ಈ ಸಿನಿಮಾ ನಟ ನಟಿಯರಲ್ಲಿ ಬಹುಪಾಲು ಮಂದಿ ಸಮಾಜದ ಸ್ಥಿತ್ಯಂತರಗಳಿಗೆ ಸ್ಪಂದಿಸುವ ಸಂವೇದನೆಯನ್ನೇ ಕಳೆದುಕೊಂಡಿರುತ್ತಾರೆ. ಅದರಲ್ಲಿಯೂ ರಾಜಕೀಯದ ಆಸಾಮಿಗಳ ಬಗ್ಗೆ ಈ ಮಂದಿ ಅದೆಂಥಾ ಸಂದರ್ಭಗಳಲ್ಲಿಯೂ ತುಟಿ ಬಿಚ್ಚೋದು ಕಡಿಮೆ. ಅದ್ಯಾವ ಪಕ್ಷವೇ ಅಧಿಕಾರ ಕೇಂದ್ರದಲ್ಲಿದ್ದರೂ, ಅದರ ನಡಾವಳಿಗಳಿಂದ ದೇಶವಾಸಿಗಳಿಗೆ ತೊಂದರೆಯಾದರೆ ಅದರ ವಿರುದ್ಧ ಧ್ವನಿಯೆತ್ತೋ ಕರ್ತವ್ಯ ನಟ ನಟಿಯರಿಗಿರುತ್ತೆ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ವಿರುದ್ಧ ಮಾತಾಡಿ ವೈರತ್ವ ಕಟ್ಟಿಕೊಳ್ಳುವವರಿಗಿಂತಲೂ ಪರ ವಹಿಸಿ ಮಾತಾಡಿ ಬೂಟು ನೆಕ್ಕುವವರದ್ದೇ ಜಮಾನ ಎಂಬಂತಾಗಿದೆ. ಇಂಥಾ ನೌಟಂಕಿ ಆಸಾಮಿಗಳ ಸಾಲಿಗೆ ಸೇರ್ಪಡೆಗೊಳ್ಳುವಾತ ಸೀರಿಯಲ್ಲುಗಳು, ಸಿನಿಮಾಗಳಲ್ಲಿ ಆಗಾಗ ಮುಸುಡಿ ತೋರಿಸೋ ಅನ್ನು ಕಪೂರ್!
ಈ ಹಿಂದೆ ತಮನ್ನಾ ಭಾಟಿಯಾಳ ಮೈಸಿರಿಯ ಬಗ್ಗೆ ಮಾತಾಡಿ ಉಗಿಸಿಕೊಂಡಿದ್ದ ಅನ್ನು ಕಪೂರ್ ಇದೀಗ ಅಯಾವುದೋ ಕಾರ್ಯಕ್ರಮವೊಂದರಲ್ಲಿ ರಾಮಾಯಣ ಸಿನಿಮಾದ ಬಗ್ಗೆ ರೊಳ್ಳೆ ತೆಗೆದಿದ್ದಾನೆ. ಈ ಚಿತ್ರದ ನಿರ್ದೇಶಕನ ಬಗ್ಗೆ ವ್ಯಂಗ್ಯವಾಡಿ ಮಾತರಾಡಿದ್ದಲ್ಲದೆ, ಸೀತೆಯ ಪಾತ್ರವನ್ನು ನಿರ್ವಹಿಸುತ್ತಿರುವ ಸಾಯಿಪಲ್ಲವಿ ವಿರುದ್ಧವೂ ಅಸಮಾಧಾನ ಹೊರ ಹಾಕಿದ್ದಾನೆ. ಸೀತೆ ನಮ್ಮೆಲ್ಲರಿಗೂ ಮಾತೆಯ ಸ್ಥಾನದಲ್ಲಿರೋದರಿಂದ ಅಂಥಾ ಪಾತ್ರಕ್ಕೆ ಸಾಯಿ ಪಲ್ಲವಿಯಂಥಾ ನಟಿಯನ್ನು ಆಯ್ಕೆ ಮಾಡಿಕೊಂಡಿರೋದು ಸರಿಯಲ್ಲ. ಅದರಿಂದ ಸೀತಾ ಮಾತೆಯ ಗೌರವಕ್ಕೆ ಧಕ್ಕೆಯುಂಟಾಗುತ್ತದೆ ಅಂತೆಲ್ಲ ಹಲುಬಿಕೊಂಡಿದ್ದಾನೆ. ಹಾಗೆ ನೋಡಿದರೆ, ಸಾಯಿಪಲ್ಲವಿ ಯಾವುದೇ ಥಳುಕು ಬಳುಕಿಲ್ಲದ ಸಭ್ಯ ನಟಿ. ಆಕೆಯನ್ನು ಆಯ್ಕೆ ಮಾಡಿದಾಗ ಬಹುತೇಕ ಎಲ್ಲರೊಳಗೂ ಖುಷಿಯೊಂದು ಮೂಡಿಕೊಂಡಿತ್ತು.
