ಕಳೆದ ಕೆಲ ವರ್ಷಗಳಿಂದೀಚೆಗೆ ಬಾಲಿವುಡ್ ತನ್ನ ಹಳೇಯ ಛಾರ್ಮ್ ಕಳೆದುಕೊಮಡು ಮಂಕಾಗಿತ್ತು. ಧುರಂಧರ್ ಸರಣಿ ಗೆಲುವು ದಕ್ಕದೇ ಹೋಗಿದ್ದರೆ, ಬಹುಶಃ ಬಾಲಿವುಡ್ ಈ ಹೊತ್ತಿಗೆಲ್ಲ ಕೋಮಾವಸ್ಥೆ ತಲುಪಿಕೊಳ್ಳುತ್ತಿತ್ತೇನೋ… ಇಂಥಾದ್ದೊಂದು ಹಠಾತ್ ಗೆಲುವಿನಿಂದಾಗಿ ಚೇತರಿಸಿಕೊಂಡಂತಿರೋ ಬಾಲಿವುಡ್ಡಲ್ಲಿ ಒಂದಷ್ಟು ಹೊಸಾ ಗಾಳಿ ಬೀಸಲಾರಂಭಿಸಿದೆ. ಇದರ ಭಗವಾಗಿಯೇ ಹೊಸಾ ಮುಖಗಳು ಬಾಲಿವುಡ್ಡಿಗೆ ಆಗಮಿಸುತ್ತಿವೆ. ಹೀಗೆ ನಾಯಕಿಯರಾಗಿ ಮಿಂಚಲಣಿಯಾಗುತ್ತಿರೋ ಚಿಟ್ಟೆಗಳಿಗೆ ಟಾಲಿವುಡ್ ಮಂದಿ ಮೋಹಕ ಬಲೆ ಬೀಸಿ ಸೆಳೆದುಕೊಳ್ಳಲಾರಂಭಿಸಿದ್ದಾರೆ!
ಹಾಗೆನೋಡಿದರೆ, ಟಾಲಿವುಡ್ ಸಿನಿಮಾಗಳ ಮೂಲಕ ಪ್ರವರ್ಧಮಾನಕ್ಕೆ ಬಂದ ನಂತರದಲ್ಲಿ ಬಾಲಿವುಡ್ ಅವಕಾಶಗಳನ್ನು ಗಿಟ್ಟಿಸಿಕೊಂಡ, ಸ್ಟಾರ್ ನಟಿಯರಾಗಿ ಮೆರೆದ ಒಂದಷ್ಟು ಉದಾಹರಣೆಗಳಿದ್ದಾವೆ. ಆ ಸಾಲಿಗೆ ಸೇರ್ಪಡೆಗೊಂಡಿರುವವರು ರಾಶಾ ಥಡಾನಿ ಮತ್ತು ಶಯನಾ ಕಪೂರ್. ಇತ್ತೀಚಿನ ವರ್ಷಗಳಲ್ಲಿ ಜಾನದ್ವಿ ಕಪೂರ್ ಸೆರಿದಂತೆ ಅನೇಕರು ತೆಲುಗು ಸಿನಿಮಾಗಳ ಮೂಲಕ ಮಿಂಚುತ್ತಿದ್ದಾರೆ. ತೆಲುಗು ಸಿನಿಮಾ ನಿರ್ಮಾಪಕರ ಮೊದಲ ಆದ್ಯತೆಯೇನಿದ್ದರೂ ಬಾಲಿವುಡ್ ನಟಿಯರೇ. ಇತ್ತೀಚಿನ ಹೊಸಾ ಒಂದಷ್ಟು ತೆಲುಗು ಸಿನಿಮಾಗಳಲ್ಲಿ ರಾಶಾ ಥಡಾನಿ ಮತ್ತು ಶಯನಾ ಕಪೂರ್ ಸಾಲು ಸಾಲಾಗಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಹೀಗೆ ನಿರ್ದೇಶಕರು, ನಿರ್ಮಾಪಕರು ಬಾಲಿವುಡ್ ಚಿಟ್ಟೆಗಳಿಗೆ ಮಣೆ ಹಾಕುತ್ತಿರೋದರ ವಿರುದ್ಧ ಅಪಸ್ವರಗಳೂ ಏಳುತ್ತಿವೆ. ಈ ಬಗ್ಗೆ ಒಂದಷ್ಟು ನಿರ್ಮಾಪಕರುಗಳು ಹಳೇಯ ಉದಾಹರಣೆಗಳ ಮೂಲಕ ಸಮರ್ಥಿಸಿಕೊಳ್ಳುವ ಪ್ರಯತ್ನವನ್ನೂ ನಡೆಸುತ್ತಿದ್ದಾರೆ. ರಾಶಾ ಥಡಾನಿ ಶ್ರೀನಿವಾಸ ಮಂಗಾಪುರಂ ಚಿತ್ರ ಹಾಗೂ ಶಯನಾ ಕಪೂರ್ ಜೊಂಬಿ ರೆಡ್ಡಿ೨ ಮೂಲಕ ಟಾಲಿವುಡ್ಡಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ವಿಚಾರ ತಿಳಿದದ್ದೇ ಕೆಲ ಟಾಲಿವುಡ್ ನಟಿಯರು ತಾರಾಮಾರ ಸಿಟ್ಟಾಗಿದ್ದಾರೆ. ತೆಲುಗುನಾಡಿನ ಪ್ರತಿಭಾನ್ವಿತ ನಟಿಯರಿಗೆ ಅವಕಾಶ ಕೊಡಲೇನು ಧಾಡಿ ಎಂಬಂಥಾ ಮೂದಲಿಕೆಗಳೂ ಕೇಳಿ ಬರುತ್ತಿವೆ.
ಇದರ ಬಗ್ಗೆ ಕೆಲ ನಿರ್ಮಾಪಕರುಗಳು ತೆಲುಗು ಸಿನಿಮಾ ರಂಗದ ಇತಿಹಾಸ ಕೆದಕುತ್ತಾ, ಬಾಲಿವುಡ್ ನಟಿಯರ ಆಗಮನದ ಬಗ್ಗೆ ಸಮಜಾಯಿಷಿ ಕೊಡಲಾರಂಭಿಸಿದ್ದಾರೆ. ಅದರನ್ವಯ ಹೇಳೋದಾದರೆ, ಪ್ರೀತಿ ಝಿಂಟಾ ಕಲಿಯುದಂರಾ ಚಿತ್ರ, ಕತ್ರಿನಾ ಕೈಫ್ ಮಲ್ಲೀಶ್ವರಿ, ಅಮಿಶಾ ಪಟೇಲ್ ಬದ್ರಿ ಹಾಗೂ ಶಿಲ್ಪಾ ಶೆಟ್ಟಿ ಸಾಹಸವೀರುಡು ಸಾಗರ ಕನ್ಯಾ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾಗಳೇ ಆ ನಟಿಯರ ವೃತ್ತಿ ಬದುಕಿನ ದಿಕ್ಕುದೆಸೆ ಬದಲಿಸಿದ್ದವು. ಈಗಂತೂ ತೆಲುಗು ಸಿನಿಮಾಗಳು ತೆಲುಗಿಗೆ ಮಾತ್ರವೇ ಸೀಮಿತವಾಗಿಲ್ಲ. ಅವು ಬಾಲಿವುಡ್ಡನ್ನೂ ಒಳಗೊಂಡು ನಿರ್ಮಾಣವಾಗುತ್ತಿವೆ. ಹೀಗಿರುವಾಗ ಬೇರೆ ಚಿತ್ರರಂಗದ ನಟಿಯರ ಆಗಮನ ವಿಶೇಷವೇನಲ್ಲ ಎಂಬ ಅಭಿಪ್ರಾಯವನ್ನು ಕೆಲ ನಿರ್ಮಾಪಕರು ವ್ಯಕ್ತಪಡಿಸುತ್ತಿದ್ದಾರೆ!
keywords: rasha thadani, shanaya kapoor, shilpa shetty, amisha patel, shilpa shetty

