Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಜಾಪಾಳ್ ಜಂಕ್ಷನ್»Dhanveer: ನಸೀಬುಗೇಡಿ ನಟನ ಸುತ್ತಾ ಇದೆಂಥಾ ಷಡ್ಯಂತ್ರ?
    ಜಾಪಾಳ್ ಜಂಕ್ಷನ್

    Dhanveer: ನಸೀಬುಗೇಡಿ ನಟನ ಸುತ್ತಾ ಇದೆಂಥಾ ಷಡ್ಯಂತ್ರ?

    By Santhosh Bagilagadde10/11/2025
    Facebook Twitter Telegram Email WhatsApp
    67bb8ae5 9111 497a 86d7 f7adfad87bc5
    Share
    Facebook Twitter LinkedIn WhatsApp Email Telegram

    ಪರಪ್ಪನ ಅಗ್ರಹಾರ ಜೈಲಿನ ಅಧ್ವಾನಗಳು ಆಗಾಗ ಹೊರಜಗತ್ತಿಗೆ ಪರಿಚಯವಾಗುತ್ತಿರುತ್ತವೆ. ಆದರೀಗ ವೈರಲ್ ವೀಡಿಯೋವೊಂದರ ಮೂಲಕ ನಮ್ಮ ದುಷ್ಟ ವ್ಯವಸ್ಥೆಯ ಭಯಾನಕ ಹುಳುಕೊಂಡು ಬಟಾಬಯಲಾಗಿದೆ. ಪರಪ್ಪನ ಅಗ್ರಹಾರವೆಂಬುದು ಕೂಳುಬಾಕ ಅಧಿಕಾರಿಗಳು, ಸಿಬ್ಬಂದಿ ವರ್ಗದವರ ಉಗ್ರಾಣದಂತಾಗಿ ಬಹುಕಾಲ ಕಳೆದಿದೆ. ಈ ಮೂಲಕ ಜೈಲೆಂಬುದರ ಅಸಲೀ ರೂಪುರೇಷೆಯೇ ತಲೆಕೆಳಗಾಗಿ ಬಿಟ್ಟಿದೆ. ಇದೀಗ ಹಬ್ಬಿಕೊಂಡಿರುವ ವೀಡಿಯೋಗಳ ಮೂಲಕ ಪರಪ್ಪನ ಅಗ್ರಹಾರ ಅದೆಂಥಾ ಅಧೋಗತಿಯ ಸ್ಥಿತಿ ತಲುಪಿದೆ ಎಂಬ ಸ್ಪಷ್ಟ ಚಿತ್ರಣ ರವಾನೆಯಾಗಿದೆ. ಹೆಣ್ಣುಮಕ್ಕಳನ್ನು ಅತ್ಯಾಚಾರವೆಸಗಿ ಕೊಂದ ಪಾಪಿಷ್ಟ ಉಮೇಶ್ ರೆಡ್ಡಿ, ದೇಶದ್ರೋಹಿ ಭಯೋತ್ಪಾದಕರು, ದಂಧೆಕೋರರೆಲ್ಲ ಪರಪ್ಪನ ಅಗ್ರಹಾರದಲ್ಲಿ ಬಿಂದಾಸಾಗಿರುವ ಈ ವೀಡಿಯೋಗಳ ಮೂಲಕ ಹಾಲಿ ಸರ್ಕಾರದ ಮಾನ ರಾಷ್ಟ್ರಾದ್ಯಂತ ಮೂರಾಬಟ್ಟೆಯಾಗಿದೆ!

