Subscribe to Updates
Get the latest creative news from FooBar about art, design and business.
Author: Santhosh Bagilagadde
Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.
ಬಾಹುಬಲಿ ಪ್ರಭಾಸ್ ವೃತ್ತಿ ಬದುಕಿಗೆ ಕವಿದಿದ್ದ ಸೋಲಿನ ಕಾವಳವೀಗ ಕರಗಿದಂತಿದೆ. ಇನ್ನೇನು ಪ್ರಭಾಸ್ ವೃತ್ತಿ ಬದುಕಿನ ಕಥೆ ಮುಗೀತು ಎಂಬಂಥಾ ವಾತಾವರಣವಿರುವಾಗಲೇ, ಕಲ್ಕಿ ಮೂಲಕ ಗೆಲುವಿನ ಕಿಡಿ ಮೂಡಿಕೊಂಡಿತ್ತು. ಬಾಹುಬಲಿಯಂಥಾ ಸರಣಿ ಗೆಲುವಿನ ನಂತರ ಯಾವ ನಟನಾದರೂ ಈ ಪರಿಯ ಸೋಲು ಕಾಣುವ ಸ್ಥಿತಿ ಬರುತ್ತಿರಲಿಲ್ಲ. ಆದರೆ, ಪ್ರಭಾಸ್ ಪಾಲಿಗೆ ಮಾತ್ರ ಖುದ್ದು ಅಭಿಮಾನಿಗಳೇ ಕಂಗಾಲಾಗುವಂಥಾ ಸರಣಿ ಸೋಲುಗಳು ಎದುರಾಗಿದ್ದವು. ಹೀಗೆ ಡಾರ್ಲಿಂಗ್ ಪ್ರಭಾಸ್‌ಗೆ ಸುತ್ತಿಕೊಂಡಿದ್ದ ಸಾಲು ಸಾಲು ಸೋಲುಗಳನ್ನು ಹಲವರು ನಾನಾ ದಿಕ್ಕುಗಳಲ್ಲಿ ಪರಾಮರ್ಶೆಗೀಡು ಮಾಡಿದ್ದರು. ಆದರೆ, ಪ್ರಧಾನ ಕಾರಣವಾಗಿ ಕಂಡದ್ದು ಪ್ರಭಾಸನ ಸ್ನೇಹಶೀಲತೆ ಮತ್ತು ಸ್ನೇಹಕ್ಕಾಗಿ ಏನನ್ನಾದರೂ ಸಿದ್ಧವಿರುವ ಮನಃಸ್ಥಿತಿಯಷ್ಟೇ! ಮೇಲ್ಕಂಡ ವಿಶ್ಲೇಷಣೆಯನ್ನು ಪ್ರಭಾಸ್‌ರನ್ನು ದೂರದಿಂದ ಕಂಡ ಮಂದಿ ಒಪ್ಪಿಕೊಳ್ಳೋದಕ್ಕೆ ತುಸು ಕಷ್ಟವಾದೀತೆನೋ. ಆದರೀಗ ಪ್ರಭಾಸ್ ಮೇಲ್ಕಂಡ ವಿಚಾರವನ್ನು ಅನುಮೋದಿಸುವಂತೆ ನಡೆದುಕೊಂಡಿದ್ದಾರೆ. ಬಹುನಿರೀಕ್ಷಿತ ಚಿತ್ರವಾದ ರಾಜಾ ಸಾಬ್ ಚಿತ್ರದ ಸಂಭಾವನೆಯ ವಿಚಾರದಲ್ಲಿ ಪ್ರಭಾಸ್ ಎಲ್ಲರೂ ಮೆಚ್ಚುವಂತೆ ನಡೆದುಕೊಂಡಿದ್ದಾರೆ. ಸಾಮಾನ್ಯವಾಗಿ, ಸ್ಟಾರ್ ನಟರು ಸಿನಿಮಾದಿಂದ ಸಿನಿಮಾಕ್ಕೆ ಸಂಭಾವನೆ ಹೆಚ್ಚು ಮಾಡಿಕೊಳ್ಳುತ್ತಾರೆ.…
