Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಜಾಪಾಳ್ ಜಂಕ್ಷನ್»mata guruprasad: ಜಡೇಮಾಯ್ಸಂದ್ರದ ಅಸಹ್ಯರಸ ನಾಯಕ!
    ಜಾಪಾಳ್ ಜಂಕ್ಷನ್

    mata guruprasad: ಜಡೇಮಾಯ್ಸಂದ್ರದ ಅಸಹ್ಯರಸ ನಾಯಕ!

    By Santhosh Bagilagadde05/11/2024Updated:05/11/2024
    Facebook Twitter Telegram Email WhatsApp
    6eb2ff07 8148 4a2f 9a1c 0e0b8296431f
    Share
    Facebook Twitter LinkedIn WhatsApp Email Telegram

     

    ಗುರುಪ್ರಸಾದ್ ಸತ್ತ ಸುದ್ದಿ ಕೇಳಿದಾಕ್ಷಣ ಅವರೊಂದಿಗೆ ಒಡನಾಟವಿಲ್ಲದ ದುನಿಯಾ ವಿಜಯ್ ಥರದವರು ಬಂಧುವಿನಂತೆ ದಿಕ್ಕೆಟ್ಟ ಕುಟುಂಬದ ಜೊತೆ ನಿಂತಿದ್ದರು. ತನಗೆ ನಾಯಕನಾಗಿ ಉಸಿರು ನೀಡಿದ್ದ ಗುರುವನ್ನು ನೆನೆಸಿಕೊಳ್ಳುತ್ತಲೇ ಡಾಲಿ ಧನಂಜಯ ಕೂಡಾ ಓಡೋಡಿ ಬಂದಿದ್ದರು. ಖುದ್ದು ಗುರುವಿನ ಆತ್ಮಬಂಧುವಿನಂತೆ ನೋವಿನ ಕ್ಷಣಗಳಿಗೆ ಸಾಥ್ ಕೊಟ್ಟ ದುನಿಯಾ ವಿಜಯ್ ಓರ್ವ ಮನುಷ್ಯನಾಗಿ ಎಲ್ಲರ ಮನ ಗೆದ್ದಿದ್ದಾರೆ. ಹಾಗೆ ನೋಡಿದರೆ, ವಿಜಯ್ ಗುರು ಜೊತೆ ಕೆಲಸ ಮಾಡಿದವರಲ್ಲ. ಹತ್ತಿರದ ನಂಟೂ ಇರಲಿಲ್ಲ. ಅಂಥಾ ವಿಜಿ ಗುರುಪ್ರಸಾದ್ ದುರಂತ ಸಾವು ಕಂಡ ಸುದ್ದಿ ತಿಳಿಯುತ್ತಲೇ ಬಳಿ ಸಾಗಿದ್ದರು. ಆದರೆ, ಹತ್ತಿರ ನಂಟಿದ್ದ ಜಗ್ಗೇಶ್ ಮಾತ್ರ ಅತ್ತ ಸುಳಿಯುವ ಔದಾರ್ಯವನ್ನೂ ತೋರದೆ ಹಳೇ ಕಜ್ಜಿ ಕೆರೆಯುತ್ತಾ ಆನಂದ ಅನುಭವಿಸುತ್ತಿದ್ದರು. ಈ ಮೂಲಕ ಈತ ಮನುಷ್ಯತ್ವವೆಂಬ ಪದಕ್ಕೇ ಅಪಮಾನದಂತೆ ಭಾಸವಾಗಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ.                          – ಸಂತೋಷ್ ಬಾಗಿಲಗದ್ದೆ

