ಟಗರು ಚಿತ್ರದ ಡಾಲಿ ಪಾತ್ರದ ಪ್ರಭೆಯಲ್ಲಿ ಧನಂಜಯ್ಗೆ ಕವುಚಿಕೊಂಡಿದ್ದ ಗ್ರಹಣವೆಲ್ಲ ಕಳೆದಂತಾದದ್ದೀಗ ಹಳೇ ವಿಚಾರ. ಯಾವ ನಟ ನಟಿಯರಿಗೇ ಆದರೂ ಅಂಥಾದ್ದೊಂದು ಬ್ರೇಕ್ ಸಿಕ್ಕ ನಂತರದಲ್ಲಿ ಕೈಗೊಳ್ಳುವ ನಿರ್ಧಾರಗಳು, ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಇಡೀ ವೃತ್ತಿ ಬದುಕಿನ ಗೆಲುವಿನ ಹಾದಿಯನ್ನ ರೂಪಿಸುತ್ತವೆ. ಈ ದಿಸೆಯಲ್ಲಿ ನೋಡ ಹೋದರೆ, ಡಾಲಿ ಧನಂಜಯ್ ಎಡವಿದರಾ ಅಂತೊಂದು ಅನುಮಾನ ಅವರನ್ನು ಮೆಚ್ಚಿಕೊಳ್ಳುವ ಮಂದಿಗೇ ಕಾಡಿದ್ದಿದೆ. ಇದೆಲ್ಲದರಾಚೆಗೆ, ನಿರ್ಮಾಪಕನಾಗಿ, ನಟನಾಗಿ ಸೋಲು ಗೆಲುವಿನ ಹೊಯ್ದಾಟದಲ್ಲಿಯೇ ಹೊಸಾ ಪ್ರಯತ್ನಗಳಿಗೆ ಡಾಲಿ ಒಡ್ಡಿಕೊಂಡಿದ್ದಾರೆ. ಅದರ ಭಾಗವಾಗಿ ರೂಪುಗೊಂಡಿರೋ ಸಿನಿಮಾ `ಅಣ್ಣ ಫ್ರಮ್ ಮೆಕ್ಸಿಕೋ’!
ಡಾಲಿ ಧನಂಜಯ್ ನಿರ್ಮಾಣ ಮಾಡಿದ್ದ ಮದರ್ ಪ್ರಾಮಿಸ್ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತ್ತು. ಒಂದಷ್ಟು ಅಡೆತಡೆಗಳಾಚೆಗೂ ಆ ಚಿತ್ರಕ್ಕೆ ಒಂದು ಮಟ್ಟದ ಗೆಲುವು ದಕ್ಕಿತ್ತು. ಅದರ ಬೆನ್ನಲ್ಲಿಯೇ ಇದೀಗ ಡಾಲಿ ವಿಶಿಷ್ಟ ಪಾತ್ರದಲ್ಲಿ ನಟಿಸಿರುವ ಅಣ್ಣ ಫ್ರಮ್ ಮೆಕ್ಸಿಕೋ ಚಿತ್ರದ ಬಿಡುಗಡೆ ದಿನಾಂಕ ಘೋಶಣೆಯಾಗಿದೆ. ಇದೇ ಡಿಸೆಂಬರ್ ೨೪ರಂದು ಸದರಿ ಸಿನಿಮಾ ಬಿಡುಗಡೆಯಾಗೋದು ಪಕ್ಕಾ. ಡಿಸೆಂಬರ್ ೨೪ರಂದು ಸಮಯ ನಿಗಧಿ ಮಾಡಿರೋದಕ್ಕೂ ಕಾರಣವಿದೆ. ಈಗ್ಗೆ ಐದು ವರ್ಷಗಳ ಹಿಂದೆ ಬಡವ ರಾಸ್ಕಲ್ ಚಿತ್ರ ಕೂಡಾ ಇದೇ ದಿನಾಂಕದಂದು ಬಿಡುಗಡೆಗೊಂಡು ಗೆಲುವು ಕಂಡಿತ್ತು. ಅಂಥಾ ಗೆಲುವು ಮರಳುವ ನಿರೀಕ್ಷೆಯೊಂದಿಗೆ ಅದೇ ದಿನಾಂಕವನ್ನು ಆಯ್ಕೆ ಮಾಡಿಕೊಂಡಿರುವಂತಿದೆ.
Kangana Ranaut Controvercy: ಭ್ರಾಂತಿಯಲ್ಲಿ ಮಿಂದೇಳುತ್ತಿರುವಾಕೆಯ ವಾಂತಿ ಪುರಾಣ!
ಶಂಕರ್ ಗುರು ನಿರ್ದೇಶನದಲ್ಲಿ ಮೂಡಿ ಬಂದಿರುವ ಅಣ್ಣ ಫ್ರಮ್ ಮೆಕ್ಸಿಕೋ ಸಿನಿಮಾದ ಬಗ್ಗೆ ಖುದ್ದು ಧನಂ ಜಯ್ಗೆ ವಿಪರೀತ ಭರವಸೆ ಇದೆ. ಈ ಸಿನಿಮಾದ ಕಥೆ ಮತ್ತು ಪಾತ್ರಗಳು ಬಿನ್ನವಾಗಿರೋದರಿಂದ, ಬಡವ ರಾಸ್ಕಲ್ ಚಿತ್ರವನ್ನೇ ಸರಿಗಟ್ಟುವಂಥಾ ಗೆಲುವು ಲಭಿಸುವ ನಿರೀಕ್ಷೆ ಚಿತ್ರತಂಡಕ್ಕಿದೆ. ಹೆಚ್ಚೇನೂ ಪ್ರಚಾರದ ಅಬ್ಬರವಿಲ್ಲದೆ ಕೆಲಸ ಕಾರ್ಯ ಮುಗಿಸಿಕೊಳ್ಳುತ್ತಿರೋ ಚಿತ್ರತಂಡ, ಇದುವರೆಗೂ ಕಥೆಯ ಹೊಳಹನ್ನು ಜಾಹೀರು ಮಾಡಿಲ್ಲ. ಆದರೆ, ಬಿಡುಗಡೆಗೆ ಮಾತ್ರ ಸರಿಕಟ್ಟಾದ ಮುಹೂರ್ತ ನಿಗಧಿ ಮಾಡಲಾಗಿದೆ. ಕ್ರಿಸ್ಮಸ್ ಹಬ್ಬಕ್ಕೆ ಸಾಲು ಸಾಲು ರಜಾ ದಿನಗಳಿರುತ್ತವೆ. ಸಿನಿಮಾ ಬಿಡುಗಡೆಗಿದು ಅತ್ಯಂತ ಪ್ರಶಸ್ತವಾದ ಸಮಯ. ಇ ಸುಮುಹೂರ್ತದಲ್ಲಿ ಅಣ್ಣ ಫ್ರಮ್ ಚಿತ್ರಕ್ಕೆ ಗೆಲುವು ಸಿಗಬಹುದೇ?
keywords: daali dhananjaya, anna from mexico, sandalwood, daali