ಈ ಸಿನಿಮಾ ಮಂದಿ ತೋಪು ಪ್ರಾಡಕ್ಟನ್ನು ಬಚಾವು ಮಾಡಲು ಯಾವ್ಯಾವ ಥರದ ನೌಟಂಕಿ ನಾಟಕವಾಡಲೂ ಹಿಂದೆಮುಂದೆ ನೋಡುವವರಲ್ಲ. ಅಗತ್ಯ ಬಿದ್ದರೆ ಸ್ಟಾರ್ ನಟರೂ ಕೂಡಾ ಮೂರೂ ಬಿಟ್ಟವರಂತೆ ಇಂಥಾ ಬೃಹನ್ನಾಟಕದ ಪಾತ್ರಧಾರಿಗಳಾಗಿ ಬಿಡುತ್ತಾರೆ. ಈ ಮಾತಿಗೆ ಸದ್ಯದ ವಾತಾವರಣದಲ್ಲಿ ತಾಜಾ ಉದಾಹರಣೆಯಂತಿರುವಾತ ಉಳಗನಾಯಗನ್ ಕಮಲ್ ಹಾಸನ್. ಈ ಕ್ಷಣದ ತಕರಾರುಗಳೇನೇ ಇರಬಹುದು. ಅದರಾಚೆಗೆ ಕಮಲ್ ಓರ್ವ ಅದ್ಭುತ ನಟ. ಆದರೆ, ಸಿನಿಮಾ ಆಯ್ಕೆಯ ವಿಚಾರದಲ್ಲಿ ಅಷ್ಟೇ ಕೆಟ್ಟ ಟೇಸ್ಟು ಹೊಂದಿರುವ ನಟನೂ ಹೌದು. ಚಿತ್ರವಿಚಿತ್ರ ಪಾತ್ರಗಳಲ್ಲಿ ತನ್ನನ್ನು ತಾನು ಮೆರೆಸಬೇಕೆಂಬ ಇಚ್ಛೆ ಹೊಂದಿರೋ ಕಮಲ್, ಕಥೆಯ ಬಗ್ಗೆ ತಾತ್ಸಾರ ವಹಿಸುತ್ತಾರೆಂಬ ಮಾತಿದೆ. ಅಂಥಾದ್ದೊಂದು ಆರೋಪ ಥಗ್ ಲೈಫ್ ಚಿತ್ರದ ವಿಚಾರದಲ್ಲಿ ಅಕ್ಷರಶಃ ಸಾಬೀತಾಗಿ ಬಿಟ್ಟಿದೆ! ಥಗ್ ಲೈಫ್ ಅನ್ನು ಕರ್ನಾಟಕದಲ್ಲಿ ಬಿಡುಗಡೆಗೊಳಿಸುವ ಭೂಮಿಕೆಯಲ್ಲಿ ಕಮಲ್ ಕನ್ನಡಿಗರನ್ನು ಕೆಣಕಿದ್ದರು. ಯಾವ ಕಾರಣವೂ ಇಲ್ಲದೆ ಏಕಾಏಕಿ ಭಾಷಾ ತಜ್ಞನಂತೆ ಪೋಸು ಕೊಟ್ಟಿದ್ದ ಕಮಲ್, ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂಬರ್ಥದ ಅಪದ್ಧ ಮಾತುಗಳನ್ನಾಡಿದ್ದರು. ಇಷ್ಟಾದದ್ದೇ ಕನ್ನಡಿಗರೆಲ್ಲ…
ಪವನ್ ಕಲ್ಯಾಣ್ ಇದೀಗ ಪೂರ್ಣ ಪ್ರಮಾಣದ ರಾಜಕಾರಣಿಯಾಗಿದ್ದಾರೆ. ಈ ವಲಯದಲ್ಲಿ ಹೇಗೆಲ್ಲ ಸಾಧ್ಯವೋ ಹಾಗೆಲ್ಲ ಚಾಲ್ತಿಯಲ್ಲಿರುವ ಆತ ನಾಯಕ ನಟನಾಗಿಯೂ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದ್ದಾರೆ. ಆರಂಭದಿಂದಲೂ ಸಾಕಷ್ಟು ಕ್ರೇಜ್ ಮೂಡಿಸಿದ್ದ ಹರಹರ ವೀರಮಲ್ಲು ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿರುವಾಗಲೇ ಒಳಗಿಂದೊಳಗೆ ನಾನಾ ಸವಾಲುಗಳಿಗೆ ಎದೆಯೊಡ್ಡುವ ಸ್ಥಿತಿ ಬಂದೊದಗಿದೆ. ಈ ಬಗ್ಗೆ ನಾನಾ ರೂಮರುಗಳು ತೆಲುಗು ಚಿತ್ರರಂಗದಲ್ಲಿ ಹರಿದಾಡಲಾರಂಭಿಸಿವೆ. ಆರಂಭಿಕ ವ್ಯವಹಾರ ಮತ್ತು ವಹಿವಾಟುಗಳಲ್ಲಿಯೇ ಹರಿಹರ ವೀರಮಲ್ಲು ಮುಗ್ಗರಿಸಿದ್ದಾನೆಂಬುದು ಅಂಥಾ ರೂಮರುಗಳ ಸಾರಾಂಶ. ಇದಕ್ಕೆ ಸರಿಯಾಗಿ ಇದೀಗ ಈ ಸಿನಿಮಾ ಬಿಡುಗಡೆ ದಿನಾಂಕವೂ ಮುಂದೂಡಲ್ಪಟ್ಟಿದೆ! ರಾಜಕೀಯಕ್ಕೆ ಎಂಟ್ರಿ ಕೊಡುವ ಹೊಸ್ತಿಲಿನಲ್ಲಿಯೇ ಪವನ್ ಕಲ್ಯಾಣ್ ಶುರುವಿಟ್ಟುಕೊಂಡಿದ್ದ ಸಿನಿಮಾ ಹರಿಹರ ವೀರಮಲ್ಲು. ಶುರುವಾದಲ್ಲಿಂದಲೂ ಕೂಡಾ ಸದರಿ ಸಿನಿಮಾ ಬಗ್ಗೆ ಒಂದಷ್ಟು ನಿರೀಕ್ಷೆಗಳಿದ್ದದ್ದು ನಿಜ. ಆ ಬಳಿಕ ಹಂತ ಹಂತವಾಗಿ ಹರಿಕಹರವೀರಮಲ್ಲು ಜನರ ಗಮನವನ್ನ ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಯಶ ಕಂಡಿತ್ತು. ಆದರೆ, ಇನ್ನೇನು ಬಿಡುಗಡೆ ದಿನಾಂಕ ಹತ್ತಿರದಲ್ಲಿರುವಾಗಲೇ ಎಲ್ಲವೂ ಅದಲು ಬದಲಾಗಿ ಬಿಟ್ಟಿದೆ. ಇದೇ ಜೂನ್ ೧೨ರಂದು ಬಿಡುಗಡೆ…
ಈ ಸಿನಿಮಾ ನಟರು ಹೆಚ್ಚಿನ ಸಂದರ್ಭಗಳಲ್ಲಿ ಸಾಮಾಜಿಕ ಸ್ಥಿತ್ಯಂತರಗಳಿಗೆ ಸ್ಪಂದಿಸೋದೇ ಇಲ್ಲ. ಸಾವಿರ ಕಷ್ಟ ಕೋಟಲೆಗಳ ನಡುವೆಯೂ ಪ್ರೀತಿಯಿಂದ ಕಾಸು ಕೊಟ್ಟು ಸಿನಿಮಾ ನೋಡುವ ಪ್ರೇಕ್ಷಕರಿದ್ದಾರಲ್ಲಾ? ಅವರ ಬದುಕು ಕಂಗೆಟ್ಟು ನಿಂತಾಗ ನೆರವಿಗೆ ಧಾವಿಸುವ ಮನುಷ್ಯತ್ವವೂ ಬಹುತೇಕ ನಟರಿಗಿಲ್ಲ. ಇನ್ನು ರಾಜಕೀಯ ಕಿಸುರಿನಿಂದ ತಮ್ಮನ್ನು ಆರಾಧಿಸುವ ಜನರೇ ಕಂಗಾಲಾಗಿದ್ದರೂ ಈ ಮಂದಿ ತಮಗಿಷ್ಟ ಬಂದವರನ್ನು ಓಲೈಸುತ್ತಾ, ಬಕೀಟು ಹಿಡಿದು ನಿಂತಿರುತ್ತಾರೆ. ಒಂದು ಹಂತದಲ್ಲಿ ಇಂಥಾ ನಟರಿಗಿಂತ ತುಸು ಭಿನ್ನವಾಗಿ ಕಾಣಿಸಿದ್ದಾತ ಕಮಲ್ ಹಾಸನ್. ಬಿಡುಬೀಸಾಗಿ ತನ್ನ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಬಂದಿದ್ದ ಕಮಲ್ ಓರ್ವ ಅದ್ಭುತ ನಟ ಅನ್ನೋದರಲ್ಲಿಯೂ ಯಾವ ಸಂದೇಹವೂ ಇಲ್ಲ. ಆದರೆ, ಥಗ್ ಲೈಫ್ ಅನ್ನೋ ಸಿನಿಮಾದ ಭೂಮಿಕೆಯಲ್ಲಿ ಕಮಲ್ ಅಕ್ಷರಶಃ ಯಡವಟ್ಟು ಮಾಡಿಕೊಂಡಿದ್ದಾರೆ. ಈ ಮೂಲಕ ಹೈ ಕೋರ್ಟಿನಿಂದಲೂ ಆತನಿಗೆ ಸರಿಕಟ್ಟಾಗಿಯೇ ತಪರಾಕಿ ಬಿದ್ದಿದೆ! ಸಿನಿಮಾ ನಟರು ಆಗಾಗ ಸಾರ್ವಜನಿಕ ಸಮಾರಂಭಗಳಲ್ಲಿ ಮಾತು, ವರ್ತನೆಗಳ ಮೂಲಕ ಅಚಾತುರ್ಯವೆಸಗೋದಿದೆ. ಆದರೆ, ಕಮಲ್ ಮಾತ್ರ ಇದುವರೆಗೂ ಅಂಥಾ ವಿಚಾರದಲ್ಲಿ ಎಚ್ಚರ ವಹಿಸಿದಂತಿದ್ದರು.…
ನಟಿಯಾಗಿದ್ದ ಕಂಗನಾ ರಾಣಾವತ್ ಇದೀಗ ಸಂಸದೆಯಾಗಿದ್ದಾರೆ. ಆದರೆ, ನಟಿಯಾಗಿದ್ದ ಸಂದರ್ಭದಲ್ಲಿನ ಉತ್ಸಾಹ, ಆಗ ನೀಡುತ್ತಿದ್ದ ಪ್ರತಿಕ್ರಿಯೆಗಳು ಮತ್ತು ವಿವಾದದ ಕಿಡಿ ಹೊತ್ತಿಸುವ ಉಮೇದು ಈಗಿದ್ದಂತೆ ಕಾಣಿಸುತ್ತಿಲ್ಲ. ಅಧಿಕಾರ ಕೇಂದ್ರಕ್ಕೆ ಬರುತ್ತಲೇ ಮಾಮೂಲಿ ರಾಜಕಾರಣಿಯಾಗಿ ಕಳೆದು ಹೋಗುವ ಸಂದಿಗ್ಧ ಬಿಂದುವೊಂದರಲ್ಲಿ ಕಂಗನಾ ಕಂಗೆಟ್ಟು ನಿಂತಂತೆ ಭಾಸವಾಗುತ್ತಿದೆ. ಓರ್ವ ರಾಜಕಾರಣಿಯಾಗಿಯೂ ಆಕೆ ಭಿನ್ನ ನೆಲೆಯಲ್ಲಿ ಕಾಣಿಸುತ್ತಿಲ್ಲ. ಓರ್ವ ನಟಿಯಾಗಿಯಂತೂ ಆಕೆಯ ವೃತ್ತಿ ಬದುಕು ಪಾತಾಳ ಸೇರಿಕೊಂಡು ವರ್ಷವೇ ಕಳೆದಿದೆ. ಒಂದು ವೇಳೆ ರಾಜಕಾರಣದಿಂದ ಹಿಂದೆ ಸರಿದರೂ ಆಕೆಯದ್ದು ಅಕ್ಷರಶಃ ಅತ್ತ ಧರಿ ಇತ್ತ ಪುಲಿಯೆಂಬಂಥಾ ಸ್ಥಿತಿ. ಹೀಗಿರುವಾಗಲೇ ಕಂಗನಾ ತಲೆ ಕೂದಲು ಬಿಳಿ ಬಣ್ಣಕ್ಕೆ ತಿರುಗಲಾರಂಭಿಸಿವೆ! ನಟಿಯಾಗಿ ಕಂಗನಾ ಸಾಲು ಸಾಲು ಸೋಲು ಕಂಡಿದ್ದಾರೆ. ಈ ನಡುವೆ ಆಕೆ ರಾಜಕಾರಣಿಯಾಗಿ, ಸಾರ್ವಜನಿಕವಾಗಿಯೇ ತಲೆಯ ಅಲ್ಲಲ್ಲಿ ನೆರೆತ ಬಿಳು ಕೂದಲನ್ನು ಬಿಟ್ಟುಕೊಂಡು ಕಾಣಿಸಲಾರಂಭಿಸಿದ್ದಾರೆ. ಈ ಬಗ್ಗೆ ಮಾತಾಡಿರುವ ಆಕೆ ಬಿಳಿಕೂದಲು ವಯಸ್ಸಾದ ಲಕ್ಷಣವಾದರೆ, ವಯಸ್ಸಾಗೋದು ಗೌರವದ ಲಕ್ಷಣ. ಸಿನಿಮಾ ರಂಗದಲ್ಲಿ ವಯಸ್ಸಾದ ನಟಿಯರಿಗೆ ಅವಕಾಶ ಇಲ್ಲ…
ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು ಇದೀಗ ದಿಲ್ ದಾರ್ ಎಂಬ ಸಿನಿಮಾ ಮೂಲಕ ಭಿನ್ನ ಬಗೆಯ ಪಾತ್ರವಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಯಾವ ಸದ್ದುಗದ್ದಲವೂ ಇಲ್ಲದೆ ಈ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡಿದೆ. ದೊಡ್ಡ ತಾರಾಗಣ, ಪ್ರತಿಭಾನ್ವಿತ ಕಲಾವಿದರನ್ನೊಳಗೊಂಡಿರುವ ದಿಲ್ ದಾರ್ ಚಿತ್ರತಂಡವೀಗ ಬಜರಂಗಿ ಲೋಕಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದೆ. ಈ ಸಂಬಂಧವಾಗಿ ಒಂದು ಪೋಸ್ಟರ್ ಹೊರಬಂದಿದೆ. ಅದರೊಂದಿಗೆ ದಿಲ್ ದಾರ್ ಸಿನಿಮಾದಲ್ಲಿನ ಭಜರಂಗಿ ಲೋಕಿ ಗೆಟಪ್ಪು ಕೂಡಾ ಅನಾವರಣಗೊಂಡಂತಾಗಿದೆ. ಯುವ ನಿರ್ದೇಶಕ ಮಧು ಗೌಡ ಗಂಗೂರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ದಿಲ್‌ದಾರ್. ಒಂದು ಅಪರೂಪದ ಪ್ರೇಮಕಥಾನಕಕ್ಕೆ ದಿಲ್ ದಾರ್ ಮೂಲಕ ದೃಶ್ಯರೂಪ ಕೊಡಲಾಗಿದೆ ಎಂಬ ವಿಚಾರವನ್ನವರು ಈ ಹಿಂದೆಯೇ ಜಾಹೀರು ಮಾಡಿದ್ದಾರೆ. ಈ ಚಿತ್ರದಲ್ಲಿ ಭಜರಂಗಿ ಲೋಕಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಂಬ ವಿಚಾರ ಆರಂಭದಿಂದಲೂ ಒಂದಷ್ಟು ಕುತೂಹಲ ಮೂಡಿಕೊಂಡಿತ್ತು. ಆರಂಭದಿಂದ ಇಲ್ಲಿಯವರೆಗೂ ಸಿನಿಮಾದಿಂದ ಸಿನಿಮಾಕ್ಕೆ ಭಿನ್ನ ಬಗೆಯ ಪಾತ್ರಗಳನ್ನು ಆವಾಹಿಸಿಕೊಂಡು ಬರುತ್ತಿರುವವರು ಲೋಕಿ. ಅಂಥಾ ಲೋಕಿ ದಿಲ್‌ದಾರ್ ಚಿತ್ರದಲ್ಲಿ ಎಂಥಾ…
ನಟನೆಯ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದ ಅನೇಕ ನಟ ನಟಿಯರು ಅನಾರೋಗ್ಯದಿಂದ ನರಳಿ ನಿರ್ಗಮಿಸಿದ ಅನೇಕ ಉದಾಹರಣೆಗಳಿದ್ದಾವೆ. ಇಲ್ಲಿ ಝಗಮಗಿಸೋ ಬೆಳಕಿನ ಮುಂದೆ ಹರಿಯೋ ಖೊಟ್ಟಿ ಕಣ್ಣೀರು, ಭ್ರಾಮಕ ಕಕ್ಕುಲಾತಿಗಳು ಒಬ್ಬಂಟಿಯಾಗಿ ಅಸಹಾಯಕರಾಗಿ ಮಲಗಿದ ಕಲಾವಿದರಿಗೆ ಸಿಗುವುದಿಲ್ಲ. ಹೀಗೆ ಹಠಾತ್ತನೆ ಅನಾರೋಗ್ಯಕ್ಕೀಡಾದ ಕಲಾವಿದರಿಗೆ ನೆರವಾಗೋ ಸಾಂಘಿಕ ಪ್ರಯತ್ನಗಳೂ ಕೂಡಾ ಕನ್ನಡದಲ್ಲಿಲ್ಲ. ಅದೆಲ್ಲದರ ಫಲವಾಗಿಯೇ ಕನ್ನಡ ಕಿರುತೆರೆ ಕಂಡ ಸ್ಫುರದ್ರೂಪಿ ನಟ ಶ್ರೀಧರ್ ನಾಯಕ್ ನೋವಿನ ಕುಲುಮೆಯಲ್ಲಿ ತಿಂಗಳುಗಟ್ಟಲೆ ನರಳಿ ನಿರ್ಗಮಿಸಿದ್ದಾರೆ. ಕೋಟಿ ಮನಸುಗಳ ಹಾರೈಕೆ, ಕೆಲವರ ನಿಸ್ವಾರ್ಥ ಸಹಾಯದಾಚೆಗೂ ಶ್ರೀಧರ್ ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಉಸಿರು ನಿಲ್ಲಿಸಿದ್ದಾರೆ. ಶ್ರೀಧರ್ ಕಿರುತೆರೆ ಜಗತ್ತಿನ ಪಾಲಿಗೆ ಚಿರಪರಿಚಿತರಾಗಿದ್ದ ನಟ. ಸಿನಿಮಾ ರಂಗಕ್ಕೂ ಕೂಡಾ ಅವರು ಹೊಸಬರೇನಲ್ಲ. ವರ್ಷಗಟ್ಟಲೆ ಯಶಸ್ವಿಯಾಗಿ ಪ್ರಸಾರವಾಗಿದ್ದ ಪಾರು ಧಾರಾವಾಹಿಯ ಮೂಲಕ ಶ್ರೀಧರ್ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದರು. ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಿದ್ದ ವಧು ಎಂಬ ಸೀರಿಕಯಲ್ಲಿನಲ್ಲಿಯೂ ಕೂಡಾ ಅವರಿಗೆ ಒಳ್ಳೆ ಪಾತ್ರವೇ ಸಿಕ್ಕಿತ್ತು.…
ಈಗೊಂದು ದಶಕದ ಹಿಂದೆ ಮೋಹಕ ತಾರೆ ರಮ್ಯಾ ಜೂಲಿ ಅಂತೊಂದು ಸಿನಿಮಾದಲ್ಲಿ ನಟಿದ್ದರಲ್ಲಾ? ಅದರಲ್ಲಿ ನಾಯಕನಾಗಿ ಮಿಂಚಿದ್ದಾತ ಡಿನೋ ಮೋರೆಯಾ. ಆ ಕಾಲಕ್ಕೆ ಮೋಹಕವಾಗಿಯೇ ಕಾಣಿಸುತ್ತಿದ್ದ ಡಿನೋ ಮತ್ತು ರಮ್ಯಾ ಜೋಡಿ ಒಂದಷ್ಟು ಗಮನ ಸೆಳೆದಿತ್ತು. ಆ ಸಿನಿಮಾ ಸಾಧಾರಣ ಗೆಲುವು ಕಂಡಾದ ಬಳಿಕ ಮತ್ತೆಂದೂ ಡಿನೋ ಕನ್ನಡದತ್ತ ಮುಖ ಹಾಕಿರಲಿಲ್ಲ. ಹಾಗಂತ ಆತ ಬೇರೆ ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಅಂದುಕೊಳ್ಳುವಂತಿಲ್ಲ. ಯಾಕೆಂದರೆ, ಆ ಬಳಿಕ ಡಿನೋ ಹೇಳಿಕೊಳ್ಳುವಂಥಾ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಹೀಗೆ ಒಂದಷ್ಟು ಮಿಂಚಿ ಮರೆಯಾದ ಬಳಿಕ ಡಿನೋನಂಥಾ ನಟರು ಮತ್ಯಾವುದೋ ವ್ಯವಹಾರಗಳಲ್ಲಿ ಬ್ಯುಸಿಯಾಗೋದಿದೆ. ಡಿನೋ ಕೂಡಾ ಅಂಥಾದ್ದೇ ಬ್ಯುಸಿನೆಸ್ಸುಗಳಲ್ಲಿ ತೊಡಗಿಸಿಕೊಂಡಿದ್ದ. ಇದೀಗ ಆ ಹಾದಿಯಲ್ಲಿ ಡಿನೋ ಮುಗ್ಗರಿಸಿದ್ದಾನೆ! ಸಿನಿಮಾ ರಂಗದಲ್ಲಿ ಮಿಂಚಿ, ಅವಕಾಶ ವಂಚಿತರಾದ ನಟರನೇಕರು ನಾನಾ ದಂಧೆಗಳಲ್ಲಿ ತೊಡಗಿಸಿಕೊಂಡ ಉದಾಹರಣೆಗಳಿದ್ದಾವೆ. ಇದೀಗ ತನ್ನ ಪಾಡಿಗೆ ತಾನು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಡಿನೋನ ಹೆಸರು ಬಹುಕೋಟಿ ಅವ್ಯವಹಾರವೊಂದರಲ್ಲಿ ತಳುಕು ಹಾಕಿಕೊಂಡಿದೆ. ಈ ಸಂಬಂಧವಾಗಿ ಆತ ಪೊಲೀಸ್ ತನಿಖೆಯನ್ನೂ ಕೂಡ ಎದುರಿಸುವಂತಾಗಿದೆ.…
ಪ್ರಶಾಂತ್ ನೀಲ್ ಇದೀಗ ಜ್ಯೂನಿಯರ್ ಎನ್ಟಿಆರ್ ಜೊತೆಗಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಲಾರ್ ಬಳಿಕ ನೀಲ್ ಕೆಜಿಎಫ್ ಛಾಪ್ಟರ್ ತ್ರೀ ನಿರ್ದೇಶನ ಮಾಡುತ್ತಾರೆಂದುಕೊಂಡಿದ್ದ ಯಶ್ ಅಭಿಮಾನಿಗಳಿಗೆ ಆರಂಭದಲ್ಲಿ ನಿರಾಸೆಯಾಗಿದ್ದದ್ದು ನಿಜ. ಆದರೆ, ಇದೀಗ ಅದೆಲ್ಲವನ್ನೂ ನೀಗಿಸುವಂತೆ ಸದರಿ ಸಿನಿಮಾ ಸದ್ದು ಮಾಡುತ್ತಿದೆ. ಸದ್ಯದ ಮಟ್ಟಿಗೆ ಈ ಸಿನಿಮಾದ್ದೊಂದು ಐಟಂ ಸಾಂಗ್ ಸುತ್ತ ಒಂದಷ್ಟು ಸುದ್ದಿಗಳು ಮತ್ತು ಚರ್ಚೆಗಳು ಹುಟ್ಟಿಕೊಂಡಿವೆ. ಅದರನ್ವಯ ಹೇಳೋದಾದರೆ, ರಶ್ಮಿಕಾ ಮಂದಣ್ಣ ಐಟಂ ಸಾಂಗ್ ಒಂದರಲ್ಲಿ ಕಾಣಿಸಿಕೊಳ್ಳೋದು ಖಚಿತ. ಈಗಾಗಲೇ ಮಾತುಕತೆಗಳೆಲ್ಲವೂ ಮುಗಿದಿವೆ. ರಶ್ಮಿಕಾ ಕೂಡಾ ಐಟಂ ಸಾಂಗ್ ನಲ್ಲಿ ಸೊಂಟ ಬಳುಕಿಸಲು ಅಣಿಯಾಗಿದ್ದಾಳೆ! ಪ್ರಶಾಂತ್ ನೀಲ್ ಆರಂಭದಲ್ಲಿಯೇ ಎಲ್ಲವನ್ನೂ ನಿಕ್ಕಿಯಾಗಿಸಿಕೊಳ್ಳುತ್ತಾರೆ. ಈ ಸಂಬಂಧವಾಗಿ ಒಟ್ಟಾರೆ ಸಿನಿಮಾದ ಪ್ರಧಾನ ಆಕರ್ಷಣೆಗ್ಳಲ್ಲೊಂದಾದ ಐಟಂ ಸಾಂಗ್ ಗಾಗಿ ನಟಿಯರ ಹುಡುಕಾಟ ಬಹು ಕಾಲದಿಂದ ನಡೆದಿತ್ತು. ಈ ಸಾಲಿನಲ್ಲಿ ತೃಪ್ತಿ ದಿಮ್ರಿ, ಶ್ರೀಲೀಲಾಳಂತ ನಟಿಯಯರತ್ತಲೂ ನೀಲ್ ಚಿತ್ತ ಹರಿದಿತ್ತು. ಆದರೆ ಅದಕ್ಕೆ ಪಕ್ಕಾ ಸರಿ ಹೊಂದುವಂತೆ ಕಂಡಾಕೆ ರಶ್ಮಿಕಾ ಮಂದಣ್ಣ. ಹೇಳಿಕೇಳಿ ರಶ್ಮಿಕಾ ಇದೀಗ…
