿರಬಹುದೆಂಬ ಅಂದಾಜು ಎಲ್ಲರಿಗೂ ಸಿಕ್ಕಿತ್ತು. ಅದಾದ ಬಳಿಕ ಒಂದಷ್ಟು ಪಾಡ್ಕಾಸ್ಟುಗಳಲ್ಲಿ ವೇದಾಂತ ಮಾತಾಡಲಾರಂಭಿಸಿದ್ದ ಕೃಷಿ ತಾಪಂಡಗೀಗ ಮತ್ತೆ ಮಂಡೆ ಬಿಸಿ ಶುರುವಾಗಿದೆ; ಗೆಣೆಕಾರ ವಿಶಾಖ್ ಎಂಬಾತ ಆಕೆಯ ಅಂತಃಪುರದಲ್ಲಿಯೇ ನೇಣು ಬಿಗಿದುಕೊಂಡು ಗೋಣು ಚೆಲ್ಲುವ ಮೂಲಕ!

ಕೃಷಿ ಮನೆಯೊಳಗೇ ಹೆಣವಾದ!
ಕೃಷಿ ತಾಪಂಡ ಹಾಗೂ ಉದ್ಯಮಿ ಅರವಿಂದ್ ವೆಂಕಟೇಶ ರೆಡ್ಡಿ ನಡುವಿನ ವಿವಾದದಲ್ಲಿ ದೊಡ್ಡ ಮಟ್ಟದಲ್ಲಿಯೇ ಕೇಳಿ ಬಂದಿದ್ದ ಹೆಸರು ವಿಶಾಖ್ನದ್ದು. ತಾನು ಕೇಳಿದಷ್ಟು ಹಣ, ಆಸ್ತಿ, ವಾಹನ ಸೇರಿದಂತಗೆ ಎಲ್ಲವನ್ನೂ ಕೊಟ್ಟರೂ ಕೂಡಾ ಕೃಷಿ ಮತ್ತೋರ್ವನೊಂದಿಗೆ ಸಂಬಂಧ ಹೊಂದಿದ್ದಳೆಂಬುದು ರೆಡ್ಡಿಯ ಆರೋಪವಾಗಿತ್ತು. ಇದರ ಜೊತೆಗೇ, ತನ್ನದೇ ಕಾಸಲ್ಲಿ ಮಾಲ್ಡೀವ್ಸ್ಗೆ ಸೋಲೋ ಟ್ರಿಪ್ ಹೋಗೋದಾಗಿ ಹೇಳಿದ್ದ ಕೃಷಿ, ತನ್ನ ಬಾಯ್ಫ್ರೆಂಡ್ ಜೊತೆ ಸುತ್ತಾಡಿದ್ದಳು ಎಂಬಂಥಾ ಮಾತುಗಳನ್ನೂ ರೆಡ್ಡಿ ಆಡಿದ್ದ. ಹಾಗೆ ರೆಡ್ಡಿಯೊಂದಿಗೆ ಸಂಬಂಧದಲ್ಲಿರುವಾಗಲೇ ಕೃಷಿಯೊಂದಿಗೆ ಅಡ್ಡಾಡುತ್ತಿದ್ದಾತ ಉದ್ಯಮಿ ವೈಶಾಕ್ ಎಂಬ ಗುಮಾನಿ ಹಬ್ಬಿಕೊಂಡಿದ್ದದ್ದು ತಿಂಗಳ ಹಿಂದೆ ನಡೆದಿದ್ದ ಬೆದರಿಕೆ ಪುರಾಣವೊಂದರ ಮೂಲಕ.
