Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಸ್ಪಾಟ್ ಲೈಟ್»Super Hit Movie Teaser : ಬಿಗ್‌ಬಾಸ್ ಗಿಲ್ಲಿ ನಟ ಹೀರೋ ಆಗ್ಬಿಟ್ಟ!
    ಸ್ಪಾಟ್ ಲೈಟ್

    Super Hit Movie Teaser : ಬಿಗ್‌ಬಾಸ್ ಗಿಲ್ಲಿ ನಟ ಹೀರೋ ಆಗ್ಬಿಟ್ಟ!

    By Santhosh Bagilagadde02/12/2025Updated:02/12/2025
    Facebook Twitter Telegram Email WhatsApp
    2908d582 a10f 46fe b8c3 bade8e174b59
    Share
    Facebook Twitter LinkedIn WhatsApp Email Telegram

    ಕಿರುಚಿತ್ರಗಳು, ಕಾಮಿಡಿ ಶೋಗಳ ಮೂಲಕ ಮನೆಮಾತಾಗಿದ್ದ ಗಿಲ್ಲಿ ನಟ ಇದೀಗ ಬಿಗ್‌ಬಾಸ್ ಸ್ಪರ್ಧಿಯಾಗಿ ಸಂಚಲನ ಸೃಷ್ಟಿಸಿದ್ದಾನೆ. ತನ್ನ ಸೆನ್ಸ್ ಆಫ್ ಹ್ಯೂಮರ್, ಕಾಮಿಡಿ ಟೈಮಿಂಗ್ ಮೂಲಕ ಪ್ರೇಕ್ಷಕರ ಮನಗೆದ್ದಿರೋ ಗಿಲ್ಲಿಯೀಗ `ಸೂಪರ್ ಹಿಟ್’ ಎಂಬ ಚಿತ್ರದ ಮೂಲಕ ಸದ್ದಿಲ್ಲದೆ ನಾಯಕನಾಗಿದ್ದಾನೆ. ಖ್ಯಾತ ಗೀತರಚನೆಗಾರ ವಿ. ನಾಗೇಂದ್ರ ಪ್ರಸಾದ್ ಸಹೋದರ ವಿಜಯಾನಂದ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟೀಸರ್ ಇದೀಗ ಬಿಡುಗಡೆಗೊಂಡಿದೆ. ಈ ಕುರಿತಾಗಿ ನಡೆದಿರುವ ಪತ್ರಿಕಾಗೋಷ್ಠಿಯ ಮೂಲಕ ಸೂಪರ್ ಹಿಟ್ ಬಗೆಗಿನ ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿಗಳನ್ನು ಚಿತ್ರತಂಡ ಹಂಚಿಕೊಂಡಿದೆ.

    e09beccb 74bd 47bc 85e4 18816fda0943ಹೀಗೆ ಬಿಡುಗಡೆಗೊಂಡಿರುವ ಸದರಿ ಟೀಸರ್‌ನಲ್ಲಿರೋ ಭರ್ಜರಿ ಕಾಮಿಡಿ, ಗಟ್ಟಿ ಕಥನದ ಸುಳಿವು ಕಂಡವರೆಲ್ಲ, ಸು ಫ್ರಂ ಸೋ ನಂತಗರದಲ್ಲಿ ಮತ್ತೊಂದು ಕಾಮಿಡಿ ಗಾರುಡಿ ನಡೆಯೋದರ ಮುನ್ಸೂಚನೆಯನ್ನ ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ, ಯಾವುದೇ ಸಿನಿಮಾ ಬಿಡುಗಡೆಯಾದ ನಂತರ ಪ್ರೇಕ್ಷಕರ ಮನಗೆದ್ದರೆ ಸೂಪರ್ ಹಿಟ್ ಆಗುತ್ತೆ. ಆದರೆ, ಈ ಚಿತ್ರದ ಶೀರ್ಷಿಕೆಯೇ ಸೂಪರ್ ಹಿಟ್. ಅದಕ್ಕೆ ರನ್ನಿಂಗ್ ಸಕ್ಸಸ್‌ಫುಲೀ ಎಂಬ ಟ್ಯಾಗ್‌ಲೈನನ್ನೂ ಇಡಲಾಗಿದೆ. ಈ ಮೂಲಕ ಶೀರ್ಷಿಕೆಯ ಮೂಲಕವೇ ಗಮನ ಸೆಳೆದ ಸಿನಿಮಾಗಳ ಸಾಲಿಗೂ ಸೇರ್ಪಡೆಗೊಂಡಿದೆ. ಹೆಸರಿನ ಬಗ್ಗೆಯೇ ಕುತೂಹಲ ಮೂಡಿಕೊಂಡಿರೋದರಿಂದಾಗಿ, ಅದರ ಹುಟ್ಟಿನ ಹಿಂದಿರೋ ಅಚ್ಚರಿಯನ್ನು ನಿರ್ದೇಶಕ ವಿಜಯಾನಂದ ತೆರೆದಿಟ್ಟಿದ್ದಾರೆ!