    ಇದು ಅನಿರೀಕ್ಷಿತ ಆಘಾತ. ಅದೆಂಥಾದ್ದೇ ಘಳಿಗೆಗಳನ್ನೂ ತನ್ನದೇ ಆದ ಭೋಳೇ ಮನಃಸ್ಥಿತಿ, ಮಾತುಗಾರಿಕೆಯ ಬಲದಿಂದಲೇ ದಾಟಿಕೊಳ್ಳುವ ಛಾತಿ ಹೊಂದಿದ್ದ ಮಠ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರನ್ನು ಹತ್ತಿರದಿಂದ ಬಲ್ಲವರು ಮಾತ್ರವಲ್ಲ; ದೂರದಿಂದ ದಿಟ್ಟಿಸಿದ್ದವರೂ ಕೂಡಾ ಈ ಸುದ್ದಿಯನ್ನು ಅರಗಿಸಿಕೊಳ್ಳಲು ಪ್ರಯಾಸ ಪಟ್ಟಿದ್ದಾರೆ. ಅದು ಯಾರೂ ತಂದುಕೊಳ್ಳಬಾರದ ದಾರುಣ ಸಾವು. ಅರಾಜಕ ಸ್ಥಿತಿ ತಲುಪಿದ್ದ ಪ್ರತಿಭಾವಂತನೊಬ್ಬ ಸತ್ತ ಪರಿಯ ಮುಂದೆ ಆತನೊಂದಿಗಿದ್ದ ತಕರಾರುಗಳು, ವೈಮನಸ್ಯಗಳೂ ಮಂಡಿಯೂರಿಬಿಡುತ್ತವೆ. ಅದು ನಿಜವಾದ ಮನುಷ್ಯತ್ವದ ಲಕ್ಷಣ. ಆದರೆ, ತನ್ನನ್ನು ತಾನು ಸ್ಟಾರ್ ನಟ, ಹಿರಿಯ ನಟ, ನವರಸ ನಾಯಕ ಅಂತೆಲ್ಲ ಕರೆದುಕೊಳ್ಳುವ ಆಸಾಮಿಯೊಂದು ತೀರಾ ಅಸಹ್ಯಕರವಾಗಿ ಪ್ರಲಾಪ ನಡೆಸುತ್ತಿದೆ. ಜೊತೆಗೇ ಬದುಕಿದ ವ್ಯಕ್ತಿಯೊಬ್ಬ ಇನ್ನಿಲ್ಲವಾದ ಘಳಿಗೆಯನ್ನು ಈತ ಎದುರುಗೊಳ್ಳುತ್ತಿರುವ ರೀತಿಯಿದೆಯಲ್ಲಾ? ಅದು ಕರುನಾಡ ಮಂದಿಯ ರಕ್ತ ಕುದಿಯುವಂತೆ ಮಾಡಿದೆ. ಮಾತೆತ್ತಿದರೆ ಕಲೆ, ಸಂಸ್ಕೃತಿ ಅಂತೆಲ್ಲ ಒದರುವ ಈತನ ಅಸಲೀ ಸಂಸ್ಕೃತಿ ಕಂಡು ಮನುಷ್ಯಪ್ರೇಮ ಇರುವವರೆಲ್ಲ ಕೆಂಡ ಕಾರುತ್ತಿದ್ದಾರೆ. ಹೀಗೆ ನಿರ್ದೇಶಕ ಗುರುಪ್ರಸಾದ್ ಕೊಳೆತ ಶವವನ್ನು ದಣಿವರಿಯದೆ ಬಗೆಯುವ ಮೂಲಕ ಜಗ್ಗೇಶ್ ಇರೋಬರೋ ಮಾನ ಮರ್ಯಾದೆಗಳನ್ನೂ ಕಳೆದುಕೊಂಡಿದ್ದಾರೆ!

    guruprasad 1730616034 ಜಗತ್ತಲ್ಲಿ ತಾನೊಬ್ಬನೇ ಸಾಚಾ ಎಂಬಂತೆ ಪುಂಗುವುದರಲ್ಲಿ ಜಗ್ಗೇಶ್ ನಿಷ್ಣಾತ. ತನ್ನ ಗತಜೀವನ ಹಾದಿಯ ತುಂಬ ಗಬ್ಬೆದ್ದು ನಾರೋ ಅಸಲೀಯತ್ತಿದ್ದರೂ, ಪರಿಪೂರ್ಣತೆಯ ಬಗ್ಗೆ ಪ್ರವಚನ ಕೊಡೋದರಲ್ಲಿಯೂ ಜಗ್ಗೇಶಿಯದ್ದು ಪಳಗಿದ ನಾಲಗೆ. ತಾನಾಡಿದ ಮಾತು ತನಗೇ ಸುತ್ತಿಕೊಂಡಾಗ ಏನೇನೂ ಗೊತ್ತಿಲ್ಲದ ಅಮಾಯಕನಂತೆ, ಸಂತ್ರಸ್ತನಂತೆ ಪೋಸು ಕೊಡುವ ಕಲೆಯೂ ಈತನಿಗೆ ಕರಗತವಾಗಿಬಿಟ್ಟಿದೆ. ಮಾತೆತ್ತಿದರೆ ಮಂತ್ರಾಲಯ, ರಾಘವೇಂದ್ರ ಸ್ವಾಮಿ ಅನ್ನುವ ಜಗ್ಗೇಶಿಯ ನಾಲಗೆಯಲ್ಲಿ ಹೊರಳಾಡಿದ್ದ ಪದಪುಂಜಗಳು ಯಾವ ಬಗೆಯವು ಅನ್ನೋದನ್ನು ಕರ್ನಾಟಕದ ಮಂದಿ ಇನ್ನೂ ಮರೆತಿಲ್ಲ. ಇಂಥಾ ಜಗ್ಗೇಶ್ ನಿರ್ದೇಶಕ ಗುರುಪ್ರಸಾದ್ ದುರಂತ ಸಾವನ್ನು ತಣ್ಣಗೆ ಸಂಭ್ರಮಿಸುತ್ತಿದ್ದಾರೆ. ಇನ್ನಿಲ್ಲವಾದ ಗುರುಪ್ರಸಾದ್ ಬಗ್ಗೆ ಚಿತ್ರವಿಚಿತ್ರವಾದ ವಿಚಾರಗಳನ್ನು ಒದರುತ್ತಾ, ಕೆಲ ವಾಹಿನಿಗಳ ಮೂಲಕ ಚಾಲ್ತಿಯಲ್ಲಿದ್ದಾರೆ. ಇದರಿಂದ ಆಯಾ ವಾಹಿನಿಗಳ ಟಿಆರ್‌ಪಿ ಏರಿದ್ದರೂ ಇರಬಹುದು. ಆದರೆ, ಜಗ್ಗೇಶಿಯ ಮಾನ ಮಾತ್ರ ಗಾಂಧಿನಗರದ ಗಟಾರ ಸೇರಿಕೊಂಡಿದೆ.