ರೆಡ್ಡಿ ಬಳಿಯಿಂದ ಒಂದಷ್ಟು ಕೋಟಿ ಗುಂಜಿಕೊಳ್ಳಲು ಸ್ಕೆಚ್ಚು ಹಾಕಿದ್ದ ವೈಶಾಖ್ಗೆ ಸರಿಯಾಗಿಯೇ ಬಿಸಿ ಮುಟ್ಟಿತ್ತು. ಈ ಪ್ರಕರಣದಲ್ಲಿ ಅತ ಅರೆಸ್ಟ್ ಆಗಿದ್ದೂ ನಡೆದಿತ್ತು. ಇಂಥಾ ವೈಶಾಖ್ ಕೃಷಿ ತಾಪಂಡ ಇಲ್ಲದ ಸಮಯದಲ್ಲಿ, ಆಕೆಯದ್ದೇ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೃಷಿ ಅದೆಂಥಾದ್ದೀಓ ಪ್ರಕೃತಿ ಚಿಕಿತ್ಸೆಗೆ ಹೋಗಿದ್ದಾಗಲೇ ವೈಶಾಖ್ ಆಕೆಯ ಮೊಬೈಲಿಗೆ ಮೆಸೇಜು ಬಿಟ್ಟಿದ್ದಾನೆ. ಆ ಮೂಲಕ ತಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿಕೊಂಡಿದ್ದಾನೆ. ಕೃಷಿ ಕರೆ, ಮೆಸೇಜುಗಳ ಮೂಲಕ ಗೆಣೆಕಾರನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾಳೆ. ಆದರೂ ಕೂಡಾ ವೈಶಾಖ್ ಕೃಷಿಯ ಅಂತಃಪುರದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡು ಬಿಟ್ಟಿದ್ದಾನೆ!
ಸುಂದರ ಸಂಸಾರ ಛಿದ್ರವಾಗಿತ್ತು
ಆತ್ಮಹತ್ಯೆ ಮಾಡಿಕೊಂಡಿರುವ ವೈಶಾಖ್ ಕೂಡಾ ಉದ್ಯಮಿಯಾಗಿದ್ದವನು. ಆತನಿಗೆ ಅತೀವವಾಗಿ ಪ್ರೀತಿಸುವ ಹೆಂಡತಿಯಿದ್ದಳು. ಎದೆಮಟ್ಟ ಬೆಳೆದಿದ್ದ ಹದಿನಾಲಕ್ಕು ವರ್ಷದ ಮುದ್ದಾದ ಮಗನೂ ಇದ್ದ. ಉದ್ಯಮದಲ್ಲಿ ಹಂತ ಹಂತವಾಗಿ ಯಶ ಕಾಣುತ್ತಾ ಬಂದಿದ್ದ ವೈಶಾಖ್ಗೆ ಯಾವುದರಲ್ಲಿಯೂ ಕಡಿಮೆ ಇರಲಿಲ್ಲ. ಇದೀಗ ವೈಶಾಕ್ ಸಾವಿನ ನಂತರ ಹೊರ ಬೀಳುತ್ತಿರುವ ಸುದ್ದಿಗಳು ಮತ್ತು ಖುದ್ದು ಆತನ ಹೆಂಡತಿಯ ಹೇಳಿಕೆಯ ಪ್ರಕಾರ ಹೇಳೋದಾದರೆ, ಕೃಷಿ ತಾಪಂಡಳೊಂದಿಗಿನ ನಂಟಿನಿಂದಲೇ ವೈಶಾಖ್ ನೆಮ್ಮದಿ ಕೆಡಿಸಿಕೊಂಡಿದ್ದ. ಕೃಷಿಯ ಮೋಹಕ್ಕೆ ಬಿದ್ದು ತನ್ನ ಸುಂದರ ಸಂಸಾರವನ್ನು, ಖಾಸಗಿ ಬದುಕಿನ ನೆಮ್ಮದಿಯನ್ನು ಅಕ್ಷರಶಃ ಕಳೆದುಕೊಂಡಿದ್ದ.
