ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟರಲ್ಲೊಬ್ಬರಾದ ಸೂರ್ಯ ವ್ಯಕ್ತಿಗತವಾಗಿಯೂ ಅಭಿಮಾನ, ಗೌರವಕ್ಕೆ ಪಾತ್ರರಾಗಿರುವವರು. ಅಲೆಯೆಂಬುದು ಯಾವ ದಿಕ್ಕಿನತ್ತ ಪ್ರವಹಿಸುತ್ತಿದ್ದರೂ ಹೊಸಾ ಪಾತ್ರಗಳಿಗೆ, ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಲೇ ಗಟ್ಟಿಯಾಗಿ ನೆಲೆಗೊಂಡಿರುವ ಸೂರ್ಯ, ಗಾಳಿ ಬಂದ ದಿಕ್ಕಿಗೆ ತೂರಿಕೊಳ್ಳುವ ಸೋ ಕಾಲ್ಡ್ ಸ್ಟಾರುಗಳಿಗಿಂತಲೂ ಭಿನ್ನವಾಗಿರುವ ನಟ. ಇಂಥಾ ಸೂರ್ಯ ನಟಿಸಿರುವ ಸೀನ್ ಅಂತೊಂದು ಸಿನಿಮಾ ತಿಂಗಳ ಹಿಂದಷ್ಟೇ ಬಿಡುಗಡೆಗೊಂಡಿತ್ತು. ತನ್ನ ಗಟ್ಟಿ ಕಂಟೆಂಟಿನ ಬಲದಿಂದಲೇ ರಾಮಾಯಣದಂಥಾ ಚಿತ್ರದೆದುರೂ ಕೂಡಾ ಕಾಲೂರಿ ನಿಂತು ಯಶಸ್ವೀ ಪ್ರದರ್ಶನ ಕಾಣುತ್ತಿರೋದು ಈ ಸಿನಿಮಾದ ಅಸಲೀ ಹೆಗ್ಗಳಿಕೆ. ಹೀಗೆ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹೊತ್ತಿನಲ್ಲಿಯೇ ಓಟಿಟಿ ವ್ಯವಹಾರವೂ ಅಮೋಘವಾಗಿಯೇ ಕುದುರಿಕೊಂಡಿದೆ!
ಸೂರ್ಯ ನಟಿಸಿರುವ ಸೀನ್ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ಈಗಾಗಲೇ ದಾಖಲಾಗಿದೆ. ಇದುವರೆಗೂ ಈ ಸಿನಿಮಾ ಮುನ್ನೂರು ಕೋಟಿಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿಕೊಂಡಿದೆ. ಕಳ್ಳ ಮತ್ತು ಪೊಲೀಸ್ ಕೇಂದ್ರಿತವಾದ ಈ ಸಂಕೀರ್ಣ ಕಥನಕ್ಕೆ ತಮಿಳು ಪ್ರೇಕ್ಷಕರೆಲ್ಲ ಅಕ್ಷರಶಃ ಫಿದಾ ಆಗಿದ್ದಾರೆ. ಈ ಕಾರಣದಿಂದಲೇ ಮಹಾಭಾರತ ಎಂಬ ಬಿರುಗಾಳಿಯೇ ಬಂದಪ್ಪಳಿಸಿದರೂ ಕೂಡಾ ಸೀನ್ ಕೊಂಚವೂ ಅದುರದೆ ಚಿತ್ರಮಂದಿರಗಳಲ್ಲಿ ಉಳಿದುಕೊಂಡಿದೆ. ಈ ಕ್ಷಣಕ್ಕೂ ಯಶಸ್ವೀ ಪ್ರದರ್ಶನ ಕಾಣುತ್ತಲೇ ಇದೆ.
ಹೀಗೆ ಸೀನ್ ಸೂಪರ್ ಹಿಟ್ ಆಗಿ ನೆಲೆ ಕಾಣುತ್ತಲೇ ಹಲವಾರು ಓಟಿಟಿ ಪ್ಲಾಟ್ಫಾರ್ಮುಗಳು ಇದರ ಹಕ್ಕು ಖರೀದಿಗಾಗಿ ಮುಗಿ ಬಿದ್ದಿದ್ದವು. ಕಡೆಗೂ ನೆಟ್ಫ್ಲಿಕ್ಸ್ ಸಂಸ್ಥೆ ಸೀನ್ ಓಟಿಟಿ ಹಕ್ಕುಗಳನ್ನು ಭರ್ತಿ ಎಂಬತ್ತೆಂಟು ಕೋಟಿಗೆ ಪಡೆದುಕೊಂಡಿದೆ ಎಂಬಂಥಾ ಸುದ್ದಿ ಹರಿದಾಡುತ್ತಿದೆ. ಸಿನಿಮಾ ಮಂದಿರಗಳಲ್ಲಿ ಗೆದ್ದಿರುವ ಈ ಚಿತ್ರ ಓಟಿಟಿಗೂ ಒಪ್ಪುವಂತೆ ಮೂಡಿ ಬಂದಿದೆ. ನಿರ್ದೇಶಕರು ಈ ವಿಚಾರದಲ್ಲಿ ಅತ್ಯಂತ ಜಾಣ್ಮೆಯಿಂದಲೇ ಸೀನ್ ಅನ್ನು ರೂಪಿಸಿದ್ದಾರೆ. ಅಂದಹಾಗೆ, ಸೂರ್ಯನ ಸೂಪರ್ ಹಿಟ್ ಸೀನ್ ಇದೇ ಡಿಸೆಂಬರ್ ನಾಲಕ್ಕರಿಂದ ನೆಟ್ಫ್ಲಿಕ್ಸ್ನಲ್ಲಿ ಕಾಣಿಸಿಕೊಳ್ಳಲಿದೆ. ತಮಿಳು ಮಾತ್ರವಲ್ಲದೇ ಇತರೇ ಒಂದಷ್ಟು ಭಾಷೆಗಳಲ್ಲಿಯೂ ಸೀನ್ ಪ್ರೇಕ್ಷಕರನ್ನು ತಲುಪಿಕೊಳ್ಳಲಿದೆ.