    114908087ರಂಗನಾಯಕ ಸಿನಿಮಾ ಸೋಲಿನ ಮೂಲಕ ಜಗ್ಗೇಶಿಗೆ ತೀವ್ರ ಮುಖಭಂಗವಾಗಿತ್ತು. ಮಾತೆತ್ತಿದರೆ ನಾನು ಸೀನಿಯರ್ ಅಂತ ಎದೆ ಸೆಟೆಸೋ ಈತನ ಯೋಗ್ಯತೆ ಅಂಥಾದ್ದೊಂದು ಸೋಲನ್ನು ಎದುರುಗೊಂಡಿದ್ದ ರೀತಿಯಿಂದಲೇ ಋಜುವಾತಾಗಿತ್ತು. ಒಂದು ಸಿನಿಮಾ ಗೆದ್ದಾಗ ಅದರ ಫಾಯಿದೆಯನ್ನು ಭರಪೂರವಾಗಿ ಅನುಭವಿಸುವವರು ನಾಯಕರೇ. ಒಂದು ವೇಳೆ ಸೋಲೆದುರಾದಾಗಲೂ ಕೂಡಾ, ಅದರಲ್ಲಿ ತಾನೂ ಭಾಗಿದಾರನಾಗಿ ಒಂದಿಡೀ ತಂಡದ ಜೊತೆ ನಿಲ್ಲುವಾತ ವ್ಯಕ್ತಿತ್ವದಲ್ಲಿಯೂ ನಾಯಕನಾಗುತ್ತಾನೆ. ಆದರೆ, ಜಡೇಮಾಯ್ಸಂದ್ರದ ಜಗ್ಗೇಶಿ ಆಡಿದ್ದು ಅಕ್ಷರಶಃ ನೌಟಂಕಿ ನಾಟಕ. ಸಿನಿಮಾ ಸೋಲುತ್ತಲೇ ಅದರ ಎಲ್ಲ ಕ್ರೆಡಿಟ್ಟನ್ನೂ ಗುರುಪ್ರಸಾದ್ ಹೆಗಲಿಗೆ ರವಾನಿಸುವ ನರಿಬುದ್ಧಿ ಪ್ರದರ್ಶಿಸಿದ್ದು ಇದೇ ಜಗ್ಗೇಶ್. ಆ ನಂತರವೂ ಸದರಿ ಸೋಲಿನ ಬಗ್ಗೆ ಈತ ಸಮಯ ಸಿಕ್ಕಾಗಲೆಲ್ಲ ಮೂಗಲ್ಲೇ ಮುಲುಕಿದ್ದಿದೆ. ಈವತ್ತಿಗೆ ಮಠ ಗುರುಪ್ರಸಾದ್ ದುರಂತ ಸಾವು ಕಂಡು ಈ ಘಳಿಗೆಯನ್ನೂ ಕೂಡಾ ಆ ಸೋಲಿನಲ್ಲಿ ತನ್ನ ಪಾತ್ರವಿಲ್ಲ ಅಂತ ಬಿಂಬಿಸಿಕೊಳ್ಳುವ ಕಸರತ್ತಿಗೆ ಬಳಸಿಕೊಳ್ಳುತ್ತಿರುವ ಈತ ಯಾರಿಗೂ ಮನುಷ್ಯನಂತೆ ಕಾಣಿಸುತ್ತಿಲ್ಲ.

