Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಬಿಗ್ ಬಾಸ್ ಸೀಸನ್ 10ರ (biggboss season 10) ಬಗ್ಗೆ ಅದ್ಯಾರಿಗೂ ಕೂಡಾ ಅಂಥಾ ನಿರೀಕ್ಷೆಗಳಿದ್ದಂತಿಲ್ಲ. ಅಷ್ಟಕ್ಕೂ, ಎಲ್ಲ ಕೌತುಕ, ನಿರೀಕ್ಷೆಗಳೂ ಕೂಡಾ ಎರಡ್ಮೂರು ಸೀಜನ್ನುಗಳ ಹೊತ್ತಿಗೆಲ್ಲ ಸವೆದು ಹೋಗಿದ್ದವು. ಈ ಬಾರಿ ಹತ್ತನೇ ಸೀಜನ್ನು ಶುರುವಾಗಿ ವಾರವೊಂದು ಮಗುಚಿಕೊಂಡಿದೆ. ಇನ್ನೇನು ಶನಿವಾರ ಬಂದರೆ ಕಿಚ್ಚನ (kiccha sudeep) ಪಂಚಾಯ್ತಿ ಎಂಬ ಮೆಲೋಡ್ರಾಮಾ ನಡೆಯುತ್ತೆ. ಸಾಹೇಬರು ಸಾವಕಾಶವಾಗಿ ಒಂದು ಸಲ ದೊಡ್ಡಿಯೊಳಗಿರುವ ಚಿತ್ರವಿಚಿತ್ರ ಪ್ರಾಣಿಗಳ ಮೈ ಸವರುತ್ತಾರೆ. ಯಾರನ್ನೋ ಕಿಂಡಲ್ಲು ಮಾಡಿ ಮೀಸೆಯಡಿಯಲ್ಲಿ ಮಿಣ್ಣಗೆ ನಗುತ್ತಾರೆ. ಮತ್ತು ಸರಿಕಟ್ಟಾದ ಮಿಕಗಳು ಸಿಕ್ಕರೆ ಒಂದಷ್ಟು ರುಬ್ಬಿ, ಜುಟ್ಟು ನೀವಿಕೊಂಡು ಗಾಯಬ್ ಆಗ್ತಾರೆ. ಅಲ್ಲಿಗೆ ವಾರವೊಂದರ ಕರ್ಮಕಥೆ ಕಾಲೆತ್ತಿಕೊಳ್ಳುತ್ತೆ! ಈ ಸಾಲಿಯೂ ಸ್ಪರ್ಧಿಗಳು ಬದಲಾಗಿದ್ದಾರಷ್ಟೇ; ಆದರೆ, ಸ್ಪರ್ಧೆಯ ವಿಚಾರದ ಏಕತಾನತೆಯನ್ನು ದಾಟಿಕೊಳ್ಳೋದರಲ್ಲಿ ಬಿಗ್ ಬಾಸು ಎಡವಿದ್ದಾರೆ. ಅದೇನೇ ಪೋಸು ಕೊಟ್ಟರೂ, ಅದೆಷ್ಟೇ ಮ್ಯಾನೇಜು ಮಾಡಲು ಪ್ರಯತ್ನಿಸಿದರೂ ಹುಳುಕುಗಳನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂಥಾದ್ದರ ನಡುವೆಯೂ ಈ ಸೀಜನ್ನು ಕೊಂಚ ಕಳೆಗಟ್ಟಲು ಕಾರಣವಾದ ಕೆಲವೇ ಕೆಲ ಸ್ಪರ್ಧಿಗಳಿದ್ದಾರೆ.…