ಗಂಡ, ಮಗು ಸೇರಿದಂತೆ ಪುಟ್ಟ ಸಂಸಾರವನ್ನೇ ಪ್ರಪಂಚವಾಗಿಸಿಕೊಂಡಿದ್ದ ವೈಶಾಖ್ ಹೆಂಡತಿಗೆ ವರ್ಷಾಂತರಗಳಿಂದಲೇ ಗಂಡನ ಮೇಲೊಂದು ಅನುಮಾನ ಮೂಡಿಕೊಂಡಿತ್ತು. ಕೃಷಿಯೊಂದಿಗಿನ ಮೋಹಕ್ಕೆ ಬಿದ್ದಿದ್ದ ವೈಶಾಖ್ ವೈಕ್ತಿತ್ವ, ಮಾತು, ವರ್ತನೆಗಳಲ್ಲಿ ಆಗಿದ್ದ ಬದಲಾವಣೆಗಳನ್ನು ಆ ಹೆಣ್ಣುಮಗಳು ಸೂಕ್ಷ್ಮವಾಗಿ ಗಮನಿಸುತ್ತಾ ಆಘಾತಗೊಂಡಿದ್ದರು. ಇದೆಲ್ಲವನ್ನೂ ವೈಶಾಖ್ ಚಾಲಾಕಿತನದಿಂದಲೇ ಸಂಭಾಳಿಸಿದ್ದ. ಕೃಷಿಯೊಂದಿಗೆ ಅಂತಾ ಯಾವ ಸಂಬಂಧವೂ ಇಲ್ಲ ಎಂಬಂತೆ ಬಿಂಬಿಸಿಕೊಂಡಿದ್ದ. ಆದರೆ, ತಿಂಗಳ ಹಿಂದೆ ಅರವಿಂದ ವೆಂಕಟೇಶ್ ರೆಡ್ಡಿಗೆ ಕೊರಿಯರ್ ಮೂಲಕ ಬೆದರಿಕೆ ಹಾಕುವ ದುಸ್ಸಾಹಸ ಮಾಡಿ ತಗುಲಿಕೊಂಡ ನೋಡಿ? ಆ ಮೂಲಕ ವೈಶಾಖ್ ತನ್ನ ಮಡದಿಯ ಮುಂದೆ, ಹೆತ್ತವರ ಮುಂದೆ ಬೆತ್ತಲಾಗಿದ್ದ. ಈಗಷ್ಟೇ ಜಗತ್ತಿನತ್ತ ಅಬೋಧ ಕಣ್ಣುಗಳಿಂದ ದಿಟ್ಟಿಸುತ್ತಿದ್ದ ಪುಟ್ಟ ಮಗನ ಮುಂದೆ ವಿಲನ್ ಆಗಿದ್ದ. ಅಲ್ಲಿಗೆ ವೈಶಾಖ್ನ ಸುಂದರ ಸಂಸಾರ ಮತ್ತೆಂದೂ ಸರಿ ಮಾಡಲಾರದಂತೆ ಛಿದ್ರಗೊಂಡಿತ್ತು.
ವೈಶಾಖ್ನ ಮೂರ್ಖ ನಡೆ
ಕೃಷಿ ತಾಪಂಡ ಉದ್ಯಮಿ ರೆಡ್ಡಿಯೊಂದಿಗೆ ಸಂಬಂಧದಲ್ಲಿರುವಾಗಲೇ ವೈಶಾಖ್ ಜೊತೆಗೂ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದಳೆಂಬ ಆರೋಪವೂ ಕೇಳಿ ಬಂದಿತ್ತು. ಖುದ್ದು ರೆಡ್ಡಿ ಇದೇ ಅರ್ಥ ಹೊಮ್ಮಿಸುವ ಆರೋಪಗಳನ್ನು ಮಾಡಿದ್ದ. ಅದೆಲ್ಲವೂ ನಿಜವೆಂಬುದು ಕೃಷಿಯ ಗೆಣೆಕಾರ ವೈಶಾಖ್ನ ಮೂರ್ಖ ನಡೆಯಿಂದಲೇ ಸಾಬೀತಾಗಿತ್ತು. ವೈಶಾಖ್ ಇದೇ ವರ್ಷದ ಜನವರಿ ಇಪ್ಪತ್ನಾಲಕ್ಕನೇ ತಾರೀಕಿನಂದು ಅನಾಮಧೇಯ ಕೊರಿಯರ್ ಮೂಲಕ ಅರವಿಂದ ವೆಂಕಟೇಶ್ ರೆಡ್ಡಿಗೆ ಬೆದರಿಕೆ ಪತ್ರ ರವಾನಿಸಿದ್ದ. ಅದರಲ್ಲಿ ಒಂದಷ್ಟು ವಿಚಾರಗಳನ್ನು ನಮೂದಿಸಿದ್ದ. ಕೃಷಿ ತಾಪಂಡಳೊಂದಿಗಿನ ವಿವಾದವನ್ನು ಖಾಸಗಿಯಾಗಿ ಬಗೆಹರಿಸಿಕೊಂಡು ಆಕೆಯ ತಂಟೆಗೆ ಬಾರದಂತೆ ತಾಕೀತು ಮಾಡಿದ್ದ.
