Browsing: ಸ್ಪಾಟ್ ಲೈಟ್

ಅಧಿಪತ್ರ ಎಂಬ ಮೊದಲ ಸಿನಿಮಾ ಮೂಲಕವೇ ನಿರ್ದೇಶಕರಾಗಿ ಗಮನ ಸೆಳೆದಿದ್ದವರು ಚಯನ್ ಶೆಟ್ಟಿ. ಅವರೀಗ ಮ್ಯಾರೇಜ್ ಪಾರ್ಟಿ ಎಂಬ ಪಕ್ಕಾ ಮನೋರಜನಾತ್ಮಕ ಕಥೆಯೊಂದಿಗೆ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಕರಾವಳಿ ಬಾಗದ ಮಜವಾದ ಕಥೆಯನ್ನೊಳಗೊಂಡಿರುವ ಮ್ಯಾರೇಜ್…

ನಮ್ಮ ಕಣ್ಣೆದುರೇ ಕದಲುವ ಕಥನಗಳನ್ನು ಮನಸಿಗಿಳಿಯುವಂತೆ ಸಿನಿಮಾ ಚೌಕಟ್ಟಿಗೆ ಒಗ್ಗಿಸುವ ಮೂಲಕವೇ ನಿರ್ದೇಶಕರಾಗಿ ಗಮನ ಸೆಳೆದಿರುವವರು ಸಿದ್ದು ಪೂರ್ಣಚಂದ್ರ. ಇತ್ತೀಚೆಗಷ್ಟೇ ಬ್ರಹ್ಮ ಕಮಲ ಚಿತ್ರದೊಂದಿಗೆ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದ ಅವರೀಗ, ಪುಟ್ಟಣ್ಣನ ಕತ್ತೆ ಎಂಬ ಮತ್ತೊಂದು ಸೂಕ್ಷ್ಮ…

ವಿಮಲ್ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಅ ಡೇಟ್ ಚಿತ್ರ ಇಂದು ತೆರೆಗಂಡಿದೆ. ಮೊದಲ ದಿನವೇ ನೋಡುಗರ ಕಡೆಯಿಂದ ಮೂಡಿಕೊಂಡಿರುವ ಸಕಾರಾತ್ಮಕ ಪ್ರತಿಕ್ರಿಯೆಗಳು ಚಿತ್ರತಂಡವನ್ನು ಖುಷಿಗೊಳಿಸಿವೆ. ಈ ಖುಷಿ ಕೇವಲ ಚಿತ್ರತಂಡಕ್ಕೆ ಮಾತ್ರವೇ ಸೀಮಿತವಾದುದಲ್ಲ; ಅದು…

ನಿರ್ದೇಶಕನೋರ್ವನ ಕನಸು ಮತ್ತು ಕಲ್ಪನೆಯನ್ನು ದೃಶ್ಯಗಳ ಮೂಲಕ ಪರಿಣಾಮಕಾರಿಯಾಗಿ ಹಿಡಿದಿಡುವ ಸವಾಲಿನ ಕಸುಬು ಸಿನಿಮಾಟೋಗ್ರಫಿ. ಅಂಥಾ ಕೆಲಸವನ್ನು ದಶಕಗಳಿಂದೀಚೆಗೆ ಮಾಡಿಕೊಂಡು ಬರುತ್ತಾ, ಮೂಲತಃ ಪರಭಾಷಿಕರಾಗಿದ್ದರೂ ಕನ್ನಡ ಚಿತ್ರರಂಗದೊಂದಿಗೆ ಅವಿನಾಭಾವ ನಂಟು ಹೊಂದಿರುವವರು ಛಾಯಾಗ್ರಾಹಕ ವಡ್ಡೆ ದೇವೇಂದ್ರ…

ಮುಖ್ಯವಾಹಿನಿಯ ಹೀಓರೋಗಳೆಲ್ಲ ವರ್ಷಕ್ಕೆ ಕನಿಷ್ಠ ಒಂದಾದರೂ ಸಿನಿಮಾವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಲಿ… ಇಂಥಾದ್ದೊಂದು ಆಶಯ ಸಿನಿಮಾಸಕ್ತರದ್ದು. ಹೀಗೆ ಸ್ಟಾರ್ ನಟರು ನಿಯಮಿತವಾಗಿ ಸಿನಿಮಾ ಮಾಡುವ ಶಿಸ್ತು ರೂಢಿಸಿಕೊಂಡರೆ ಸಿನಿಮಾರಂಗದ ಹರಿವಿಗೊಂದು ಹೊಸಾ ಓಘ ಬರುತ್ತದೆಂಬುದು ಅದರ…