    7a252087 8af6 4232 a7c7 dc34bb9b3bd2ಈ ಚಿತ್ರವನ್ನು ವಿಜಯಲಕ್ಷ್ಮಿ ಎಂಟರ್‌ಪ್ರೈಸಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರವಿದು. ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಬೇಕೆಂಬ ತುಡಿತ ಹೊಂದಿದ್ದ ಉಮೇಶ್, ಈ ಹಿಂದೆ ಸಿನಿಮಾವೊಂದಕ್ಕೆ ಕಾಸು ಹೂಡಿಕೆ ನಡೆಸಿ ನಿರಾಸೆಗೊಂಡಿದ್ದರಂತೆ. ಅಷ್ಟಾದರೂ ಹಿಟ್ ಸಿನಿಮಾ ನಿರ್ಮಾಣದ ಕನಸಿಟ್ಟುಕೊಂಡಿದ್ದ ಉಮೇಶ್ ಅವರನ್ನು ಗಮನಿಸಿದ್ದ ನಿರ್ದೇಶಕರು, ಅದನ್ನೇ ಶೀರ್ಷಿಕೆಯಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ. ಪಕ್ಕಾ ಕಮರ್ಶಿಯಲ್ ಪಥದಲ್ಲಿ, ಹಾಸ್ಯವನ್ನೇ ಪ್ರಧಾನವಾಗಿಸಿಕೊಂಡು ಈ ಸಿನಿಮಾವನ್ನು ರೂಪಿಸಲಾಗಿದೆ. ಪ್ರತೀ ಹತ್ತು ನಿಮಿಷಗಳಿಗೊಮ್ಮೆ ಪ್ರೇಕ್ಷಕರನ್ನು ರೋಮಾಂಚನಕ್ಕೀಡು ಮಾಡುವ ಟ್ವಿಸ್ಟುಗಳು, ಹೊಸತನದೊಂದಿಗೆ ದೃಷ್ಯ ಕಟ್ಟಲಾಗಿದೆ. ಕನ್ನಡದ ಮಟ್ಟಿಗೆ ಪ್ರಥಮವಾಗಿ ಥ್ರಿಲ್ಲರ್ ಅಂಶವನ್ನು ಕಾಮಿಡಿಯೊಂದಿಗೆ ಬೆರೆಸುವ ಭಿನ್ನ ಪ್ರಯತ್ನ ನಡೆದಿದೆ ಅನ್ನೋದು ನಿರ್ದೇಶಕರ ಮಾತು.