ಕಳೆದ ವರ್ಷ ತೆರೆಗಂಡಿದ್ದ `ಬ್ಲಿಂಕ್’ ಎಂಬ ಚಿತ್ರ ಪ್ರೇಕ್ಷರ ಮೆಚ್ಚುಗೆ ಗಳಿಸಿಕೊಂಡಿತ್ತು. ಹೊಸತನದ ಕಥನದ ಮೂಲಕ ಒಂದು ಮಟ್ಟದ ಗೆಲುವನ್ನೂ ದಾಖಲಿಸಿತ್ತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಶ್ರೀನಿಧಿ ಬೆಂಗಳೂರು. ಇದೊಂದು ಚಿತ್ರದ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಶ್ರೀನಿಧಿ ಪಾಲಿಗೆ ಭರಪೂರ ಮೆಚ್ಚುಗೆ ಸಿಕ್ಕಿತ್ತು. ಅದಾದ ಬಳಿಕ ಸುದೀರ್ಘಾವಧಿಯಲ್ಲಿ ಮತ್ತೊಂದು ಸಿನಿಮಾ ರೂಪಿಸುವಲ್ಲಿ ಶ್ರೀನಿಧಿ ನಿರತವಾಗಿದ್ದರು. ಅದರ ಫಲವಾಗಿಯೇ ವೀಡಿಯೋ ಅಂತೊಂದು ಸಿನಿಮಾ ತಯಾರಾಗಿದೆ. ಸದ್ದೇ ಇಲ್ಲದಂತೆ ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡವೀಗ ಟೀಸರ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ. ಮೊದಲ ಚಿತ್ರದ ಮೂಲಕವೇ ಗಮನ ಸೆಳೆದ ನಿರ್ದೇಶಕನ ಎರಡನೇ ಹೆಜ್ಜೆಯ ಬಗ್ಗೆ ಅಗಾಧ ನಿರೀಕ್ಷೆಗಳಿರೋದು ಮಾಮೂಲು. ಈ ನಿಟ್ಟಿನಲ್ಲಿ ನೋಡ ಹೋದರೆ ಶ್ರೀನಿಧಿ ನಿರ್ದೇಶನದ ವೀಡಿಯೋ ಚಿತ್ರದ ಟೀಸರ್ ಪ್ರೇಕ್ಷಕರ ನಿರೀಕ್ಷೆಯನ್ನ ಮಟ್ಟವನ್ನು ಮುಟ್ಟಿದಂತಿದೆ. ಅದಕ್ಕೆ ಕೇಳಿ ಬರುತ್ತಿರುವ ಸದಭಿಪ್ರಾಯಗಳನ್ನು ಗಮನಿಸಿದರೆ ಪ್ರೇಕಕರೊಂದಷ್ಟು ತೃಪ್ತರಾದಂತಿದೆ. ಬ್ಲಿಂಕ್ ಚಿತ್ರದಲ್ಲಿ ಶ್ರೀನಿಧಿ ಟೈಮ್ ಟ್ರಾವೆಲಿಂಗ್ ಕಥೆಯ ಚುಂಗು ಹಿಡಿದು ಗೆದ್ದಿದ್ದರು. ಎರಡನೇ ಸಿನಿಮಾದಲ್ಲವರು ಹಾರರ್…

ನಮ್ಮ ಬಗ್ಗೆ
ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!