ಭಾರತೀಯ ಚಿತ್ರರಂಗದಲ್ಲಿ ಮಹಿಳಾ ಕೇಂದ್ರಿತ ಕಥೆಗಳು ರೂಪುಗೊಳ್ಳೋದೇ ಅಪರೂಪದ ವಿದ್ಯಮಾನ. ಆಗೊಮ್ಮೆ ಈಗೊಮ್ಮೆ ತೆರೆಗಾಣುವ ಇಂಥಾ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶ ಕಾಣೋದೂ ಒಂದು ಸಾಹಸವೇ. ಅಷ್ಟಕ್ಕೂ ನಾಯಕಿಯರು ನಾಯಕ ನಟರಿಗೆ ಸರಿ ಸಮಾನವಾಗಿ ಅಬ್ಬರಿಸುವಂಥಾ ಕಥನಗಳು ದೃಷ್ಟು ರೂಪ ಧರಿಸೋದೇ ಒಂದು ಸೋಜುಗ. ಅಂಥಾದ್ದೊಂದು ವಿರಳ ಅಚ್ಚರಿಯಂತೆ ಮೂಡಿ ಬಂದಿರುವ ಸಿನಿಮಾ `ಮಾ ಇಂಟಿ ಬಂಗಾರಂ’ ಚಿತ್ರ. ಈ ಮೂಲಕ ಸಮಂತಾಗೆ ದಕ್ಕಿರುವ ಗೆಲುವು ನಿಜಕ್ಕೂ ರೋಮಾಂಚಕ. ಬಾಕ್ಸಾಫೀನಲ್ಲಿ ದೊಡ್ಡ ಮಟ್ಟದ ಗೆಲುವು ಕಂಡಿರವ ಸದರಿ ಸಿನಿಮಾ ಓಟಿಗೆ ಅಡಿಯಿರಿಸಲು ಮುಹೂರ್ತ ನಿಗಧಿಯಾಗಿದೆ!
ಮಾ ಇಂಟಿ ಬಂಗಾರಂ ಜಿಯೋ ಹಾಟ್ಸ್ಟಾರ್ನಲ್ಲಿ ಇದೇ ಜುಲೈ ೧೭ರಿಂದ ಸ್ಟ್ರೀಮಿಂಗ್ ಆಗಲಿದೆ. ತ್ತೀಚೆಗಂತೂ ಬಾಕ್ಸಾಫೀಸ್ನಲ್ಲಿ ಭಾರಿ ಗೆಲುವು ಕಂಡ ಸಿನಿಮಾಗಳೂ ಕೂಡಾ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಓಟಿಟಿಗೆ ಎಂಟ್ರಿ ಕೊಡುವ ಟ್ರೆಂಡ್ ಶುರುವಾಗಿದೆ. ಸಿನಿಮಾ ಮಂದಿ ಚಿತ್ರಮಂದಿರದ ಗಳಿಕೆಯಷ್ಟೇ ಓಟಿಟಿ ಆದಯದತ್ತಲೂ ಗಮನ ಹರಿಸುತ್ತಿರೋದರಿಂದಾಗಿ, ಓಟಿಟಿಯಲ್ಲಿ ವೀಕ್ಷಿಸುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರೋದರಿಂದಾಗಿ ಇಂಥಾದ್ದೊಂದು ಅಲೆ ಚಾಲೂ ಆದಂತಿದೆ. ಈ ಕರಣದಿಂದಲೇ, ಈ ಕ್ಷಣಕ್ಕೂ ಸಿನಿಮಾ ಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಮಾ ಇಂಟಿ ಬಂಗಾರಂ ಕೂಡಾ ಓಟಿಟಿಯತ್ತ ಮುಖ ಮಾಡಿದೆ.
ಅಂದಹಾಗೆ, ಜುಲೈ ೧೭ರಂದು ಮಾ ಇಂಟಿ ಬಂಗಾರಂ ಚಿತ್ರದ ತೆಲುಗು ಆವೃತ್ತಿ ಮಾತ್ರವೇ ಸ್ಟ್ರೀಮಿಂಗ್ ಆಗಲಿದೆ. ಹಿಂದಿ, ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಯಾವಾಗ ಒಪ್ರದರ್ಶನ ಶುರುವಾಗಲಿದೆ ಅನ್ನೋದರ ಬಗ್ಗೆ ಇದುವರೆಗೂ ನಿಖರ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ. ಬಿ.ವಿ ನಂದಿನಿ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಕಥಾ ಹಂದರ, ಪಾತ್ರ ವಗ್ ಸೇರಿದಂತೆ ಎಲ್ಲವೂ ಪ್ರೇಕ್ಷಕರ ಮನಗೆದ್ದಿವೆ. ಹೀರೋಗಳನ್ನೇ ಮೀರಿಸುವಂತೆ ಆಕ್ಷನ್ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿರುವ ಸಮಂತಾ ಬಗ್ಗೆ ಮೆಚ್ಚುಗೆಯ ಮ ಹಾ ಪೂರವೇ ಹರಿದು ಬರುತ್ತಿದೆ. ಸಮಂತಾ ಈಗ ಹಳೇ ಕಹಿ ಮರೆತು ಹೊಸಾ ಬದುಕಿಗೆ ಅಡಿಯಿರಿಸಿದ್ದಾರೆ. ಈ ಹೊತ್ತಿನಲ್ಲಿಯೇ ಆಕೆಯ ವೃತ್ತಿ ಬದುಕಿನಲ್ಲಿಯೂ ಮಾ ಇಂಟಿ ಬಂಗಾರಂ ಚಿತ್ರದ ಮೂಲಕ ಹೊಸಾ ಶಕೆಯೊಂದು ಶುರುವಾಗಿದೆ!
keywords: samantha ruth prabhu, ma inti bangaram, bollywood

