ಈಗಾಗಲೇ ಹಾಡುಗಳ ಮೂಲಕ ಪ್ರೇಕ್ಷಕರನ್ನೆಲ್ಲ ಸೆಳೆದುಕೊಂಡಿರುವ ಲವ್ ಸೀಸನ್ಸ್ ಚಿತ್ರ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಹಂತ ಹಂತವಾಗಿ, ತನ್ನ ಆಂತರ್ಯದ ಕಸುವಿನ ಮೂಲಕವೇ ಸದ್ದು ಮಾಡುತ್ತಾ, ಸಿನಿಮಾಸಕ್ತರ ನಡುವೆ ಚರ್ಚೆ ಹುಟ್ಟು ಹಾಕುತ್ತಾ ಬಂದಿರುವ ಚಿತ್ರ ಲವ್ ಸೀಸನ್ಸ್. ಈ ಮೂಲಕ ಅನೇಕರ ಕನಸುಗಳು ಸಾಕಾರಗೊಂಡಿವೆ. ಇದರ ಹಿಂದೆ ಅದೆಷ್ಟೋ ವರ್ಷಗಳ ಕಾಲ ಕಂಡ ಕನಸಿನ ಕಿಸುರಿದೆ, ಪರಿಶ್ರಮವಿದೆ. ಅದೇ ರೀತಿ ಸುಪ್ತವಾಗಿ ಸಾಕಿಕೊಂಡಿದ್ದ ಒಂದಷ್ಟು ಆಕಾಂಕ್ಷೆಗಳ ರೋಚಕ ಕಥನಗಳೂ ಇದ್ದಾವೆ. ಅಂದಹಾಗೆ, ಲವ್ ಸೀಸನ್ಸ್ ಚಿತ್ರದ ಮೂಲಕ ಅನೇಕ ಪ್ರತಿಭಾನ್ವಿತರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇಂಥಾದ್ದೊಂದು ಖುಷಿಯ ಕ್ಷಣಗಳು ಸಾಕಾರಗೊಳ್ಳೋದಕ್ಕೆ ಅನುವು ಮಾಡಿ ಕೊಟ್ಟಿರುವವರು ನಿರ್ಮಾಪಕ ಎನ್.ಆರ್ ಮಂಜುನಾಥ್ (ನೀಲೇರಿ)!
ಸಿನಿಮಾ ನಿರ್ಮಾಣವೆಂಬುದು ಇದೀಗ ಉದ್ಯಮವೆಂದೇ ಪರಿಗನಿಸಲ್ಪಟ್ಟಿದೆ. ನಿರ್ಮಾಪಕರಾದವರು ಕಾಸು ಹೂಡಿಕೆ ಮಾಡಿ, ಅದನ್ನು ದುಪ್ಪಟ್ಟಾಗಿ ವಾಪಾಸು ಪಡೆಯೋದರತ್ತಲೇ ಪ್ರಧಾನವಾಗಿ ಗಮನ ಹರಿಸುತ್ತಾರೆಂಬ ಭಾವನೆ ಬಹುತೇಕರಲ್ಲಿದೆ. ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೆ ಅದರಲ್ಲಿ ವಿಶೇಷವೇನೂ ಇಲ್ಲ. ಆದರೆ, ವ್ಯಾವಹಾರಿಕ ದೃಷ್ಟಿಕೋನ ಒಂದರಿಂದಲೇ ಸಿನಿಮಾ ನಿರ್ಮಾಣ ಸಾಧ್ಯವಿಲ್ಲ. ಅದರ ಹಿಂದೆ ಅದೆಷ್ಟೋ ವರ್ಷಗಳಿಂದ ಕಂಡ ಕನಸಿರುತ್ತದೆ, ತಯಾರಿಯಿರುತ್ತದೆ. ಲವ್ ಸೀಸನ್ಸ್ ನಿರ್ಮಾಪಕ ಎನ್.ಆರ್ ಮಂಜುನಾಥ್ ಅವರ ವಿಚಾರದಲ್ಲಿ ಖಂಡಿತವಾಗಿಯೂ ಸಿದ್ಧಸೂತ್ರದ ಚೌಕಟ್ಟಿನ ಅನಿಸಿಕೆಗಳೆಲ್ಲ ಅದಲು ಬದಕಲಾಗುವಂಥಾ ಒಂದಷ್ಟು ವಿಚಾರಗಳಿದ್ದಾವೆ.
ಮೂಲತಃ ಬೆಂತಗಳೂರಿನ ದೇವನಹಳ್ಳಿಯ ನೀಲೇರಿಯವರಾದ ಮಂಜುನಾಥ್ ಈವತ್ತಿಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಯಶ ಕಂಡಿದ್ದಾರೆ. ಆದರೆ, ಊರಿನಲ್ಲಿ ಈವತ್ತಿಗೂ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಚಾಲ್ತಿಯಲ್ಲಿಟ್ಟುಕೊಳ್ಳುವ ಮೂಲಕ ರೈತಾಪಿ ಹಿನ್ನೆಲೆಯನ್ನು ಯಥಾಪ್ರಕಾರವಾಗಿ ಮುಂದುವರೆಸಿಕೊಂಡು ಬರುತ್ತಿದ್ದಾರೆ. ಸಹಜವಾಗಿಯೇ ಬದುಕಿನ ಒಂದು ಘಟ್ಟಕ್ಕೆ ಬಂದ ನಂತರ ಒಂದ್ಯಾವುದೋ ವೃತ್ತಿಯ ಮೂಲಕ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ಎದುರಾಗುತ್ತೆ. ಆ ಕ್ಷಣದಲ್ಲಿ ಕಂಡ ಕನಸುಗಳನ್ನೆಲ್ಲ ಕಳಚಿಟ್ಟು ಮುಂದುವರೆಯುವ ಅನಿವಾರ್ಯ ಸಂದರ್ಭಗಳು ಎದುರಾಗುತ್ತವೆ. ಅಂಥಾದ್ದೊಂದು ಹಂತದಲ್ಲಿ ಸಿನಿಮಾ ನಟನಾಗಬೇಕೆಂಬ ಮಂಜುನಾಥ್ ಅವರ ಆಳದಲ್ಲಿದ್ದ ಕನಸೊಂದು ಹಾಗೆಯೇ ಉಳಿದು ಹೋಗುವಂತಾಗಿತ್ತು.
