Chaithra Achar: ಫೌಜಿ ಪೋಸ್ಟರ್‌ನಲ್ಲಿ ಪೌರ್ಣಮಿಯ ಫೋಟೋ!

Chaithra Achar: ಫೌಜಿ ಪೋಸ್ಟರ್‌ನಲ್ಲಿ ಪೌರ್ಣಮಿಯ ಫೋಟೋ!

ರಂಭಿಕವಾಗಿ ತನ್ನ ನಟನೆಯ ಚಾತುರ್ಯದಿಂದಲೇ ಗಮನ ಸೆಳೆದಿದ್ದಾಕೆ ಚೈತ್ರಾ ಆಚಾರ್. ರಾಜ್ ಬಿ ಶೆಟ್ಟಿ ನಾಯಕನಾಗಿ ನಟಿಸಿದ್ದ ಟೋಬಿ ಚಿತ್ರದಲ್ಲಿನ ಈಕೆಯ ನಟನೆ ಕೂಡಾ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಆ ನಂತರ ಹೇಳಿಕೊಳ್ಳುವಂಥಾ ಪಾತ್ರಗಳು ಚೈತ್ರಾಗೆ ಸಿಕ್ಕಿರಲಿಲ್ಲ. ಈ ಶುಷ್ಕ ವಾತಾವರಣವನ್ನು ಬೋಲ್ಡ್ ಫೋಟೋ ಶೂಟ್‌ಗಳ ಮೂಲಕ ನೀಗಿಕೊಂಡಿದ್ದ ಚೈತ್ರಾ ಆಚಾರ ಇದೀಗ ಸಾಮಾಜಿಕ ಜಾಲತಾಣದ ಮೂಲಕ ಖುಷಿಯ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಅದರನ್ವಯ ಹೇಳೋದಾದರೆ, ಚೈತ್ರಾ ಡಾರ್ಲಿಂಗ್ ಪ್ರಭಾಸ್ ನಟಿಸುತ್ತಿರುವ ಫೌಜಿ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ!


ಡಾರ್ಲಿಂಗ್ ಪ್ರಭಾಸ್ ನಟನೆಯ ಫೌಜಿ ಚಿತ್ರ ಆರಂಭಿಕ ಹಂತದಲ್ಲಿ ಒಂದಷ್ಟು ಕುತೂಹಲ ಮೂಡಿಸಿತ್ತು.ಸಾಲು ಸಾಲಾಗಿ ಸೋತರೂ ಇತ್ತೀಚೆಗೆ ಚೇತರಿಸಿಕೊಂಡಿದ್ದ ಪ್ರಭಾಸ್, ಫೌಜಿ ಮೂಲಕ ಮೈಕೊಡವಿಕೊಳ್ಳುತ್ತಾನೆಂಬ ನಿರೀಕ್ಷೆಯೂ ಇತ್ತು. ಆದರೆ, ಪ್ರಭಾಸನ ಅವತಾರಗಳ ಕಥೆಯನ್ನು ಕೇಳಿದ ಮಂದಿಗೆ ಫೌಜಿ ಬಗ್ಗೆ ಯಾವ ನಿರೀಕ್ಷೆಗಳೂ ಇದ್ದಂತಿಲ್ಲ. ಒಂದು ವೇಳೆ ಭಾರೀ ನಿರೀಕ್ಷೆ ಹೊಂದಿರುವ ಪ್ರಭಾಸ್ ಚಿತ್ರದಲ್ಲಿ ಚೈತ್ರಾ ನಟಿಸಿದ್ದರೆ ಒಂದಷ್ಟು ಸುದ್ದಿಯಾಗುತ್ತಿತ್ತೇನೋ. ಆದರೀಗ ಆ ಸಿನಿಮಾದ ಅಪ್‌ಡೇಟುಗಳ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಉಳಿದಿಲ್ಲ. ಖುದ್ದು ಪ್ರಭಾಸ್ ಆ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ.


ಫೌಜಿ ಭಾರೀ ಬಜೆಟ್ಟಿನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಅಂತೆಲ್ಲ ಗುಲ್ಲೆದ್ದಿತ್ತು. ಭಯಂಕರ ಕಥೆ ಹೊಂದಿದೆ ಅಂತೆಲ್ಲ ಸುದ್ದಿ ಹಬ್ಬಿತ್ತು. ಆದರೆ, ಫಸ್ಟ್ ಲುಕ್ಕಿನ ಪೋಸ್ಟರ್ ಕಂಡ ಮಂದಿ ಅತೀವ ನಿರಾಸೆಗೀಡಾಗಿದ್ದಾರೆ. ಸಾಮಾನ್ಯವಾಗಿ ಇಂಥಾ ಪೋಸ್ಟರುಗಳಲ್ಲಿ ನಾಯಕ ನಟರು ಆಯಾ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ರೀತಿಯ ಸುಳಿವು ಸಿಗುತ್ತದೆ. ಆದರೆ ಚಿತ್ರತಂಡ ಈ ಹಿಂದೆ ಇದೇ ಪ್ರಭಾಸ್ ನಟಿಸಿದ್ದ ಪೌರ್ಣಮಿ ಚಿತ್ರದ ಫೋಟೋವನ್ನು ಮಾರ್ಫಂಗ್ ಮಾಡೋ ಮೂಲಕ ಫೌಜಿ ಪೋಸ್ಟರ್ ಸೃಷ್ಟಿಸಿದ್ದಾರೆ. ಸದ್ಯದ ಮಟ್ಟಿಗೆ ಪ್ರಭಾಸನ ಮುಖಬ ಅಸ್ತವ್ಯಸ್ತಗೊಂಡಿದೆ. ಆ ಅವತಾರದಲ್ಲಿ ಬಾಹುಬಲಿಯನ್ನು ಕಾಣಿಸಿದರೆ ಅಭಿಮಾನಿಗಳೇ ಬೆಚ್ಚಿ ಬೀಳುತ್ತಾರೆಂಬ ಕಾರಣದಿಂದ ಚಿತ್ರತಂಡ ಪೌರ್ಣಮಿಯ ಫೋಟೋಗೆ ಕಟ್ಟುಬಿದ್ದಿದೆ ಅಂತ ಹೇಳಲಾಗುತ್ತಿದೆ. ಇಂಥಾ ಚಿತ್ರದಲ್ಲಿ ನಟಿಸುವ ಮೂಲಕ ಚೈತ್ರಾಗೆ ಟಾಲಿವುಡ್ಡಿನ ಹಾದಿ ಸುಗಮವಾಗಬಹುದು. ಆದರೆ, ಫೌಜಿ ದೊಡ್ಡ ಮಟ್ಟದ ಗೆಲುವು ದಾಖಲಿಸೋದು ಕಷ್ಟವಿದೆ!

About The Author