ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಗೆಲುವಿನ ಪಥಕ್ಕೆ ಅಡಿಯಿರಿಸಿದ್ದಾಕೆ ರುಕ್ಮಿಣಿ ವಸಂತ್. ಸಾಮಾನ್ಯವಾಗಿ, ಇಂಥಾ ಗೆಲುವಿನ ನಂತರದಲ್ಲಿ ಒಂದು ವಿಫಲ ಸಿನಿಮಾದ ಭಾಗವಾದರೆ, ಅದು ಒಂದಿಡೀ ವೃತ್ತಿ ಬದುಕನ್ನೇ ತತ್ತರಿಸುವಂತೆ ಮಾಡೋದಿದೆ. ಆದರೆ, ರುಕ್ಮಿಣಿಯ ಪಾಲಿಗೆ ಅಂಥಾ ಹಿನ್ನಡೆಯೂ ಕೂಡಾ ಮಹಾ ಗೆಲುವೊಂದಕ್ಕೆ ಮುನ್ನುಡಿಯಾಗಿ ಬಿಟ್ಟಿತ್ತು. ವಿಜಯ್ ಸೇತುಪತಿ ಜೊತೆಗಿನ ಸಿನಿಮಾ ರುಕ್ಮಿಣಿ ಪಾಲಿಗೆ ಸ್ಪೀಡ್ ಬ್ರೇಕರಿನಂತಾಗಿತ್ತು. ಆ ನಂತರ ಕಾಂತಾರಾ ಚಾಪ್ಟರ್೧ ಮೂಲಕ ಪುಟಿದೆದ್ದಿದ್ದ ರುಕ್ಮಿಣಿಗೆ ಸಿಕ್ಕಿದ್ದು ಟಾಕ್ಸಿಕ್ನಂತಾ ದೊಡ್ಡ ಅವಕಾಶ. ಇದೀಗ ಟಾಕ್ಸಿಕ್ ಟ್ರೈಲರಿನಲ್ಲಿ ಮಿಂಚಿದ್ದ ಈಕೆಯ ಲುಕ್ಕು ಕಂಡು ಸಿನಿಮಾ ಪ್ರೇಮಿಗಳು ಥ್ರಿಲ್ ಆಗಿದ್ದಾರೆ. ಇಂಥಾ ಹೊತ್ತಿನಲ್ಲಿ ಬೇರೆ ಭಾಷೆಗಳ ಸಿನಿಮಾ ರಂಗಗಳಿಂದ ರುಕ್ಮಿಣಿ ಪಾಲಿಗೆ ಅವಕಾಶಗಳ ಸುಗ್ಗಿ ಆರಂಭವಾಗಿ ಬಿಟ್ಟಿದೆ!
ಸದ್ಯಕ್ಕೆ ಬಂದ ಅವಕಾಶವನ್ನೆಲ್ಲ ಬಾಚಿಕೊಂಡು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ರುಕ್ಮೀನಿ ಇಲ್ಲ. ಟಾಕ್ಸಿಕ್ನಂಥಾ ದೊಡ್ಡ ಸಿನಿಮಾಗಳಲ್ಲಿ ನಟಿಸಿದ ನಂತರ, ಅದನ್ನು ಸರಿದೂಗಿಸುವಂಥಾ ಸಿನಿಮಾಗಳನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಇದೀಗ ಒಂದಷ್ಟು ಅವಕಾಶಗಳನ್ನು ಅಮೂಲಾಗ್ರವಾಗಿ ಪರಿಶೀಲಿಸುತ್ತಿರುವ ರ೫ಉಕ್ಮಿಣಿ, ಮಲೆಯಾಳಂನ ಒಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರಂತೆ. ಈ ಮೂಲಕ ಮಲೆಯಾಳದ ಪ್ರಸಿದ್ಧ ನಟ ನಿವಿನ್ ಪೌಲಿಗೆ ನಾಯಕಿಯಾಗಿ ನಟಿಸಲಿರೋದು ಪಕ್ಕಾ ಆದಂತಾಗಿದೆ. ಈ ಸಿನಿಮಾದ ಬಗೆಗಿನ ಮತ್ತಷ್ಟು ಮಾಹಿತಿಗಳು ಶೀಘ್ರದಲ್ಲಿಯೇ ಜಾಹೀರಾಗುವ ನಿರೀಕ್ಷೆಗಳಿವೆ.
dhurandhar v/s toxic war: ಯಶ್ ವಿರುದ್ಧ ಮತ್ತೆ ಬಾಲಿವುಡ್ ಮಂದಿಯ ವಾರ್!
ಹಾಗೆ ನೋಡಿದರೆ, ಈ ಹುಡುಗಿಗೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಕೂಡಿ ಬಂದಿದ್ದೇ ಅಚಾನಕ್ಕಾಗಿ. ಅದಾಗಲೇ ನಟಿಯಾಗಬೇಕೆಂಬ ಕನಸಿಟ್ಟುಕೊಂಡಿದ್ದ ರುಕ್ಮಿಣಿಗೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಾಯಕಿಗಾಗಿ ಆಡಿಷನ್ ನಡೆಸುತ್ತಿರುವ ವಿಚಾರ ಗಮನಕ್ಕೆ ಬಂದಿತ್ತು. ತುಸು ಅಳುಕಿನೊಂದಿಗೆ ಚಿತ್ರತಂಡವನ್ನು ಸಂಪರ್ಕಿಸಿದ್ದ ರುಕ್ಮಿಣಿ, ನಂತರ ಒಂದಷ್ಟು ಸ್ಪರ್ಧೆಯನ್ನು ದಾಟಿಕೊಂಡು ನಾಯಕಿಯಾಗಿ ಆಯ್ಕೆಯಾಗಿದ್ದರು. ಅದಕ್ಕೆ ತನ್ನ ಪ್ರತಿಭೆ ಮಾತ್ರವಲ್ಲದೇ ಅದೃಷ್ಟವೂ ಕಾರಣವೆಂಬ ಮನಃಸ್ಥಿತಿ ಹೊಂದಿರುವ ರುಕ್ಮಿಣಿಯೀಗ ತಮಿಳು ಚಿತ್ರರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ. ಅದೇ ಹೊತ್ತಿನಲ್ಲಿ ತೆಲುಗಿನಲ್ಲಿಯೂ ಒಂದಷ್ಟು ಅವಕಾಶಗಳು ಅರಸಿ ಬರಲಾರಂಭಿಸಿವೆ. ಈ ನಡುವೆ ಅಧಿಕೃತವಾಗಿಯೇ ಮಲೆಯಾಳಂಗೂ ರುಕ್ಮಿಣಿಯ ಪಾದಾರ್ಪಣೆಯಾದಂತಾಗಿದೆ!
keywords: rukmini vasanth, toxic, yash