Read More

ಚಿತ್ರರಂಗದಲ್ಲಿ ಅದೆಂಥಾದ್ದೇ ಅಲೆ ಚಾಲ್ತಿಯಲ್ಲಿದ್ದರೂ ಕೂಡಾ, ನಮ್ಮ ನಡುವಿನ ಕಥನಕ್ಕೆ ಕಣ್ಣಾದ ಸಿನಿಮಾಗಳತ್ತ ಪ್ರೇಕ್ಷಕರು ಬಹು ಬೇಗನೆ ಆಕರ್ಷಿತರಾಗುತ್ತಾರೆ. ನಿಜ, ಸಿನಿಮಾ ಎಂಬುದು ಮನೋರಂಜನೆಯ ಮಾಧ್ಯಮ. ಅನುಕ್ಷರಸ್ಥರನ್ನೂ ತಲುಪಿ, ಆಂತರ್ಯಕ್ಕಿಳಿದು ಛಾಪು ಮೂಡಿಸುವ ಸಮ್ಮೋಹಕ ಗುಣವೂ ಅದಕ್ಕಿದೆ. ಇಂಥಾ ಪ್ರಭಾವೀ ಮಾಧ್ಯಮವಾದ ಸಿನಿಮಾದ ಮೂಲಕ ಸಾಮಾಜಿಕ ಕ್ರಾಂತಿ ಮೂಡಿಸುವ ಪ್ರಯತ್ನಗಳೂ ಕೂಡಾ ಆಗಾಗ ನಡೆಯೋದುಂಟು. ಅಂಥಾದ್ದೊಂದು ಸಾಹಸನ್ನು ಕಪಟ ನಾಟಕ ಸೂತ್ರಧಾರಿ ಚಿತ್ರತಂಡ ಕೂಡಾ ಮಾಡಿದೆಯಾ? ಇದೀಗ ಬಿಡುಗಡೆಗೊಂಡಿರುವ ಟ್ರೈಲರ್ ನೋಡಿದ ಪ್ರೇಕ್ಷಕರನ್ನೆಲ್ಲ ಇಂಥಾದ್ದೊಂದು ಪ್ರಶ್ನೆ ಬೆರಗಿನಂತೆ ಕಾಡುತ್ತಿರೋದು ನಿಜ! ಧೀರಜ್ ಎಂ.ವಿ ನಿರ್ದೇಶನ ಹಾಗೂ ಅಭಿರಾಮ ಅರ್ಜುನ ಬ್ಯುಸಿನೆಸ್ ಹೆಡ್ ಆಗಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ ಕಪಟ ನಾಟಕ ಸೂತ್ರಧಾರಿ. ಈಗಾಗಲೇ ಫ:ಸ್ಟ್ ಲುಕ್ ಪೋಸ್ಟರ್ ಲಾಂಚ್ ಮಾಡಿ, ಅದರ ಭೂಮಿಕೆಯಲ್ಲಿ ಒಂದಷ್ಟು ವಿಚಾರಗಳನ್ನು ಚಿತ್ರತಂಡ ಹಂಚಿಕೊಂಡಿತ್ತು. ಅದೆಲ್ಲದರ ಮೂಲಕ ಕಪಟ ನಾಟಕ ಸೂತ್ರಧಾರಿಯ ಆಂತರ್ಯದ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿಕೊಂಡಿತ್ತು. ಈ ಟ್ರೈಲರ್ ನೋಡಿದಾಕ್ಷಣವೇ ಇದೊಂದು ಭಿನ್ನ…