    jaggesh 65527207 ಇದೀಗ ಆತ್ಮಹತ್ಯೆ ಮಾಡಿಕೊಂಡಿರುವ ಗುಪ್ರಸಾದ್ ಮೇಲೆ ಜಗ್ಗೇಶ್ ಕಡೆಯಿಂದ ಆರೋಪಗಳ ಸುರಿಮಳೆಯಾಗುತ್ತಿದೆ. ಅತ್ಯಂತ ವ್ಯವಸ್ಥಿತವಾಗಿ ಆತ ಗುರು ಮೇಲಿನ ದ್ವೇಷ ತೀರಿಸಿಕೊಳ್ಳುತ್ತಿರೋ ವಿಚಾರ ಎಂಥವರಿಗಾದರೂ ಅರ್ಥವಾಗುತ್ತೆ. ತನ್ನ ಪರ ಬ್ಯಾಟಿಂಗ್ ಮಾಡಲು ಯಾವ ಅಭಿಮಾನಿ ಬಳಗವಾಗಲಿ, ಆರಾಧಿಸೋ ಮಂದಿಯಾಗಲಿ ಉಳಿದಿಲ್ಲ ಎಂಬ ವಿಚಾರ ಜಗ್ಗೇಶಿಗೆ ಸ್ಪಷ್ಟವಾಗಿ ಗೊತ್ತಿದೆ. ಆದ್ದರಿಂದಲೇ ಪುನೀತ್ ರಾಜ್ ಕುಮಾರ್ ರಂಥಾ ನಟರ ಬಗ್ಗೆ ಗುರು ಆಡಬಾರದ ಮಾತಾಡಿದ್ದ ಎಂಬರ್ಥದಲ್ಲಿ ಪ್ರಲಾಪ ಶುರುವಿಟ್ಟಿದ್ದಾರೆ. ಇದರಿಂದ ಪುನೀತ್ ಅಭಿಮಾನಿಗಳು ರೊಚ್ಚಿಗೆದ್ದು ತನ್ನ ಪರವಾಗಿ ನಿಲ್ಲಲೆಂಬ ಕುತ್ಸಿತ ಬುದ್ಧಿ ಈ ಭಂಡನದ್ದೆಂಬುದೂ ಸ್ಪಷ್ಟವಿದೆ. ಸಹನೀಯ ಅಂಶವೆಂದರೆ, ಪುನೀತ್ ಅಭಿಮಾನಿಗಳಿಗೂ ಈತನ ಹಿಕ್ಮತ್ತು ಅರ್ಥವಾಗಿದೆ!

    kannada filmmaker guruprasad dies by suicide at the age of 52 police investigation beginsಮನುಷ್ಯನ ಮೇಲೆ ಅದೆಂಥಾ ತಕರಾರು, ಭಿನ್ನಾಭಿಪ್ಯಾಯ, ಆರೋಪಗಳಿದ್ದರೂ ಆತ ಸತ್ತ ನಂತರ ವರಾತ ಶುರುವಿಟ್ಟುಕೊಳ್ಳೋದು ಮನುಷ್ಯತ್ವವಲ್ಲ. ಸತ್ತವನು ಎಂಥಾ ವ್ಯಕ್ತಿಯೇ ಇರಲಿ; ಆತ ಬದುಕಿದ್ದಾಗ ಮಾಡದ ಆರೋಪಗಳನ್ನು ಅನುಪಸ್ಥಿತಿಯಲ್ಲಿ ಮಾಡುವುದು ತರವಲ್ಲ. ಯಾಕೆಂದರೆ, ಅದರ ಬಗ್ಗೆ ಯಾವುದೇ ವಾಗ್ವಾದವನ್ನಾಗಲಿ, ಸಮರ್ಥನೆಯನ್ನಾಗಲಿ ಮಾಡಿಕೊಳ್ಳಲು ಆ ವ್ಯಕ್ತಿಯೇ ಇರುವುದಿಲ್ಲ. ಹಾಗೆ ಸೂತಕದ ನಡುವ ಘಾತುಕತನ ಪ್ರದರ್ಶಿಸೋ ದುರ್ಬುದ್ಧಿ ಜಗ್ಗೇಶ್ ಥರದ ಅಹಸ್ಯದ ವ್ಯಕ್ತಿತ್ವಗಳಿಗೆ ಮಾತ್ರ ಇರಲು ಸಾಧ್ಯ. ಹಾಗಂತ ಈ ನೆಲದ ಮಂದಿಯೇ ರೊಚ್ಚಿಗೆದ್ದು ಮಾತಾಡಲಾರಂಭಿಸಿದ್ದಾರೆ. ಇಲ್ಲಿ ಮಠ ಗುರುಪ್ರಸಾದ್ ಪರವಾಗಿ ಮಾತಾಡೋ ಯಾವ ದರ್ದೂ ಇಲ್ಲ. ಯಾಕಂದ್ರೆ, ಆತ ಬದುಕಿರುವಾಗಲೇ, ಇದೇ ಮಾಧ್ಯಮದಲ್ಲಿಯೇ ಮಾಡಲಾಗಿದೆ. ಜಗ್ಗೇಶಿಗೂ ಶಕ್ತ್ಯಾನುಸಾರ ಮಹಾಮಂಗಳಾರತಿಯೂ ನಡೆದಿದೆ.