    d554542c 2528 4a69 b288 d55248e38e58

    ಈಗಾಗಲೇ ಸೂಪರ್ ಹಿಟ್‌ ಚಿತ್ರದ ಎಲ್ಲ ಕೆಲಸ ಕಾರ್ಯಗಳೂ ಮುಕ್ತಾಯಗೊಂಡಿವೆ. ಒಂದೊಳ್ಳೆ ಸಮಯ ನೋಡಿ ಬಿಡುಗಡೆ ದಿನಾಂಕ ಘೋಷಣೆ ಮಾಡುವ ತಯಾರಿ ನಡೆಯುತ್ತಿದೆ. ಅಂದಹಾಗೆ, ಸೋಶಿಯಲ್ ಮೀಡಿಯಾ ಮೂಲಕ, ಕಾಮಿಡಿ ಝಲಕ್ಕುಗಳೊಂದಿಗೆ ಪ್ರಸಿದ್ಧಿ ಪಡೆದಿರುವ ಗೌರವ್ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ಇಲ್ಲಿ ನಾಯಕರಾಗಿ ನಟಿಸಿದ್ದಾರೆ. ಹಾಸ್ಯದ ಪ್ರಾಕಾರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಈ ಇಬ್ಬರು ನಟರ ಆಯ್ಕೆ ಆ ಪಾತ್ರಗಳಿಗೆ ಮಾತ್ರವಲ್ಲದೇ ಒಂದಿಡೀ ಸಿನಿಮಾಗೂ ಪ್ಲಸ್ ಆಗಲಿದೆ ಎಂಬ ನಂಬಿಕೆ ಚಿತ್ರತಂಡದಲ್ಲಿದೆ. ಸು ಫ್ರಂ ಸೋ ಚಿತ್ರಕ್ಕೆ ಸಿಕ್ಕಿರೋ ಭಾರೀ ಗೆಲುವು ಕೂಡಾ ಚಿತ್ರತಂಡಕ್ಕೆ ಭರವಸೆ ತುಂಬಿದೆ. ಯಾಕೆಂದರೆ, ಭಿನ್ನ ಬಗೆಯ ಕಥನ, ಹಾಸ್ಯವಿರೋ ಈ ಚಿತ್ರಕ್ಕೂ ಪ್ರೇಕ್ಷಕರು ಅಂಥಾದ್ದೇ ಬೆಂಬಲ ಕೊಡುತ್ತಾರೆಂಬ ನಂಬಿಕೆ ಚಿತ್ರತಂಡಕ್ಕಿದೆ.

    ಗಿಲ್ಲಿ ನಟ ಮತ್ತು ಗೌರವ್ ಶೆಟ್ಟಿ ನಾಯಕರಾಗಿ ನಟಿಸಿದ್ದರೆ, ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ವಿಜಯಲಕ್ಷ್ಮಿ ಎಂಟರ್‌ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ. ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ವಿರುವ ಈ ಚಿತ್ರ, ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ಸೋಮಶೇಖರ್, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಅಶ್ವಿನಿ ರಾವ್, ಸ್ವಪ್ನ ಶೆಟ್ಟಿಗಾರ್, ಮಂಗಳೂರು ಮೀನನಾಥ ಮುಂತಾದವರ ತಾರಾಗಣದೊಂದಿಗೆ ಕಳೆಗಟ್ಟಿಕೊಂಡಿದೆ.

    biggbossgilli biggbosskannada cinishodha dragormanju gillinata gowravshetty karisubbu kfi sandalwood shwetha superhitmovie superhitteaser vijayanand vnagendraprasad
    Share. Facebook Twitter LinkedIn WhatsApp Telegram Email
    Previous ArticleNandamoori Balayya: ತೆಲುಗು ನಟನ ವಿರುದ್ಧ ತಲೈವಾಭಿಮಾನಿಗಳು ಕೆಂಡ!
    Next Article Rashmika Mandanna: ಮುಗ್ಗರಿಸಿದರೂ ಸಾವರಿಸಿಕೊಂಡವಳ ಯಶದ ಓಟ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    09/12/2025

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    09/12/2025

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    08/12/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (9)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (80)
    • ಸೌತ್ ಜೋನ್ (135)
    • ಸ್ಪಾಟ್ ಲೈಟ್ (216)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಬಾಲಿವುಡ್ 12/12/2025

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    ಕೂಲಿ ಚಿತ್ರದ ಸೋಲಿನ ನಂತರದಲ್ಲಿ ಯುವ ನಿರ್ದೇಶಕ (lokesh kanagaraj) ಲೋಕೇಶ್ ಕನಗರಾಜ್ ಪಾಲಿಗೆ ಮುಂದಿನ ಹೆಜ್ಜೆಗಳು ತುಸು ತ್ರಾಸದಾಯಕ…

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (73) challengingstardarshan (10) cinishodha (138) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (167) kgf (8) kicchasudeep (11) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (195) shivarajkumar (9) sreeleela (5) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.