ಇದಲ್ಲದೇ ಕೃಷಿಯೊಂದಿಗಿನ ವಿವಾದಕ್ಕೆ ಸಂಬಂಧಿಸಿದಂತೆ ಆರೇಳು ಕೋಟಿ ಕೊಟ್ಟರೆ ಬಚಾವಾಗಬದೆಂಬಂತೆ ಬೆದರಿಕೆ ಹಾಕಿದ್ದ. ಡ್ರೈವರ್ ಮೂಲಕ ಈ ಹಣವನ್ನು ತಲುಪಿಸಬೇಕೆಂದೂ ಗಡುವು ನಿಗಧಿ ಮಾಡಿದ್ದ. ಅದಾಗಲೇ ಕೃಷಿ ಸೃಷ್ಟಿಸಿದ್ದ ರಂಖಲುಗಳಿಂದ ರೋಸತ್ತು ಹೋಗಿದ್ದ ರೆಡ್ಡಿ ಈ ಬೆದರಿಕೆ ಕಂಡು ರೊಚ್ಚಿಗೆದ್ದವನೇ, ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಅದರ ಹಾದಿ ಹಿಡಿದು ಹೊರಟ ಪೊಲೀಸರು ಅತ್ಯಂತ ಲೀಲಾಜಾಲವಾಗಿ ಈ ಪ್ರಕರಣವನ್ನು ಬೇಧಿಸಿದ್ದರು. ಯಾಕೆಂದರೆ, ಮೂರ್ಖ ವೈಶಾಖ್ ತನಗೆ ಪರಿಚಯವಿದ್ದ ಗ್ಯಾರೇಜೊಂದರ ಹುಡುಗನ ಮೂಲಕ ಈ ಬೆದರಿಕೆ ಪತ್ರವನ್ನು ಕೊರಿಯರ್ ಮಾಡಿದ್ದ. ಆ ಕೊರಿಯರ್ ಕಳಿಸಿದ್ದ ಸೆಂಟರನ್ನು ಪತ್ತೆಹಚ್ಚಿ, ಆ ಹುಡುಗನನ್ನು ವಿಚಾರಿಸುತ್ತಲೇ ಅದರ ಹಿಂದಿರೋದು ವೈಶಾಖ್ ಎಂಬ ವಿಚಾರ ಖಾತರಿಯಾಗಿತ್ತು. ಆತನನ್ನು ಪೊಲೀಸರು ಬಂಧಿಸಿದ್ದು ಕೃಷಿ ತಾಪಂಡಾಳ ಮನೆಯಿಂದಲೇ!
ಕೃಷಿಯದ್ದು ಇದೆಂಥಾ ಹಳವಂಡ?
ಅಷ್ಟಕ್ಕೂ ಕೃಷಿ ಮತ್ತು ಅರವಿಂದ್ ವೆಂಕಟೇಶ ರೆಡ್ಡಿ ನಡುವಿನ ಅಫೇರಿನ ಕಿಸುರು ಮೊದಲು ಜಾಹೀರಾದದ್ದೇ ಕೃಷಿ ತಾಪಂಡಳ ಮೂಲಕ. ಏಕಾಏಕಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಕೃಷಿ, ತನಗೆ ಉದ್ಯಮಿ ಅರವಿಂದ ವೆಂಕಟೇಶ್ ರೆಡ್ಡಿ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆಂಬ ಆರೋಪ ಮಾಡಿದ್ದಳು. ಆ ಸಂಬಂಧವಾಗಿ ಬಂಧನಕ್ಕೀಡಾಗಿದ್ದ ರೆಡ್ಡಿ ಕ್ಷಣಾರ್ಧದಲ್ಲಿಯೇ ಬೇಲ್ ಪಡೆದು ವಾಪಾಸಾದವನೇ ಕೃಷಿಯ ಒಂದೊಂದೇ ಕಲ್ಯಾಣ ಗುಣಗಳನ್ನು ಎಳೆ ಎಳೆಯಾಗಿ ತೆರೆದಿಕಟ್ಟಿದ್ದ. ಕನಿಷ್ಠ ಪಕ್ಷ ಸಾರ್ವಜನಿಕವಾಗಿ, ಮಾಧ್ಯಮಗಳ ಮುಂದೆ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ನೈತಿಕತೆಯೂ ಇಲ್ಲದಂತೆ ಕೃಷಿ ಮರೆಗೆ ಸರಿದು ಬಿಟ್ಟಿದ್ದಳು. ಇಂಥಾ ಕೃಷಿ ಇತ್ತೀಚೆಗೆ ಕೆಲ ಯೂಟ್ಯೂಬ್ ಚಾನೆಲ್ಲುಗಳ ಮೂಲಕ ತನ್ನ ವೇದನೆಗಳನ್ನು ಹಂಚಿಕೊಂಡಿದ್ದಳು. ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಏನೇನೋ ಒದರಾಡಲಾರಂಭಿಸಿದ್ದಳು. ಅದನ್ನು ಕೇಳಿದ ಒಂದಷ್ಟು ಮಂದಿ ಕನಿಕರ ಪಟ್ಟುಕೊಂಡಿದ್ದೂ ಇದೆ.

