ಒಂದು ಕಡೆಯಿಂದ ದರ್ಶನ್ಗೆ ಎಲ್ಲ ಬಾಗಿಲುಗಳೂ ಮುಚ್ಚಿಕೊಂಡಂಥಾ ಸ್ಥಿತಿ ನಿರ್ಮಾಣವಾಗಿದೆ. ಆತ ಮಾಡಿಕೊಂಡ ಯಡವಟ್ಟನ ಬಗ್ಗೆ ಆಕ್ರೋಶವಿದ್ದರೂ, ಈಗಾಗಲೇ ನೊಂದು ಬೆಂದಿರುವ ದಾಸ ನಿರಾಳವಾಗಲೆಂದು ಬಯಸುತ್ತಿರುವವರಿಗೆ ಆಘಾತವಾಗುವ ವಿಚಾರಗಳೇ ಅಡಿಗಡಿಗೆ ಜಾಹೀರಾಗುತ್ತಿವೆ. ಈಗ ಇಲ್ಲಿ ಹೇಳ ಹೊರಟಿರೋದು ಮತ್ತೊಂದು ಆಘಾತದ ವಿಚಾರ. ಅದೇನು ದರ್ಶನ್ ನಸೀಬೋ, ಆತ ಮೆರೆದಾಡಿದ ರೀತಿಯ ಪ್ರತಿಫಲವೋ ಗೊತ್ತಿಲ್ಲ; ರೇಣುಕಾಸ್ವಾಮಿ ಕೊಲೆ ಕೇಸಿನ ನಂತರ ಅತ್ಯಾಪ್ತ ಬಳಗದಲ್ಲಿದ್ದವರೆಲ್ಲ ಮೆತ್ತಗೆ ಕಳಚಿಕೊಂಡಿದ್ದರು. ಅಂಥಾ ಹೊತ್ತಿನಲ್ಲಿ ದರ್ಶನ್ ಬೆಂಬಲಕ್ಕೆ ಭಹಿರಂಗವಾಗಿಯೇ ನಿಂತಿದ್ದವನು ಧನ್ವೀರ್. ಯಾರೂ ಇಲ್ಲದ ಘಳಿಗೆಯಲ್ಲಿ ದಾಸನಿಗೆ ಸಾಥ್ ಕೊಟ್ಟ, ಎಂಥಾ ಕ್ಷಣಗಳಲ್ಲಿಯೂ ಗಟ್ಟಿಯಾಗಿ ನಿಂತಂತಿದ್ದ ಧನ್ವೀರನನ್ನು ದರ್ಶನ್ ಅಭಿಮಾನಿ ಬಳಗ ಅಕ್ಷರಶಃ ತಲೆಮೇಲೆ ಹೊತ್ತು ಮೆರೆಸಿತ್ತು. ಅದರ ಹಿಂದಿದ್ದದ್ದು ಕಷ್ಟಕಾಲದಲ್ಲಿ ಧನ್ವೀರ್ ಜೊತೆಯಾದನಲ್ಲಾ ಎಂಬಂಥಾ ಕೃತಜ್ಞ ಭಾವ. ಆದರೀಗ ದರ್ಶನ್ ಪಾಳೆಯ ಮತ್ತು ಬೆಂಗಳೂರು ಭೂಗತದಲ್ಲಿ ಹರಿದಾಡುತ್ತಿರುವ ಒಂದು ವಿಚಾರ ದರ್ಶನ್ ಅಭಿಮಾನಿಗಳಿಗೆ ಧನ್ವೀರ್ ಮೇಲಿದ್ದ ಪ್ರೀತಿಯ ನೆತ್ತಿಗೆ ಬರೆ ಎಳೆದಂತಿದೆ!