Read More

ಈ ಸಿನಿಮಾ ಮಂದಿ ಪ್ರಚಾರಕ್ಕಾಗಿ ಎಂತೆಂಥಾ ಪಟ್ಟುಗಳನ್ನು ಪ್ರದರ್ಶಿಸೋದಕ್ಕೂ ರೆಡಿಯಾಗಿ ನಿಂತಿರುತ್ತಾರೆ. ದುರಂತವೆಂದರೆ, ಹೆಚ್ಚಿನ ಬಾರಿ ಇಂಥವರು ನೆಚ್ಚಿಕೊಳ್ಳೋದು ಸವಕಲು ಸರಕುಗಳನ್ನಷ್ಟೆ. ಬಿಟ್ಟಿ ಪ್ರಚಾರಕ್ಕಾದರೂ ಕ್ರಿಯೇಟಿವ್ ಹಾದಿಯಲ್ಲಿ ಹೆಜ್ಜೆಯೂರೋದಕ್ಕೆ ಬಾಲಿವುಡ್ ಮಂದಿಗೂ ಕಸುವಿಲ್ಲ. ಹಾಗಿಲ್ಲದೇ ಹೋಗಿದ್ದರೆ, ಈ ನಟಿ ಕಾಜೊಲ್ ಮತ್ತದೇ ದೆವ್ವ, ಭೂತ ಬಾಧೆಯ ಕಥೆ ಹೇಳಿ ನಗೆಪಾಟಲಿಗೀಡಾಗುತ್ತಿರಲಿಲ್ಲ. ಕಾಜೊಲ್ ಮಾ ಅಂತೊಂದು ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಹಾರರ್ ಕಂಟೆಂಟಿನ ಈ ಸಿನಿಮಾ ಇದೇ ತಿಂಗಳ ಇಪ್ಪತ್ತೇಳರಂದು ಬಿಡುಗಡೆಯಾಗಲಿದೆ. ಇದರ ಪ್ರಚಾರದಲ್ಲಿ ಭಾಗಿಯಾದ ಕಾಜೊಲ್ ಪ್ರೇತಬಾಧೆಯ ಭಳಾಂಗು ಬಿಡುವ ಮೂಲಕ ನೆಟ್ಟ್ಟಿಗರಿಂದ ಮೂದಲಿಕೆಗೊಳಗಾಗಿದ್ದಾರೆ! ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಾ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ಅದರಲ್ಲಿ ಆರಂಭದಿಂದ ಕಡೇ ವರೆಗೂ ಕೂಡಾ ಕಾಜೊಲ್ ಭಾಗಿಯಾಗಿದ್ದರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿರುವ ಕಾಜೊಲ್, ದೇಶದಲ್ಲಿ ಭೂತ ಬಾಧೆ ಇಕರುವ ಅನೇಕ ಸ್ಥಳಗಳಿದ್ದಾವೆ. ಅಂಥಾ ಭಯ ಬೀಳಿಸುವ ಸ್ಥಳಗಳಲ್ಲಿ ರಾಮೋಜಿ ಫಿಲ್ಮ್ ಸಿಟಿಯೂ ಸೇರಿಕೊಳ್ಳುತ್ತೆ. ಅಲ್ಲಿ ನನ್ನನ್ನು ದೇವರೇ ಕಾಪಾಡಿದ್ದಾನೆ ಎಂಬರ್ಥದಲ್ಲಿ…

Read More

ಅದ್ಯಾವ ಅಲೆಯಿದ್ದರೂ, ಅದೆಂಥಾ ಸವಾಲುಗಳ ಸಂತೆ ನೆರೆದಿದ್ದರೂ ಕೂಡಾ ಕನ್ನಡ ಚಿತ್ರರಂಗಕ್ಕೆ ಹೊಸಬರ ಆಗಮನ ಮಾತ್ರ ಅನೂಚಾನವಾಗಿ ಮುಂದುವರೆಯುತ್ತಿರುತ್ತೆ. ಹೀಗೆ ಹೊಸಬರ ಆಗಮನವಾದಾಗ ಹೊಸತನವೂ ಜೊತೆಯಾಗಿ ಆಗಮಿಸುತ್ತದೆಂಬಂಥಾ ನಂಬಿಕೆಯೊಂದು ಈ ಕ್ಷಣಕ್ಕೂ ಪ್ರೇಕ್ಷಕರಲ್ಲಿ ಜೀವಂತವಿದೆ. ಅದೇ ಹಾದಿಯಲ್ಲಿ ಮತ್ತೊಂದು ಹೊಸಾ ತಂಡವೀಗ ಸದ್ದಿಲ್ಲದೆ ಸ್ಯಾಂಡಲ್‌ವುಡ್ಡಿಗೆ ಆಗಮಿಸಿದೆ. ಹೊಸಾ ಕಲಾವಿದರೇ ಹೆಚ್ಚಾಗಿರುವ ಡೆಡ್ಲಿ ಲವರ್ಸ್ ಎಂಬ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡಿರುವ ಈ ತಂಡ ಟ್ರೈಲರ್ ಲಾಂಚ್ ಮೂಲಕವೇ ಮಾಧ್ಯಮದವರನ್ನು ಮುಖಾಮುಖಿಯಾಗಿದೆ. ಇದೇ ಹೊತ್ತಿನಲ್ಲಿ ಜೂನ್ 20ರಂದು ಡೆಡ್ಲಿ ಲವರ್ಸ್ ಚಿತ್ರ ಬಿಡುಗಡೆಯಾಗುತ್ತದೆಂಬುದನ್ನೂ ಘೋಶಿಸಿಕೊಂಡಿದೆ! ನಾಗೇಂದ್ರ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಕೂಡಾ ಅವರೇ ಹೊತ್ತುಕೊಂಡಿರೋದು ವಿಶೇಷ. ಡೆಡ್ಲಿ ಲವರ್ಸ್ ಎಂಬ ಶೀರ್ಷಿಕೆಯೇ ಒಟ್ಟಾರೆ ಕಥೆಯ ಬಗ್ಗೆ ಒಂದಷ್ಟು ದಿಕ್ಕುಗಳಲ್ಲಿ ಆಲೋಚನೆಗೆ ಹಚ್ಚುವಂತಿದೆ. ಸಾಮಾನ್ಯವಾಗಿ ಪ್ರೇಮಿಗಳನ್ನು ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಆಗಿ ತೋರಿಸಲಾಗುತ್ತೆ. ಆದರೆ, ಈ ಸಿನಿಮಾದ ಕಥೆಯೇ ಭಿನ್ನ ಎಂಬುದನ್ನು…