ರೈತಾಪಿ ಕುಟುಂಬದಿಂದ ಬಂದಿದ್ದ ಮಂಜುನಾಥ್ ನೀಲೇರಿಯವರ ಪಾಲಿಗೆ ಆರಂಭದಿಂದಲೂ ಅತೀವ ಸಿನಿಮಾ ಸೆಳೆತವಿತ್ತು. ಮುಂದೊಂದು ದಿನ ಸಿನಿಮಾ ನಟನಾಗಬೇಕೆಂಬುದೇ ಅವರ ಬಹುದೊಡ್ಡ ಕನಸಾಗಿತ್ತು. ಆದರೆ, ಬದುಕಿನ ಬಂಡಿ ಬೇರೆಯದ್ದೇ ದಿಕ್ಕಿನತ್ತ ಹಬ್ಬಿಕೊಂಡಿದ್ದರಿಂದಾಗಿ ಆ ಕನಸು ಕನಸಾಗಿಯೇ ಉಳಿದು ಹೋಗಿತ್ತು. ಆದರೆ, ಮಗ ಮುಕುಂದ ರಾಮಸ್ವಾಮಿಯ ವ್ಯಕ್ತಿತ್ವದಲ್ಲಿ ಮಂಜುನಾಥ್ ಅವರ ಅಪೂರ್ಣ ಕನಸು ಅತ್ಯಂತ ಭದ್ರವಾಗಿ ಬೇರೂರಿಕೊಂಡಿತ್ತು. ತಮ್ಮ ಮಗ ಚಿಕ್ಕ ವಯಸ್ಸಿನಿಂದಲೇ ಸಿನಿಮಾ ವ್ಯಾಮೋಹ ಹೊಂದಿದ್ದನ್ನು ಬೆರಗಿನಿಂದ ಕಾಣುತ್ತಾ ಬಂದಿದ್ದ ಮಂಜುನಾಥ್ರಿಗೆ, ಬರಬರುತ್ತಾ ಮಗನ ಕನಸಿನ ಬಗೆಗೊಂದು ತುಂಬು ಭರವಸೆ ಮೂಡಿಕೊಳ್ಳಲಾರಂಭಿಸಿತ್ತು.
ಈಗ್ಗೆ ಏಳು ವರ್ಷದಿಂದೀಚೆಗೆ ಮುಕುಂದ ರಾಮಸ್ವಾಮಿ ನಟನಾಗಲು ನಡೆಸುತ್ತಾ ಬಂದಿದ್ದ ಗಂಭೀರವದ ಪ್ರಯತ್ನಗಳನ ನು ಕಂಡು ಮಂಜುನಾಥ್ ಖುಷಿಗೊಂಡಿದ್ದರು. ಹೀಗೆ ನಟನೆಯತ್ತ ವಾಲಿಕೊಂಡಿರುವ ಮಗನ ಇಗೆ ಒತ್ತಾಸೆಯಾಗಿ ನಿಲ್ಲುವ ಸಲುವಾಗಿಯೇ, ಅವರು ಎನ್ಆರ್ ಸ್ಟುಡಿಯೋಸ್ ಎಂಬ ಬ್ಯಾನರ್ ಸ್ಥಾಪಿಸಿ ಅದರ ಮೂಲಕ ಲವ್ ಸೀಸನ್ಸ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಕೃತ್ವಿಕ್ ಕಥೆಯನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಅವರಲ್ಲಿಂದು, ಸದರಿ ಸಿನಿಮಾ ಪ್ರತಿಯೊಬ್ಬರಿಗೂ ಹಿಡಿಸುತ್ತದೆಂಬ ತುಂಬು ನಂಬಿಕೆ ಮೂಡಿಕೊಂಡಿದೆ. ಮಗನ ಕಾರಣದಿಂದ ತನ್ನೊಳಗಿದ್ದ ನಟನೆಯ ಕನಸು ಸಾಕಾರಗೊಂಡಿರೋ ಖುಷಿ, ಮೊದಲ ಹೆಜ್ಜೆಯಲ್ಲಿಯೇ ಒಂದೊಳ್ಳೆ ಸಿನಿಮಾ ನಿರ್ಮಾಣ ಮಾಡಿದ ಆತ್ಮತೃಪ್ತಿ ಎನ್.ಆರ್ ಮಂಜುನಾಥ್ (ನೀಲೇರಿ) ಅವರಲ್ಲಿದೆ…
keywords: nr manjunath neeleri, love seasons movie, sandalwood