    DOiBcapV4AAIWnwಗುರುಪ್ರಸಾದ್ ಬಗ್ಗೆ ಜಗ್ಗೇಶಿ ಅದೇನೇ ಆರೋಪ ಮಾಡುತ್ತಿರಬಹುದು, ಹಣಕಾಸಿನ ವಿಚಾರವಾಗಿ ಎಂಥಾದ್ದೇ ಲಫಡಾಗಳು ನಡೆದಿರಬಹುದು, ಗುರು ಸಾಲ ಮಾಡಿದ್ದರ ಹಿಂದೆ ಎಂಥಾದ್ದೇ ಕಾರಣವಿರಬಹುದು, ಇದೆಲ್ಲದರಾಚೆಗೆ ಆತನೋರ್ವ ಪ್ರತಿಭಾನ್ವಿತ ಬರಹಗಾರ, ನಿರ್ದೇಶಕ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಅಂಥಾದ್ದೊಂದು ಪ್ರತಿಭೆ, ಜಗತ್ತು ನಡೆಯೋ ದಿಕ್ಕಿಗೆ ವಿರುದ್ಧವಾಗಿ ನಡೆಯೋ ಛಾತಿ ಇಲ್ಲದೇ ಹೋಗಿದ್ದರೆ ಮಠದಂಥಾ ಚಿತ್ರವೊಂದು ರೂಪುಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಮಠ ಶುರುವಾಗೋ ಹೊತ್ತಿಗೆಲ್ಲ ಒಂದೇ ಬಗೆಯ ಸಿನಿಮಾಗಳ ಸಂತೆಯಲ್ಲಿ ಸೋತು ಕೂತಿದ್ದಾತ ಇದೇ ಜಗ್ಗೇಶಿ. ಮಠ ಚಿತ್ರ ಆತನ ಪಾಲಿಗೆ ಅಕ್ಷರಶಃ ಆಕ್ಸಿಜನ್ನಿನಂತಾಗಿತ್ತು. ಈತ ಅದೆಂಥಾ ಕೃತಘ್ನನೆಂದರೆ, ಆ ವಿಚಾರದ ಬಗ್ಗೆ ಅಪ್ಪಿತಪ್ಪಿಯೂ ಬಾಯಿ ಬಿಡುವುದಿಲ್ಲ. ಮಠ ಗೆದ್ದಿದ್ದು ತನ್ನ ಸೀಮೆಗಿಲ್ಲದ ನಟನೆಯಿಂದಲೇ ಎಂಬಂಥಾ ತಿಮಿರು ಜಡೇಮಾಯ್ಸಂದ್ರದ ಜಗ್ಗೇಶನಿಗೆ ಅಮರಿಕೊಂಡಿದ್ದರೂ ಅಚ್ಚರಿಯೇನಿಲ್ಲ.