Read More

ನಿರ್ದೇಶಕ ನಾಗಶೇಖರ್ ಮತ್ತೆ ಮಂಡೆಬಿಸಿ ಮಾಡಿಕೊಂಡಿದ್ದಾರೆ. ಭಾರೀ ಮಹತ್ವಾಕಾಂಕ್ಷೆಯೊಂದಿಗೆ ನಾಗಣ್ಣ ಸಂಜು ವೆಡ್ಸ್ ಗೀತಾ೨ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಲವ್ ಸ್ಟೋರಿಗಳಿಗೆ ದೃಶ್ಯರೂಪ ಕೊಡೋದರಲ್ಲಿ ನಿಸ್ಸೀಮರಾದ ನಾಗಶೇಖರ್ ಈ ಮೂಲಕ ಹಳೇ ಗೆಲುವು ಪುನರಾವರ್ತನೆಯಾದೀತೆಂಬ ನಿರೀಕ್ಷೆಯಿಟ್ಟುಕೊಂಡಿದ್ದರು. ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಈ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಹಾಗೊಂದು ಖುಷಿಯಿಂದ ಈ ಸಿನಿಮಾ ಬಿಡುಗಡೆಯಾದೇಟಿಗೆ ನಾಗಣ್ಣನಿಗೆ ನಡುಕ ಹುಟ್ಟುವಂಥಾ ಸೋಲೆದುರಾಗಿತ್ತು. ಆದರೂ ಛಲ ಬಿಡದೆ ಈ ಸಿನಿಮಾವನ್ನು ಮರು ಬಿಡುಗಡೆಗೊಳಿಸಿದ್ದ ನಾಗಶೇಖರ್ ಈಗ ರೊಚ್ಚಿಗೆದ್ದು ಬಿಟ್ಟಿದ್ದಾರೆ. ಇದೇ ಸಿಟ್ಟಲ್ಲಿ ಸೀದಾ ಚಲನಚಿತ್ರ ವಾಣಿಜ್ಯ ಮಂಡಳಿಗೆ ತೆರಳಿರುವ ನಾಗಶೇಖರ್ ಥಿಯೇಟರು ಸಿಗದೆ ದೋಖಾ ನಡೆಯುತ್ತಿರೋದರ ಬಗ್ಗೆ ದೂರು ಕೊಟ್ಟಿದ್ದಾರೆ. ಪ್ರಧಾನವಾಗಿ ಈ ಸಿನಿಮಾ ನಾಯಕಿಯಾದ ರಚಿತಾ ರಾಮ್ ಯಾವುದೇ ಪ್ರಮೋಷನ್ನುಗಳಿಗೆ ಬಾರದೆ ವಂಚಿಸಿದ್ದಾರೆಂದು ಆರೋಪಿಸಿ, ಆಕೆಯ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ. ಓರ್ವ ನಾಯಕಿಯಾಗಿ ಸೋಲು ಗೆಲುವಿನಲ್ಲಿ ಸಮನಾಗಿ ಭಾಗಿಯಾಗಬೇಕಾದದ್ದು ರಚಿತಾ ಕರ್ತವ್ಯ. ಆದರೆ, ಆಕೆ ಸಿನಿಮಾ ಸಂಕಷ್ಟದಲ್ಲಿದ್ದರೂ…