    716aed8a c9e4 42ec 804a 00966ca72970
    ಜೈಲೆಂಬುದು ಕ್ರಿಮಿನಲ್ಲುಗಳ ಎದೆಯಲ್ಲೂ ಪಶ್ಚಾತ್ತಾಪದ ಪಸೆ ಮೂಡಿಸಿ ಬದಲಾವಣೆಗೆ ದಾರಿ ಮಾಡಿಕೊಡುವ ಸ್ಥಳ. ಅದು ಈ ನೆಲದ ಜನಸಾಮಾನ್ಯರಲ್ಲಿದ್ದ ನಂಬಿಕೆ. ಆದರೆ, ಈಗ ಸಣ್ಣಪುಟ್ಟ ಕೇಸುಗಳಲ್ಲಿ ಬಂಧಿಯಾದವರನ್ನೂ ಸಹ ಲೋಕಕಂಟಕರನ್ನಾಗಿ ಮಾರ್ಪಡಿಸುವ ಕೇಂದ್ರವಾಗಿ ಪರಪ್ಪನ ಅಗ್ರಹಾರದಂಥಾ ಜೈಲುಗಳು ಮಾರ್ಪಾಟುಗೊಂಡಿವೆ. ಕಾಸು ಕೊಟ್ಟರೆ ಎಂಥಾ ಸೌಕರ್ಯ ಒದಗಿಸಲೂ ಹಿಂದೇಟು ಹಾಕದಷ್ಟು ಲಜ್ಜೆಗೆಟ್ಟು ನಿಂತಿದ್ದಾರೆ. ಇಂಥಾ ಅಧಿಕಾರಿ ಮತ್ತು ಸಿಬ್ಬಂಧಿ ವರ್ಗ ಇರೋದರಿಂದಲೇ ವಿಕೃತ ಕಾಮಿ ಉಮೇಶ್ ರೆಡ್ಡಿ ಆರಾಮಾಗಿ ಆಂಡ್ರಾಯ್ಡ್ ಫೋನಲ್ಲಿ ಮಾತಾಡುತ್ತಾ, ಎಣ್ಣೆ ಹೊಡೆದುಕೊಂಡು ಆರಾಮಾಗಿದ್ದಾನೆ. ಐಸಿಸಿ ಉಗ್ರ ಶಕೀಲ್ ಮುನ್ನಾನಂಥಾ ಕ್ರಿಮಿಗಳನ್ನೂ ಸಖಲ ಸೌಕರ್ಯ ಕಲ್ಪಿಸಿ ಸಾಕಲಾಗುತ್ತಿದೆ. ಬೇರೆ ಬೇರೆ ಕೇಸುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳು ಎಣ್ಣೆ ಪಾರ್ಟಿ ನಡೆಸುತ್ತಾ, ಕುಣಿದು ಕುಪ್ಪಳಿಸುತ್ತಿದ್ದಾರೆ!

    dhanveer gowda 169537251560
    ಯಾವಾಗ ಇಂಥಾದ್ದೊಂದು ವೀಡಿಯೋ ವೈರಲ್ ಆಯ್ತೋ, ಆ ಕ್ಷಣದಿಂದಲೇ ರಾಜ್ಯ ಸರ್ಕಾರ ಡ್ಯಾಮೇಜ್ ಕಂಟ್ರೋಲಿಗಾಗಿ ನಾನಾ ಸ್ವರೂಪಗಳಲ್ಲಿ ಸರ್ಕಸ್ಸು ನಡೆಸಲಾಗಿದೆ. ಏಕಾಏಕಿ ಸಿಸಿಬಿ ಅಧಿಕಾರಿಗಳು ನಟ ಧನ್ವೀರನನ್ನು ವಿಚಾರಣೆಗೊಳಪಡಿಸಿದ್ದೂ ಕೂಡಾ ಅಂಥಾ ಸರ್ಕಸ್ಸಿನ ಭಾಗ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ಧನ್ವೀರ್‌ನನ್ನು ಹೀಗೆ ವಿಚಾರಣೆಗೊಳಪಡಿಸಿದ ಅಧಿಕಾರಿಗಳು ಆಳೋ ಸರ್ಕಾರದ ಆಜ್ಞೆಯಂತೆಯೇ ನಡೆದುಕೊಂಡಿದ್ದಾರೆ. ಪರಪ್ಪನ ಅಗ್ರಹಾರದೊಳಗಿನ ಅಸಹ್ಯ ಬೀದಿಗೆ ಬರುತ್ತಲೇ ಕಂಗಾಲಾದ ಸರ್ಕಾರ, ಈ ವೀಡಿಯೋ ಹೊರ ಬಂದಿದ್ದರ ಮೂಲ ಯಾವುದು ಎಂಬುದುದರ ಬಗ್ಗೆ ಸಹಜವಾಗಿಯೇ ತಲೆ ಕೆಡಿಸಿಕೊಂಡಿದೆ. ಈ ಹಂತದಲ್ಲಿ ಥಟ್ಟನೆ ಗೊತ್ತಿಲ್ಲ ಖ್ಯಾತಿಯ ಗೃಹಸಚಿವರ ತಲೆಗೆ ದರ್ಶನ್ ಹೆಸರು ಹೊಳೆಯಿತಾ? ಲೀಕಾದ ವೀಡಿಯೋ ಕಿಸುರನ್ನು ನಸೀಬುಗೇಡಿ ನಟನ ತಲೆಗೆ ಕಟ್ಟಿ ಆ ಕ್ಷಣಕ್ಕೆ ಜನರ ಗಮನವನ್ನ ಬೇರೆಡೆಗೆ ವರ್ಗಾಯಿಸುವ ಷಡ್ಯಂತ್ರ ನಡೆಯಿತಾ? ಸಿಸಿಬಿ ಪೊಲೀಸರ ನಡೆಯೇಕೋ ಇಂಥಾ ಗುಮಾನಿಯನ್ನು ತೀವ್ರವಾಗಿಸುವಂತಿದೆ.