ಈ ಹಿಂದಿನ ದಿನಮಾನಗಳಿಗೆ ಹೋಲಿಸಿದರೆ ರಂಗಭೂಮಿಯ ಪ್ರಭೆ, ಅದರೆಡೆಗಿನ ಜನಸಾಮಾನ್ಯರ ಆಸಕ್ತಿ ಕೊಂಚ ಕಡಿಮೆಯಾಗುತ್ತಿದೆ ಎಂಬಂಥಾ ಕೊರಗು ರಂಗಾಸಕ್ತರಿಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗುತ್ತಿರೋಮ ಹೊಸಾ ತಲೆಮಾರನ್ನು ರಂಗಭೂಮಿಯತ್ತ ಆಕರ್ಷಿಸುವ ಬಗೆಗೂ ಚರ್ಚೆಗಳು ನಡೆಯುತ್ತಿವೆ. ಇಂಥಾ…

ಈಗೊಂದಷ್ಟು ದಿನಗಳಿಂದೀಚೆಗೆ ಪ್ರೇಕ್ಷಕರ ವಲಯದಲ್ಲಿ ಆಸಕ್ತಿ ಕೆರಳಿಸಿರುವ ಚಿತ್ರ `ಅ ಡೇಟ್’. ಈಗಾಗಲೇ ಹಲವಾರು ಕಿರುಚಿತ್ರಗಳ ಮೂಲಕ ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಸಂಪಾದಿಸಿಕೊಂಡಿದ್ದ ವಿಮಲ್ ರಾಜ್ ಎನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ…

ಪ್ರಯೋಗಾತ್ಮಕ ಸಿನಿಮಾಗಳು ಹಲವಾರು ಸವಾಲುಗಳಿಗೆ ಎದೆಗೊಡಬೇಕಾದ ಸಂದರ್ಭಗಳು ಸೃಷ್ಟಿಯಾಗೋದು ನಿಜ. ಆದರೆ, ಅಂಥಾ ಸಿನಿಮಾಗಳನ್ನು ಅತೀವ ಪ್ರೀತಿಯಿಂದ ಕೈ ಹಿಡಿಯಬಲ್ಲ ಸದಭಿರುಚಿಯ ಪ್ರೇಕ್ಷಕ ವರ್ಗ ನಮ್ಮಲ್ಲಿದೆ ಎಂಬುದೂ ಅಷ್ಟೇ ನಿಜ. ಈ ಕಾರಣದಿಂದಲೇ ಸಿದ್ಧಸೂತ್ರಗಳನ್ನು ಮೀರಿಕೊಂಡ…

ಜನಪ್ರಿಯ ಅಲೆಗಳ ಭರಾಟೆಯ ನಡುವೆ ಒಂದಷ್ಟು ಪ್ರಯೋಗಾತ್ಮಕ ಪಲ್ಲಟಗಳು ಜರುಗದಿದ್ದರೆ ಸಿನಿಮಾ ರಂಗ ನಿಂತ ನೀರಿನಂತಾಗಿ ಬಿಡುತ್ತದೆ. ಅಂಥಾದ್ದೊಂದು ಹೊಸಾ ಹರಿವನ್ನು ಸಾಧ್ಯವಾಗಿಸೋ ಛಾತಿಯಿರೋದು ಹೊಸಾ ತಂಡಗಳಿಗೆ ಮಾತ್ರ. ಅಂಥಾದ್ದೊಂದು ಹೊಸಾ ಹಾದಿಯಲ್ಲಿ ರೂಪುಗೊಂಡಿರುವ, ವಿಮಲ್…

ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಗೆಲುವಿನ ಪಥಕ್ಕೆ ಅಡಿಯಿರಿಸಿದ್ದಾಕೆ ರುಕ್ಮಿಣಿ ವಸಂತ್. ಸಾಮಾನ್ಯವಾಗಿ, ಇಂಥಾ ಗೆಲುವಿನ ನಂತರದಲ್ಲಿ ಒಂದು ವಿಫಲ ಸಿನಿಮಾದ ಭಾಗವಾದರೆ, ಅದು ಒಂದಿಡೀ ವೃತ್ತಿ ಬದುಕನ್ನೇ ತತ್ತರಿಸುವಂತೆ ಮಾಡೋದಿದೆ. ಆದರೆ, ರುಕ್ಮಿಣಿಯ ಪಾಲಿಗೆ…