Read More

ಪುಷ್ಪಾ ಸರಣಿ ಚಿತ್ರಗಳ ನಂತರದಲ್ಲಿ ಅಲ್ಲು ಅರ್ಜುನ್ ಹವಾ ಜಗದಗಲ ಹಬ್ಬಿಕೊಂಡಿದೆ. ಇಂಥಾ ಯಶಸ್ವೀ ಸಿನಿಮಾಗಳ ನಂತರ ಅಲ್ಲು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ಕುತೂಹಲ ಸಹಜವಾಗಿಯೇ ಹಬ್ಬಿಕೊಂಡಿತ್ತು. ಹಾಗೆ ನೋಡಿದರೆ, ಸಿನಿಮಾಗಳ ಆಯ್ಕೆಯ ವಿಚಾರದಲ್ಲಿ ಅಲ್ಲು ಲಾಗಾಯ್ತಿನಿಂದಲೂ ಭಲೇ ಚಾಲಾಕಿ. ಇಂಥಾ ನಟನ ನಿರ್ಧಾರದ ಬಗ್ಗೆ ಕುತೂಹಲ ಮೂಡೋದು ವಿಶೇಷವೇನಲ್ಲ. ಇಂಥಾ ಘಳಿಗೆಯಲ್ಲಿಯೇ ಅಲ್ಲು ಮುಂದಿನ ಚಿತ್ರವನ್ನು ತ್ರಿವಿಕ್ರಮ್ ನಿರ್ದೇಶನ ಮಾಡಲಿದ್ದಾರೆ ಅಂತೊಂದು ಸುದ್ದಿ ಕೇಳಿ ಬಂದಿತ್ತು. ಒಂದಷ್ಟು ಕಾಲ ಚಾಲ್ತಿಯಲ್ಲಿದ್ದ ಈ ವಿಚಾರ ಏಕಾಏಕಿ ನಿಂತು ಹೋಗಿತ್ತು; ಅಲ್ಲು ಅರ್ಜುನ್ ಆಟ್ಲಿ ನಿರ್ದೇಶನದ ಸಿನಿಮಾ ಒಪ್ಪಿಕೊಳ್ಳುವ ಮೂಲಕ! ಅಷ್ಟಕ್ಕೂ ತ್ರಿವಿಕ್ರಮ್ ನಿರ್ದೇಶನದ ಚಿತ್ರಗಳ್ಲ್ಲಿ ಅಲ್ಲು ಅರ್ಜುನ್ ಈ ಹಿಂದೆಯೂ ನಟಿಸಿದ್ದಾರೆ. ಬರವಣಿಗೆಯನ್ನು ಮೂಲ ಶಕ್ತಿಯಾಗಿಸಿಕೊಂಡಿರೋ ತ್ರಿವಿಕ್ರಮ್ ಐಲು ಬುದ್ಧಿ ಬದಿಗಿಟ್ಟು ನಿಂತರೆ ಈ ಕ್ಷಣಕ್ಕೂ ಪ್ಯಾನಿಂಡಿಯಾ ಮಟ್ಟದಲ್ಲಿ ಕಮಾಲ್ ಸೃಷ್ಟಿಸುವ ಛಾತಿ ಹೊಂದಿರುವ ನಿರ್ದೇಶಕ ಅನ್ನೋದರಲ್ಲಿ ಎರಡು ಮಾತಿಲ್ಲ. ಇಂಥವರ ಸಿನಿಮಾವನ್ನು ಅಲ್ಲು ಅರ್ಜುನ್ ಅದ್ಯಾಕೆ ಸೈಡಿಗೆ ಸರಿಸಿದರು? ಅಲ್ಲು…

Read More

ತನ್ನ ಗುರು ರಾಮ್ ಗೋಪಾಲ್ ವರ್ಮಾನಂಥಾದ್ದೇ ವಿಶಿಷ್ಟವಾದ ವ್ಯಕ್ತಿತ್ವ, ಓರ್ವ ನಿರ್ದೇಶಕನಾಗಿ ಗ್ರಹಿಕೆ ಹೊಂದಿರುವಾತ ಪುರಿ ಜಗನ್ನಾಥ್. ಅತ್ತ ವರ್ಮಾನ ಫಿಲಾಸಫಿಯ ಪ್ರವರ್ತಕನಾಗಿ ಕಾಣಿಸಿಕೊಳ್ಳುತ್ತಲೇ ನಿರ್ದೇಶಕನಾಗಿಯೂ ಚಾಲ್ತಿಯಲ್ಲಿದ್ದ ಪುರಿ ಪಾಲಿಗೆ ವರ್ಷಾಂತರಗಳ ಹಿಂದೆ ಘೋರ ಸೋಲು ಬಾಧಿಸಿ ಬಿಟ್ಟಿತ್ತು. ಅದೇನು ಅಂತಿಂಥಾ ಸೋಲಲ್ಲ; ಇಂಡಸ್ಟ್ರಿಯಲ್ಲಿ ಅಳಿದುಳಿದಿದ್ದ ಪುರಿ ಬಗೆಗಿನ ನಂಬಿಕೆಯೆಲ್ಲ ಛಿದ್ರವಾಗಿ ಬಿಟ್ಟಿತ್ತು. ಒಂದಷ್ಟು ಗೆಲುವು ಕಂಡು ಬೀಗುತ್ತಿದ್ದ ವಿಜಯ್ ದೇವರಕೊಂಡನ ಬಾಟಮ್ಮಿಗೆ ಸೋಲಿನ ಬರೆ ಬಿದ್ದಿತ್ತು. ಹೇಗೋ ಡಬಲ್ ಇಸ್ಮಾರ್ಟ್ ಗೆಲುವಿನ ನಂತರ ಕೊಂಚ ಚೇತರಿಸಿಕೊಂಡಿದ್ದ ಪುರಿಯೀಗ ಗರಿಗರಿ ಉತ್ಸಾಹದೊಂದಿಗೆ ಮರಳಿದೆ! ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಸೇರಿಕೊಂಡು ದೊಡ್ಡ ಬೇಟೆಗೇ ಸಜ್ಜಾಗಿದ್ದಾರೆ. ಈ ಬಾರಿ ಮತ್ತೆ ಪ್ಯಾನಿಂಡಿಯಾ ಚಿತ್ರ ಮಾಡಲು ಮುಂದಾಗಿದ್ದಾರೆ. ಹೀಗೆ ಯಾವುದೇ ಸಿನಿಮಾ ಕೈಗೆತ್ತಿಕೊಂಡರೂ ಪುರಿಉ ತಾರಾಗಣ ಮತ್ತು ನಾಯಕಿಯ ಆಯ್ಕೆ ವಿಚಾರಕ್ಕೆ ಹೆಚ್ಚು ಪ್ರಧಾನ್ಯತೆ ಕೊಡುತ್ತಾರೆ. ಈ ಬಾರಿಯೂ ಚಾರ್ಮಿ ಮತ್ತು ಪಿರಿ ಸೇರಿಕೊಂಡು ಬಾಲಿವುಡ್ಡೂ ಸೇರಿದಂತೆ ನಾನಾ ಚಿತ್ರರಂಗದಲ್ಲಿ ತಲಾಶು ನಡೆಸಿದ್ದರು.…