    e6e9116f cbbb 4d82 b5b3 5ae5d93f00d4
    ದರ್ಶನ್ ಎರಡನೇ ಬಾರಿ ಜೈಲುಪಾಲಾದ ನಂತರ ಪರಿಸ್ಥಿತಿ ಬಿಗಡಾಯಿಸಿದೆ. ಆತ ಒಂದು ತಲೆದಿಂಬಿಗಾಗಿ, ಕೊಂಚ ಬಿಸಿಲಿಗೆ ಮೈಯೊಡ್ಡುವದಕ್ಕಾಗಿಯೂ ಕೋರ್ಟ್ ಮೊರೆ ಹೋಗುವಂಥಾ ಸ್ಥಿತಿ ಬಂದೊದಗಿದೆ. ಹೀಗಿರುವಾಗ ಅದೇ ಜೈಲಿನ ಬ್ಯಾರಕ್ಕುಗಳಲ್ಲಿರುವ ವಿಕೃತಕಾಮಿ ಉಮೇಶ್ ರೆಡ್ಡಿ, ಶಕೀಲ್ ಮುನ್ನಾನಂಥಾ ಭಯೋತ್ಪಾದಕರು ಎಲ್ಲ ಸೌಕರ್ಯ ಪಡೆದು ಹಾಯಾಗಿದ್ದರು. ಇದನ್ನು ಹೊರಜಗತ್ತಿಗೆ ಜಾಹೀರು ಮಾಡುವ ಮೂಲಕ ದರ್ಶನ್ ಸೂತ್ರಧಾರಿಕೆ ವಹಿಸಿಕೊಂಡನಾ? ಅಂಥಾ ವೀಡಿಯೋ ಧನ್ವೀರ್ ಕಡೆಯಿಂದ ಮೀಡಿಯಾಗಳಿಗೆ ಸರಬರಾಜಾಯಿತಾ? ಇಂಥಾ ಅನುಮಾನಗಳಿರೋದರಿಂದಲೇ ಧನ್ವೀರ್‌ನನ್ನು ವಿಚಾರಣೆಗೊಳಪಡಿಸಿ, ಆತನ ಮೊಬೈಲ್ ಅನ್ನು ಪರಿಶೀಲಿಸಲಾಗಿದೆ. ಆದರೆ, ಅಲ್ಲಿ ಯಾವ ಸಾಕ್ಷಿಗಳೂ ಸಿಗದೆ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ!

