ಕಿಚ್ಚನ ಅಭಿಮಾನಿಗಳು ತಮ್ಮಿಷ್ಟದ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಇದೇ ಹಂತದಲ್ಲಿ ಅಭಿಮಾನಿಗಳೆಲ್ಲ ಕಿಚ್ಚ ಹೆಚ್ಚೆಚ್ಚು ಸಿನಿಮಾಗಳಲ್ಲಿ ಬ್ಯುಸಿಯಾಗೋದನ್ನು ಮನಸಾರೆ ಬಯಸಿದ್ದರು. ಮೇಲುನೋಟಕ್ಕೆ ಈಗೊಂದಷ್ಟು ವರ್ಷಗಳಿಗೆ ಹೋಲಿಸಿದರೆ, ಏಕಕಾಲದಲ್ಲಿಯೇ ಎರಡೆರಡು ಸಿನಿಮಾಗಳಲ್ಲಿ ಕಿಚ್ಚ ಬ್ಯುಸಿಯಾಗಿದ್ದಾರೆ. ಆದರೆ,…

ಈವತ್ತಿಗೆ ಪ್ಯಾನಿಂಡಿಯಾ ಮಟ್ಟದಲ್ಲಿ ಬಹುತೇಕ ಭಾಷೆಗಳ ಚಿತ್ರರಂಗಗಳು ಸದ್ದು ಮಾಡುತ್ತಿವೆ. ಹಲವಾರು ಉತ್ಕೃಷ್ಟ ತಂತ್ರಜ್ಞಾನಗಳಿಗೆ ಸಿನಿಮಾ ಜಗತ್ತು ತೆರೆದುಕೊಂಡಿದೆ. ಒಂದು ಕಾಲದಲ್ಲಿ ಕೆಲ ಸಿನಿಮಾಗಳೇ ವೈಜ್ಞಾನಿಕ ವಿಚಾರಧಾರೆಗಳಿಗೆ ತೆರೆದುಕೊಂಡು ಮೌಢ್ಯ ನಿವಾರಣೆಗೆ ಪ್ರಯತ್ನಿಸಿದ್ದೂ ಇದೆ. ಇಂಥಾ…

ರಜನೀಕಾಂತ್ ಅಭಿನಯದ ಕೂಲಿ ಚಿತ್ರವೀಗ ಭರ್ಜರಿ ಕಲೆಕ್ಷನ್ನು ಮಾಡುತ್ತಾ ಮುಂದುವರೆಯುತ್ತಿದೆ. ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ ಪಕ್ಕಾ ಆಕ್ಷನ್ ಪ್ಯಾಕೇಜಿನಂತೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ನಿರ್ದೇಶನ ವಿಭಾಗದಲ್ಲಿ ಅದೇಕೋ ನೈಜವಾದ ಲೋಕೇಶ್ ಕನಕರಾಜ್ ಫ್ಲೇವರ್ ಕಾಣಿಸುತ್ತಿಲ್ಲ ಎಂಬ ಅಭಿಪ್ರಾಯ…

ಕರ್ನಾಟಕದಿಂದ ತೆಲುಗು ಚಿತ್ರರಂಗಕ್ಕೆ ಹೋಗಿ ಅಲ್ಲಿ ಭಾರೀ ಗೆಲುವು ದಕ್ಕಿಸಿಕೊಂಡ ಅನೇಕ ನಟಿಯರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆ ಸಾಲಿನಲ್ಲಿ ರಶ್ಮಿಕಾ ಮಂದಣ್ಣ ಮಿಂಚುತ್ತಿದ್ದರೂ ಕೂಡಾ, ಆಕೆಗೂ ಮುನ್ನವೇ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾಕೆ ಪೂಜಾ ಹೆಗ್ಡೆ. ಸರಿಸುಮಾರು…

ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ನಾಯಕಿಯಾಗಿದ್ದ ರುಕ್ಮಿಣಿ ವಂಸಂತ್ ವೃತ್ತಿ ಬದುಕಿಗೀಗ ಅಕ್ಷರಶಃ ಸುಗ್ಗಿ ಸಂಭ್ರಮ ಎದುರುಗೊಂಡಿದೆ. ಸಾಮಾನ್ಯವಾಗಿ ಒಂದು ಗೆಲುವಿನ ನಂತರದಲ್ಲಿ ಅದನ್ನು ಅನೂಚಾನವಾಗಿ ಮುಂದುವರೆಸಿಕೊಂಡು ಹೋಗೋದು ನಟ ನಟಿಯರ ಪಾಲಿಗೆ ನಿಜವಾದ ಸವಾಲು.…