Read More

ಸಿನಿಮಾ ರಂಗದಲ್ಲಿ ಬರೀ ಬಿಲ್ಡಪ್ಪುಗಳನ್ನು ನೆಚ್ಚಿಕೊಂಡೇ ವೃತ್ತಿ ಬದುಕನ್ನು ಮ್ಯಾನೇಜು ಮಾಡಿದ ಒಂದಷ್ಟು ನಟರಿದ್ದಾರೆ. ಕಿಲುಬುಗಾಸಿನ ನಟನೆ ಬಾರದಿದ್ದರೂ ಊರು ತುಂಬಾ ಅಭಿಮಾನಿ ಸಂಘಗಳನ್ನು ಹುಟ್ಟಿಸಿ, ಮಹಾ ನಟರಂತೆ ಪೋಸು ಕೊಡುತ್ತಲೇ ಎದ್ದು ಹೋದವರಿದ್ದಾರೆ. ಆದರೆ, ಅಂಥಾ ಬಿಲ್ಡಪ್ಪುಗಳ ಒಡ್ಡೋಲಗದಲ್ಲಿ ಭರ್ತಿ ನಲವತ್ತು ವರ್ಷಗಳ ಕಾಲ ಚಾಲ್ತರಿಯಲ್ಲಿರುವ ನಟರು ತೀರಾ ವಿರಳ. ಅಂಥಾ ಮಹಾನಟನೊಬ್ಬನ ನಾನಾ ಅವತಾರಗಳನ್ನು ನೋಡುವ ಸೌಭಾಗ್ಯ ಸಿಕ್ಕಿರೋದು ಈ ಜನರೇಷನ್ನಿನ ಪ್ರೇಕ್ಷಕರ ಮಹಾ ಭಾಗ್ಯ. ಅಂಥಾ ಭಾಗ್ಯವೊಂದರ ಅನಭಿಷಿಕ್ತ ವಾರಸೂದಾರ ನಂದಮೂರಿ ಬಾಲಕೃಷ್ಣ ಅಲಿಯಾಸ್ ಬಾಲಯ್ಯ. ಇಂಥಾ ಮಹಾನಟನ ಅಖಂಡ ಕಾಮಿಡಿ ಕಂಡು ಪ್ಯಾನಿಂಡಿಯಾ ಲೆವೆಲ್ಲಿನ ಪ್ರೇಕ್ಷಕರಿಗೆ ನಡುಕ ಶುರುವಾಗಿ ಬಿಟ್ಟಿದೆ! ಹೇಳಿಕೇಳಿ ಇದೀಗ ತೆಲುಗು ಚಿತ್ರರಂಗದ ಪಾಲಿನ ಹವಾ ಚಾಲ್ತಿಯಲ್ಲಿದೆ. ಅಲ್ಲಿನ ಸಿನಿಮಾಗಳು ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಸದ್ದು ಮಾಡುತ್ತಾ, ಬಾಲಿವುಡ್ ಸಿನಿಮಾಇಗಳನ್ನೇ ಮಂಕಾಗಿಸುತ್ತಿವೆ. ಕನ್ನಡವೂ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದ ಘನತೆ ಬಾಲಿವುಡ್ಡನ್ನು ಮೀರಿ ಹಬ್ಬಿಕೊಂಡಿದೆ. ಇದೆಲ್ಲದರಿಂದಾಗಿ ದಕ್ಷಿಣದ ಸಿನಿಮಾಗಳ ಬಗ್ಗೆ ಬೆರಗಿನ ಭಾವವೊಂದು ಉತ್ತರದ…

Read More

ಅದೆಂಥಾ ಕ್ರೇಜ್ ಇದ್ದರೂ ಕೂಡಾ ಮದುವೆಯಾದ ನಂತರ ನಟಿಯರಿಗೆ ಅವಕಾಶ ಕಡಿಮೆಯಾಗುತ್ತದೆಂಬುದು ಸಿನಿಮಾ ರಂಗದಲ್ಲಿ ಲಾಗಾಯ್ತಿನಿಂದಲೂ ಬೇರೂರಿಕೊಂಡಿರುವ ನಂಬಿಕೆ. ಆದರೀಗ ಅದು ಬಹುತೇಕ ಚಿತ್ರರಂಗಗಳಲ್ಲಿ ಆ ನಂಬಿಕೆ ಹಂತ ಹಂತವಾಗಿ ಸುಳ್ಳಾಗುತ್ತಿದೆ. ಕೆಲ ನಟಿಯರು ಮದುವೆಯಾಗಿ, ಮಗುವಿನ ಲಾಲನೆ ಪಾಲನೆ ಮಾಡಿದ ನಂತರ ಮತ್ತೆ ಫಾರ್ಮಿಗೆ ಮರಳುತ್ತಿದ್ದಾರೆ. ಆ ಬಳಿಕವೇ ಕೆಲವರಿಗೆ ಕನಸಿನ ಪಾತ್ರಗಳೂ ಸಿಗುತ್ತಿದ್ದಾವೆ. ಸದ್ಯದ ಮಟ್ಟಿಗೆ ಬಾಲಿವುಡ್ಡಿನಲ್ಲಿ ಆಲಿಯಾ ಭಟ್ ಅಂಥಾದ್ದೊಂದು ಅವಕಾಶವನ್ನು ತನ್ನದಾಗಿಸಿಕೊಂಡಿದ್ದಾಳೆ. ಆಲ್ಫಾದಲ್ಲಿ ಪ್ರಧಾನ ಪಾತ್ರಧಾರಿಯಾಗಿರುವ ಆಲಿಯಾಗೆ ಇದರೊಂದಿಗೆ ಪ್ರಧಾನ ಪಾತ್ರವೇ ಸಿಕ್ಕಿದೆ. ಇದು ಪತ್ತೇಧಾರಿ ಕಥಾನಕವನ್ನೊಳಗೊಂಡಿರುವ ಚಿತ್ರ. ವರ್ಷಗಟ್ಟಲೆ ಮದುವೆ ಮತ್ತು ಮಗುವಿನ ಲೋಕದಲ್ಲಿ ಕಳೆದು ಹೋಗಿದ್ದ ಆಲಿಯಾ ಅತ್ಯುತ್ಸಾಹದಿಂದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾಳೆ. ಶಿವ್ ರಾವೆಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸದರಿ ಚಿತ್ರದ ಚಿತ್ರೀಕರಣ ಅವ್ಯಾಹತವಾಗಿ ನಡೆಯುತ್ತಿದೆ. ಇದೀಗ ವಿಶೇಷವಾದ ಹಾಡೊಂದಕ್‌ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಅದರಲ್ಲಿ ಶಾರ್ವರಿ ವಾಘ್ ಜೊತೆ ನೃತ್ಯ ಮಾಡಲು ಆಲಿಯಾ ತಾಲೀಮು ನಡೆಸುತ್ತಿದ್ದಾರಂತೆ. ಕಷ್ಟದಾಯಕ ನೃತ್ಯದ ಪಟ್ಟುಗಳ ಮೂಲಕ…