ಆದರೆ, ಅರವಿಂದ ರೆಡ್ಡಿಯ ಜೊತೆ ಸಂಬಂಧ ಹಳಸಿದ ನಂತರ ಸುಮ್ಮನಿರದ ಕೃಷಿ ವೈಶಾಖ್ ಮೂಲಕ ಬೆದರಿಕೆ ರವಾನಿಸಿ ಕಾಸು ಪೀಕಲು ಸ್ಕೆಚ್ಚು ಹಾಕಿದ್ದೇಕೆ? ಅದರಲ್ಲಿ ಕೃಷಿಯ ಕೈವಾಡ ಇಲ್ಲವೇ ಇಲ್ಲ ಅಂತಿಟ್ಟುಕೊಳ್ಳೋಣ; ತೀರಾ ಒಂದೇ ಮನೆಯಲ್ಲಿರುತ್ತಿದ್ದ ವೈಶಾಖ್ ಕೃಷಿಗೆ ಹೇಳದೆ ಇಂಥಾ ಕೆಲಸ ಮಾಡಲು ಸಾಧ್ಯವಾ? ತನ್ನಿಂದಲೇ ವೈಶಾಕ್ ಸಂಸಾರ ಹದಗೆಟ್ಟು, ಓರ್ವ ನಿಷ್ಪಾಪಿ ಹೆಣ್ಣು ಮಗಳು ನೊಂದು ನಿಂತಿದ್ದಾಗ ಎಲ್ಲವನ್ನು ಬಗೆಹರಿಸಲು ಕೃಷಿ ಯಾಕೆ ಪ್ರಯತ್ನಿಸಲಿಲ್ಲ? ಹೆಂಡತಿಯೊಂದಿಗೆ ಕಿತ್ತಾಡಿಕೊಂಡು ಬರುತ್ತಿದ್ದ ವೈಶಾಖ್ನನ್ನು ತನ್ನ ಮನೆಯಲ್ಲಿಯೇ ಯಾಕೆ ಬಿಟ್ಟುಕೊಳ್ಳುತ್ತಿದ್ದಳು? ಓರ್ವ ಹೆಣ್ಣಾಗಿ ಈ ಹಿಂದಿನ ವಿವಾದದಿಂದ ಅನುಭವಿಸಿದ ಮಾನಸಿಕ ಯಾತನೆಯ ಬಗ್ಗೆ ಸಂತ್ರಸ್ತೆಯಂತೆ ಹೇಳಿಕೊಳ್ಳುವ ಕೃಷಿಗೆ ಮತ್ತೋರ್ವ ಹೆಣ್ಣು ಮಗಳ ಕಣ್ಣೀರು ಯಾಕೆ ತಾಕಲಿಲ್ಲ? ಒಟ್ಟಾರೆಯಾಗಿ, ಕೃಷಿಯ ಕಡೆಯಿಂದಾಗಿರೋ ಯಡವಟ್ಟುಗಳು ಇಂಥಾ ಆಘಾತಗಳ ರೂಪದಲ್ಲಿ ಆಕೆಯೆಡೆಗೇ ಮರಳುತ್ತಿರುವಂತಿದೆ!
keywords: vaishak suicide case, krishi thapanda, avr reddy, crime