ಪವನ್ ಕಲ್ಯಾಣ್ ನಟಿಸಿರುವ ಹರಿಹರ ವೀರಮಲ್ಲು ಚಿತ್ರ ಬಿಡುಗಡೆಗೊಂಡಿದೆಯಾದರೂ ನಿರೀಕ್ಷಿತ ಗೆಲುವು ಕಂಡಿದ್ದ. ತೆರೆಗಂಡು ತಿಂಗಳು ಕಳೆಯೋ ಹೊತ್ತಿಗೆಲ್ಲ ಆ ಸಿನಿಮಾ ಓಟಿಟಿಯಲ್ಲಿ ದರ್ಶನ ಕೊಟ್ಟಿದೆ. ಇಂಥಾ ಹಿನ್ನಡೆಯಾಚೆಗೂ ಇದೀಗ ಸಮಸ್ತ ಪವರ್ ಸ್ಟಾರ್ ಅಭಿಮಾನಿಗಳ…

ಶೋಮ್ಯಾನ್ ಎಂದೇ ಖ್ಯಾತರಾಗಿರುವ ನಿರ್ದೇಶಕ ಪ್ರೇಮ್ ಇದೀಗ ಕೇಡಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಸನಿಮಾ ಟ್ರೈಲರ್ ಕೂಡಾ ಒಂದಷ್ಟು ಚರ್ಚೆ ಹುಟ್ಟು ಹಾಕಿದೆ. ಹೀಗೆ ಒಂದೆಡೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದುಕೊಂಡೇ, ಮತ್ತೊಂದೆಡೆಯಲ್ಲಿ ತಮ್ಮಿಷ್ಟದ ಕೃಷಿ…

ಕನ್ನಡ ಚಿತ್ರರಂಗದ ಮಟ್ಟಿಗೆ ಸೂಪರ್ ಸ್ಟಾರ್ ಆಗಿ ಮೆರೆದವನು ಚಾಲೆಂಜಿಂಗ್ ಸ್ಟಾರ್ ದರ್ಶನ್. ಬಹುಶಃ ಇದುವರೆಗಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿರೋ ದರ್ಶನ್, ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವಾತ. ತೀರಾ ಕಡುಗಷ್ಟದಿಂದ ಮೇಲೆದ್ದು ನಿಂತಿದ್ದ ಈತ…

ಕನ್ನಡ ಚಿತ್ರರಂಗದಿಂದ ಸೀದಾ ತೆಲುಗೆ ಹಾರಿದ್ದ ರಶ್ಮಿಕಾ ಮಂದಣ್ಣ ಹಿಂತಿರುಗಿ ನೋಡದಂತೆ ಗೆಲುವು ಕಂಡಿದ್ದೀಗ ಇತಿಹಾಸ. ಆದರೆ, ಸಾಲು ಸಾಲು ಗೆಲುವುಗಳ ಬೆನ್ನಲ್ಲಿಯೇ ಒಂದಷ್ಟು ಸೋಲುಗಳೂ ಕೂಡಾ ಈಕೆಯನ್ನು ಎದುರುಗೊಳ್ಳುತ್ತಾ ಬಂದಿವೆ. ಒಂದು ಹಂತದಲ್ಲಿ ತೆಲುಗಿನಲ್ಲೀಕೆ…

ದರ್ಶನ್ ವಿಚಾರದಲ್ಲಿ ಮಾತ್ರವಲ್ಲ; ಪರಪ್ಪನ ಅಗ್ರಹಾರದ ಒಟ್ಟಾರೆ ಅವ್ಯವಸ್ಥೆ, ದಂಧೆಗಳ ಬಗ್ಗೆ `ಶೋಧ ನ್ಯೂಸ್’ ತನಿಖಾ ವರದಿಯೊಂದನ್ನು ಕಳೆದ ವರ್ಷವೇ ಪ್ರಕಟಿಸಿತ್ತು. ಗೃಹ ಇಲಾಖೆಯೊಳಗೂ ಅದರ ಆಧಾರದಲ್ಲಿ ಚರ್ಚೆಗಳಾದೇಟಿಗೆ ಜೈಲಾಧಿಕಾರಿಯಾಗಿದ್ದ ಟಿ.ಪಿ ಶೇಷ ಬಚಾವಾಗಲು ಹರಸಾಹಸ…