Read More

ಕೆಜಿಎಫ್ ಸರಣಿ ಚಿತ್ರಗಳ ಮೂಲಕ ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚಿದಾಕೆ ಶ್ರೀನಿಧಿ ಶೆಟ್ಟಿ. ಯಶ್ ಹೇಗೋ ಆ ಯಶಸ್ಸಿನ ಸರಣಿಯನ್ನು ಟಾಕ್ಸಿಕ್ ಮೂಲಕ ಮುಂದುವರೆಸುವ ಛಲದೊಂದಿಗೆ ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ, ಯಶ್ ಗೆ ಜೋಡಿಯಾಗಿ ನಟಿಸಿದ್ದ ಶ್ರೀನಿಧಿ ಪಾಲಿಗೆ ಮಾತ್ರ ಆ ಗೆಲುವನ್ನು ಮುಂದುವರೆಸಿಕೊಂಡು ಹೋಗೋದು ಅಕ್ಷರಶಃ ಪ್ರಯಾಸವಾಗಿ ಬಿಟ್ಟಿದೆ. ಯಾಕೆಂದರೆ, ಕೆಜಿಎಫ್ ನಂತರ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಶ್ರೀನಿಧಿಗೆ ಅದೇಕೋ ಗೆಲುವು ಒಲಿದಿಲ್ಲ. ಆ ನಂತರ ಒಂದು ಸುದೀರ್ಘ ಕಾಲಾವಧಿಯಲ್ಲಿ ಈ ಮಂಗಳೂರು ಹುಡುಗಿ ಒಂದಷ್ಟು ಜಾಹೀರಾತುಗಳಲ್ಲಿ ಕಳೆದು ಹೋಗಿ ಮ್ಲಾನಗೊಂಡಿದ್ದಳು. ಆಕೆಯ ಮುಂದೀಗ ಸರಿಕಟ್ಟಾದ ಅವಕಾಶವೊಂದು ಬಂದು ನಿಂತಿದೆ! ಸಾಮಾನ್ಯವಾಗಿ, ಆಗಾಗ ಶ್ರೀನಿಧಿ ಶೆಟ್ಟಿಯ ಹೆಸರು ಬಿಗ್ ಬಜೆಟ್ ಸಿನಿಮಾಗಳ ಜೊತೆ ಕೇಳಿ ಬರುತ್ತಿರುತ್ತದೆ. ಆದರೆ, ಈಗ ಹಬ್ಬಿಕೊಂಡಿರುವ ಸುದ್ದಿ ಹೆಚ್ಚೂ ಕಡಿಮೆ ಅಧಿಕೃತ ಅನ್ನಲಡ್ಡಿಯಿಲ್ಲ. ಅಧಿಕ್ ರವಿಚಂದ್ರನ್ ನಿರ್ದೇಶನದ ಸಿನಿಮಾವೊಂದನ್ನು ಅಜಿತ್ ಒಪ್ಪಿಕೊಂಡಿದ್ದಾರೆ. ಈಗಾಗಲೇ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅಜಿತ್ ಇನ್ನೊಂದೆರಡು ತಿಂಗಳುಗಳಲ್ಲಿ ಹೊಸಾ ಸಿನಿಮಾದತ್ತ ಹೊರಳಿಕೊಳ್ಳಲಿದ್ದಾರೆ.…

Read More