ಹಾಗಿದ್ದರೂ ಯಾಕೆ ಈ ತಲೆಮಾಸಿದ ನಟ ಅನ್ನು ಕಪೂರ್ ಸಾಯಿಪಲ್ಲವಿ ವಿರುದ್ಧ ಕಾರಿಕೊಂಡಿದ್ದಾನೆಂದು ನಿಕಷಕ್ಕಿಳಿದರೆ, ಸಾಯಿಪಲ್ಲವಿ ಈ ಹಿಂದೆ ಒಂದಷ್ಟು ವಿಚಾರಗಳಲ್ಲಿ ಮನುಷ್ಯತ್ವದ ನೆಲೆಯಲ್ಲಿ ಹೇಳಿಕೆ ಕೊಟ್ಟಿದ್ದನ್ನು ಹೊರತಾಗಿ ಅನ್ನುವಿನ ಉರಿಗೆ ಮತ್ಯಾವ ಕಾರಣವೂ ಕಾಣಿಸುತ್ತಿಲ್ಲ. ಸಾಯಿಪಲ್ಲವಿಯಂಥಾ ನಟಿಯರು ನಿರ್ವಹಿಸಿದರೆ ಸೀತಾ ಮಾತೆಗೆ ಅಪಚಾರವಾಗುತ್ತದೆ ಎಂಬಂತೆ ಮಾತಾಡುತ್ತಾನಲ್ಲಾ ಅನ್ನು ಕಪೂರ್? ಈ ಅಯೋಗ್ಯ ಭಕ್ತರ ವೇಷದಲ್ಲಿರುವವರೇ ಶ್ರೀರಾಮನ ಹುಂಡಿ ಸಾಸನ್ನು ಲೂಟಿ ಹೊಡೆದಿದ್ದರ ಬಗ್ಗೆ ಒಂದು ಮಾತನ್ನೂ ಎಲ್ಲಿಯೂ ಆಡಿಲ್ಲ. ರಾಮನ ಹುಂಡಿಗೆ ಮಕನ್ನ ಹಾಕೋದು ಶ್ರೀರಾಮಚಂದ್ರನಿಗೆ ಸಲ್ಲಿಸೋ ಗೌರವ ವೇ? ಅದನ್ನು ವಿರೋಧಿಸಿ ಒಂದೇ ಒಂದು ಹೇಳಿಕೆ ಕೊಡಲು ಅನ್ನು ಕಪೂರನಿಗೆ ಮುಕುಳಿಯಲ್ಲಿ ಧಮ್ಮಿಲ್ಲವೇ?
ಇಂಥಾ ಆಸ್ಥಾನ ಕಲಾವಿದರು ಆಡಳಿತಾರೂಢರ ಬೂಟು ನೆಕ್ಕಲಷ್ಟೇ ಲಾಯಕ್ಕಾದವರು. ಈತ ಸೀಮೆಗಿಲ್ಲದ ನಟನೇನಲ್ಲ. ಅದ್ಯಾವುದೋ ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ನಟಿಸಿರುವ ಅನ್ನು ಕಪೂರ್ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಶೋಗಳಲ್ಲಿ ತಿಮಿರು ತೋರಿಸೋದನ್ನೇ ಕಸುಬಾಗಿಸಿಕೊಂಡಿದ್ದಾನೆ. ಒಂದು ವೇಳೆ ದೇವರು ದಿಂಡಿರ ಬಗ್ಗೆ ಈತನಿಗೆ ನಿಜವಾದ ಭಕ್ತಿ ಇರೋದೇ ಹೌದಾಗಿದ್ದರೆ, ರಾಮನ ಹುಂಡಿಗೆ ಕನ್ನ ಕೊರೆದ ಖೂಳರ ವಿರುದ್ಧವೂ ಅಸಹನೆಯ ಮಾತುಗಳನ್ನಾಡುತ್ತಿದ್ದ. ಆದರೆ, ಆಡಳಿತಾರೂಢರನ್ನು ಎದುರು ಹಾಕಿಕೊಳ್ಳುವ ಯೋಗ್ಯತೆಯಿಲ್ಲದ ಅನ್ನು ಈ ಹುಡುಗಿ ಸಾಯಿಪಲ್ಲವಿಯ ಬಗ್ಗೆ ಮಾತಾಡುವ ಮೂಲಕ ಒಂದಷ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ಗಿಲೀಟು ಮಾಡಿದ್ದಾನೆ. ಸಹನೀಯ ಅಂಶವೆಂದರೆ, ತಲೆ ನೆಟ್ಟಗಿರುವವರೆಲ್ಲ ಸಾಮಾಜಿಕ ಜಾಲತಾಣಗಳ ಮೂಲಕ ಅನ್ನು ಕಪೂರನಿಗೆ ಕ್ಯಾಕರಿಸಿ ಉಗಿದಿದ್ದಾರೆ!
keywords: saipallavi, ramayana movie, annu kapoor, bollywood