    duniya vijay key role in guruprasad cremation 111 1730692664ಗುರುಪ್ರಸಾದ್ ಸತ್ತ ಸುದ್ದಿ ಕೇಳಿದಾಕ್ಷಣ ಅವರೊಂದಿಗೆ ಒಡನಾಟವಿಲ್ಲದ ದುನಿಯಾ ವಿಜಯ್ ಥರದವರು ಬಂಧುವಿನಂತೆ ದಿಕ್ಕೆಟ್ಟ ಕುಟುಂಬದ ಜೊತೆ ನಿಂತಿದ್ದರು. ತನಗೆ ನಾಯಕನಾಗಿ ಉಸಿರು ನೀಡಿದ್ದ ಗುರುವನ್ನು ನೆನೆಸಿಕೊಳ್ಳುತ್ತಲೇ ಡಾಲಿ ಧನಂಜಯ ಕೂಡಾ ಓಡೋಡಿ ಬಂದಿದ್ದರು. ಖುದ್ದು ಗುರುವಿನ ಆತ್ಮಬಂಧುವಿನಂತೆ ನೋವಿನ ಕ್ಷಣಗಳಿಗೆ ಸಾಥ್ ಕೊಟ್ಟ ದುನಿಯಾ ವಿಜಯ್ ಓರ್ವ ಮನುಷ್ಯನಾಗಿ ಎಲ್ಲರ ಮನ ಗೆದ್ದಿದ್ದಾರೆ. ಹಾಗೆ ನೋಡಿದರೆ, ವಿಜಯ್ ಗುರು ಜೊತೆ ಕೆಲಸ ಮಾಡಿದವರಲ್ಲ. ಹತ್ತಿರದ ನಂಟೂ ಇರಲಿಲ್ಲ. ಅಂಥಾ ವಿಜಿ ಗುರುಪ್ರಸಾದ್ ದುರಂತ ಸಾವು ಕಂಡ ಸುದ್ದಿ ತಿಳಿಯುತ್ತಲೇ ಬಳಿ ಸಾಗಿದ್ದರು. ಆದರೆ, ಹತ್ತಿರ ನಂಟಿದ್ದ ಜಗ್ಗೇಶ್ ಮಾತ್ರ ಅತ್ತ ಸುಳಿಯುವ ಔದಾರ್ಯವನ್ನೂ ತೋರದೆ ಹಳೇ ಕಜ್ಜಿ ಕೆರೆಯುತ್ತಾ ಆನಂದ ಅನುಭವಿಸುತ್ತಿದ್ದರು. ಈ ಮೂಲಕ ಈತ ಮನುಷ್ಯತ್ವವೆಂಬ ಪದಕ್ಕೇ ಅಪಮಾನದಂತೆ ಭಾಸವಾಗಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ.

    jaggesh 2ಈ ಆಸಾಮಿ ನಿಂತಲ್ಲಿ ಕುಂತಲ್ಲಿ ತಾನು ಸೀನಿಯರ್ರು ಎಂಬುದನ್ನು ತೋರ್ಪಡಿಸಿಕೊಳ್ಳುತ್ತಾರೆ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರಂಥಾ ಹಿರೀಕರು ಮರೆಗೆ ಸರಿದ ನಂತರ, ಆ ಸಾಲಿನಲ್ಲಿ ಸೇರ್ಪಡೆಗೊಳ್ಳುವ ಆಳದ ತಲುಬೊಂದು ಈತನೊಳಗಿದೆ ಅನ್ನಿಸುತ್ತೆ. ಆದರೆ, ಜಗ್ಗೇಶಿಯ ಹೀನ ಮನಃಸ್ಥಿತಿಯ ಅರಿವಿರುವ ಯಾರೊಬ್ಬರೂ ಆತನ ಹಿರಿತನಕ್ಕೆ ಮಣೆ ಹಾಕಲಿಲ್ಲ. ಚಿತ್ರರಂಗದಲ್ಲಿ ಯಾವ ಸಮಸ್ಯೆ ಬಂದಾಗಲೂ ಈತನನ್ನು ಗಣನೆಗೆ ತೆಗೆದುಕೊಂಡಿಲ್ಲ. ಈ ನೋವನ್ನು ನೀಗಿಕೊಳ್ಳಲೋಸ್ಕರವೇ ಆತ ಕೆಲವಾರು ಸಂದರ್ಭಗಳಲ್ಲಿ ದೊಡ್ಡಸ್ತಿಕೆ ತೋರಿಸಿಕೊಳ್ಳಲು ಹವಣಿಸಿದ್ದಿದೆ. ಆದರೀಗ ಗುರುಪ್ರಸಾದ್ ವಿಚಾರದಲ್ಲಿ ಈತ ತೀರಾ ಸಣ್ಣ ಮನುಷ್ಯನಾಗಿ ಎಲ್ಲರೊಳಗೂ ರೇಜಿಗೆ ಹುಟ್ಟಿಸಿ ಬಿಟ್ಟಿದ್ದಾರೆ.

