ಲವ್ ಮಾಕ್ಟೇಲ್3 ಚಿತ್ರ ಇದೇ ಮಾರ್ಚ್ ೧೯ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ವಾರದ ಹಿಂದಷ್ಟೇ ಬಿಡುಗಡೆಗೊಂಡಿದ್ದ ಟ್ರೈಲರ್ ಬಗ್ಗೆ ಸಕಾರಾತ್ಮಕ ಮಾತುಗಳು ಹಬ್ಬಿಕೊಂಡಿರುವಾಗಲೇ, ಡಾರ್ಲಿಂಗ್ ಕೃಷ್ಣ ಮತ್ತೊಂದು ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ಈ ಹಿಂದೆ ಬಿಡುಗಡೆಗೊಂಡಿದ್ದ ಅಷ್ಟೂ ಹಾಡುಗಳನ್ನು ಒಂದಕ್ಕಿಂತ ಒಂದು ಭೀನ್ನವೆಂಬಂತೆ ರೂಪಿಸಲಾಗಿತ್ತು. ಈ ಮೂಲಕ ಲವ್ ಮಾಕ್ಟೇಲ್ ಪ್ರಭೆ ಎಲ್ಲೆಡೆ ಹಬ್ಬಿಕೊಂಡಿರುವಾಗಲೇ, ತಂದೆ ಮಗಳ ಬಾಂಧವ್ಯ ಸಾರುವ ಭಾವುಕ ಸಾಹಿತ್ಯವಿರುವ ಮುದ್ದು ಮಗಳೇ ಎಂಬ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ. ಸದರಿ ಹಾಡಿಗೂ ಕೂಡಾ ವ್ಯಾಪಕ ಮೆಚ್ಚುಗೆ ಮೂಡಿಕೊಂಡಿದೆ.
ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ, ನಾಯಕನಾಗಿಯೂ ನಟಿಸಿರುವ ಚಿತ್ರ ಲವ್ ಮಾಕ್ಟೇಲ್೩. ಪ್ರಧಾನವಾಗಿ, ಲವ್ ಮಾಕ್ಟೇಲ್ ಸರಣಿಗೆ ಗೆಲುವು ದಕ್ಕಿರೋದರ ಹಿಂದೆ ನಿಸ್ಸಂದೇಹವಾಗಿಯೂ ಹಾಡುಗಳ ಪಾತ್ರ ದೊಡ್ಡದಿದೆ. ನಿಂತಲ್ಲಿ ಕುಂತಲ್ಲಿ ಕಾಡುವ, ಎವರ್ಗ್ರೀನ್ ಗಂಧ ಮೆತ್ತಿಕೊಂಡಿದ್ದ ಹಾಡುಗಳ ಚುಂಗು ಹಿಡಿದೇ ಡಾರ್ಲಿಂಗ್ ಕೃಷ್ಣ ನಿರ್ದೇಶಕರಾಗಿಯೂ ಗೆಲುವು ಕಂಡಿದ್ದರು. ಲವ್ ಮಾಕ್ಟೇಲ್೩ಯಲ್ಲೂ ಕೂಡಾ ಮೆಲೋಡಿ ಮಂತ್ರದಂಡವನ್ನು ಡಾರ್ಲಿಂಗ್ ಕೃಷ್ಣ ಸಮರ್ಥವಾಗಿಯೇ ಪ್ರಯೋಗಿಸಿದ್ದಾರೆ. ಅದರ ಭಾಗವಾಗಿ ಮುದ್ದು ಮಗಳೇ ಎಂಬ ಈ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ. ಹಾಗೆ ಹೊರಬಂದು ಒಂದೆರಡು ದಿನಗಳು ಮಗುಚಿಕೊಳ್ಳೋ ಹೊತ್ತಿಗೆಲ್ಲ ಸದರಿ ಹಾಡು ಸಂಗೀತ ಪ್ರೇಮಿಗಳನ್ನು ಸಾರಾಸಗಟಾಗಿ ಆವರಿಸಿಕೊಂಡಿದೆ.
Love Mocktail3 Movie: ಡಾರ್ಲಿಂಗ್ ಕೃಷ್ಣಗೆ ಹೊಡೆದಂತಾಯ್ತು ಲಾಟ್ರಿ!

ನಕ್ಕರೂ ಚೆಂದ ಅತ್ತರೂ ಚೆಂದ ಮುದ್ದಾದ ಬಂಧ ಈ ನನ್ನ ಕಂದ ಎಂಬಂಥಾ ಚೆಂದದ ಸಾಲುಗಳಿರುವ ಈ ಹಾಡನ್ನು ಬರೆದಿರುವವರು ಅರುಣ್ ನಾಯಕ್. ನಕುಲ್ ಅಭಯಂಕರ್ ಸೋಗೀತ ಸಂಯೋಜನೆಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಸಾಮಾನ್ಯವಾಗಿ ಕಥೆಯ ಆಸ್ಮವನ್ನು ಹಿಡಿದಿಟ್ಟುಕೊಂಡಂತಿರುವ ಹಾಡೊಂದಕ್ಕೆ ಶಕ್ತವಾಗಿ ಜೀವ ತುಂಬುವುದು ಸಂಗೀತ ನಿರ್ದೇಶಕರ ಪಾಲಿಗೆ ಅಸಲೀ ಸವಾಲು. ಅದನ್ನು ನಕುಲ್ ಅಭಯಂಕರ್ ಸಮರ್ಥವಾಗಿ ನಿರ್ವಹಿಸಿದ್ದಾರೆ. ಈ ಹಿಂದೆ ಅಪ್ಪ ಮಗಳ ಬಾಂಧವ್ಯವನ್ನು ಸಾರುವಂಥಾ ಹಾಡೊಂದನ್ನು ನಕುಲ್ ರೂಪಿಸಿದ್ದರು. ಈ ಹಾಡು ಅದನ್ನೂ ಮೀರಿಸುವಂತಿದೆ ಎಂಬ ಮೆಚ್ಚುಗೆ ಕೇಳುಗರ ಕಡೆಯಿಂದ ಮೂಡಿಕೊಂಡಿದೆ.
ಬಿಡುಗಡೆಗೆ ದಿನಗಳನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಲವ್ ಮಾಕ್ಟೇಲ್೩ ಹಾಡುಗಳು ಕೂಡಾ ಸಕಾರಾತ್ಮಕವಾಗಿ ಸಾಥ್ ಕೊಡುತ್ತಿವೆ. ಕ್ರಿಸ್ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
keywords: love mocktail3, love mocktile3 song, darling krishna, milana nagaraj