    Darshan murder accused
    ಒಂದು ವೇಳೆ ಧನ್ವೀರ್ ದರ್ಶನ್‌ಗೆ ಸಹಕಾರಿಯಾಗಲೆಂಬ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿ, ಈ ವೀಡಿಯೋ ಲೀಕ್ ಸೂತ್ರಧಾರನಾಗಿದ್ದಾನೆ ಅಂತಿಟ್ಟುಕೊಳ್ಳಿ; ಅದರಲ್ಲಿ ಅಪರಾಧವೇನೂ ಇಲ್ಲ. ಯಹಾಕೆಂದರೆ, ಇಲ್ಲಿ ಮುಖ್ಯವಾಗೋದು ವೀಡಿಯೋ ಲೀಕ್ ಮಾಡಿರೋದು ಯಾರೆಂಬುದಲ್ಲ. ಆ ವೀಡಿಯೋದಲ್ಲಿರುವ ಭೀಕರ ವಾಸ್ತವಕ್ಕೆ ಕಾರಣರ್‍ಯಾರೆಂಬುದೇ ಚರ್ಚಿಸಬೇಕಾದ ವಿಚಾರ. ಪರಪ್ಪನ ಅಗ್ರಹಾರದಂಥಾ ಜೈಲುಗಳ ಮೇಲೆ ಗೃಹ ಇಲಾಖೆ ಸದಾ ಕಾಲವೂ ಕಣ್ಣಿಡಬೇಕಾಗುತ್ತೆ. ಇಂಥಾ ಕಣ್ಗಾವಲಿನಲ್ಲೇ ವಿಕೇತ ಕಾಮಿಗಳು, ದೇಶದ್ರೋಹಿ ಭಯೋತ್ಪಾದಕರು ರಾಜವೈಭೋಗ ಅನುಭವಿಸುತ್ತಾರೆಂದರೆ ಅದಕ್ಕಿಂತ ನಾಚಿಕೆಗೇಡಿನ ವಿಚಾರ ಮತ್ಯಾವುದಿದೆ? ಗೃಹಸಚಿವ ಜಿ ಪರಮೇಶ್ವರ್ ಆ ಖಾತೆಗೆ ಯೋಗ್ಯರಲ್ಲ ಅನ್ನೋದಕ್ಕೆ ಮತ್ಯಾವ ಪುರಾವೆ ಬೇಕಿದೆ? ಕ್ರಿಮಿನಲ್ಲುಗಳನ್ನು ಜೈಲೊಳಗೆ ಕೊಬ್ಬಲು ಬಿಡುವ ಯಾವುದೇ ಪಕ್ಷದ ಸರ್ಕಾರದಿಂದ ಜನ ಏನನ್ನು ನಿರೀಕ್ಷಿಸಲು ಸಾಧ್ಯ? ನಾಗರಿಕರ ನಡುವೆ ಹುಟ್ಟಿಕೊಂಡಿರುವ ಆಕ್ರೋಶಭರಿತ ಪ್ರಶ್ನೆಗಳಿಗೆ ಉತ್ತರಿಸೋ ನೈತಿಕತೆ ಈ ಸರ್ಕಾರಕ್ಕಿದೆಯಾ?

    #challengingstar #renukaswamymurdercase darshan dhanveer govtofkarnatak gparameshwar parappanaagraharavideoleak rapistumeshreddy sandalwood shakeelmunna siddaramaiah terrorism terrorist umeshreddy
    Share. Facebook Twitter LinkedIn WhatsApp Telegram Email
    Previous ArticleKona Movie Review: ಕಥೆಯ ಕಳೇಬರದ ಮೇಲೆ ಕಾಮಿಡಿ ಕಿಲಾಡಿಗಳ ಕಸರತ್ತು!
    Next Article Love You Muddu Movie Review: ಚೆಂದದ ಕಥೆ ಸೇರಿದಂತೆ ಎಲ್ಲವೂ ಇದೆ; ಆದರೆ..!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    09/12/2025

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    08/12/2025

    Andhra King Taluka #1 Best Movie : ಬೆದರಿದ್ದ ಆಂಧ್ರ ಕಿಂಗ್‌ಗೆ `ಅಖಂಡ’ ಅಭಯ!

    06/12/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (9)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (80)
    • ಸೌತ್ ಜೋನ್ (135)
    • ಸ್ಪಾಟ್ ಲೈಟ್ (216)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಬಾಲಿವುಡ್ 12/12/2025

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    ಕೂಲಿ ಚಿತ್ರದ ಸೋಲಿನ ನಂತರದಲ್ಲಿ ಯುವ ನಿರ್ದೇಶಕ (lokesh kanagaraj) ಲೋಕೇಶ್ ಕನಗರಾಜ್ ಪಾಲಿಗೆ ಮುಂದಿನ ಹೆಜ್ಜೆಗಳು ತುಸು ತ್ರಾಸದಾಯಕ…

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (73) challengingstardarshan (10) cinishodha (138) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (167) kgf (8) kicchasudeep (11) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (195) shivarajkumar (9) sreeleela (5) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.