    jaggesh 3 ಈವತ್ತಿಗೆ ಜಗ್ಗೇಶಿಯ ವ್ಯಕ್ತಿತ್ವದಲ್ಲಿ ಮನುಷ್ಯತ್ವದ್ದೊಂದು ಸಣ್ಣ ಕುರುಹೂ ಕಾಣಿಸುತ್ತಿಲ್ಲ. ಓರ್ವ ನಟನಾಗಿ ಡಬಲ್ ಮೀನಿಂಗ್, ಅಸಹ್ಯಕರ ಆಂಗಿಕ ಅಭಿನಯದಿಂದಲೇ ಒಂದಷ್ಟು ಚಾಲ್ತಿಯಲ್ಲಿದ್ದಾತ ಜಗ್ಗೇಶ್. ಹರುಕುಬಾಯಿ ಈತನ ಟ್ರೇಡ್ ಮಾರ್ಕ್. ಈಗಂತೂ ವ್ಯಕ್ತಿತ್ವವೂ ಹರಿದು ಚಿಂದಿಯಾಗಿದೆ. ಗುರುಪ್ರಸಾದ್ ಸತ್ತ ಕ್ಷಣದಲ್ಲಿ ಎಲ್ಲವನ್ನೂ ಮರೆತು ನೊಂದ ಜೀವಗಳ ಬಾಜಿನಲ್ಲಿ ನಿಂತಿದ್ದರೆ, ಆತನ ಬಗ್ಗೆ ಒಂದೆರಡು ಒಳ್ಳೆ ಮಾತುಗಳನ್ನಾಗಿ ಬಾಯಿ ಮುಚ್ಚಿಕೊಂಡಿದ್ದಿದ್ದರೆ ಜಗ್ಗೇಶ್ ಮಾನ ಅಷ್ಟರ ಮಟ್ಟಿಗಾದರೂ ಉಳಿಯುತ್ತಿತ್ತು. ಆದರೀತ ಗುರು ರಾಘವೇಂದ್ರ ಸ್ವಾಮಿಯ ಜಪ ಮಾಡುತ್ತಲೇ ತೀರಾ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಈತನ ಮಗ ಅಲ್ಲೆಲ್ಲೋ ಆಕ್ಸಿಡೆಂಟ್ ಮಾಡಿಕೊಂಡು ಟಿಷ್ಕ್ಯಾಂವ್ ಅಂದರೆ ಅದು ಗಹಗತಿಗಳ ಚೇಷ್ಟೆ. ತನ್ನ ತಮ್ಮ ಸಾಲು ಸಾಲು ಸೋಲು ಕಂಡರೆ ಅದು ಶನಿ ಪೀಡೆ. ಪ್ರತಿಭಾವಂತನಾಗಿದ್ದ ಗುರುಪ್ರಸಾದ್ ಸೋತರೆ, ಆತನ ಖಾಸಗೀ ಬದುಕು ಕೊಂಚ ಅಸ್ತವ್ಯಸ್ತಗೊಂಡರೆ, ಎಣ್ಣೆ ಚಟ ಜಾಸ್ತಿಯಾದರೆ ಮಾತ್ರ ಆತ ಪರಮ ದುಷ್ಟ. ಇದು ಜಗ್ಗೇಶಿಯ ಲಾಜಿಕ್ಕು!

    Jaggeshಜಗ್ಗೇಶ್ ಇದೀಗ ರಾಜ್ಯಸಭಾ ಸದಸ್ಯರಾಗಿದ್ದಾರೆ. ಆದರೆ, ಓರ್ವ ರಾಜಕಾರಣಿಯಾಗಿಯೂ ಈತ ಹೆಸರುಳಿಸಿಕೊಂಡಿಲ್ಲ. ಇನ್ನು ಈ ಆಸಾಮಿಯ ಕಡೆಯಿಂದ ದೇಶೋದ್ಧಾರವಾಗುತ್ತದೆ ಅಂತ ನಂಬಿ ಕೂರುವ ಮುಠ್ಠಾಳರು ಇಲ್ಯಾರೂ ಇರಲಿಕ್ಕಿಲ್ಲ. ಇತ್ತೀಚೆಗಂತೂ ಸಂಸ್ಕೃತಿ ಮಣ್ಣು ಮಸಿ ಅಂತೆಲ್ಲ ಜಗ್ಗೇಶಿ ಓತಾಪ್ರೋತವಾಗಿ ಮಾತಾಡೋದು ಮಾಮೂಲಾಗಿ ಬಿಟ್ಟಿದೆ. ಇದೀಗ ಆತನ ನಿಜವಾದ ಸಂಸ್ಕೃತಿ ಏನೆಂಬುದು ಗುರುಪ್ರಸಾದ್ ಸಾವಿನ ಮೂಲಕ ಬಟಾ ಬಯಲಾಗಿದೆ. ಶತ್ರುವೇ ಸತ್ತಾಗಲೂ ಮನಸು ಭಾರವಾಗದಿದ್ದರೆ, ಧಗಧಗಿಸುತ್ತಿದ್ದ ರೊಚ್ಚಿನ ಜಾಗವನ್ನು ವಿಷಾಧವೊಂದು ಆವರಿಸಿಕೊಳ್ಳದಿದ್ದರೆ ಆತ ಮನುಷ್ಯನಾಗಲು ಅರ್ಹನಲ್ಲ ಅಂತಲೇ ಅರ್ಥ. ಅಂಥಾದ್ದೊಂದು ಆರ್ದ್ರ ಮನಃಸ್ಥಿತಿ ನಿಜವಾದ ಸಂಸ್ಕೃತಿಯ ಭಾಗವೂ ಹೌದು. ಜಗೇಶಿಗೆ ಅದರ ಪರಿಚಯವಿದ್ದಂತಿಲ್ಲ. ಅಷ್ಟಕ್ಕೂ ಕೊಳೆತು ನಾರಿದ್ದು ಗುರುಪ್ರಸಾದ್ ದೇಹವಲ್ಲ; ಜಗ್ಗೇಶನ ಮೆದುಳು. ನವರಸ ನಾಯಕನೆಂಬ ಬಿರುದಿಗೇ ಅವಮಾನದಂತಿರೋ ಈತ ಅಸಹ್ಯರಸ ನಾಯಕ ಅನ್ನೋದರಲ್ಲಿ ಯಾವ ಸಂದೇಹವೂ ಉಳಿದಿಲ್ಲ. ಇಂಥಾ ಜಗ್ಗೇಶ್ ಗುರುಪ್ರಸಾದ್ ರ ಪುಟ್ಟ ಮಗುವಿಗೆ ಸಹಾಯ ಮಾಡೋ ಸಂಕಲ್ಪ ಮಾಡಿರೋದಾಗಿ ತ್ಯಾಪೆ ಹಚ್ಚಲೆತ್ನಿಸಿದ್ದಾರೆ. ಆತ ತುರ್ತಾಗಿ ಹರುಕು ಬಾಯಿ ಕಂಟ್ರೋಲಿನಲ್ಲಿಟ್ಟುಕೊಳ್ಳುವ ಸಂಕಲ್ಪ ಮಾಡಬೇಕಿದೆ. ಆ ಹೆಣ್ಣುಮಗಳಿಗೆ ತನ್ನ ಪುಟ್ಟ ಮಗುವನ್ನು ಚೆಂದಗೆ ಬೆಳೆಸೋ ಗಟ್ಟಿತನವನ್ನು ಬದುಕೇ ಕರುಣಿಸುತ್ತೆ. ಈ ವ್ರಣ ಹಿಡಿದ ಮನಸಿನ ಯಾವ ಸಂಕಲ್ಪ, ಸಹಾಯದ ಆಸರೆಯೂ ಆಕೆಗೆ ಬೇಕಾಗದಿರಲೆಂಬುದು ಹಾರೈಕೆ!

    Share. Facebook Twitter LinkedIn WhatsApp Telegram Email
    Previous Articlerocking star yash: ಕೆಜಿಎಫ್3 ಶುರುವಾಗೋದು ಪಕ್ಕಾ!
    Next Article jaggesh: ಹಿರಿಯ ನಟನಿಗೆ ಎಂದೂ ವಾಸಿಯಾಗದ ಆಮಶಂಕೆ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Darshan Devil Movie: ಅವಿವೇಕಿ ಸೆಲೆಬ್ರಿಟೀಸ್ ಅದನ್ನೇ ಸಂಭ್ರಮಿಸಿದ್ದರು!

    02/12/2025

    Dhanveer: ನಸೀಬುಗೇಡಿ ನಟನ ಸುತ್ತಾ ಇದೆಂಥಾ ಷಡ್ಯಂತ್ರ?

    10/11/2025

    Biggboss Ashwini Controvercy: ದುರಹಂಕಾರ ಕಾರಿಕೊಂಡವಳಿಗೆ ಕಾನೂನು ಕಂಟಕ!

    24/10/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (10)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (81)
    • ಸೌತ್ ಜೋನ್ (138)
    • ಸ್ಪಾಟ್ ಲೈಟ್ (218)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಸ್ಪಾಟ್ ಲೈಟ್ 02/01/2026

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ…

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Jananayagan Trailer : ರೀಮೇಕ್ ಸರಕು ಹೇಗಿದ್ದೀತೆಂಬ ಕೌತುಕ!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (74) challengingstardarshan (10) cinishodha (139) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (170) kgf (8) kicchasudeep (11) kicchasudeepa (6) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (198) shivarajkumar (9) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 26, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.