ಈಗ್ಗೆ ಕೆಲ ದಿನಗಳಿಂದೀಚೆಗೆ ಧನ್ವೀರ್ ದರ್ಶನ್ ಪಾಳೆಯದಿಂದ ದೂರಾಗಿದ್ದಾನೆಂಬ ಸುದ್ದಿ ಹರಿದಾಡಿತ್ತು. ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ತಗುಲಿಕೊಂಡ ನಂತರ ಧನ್ವೀರ ಥೇಟು ತಮ್ಮನೆಂಬಂತೆ ಸಾಥ್ ಕೊಟ್ಟಿದ್ದ. ಈ ಆಘಾತದಿಂದ ಕಂಗೆಟ್ಟಿದ್ದ ವಿಜಯಲಕ್ಷ್ಮಿಗೂ ಮಗನಂತೆ ಜೊತೆಯಾಗಿದ್ದ. ಆಕೆ ಎಲ್ಲೇ ಹೋದರೂ ಜೊತೆಗಿರುತ್ತಿದ್ದ ಧನ್ವೀರ ಇತ್ತೀಚಿನ ದಿನಗಳಲ್ಲಿ ಏಕಾಏಕಿ ಗಾಯಬ್ ಆಗಿಬಿಟ್ಟಿದ್ದಾನೆ. ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಸೀಮೆಗೆ ತೆರಳಿದ್ದ ವಿಜಯಲಕ್ಷ್ಮಿ ಕರಾವಳಿ ದೈವಗಳ ನೇಮದಲ್ಲಿ ಪಾಲ್ಗೊಂಡಿದ್ದರಲ್ಲಾ? ಅಲ್ಲೂ ಕೂಡಾ ವಾಮನನ ಸುಳಿವಿರಲಿಲ್ಲ. ಯಾವಾಗ ಧನ್ವೀರ್ ಹೀಗೆ ಅಜ್ಞಾತವಾಸಿಯಾದನೋ, ಆ ಕ್ಷಣದಿಂದಲೇ ಒಂದಷ್ಟು ರೂಮರುಗಳು ಹಬ್ಬಿಕೊಂಡಿದ್ದವು. ಕೆಲ ವಿಕೃತರಂತೂ ದರ್ಶನ್ನನ್ನು ವಿರೋಧಿಸುವ ಭರದಲ್ಲಿ ಧನ್ವೀರ್ ಮತ್ತು ವಿಜಯಲಕ್ಷಮಿ ಬಗ್ಗೆ ಅಸಹ್ಯಕರ ರೂಮರುಗಳನ್ನು ಕಾರಿಕೊಂಡಿದ್ದರು.
darshan photo leak case: ಮಾಲಿನಿ ಕೃಷ್ಣಮೂರ್ತಿಗೆ 2 ಕೋಟಿ ತಲುಪಿಸಿದ್ದನಾ ದರ್ಶನ್?
ಹಾಗೆ ಹಬ್ಬಿಕೊಂಡಿದ್ದ ವಿಕೃತ ವಿಚಾರಗಳೆಲ್ಲ ಸುಳ್ಳೆಂಬುದು ಸತ್ಯವಾದರೂ, ಬೆಂಕಿಯಿಲ್ಲದೆ ಹೊಗೆಯಾಡೋದಿಲ್ಲವಲ್ಲ? ಧನ್ವೀರ್ ಯಾಕೆ ಇತ್ತೀಚೆಗೆ ದರ್ಶನ್ ಪಾಳೆಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ? ನಿಜವಾಗಿಯೂ ದಾಸನ ಖಾಸಗಿ ವಲಯದಲ್ಲಿ ನಡೆದಿರೋದೇನು? ಒಂದು ವೇಳೆ ಧನ್ವೀರ್ ಮತ್ತು ದರ್ಶನ್ ನಡುವೆ ವೈಮನಸ್ಯ ಮೂಡಿಕೊಂಡಿದ್ದರೆ ಅದಕ್ಕೆ ಕಾರಣವಾಗಿರೋ ವಿಚಾರವೇನು? ಇಂಥಾ ಅನೇಕ ಪ್ರಶ್ನೆಗಳು ನಾನಾ ಗುಮಾನಿಗಳ ಕಮಟಿನ ಸಮೇತ ಅನೇಕರನ್ನು ಕಾಡಲಾರಂಭಿಸಿದ್ದವು. ಅದಕ್ಕೀಗ ನಿಖರ ಉತ್ತರ ಜಾಹೀರಾಗಿದೆ. ಇದೀಗ ದರ್ಶನ್ ಆಪ್ತ ವಲಯದಲ್ಲಿದ್ದ ಭೂಗತ ಜೀವಿಗಳ ನಡುವೆ ಹರಿದಾಡುತ್ತಿರೋ ವಿಚಾಗಳನ್ನಾಧರಿಸಿ ಹೇಳೋದಾದರೆ, ಸ್ಯಾಂಡಲ್ವುಡ್ಡಿನ ಸೋಕಾಲ್ಡ್ ಶೋಕ್ದಾರ್ ಧನ್ವೀರನ ಗಂಟಲಲ್ಲೀಗ ದರ್ಶನ್ಗೆ ಸೇರಿದ ಐದು ಕೋಟಿಯ ಗಂಟು ಸಿಕ್ಕಿಕೊಂಡಿದೆ!
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಪಾಲಾಗಿದ್ದ ದರ್ಶನ್ ಬೇಲ್ ಪಡೆದು ಹೊರಬಂದ ಅಲ್ಪಾವಧಿಯಲ್ಲೇ ಮತ್ತೆ ಬೇಲ್ ಕ್ಯಾನ್ಸಲ್ ಆಗಿತ್ತಲ್ಲಾ? ಆಗ ಪಡೆದುಕೊಂಡಿದ್ದ ಕಾನೂನಾತ್ಮಕ ತಿರುವುಗಳನ್ನು ಕಂಡು ಖುದ್ದು ದರ್ಶನ್ ಕಂಗಾಲಾಗಿದ್ದ. ಆತನ ಆಪ್ತ ವಲಯದಲ್ಲಿದ್ದವರು, ಅದಾಗಲೇ ಸಿನಿಮಾ ಸಂಬಂಧಿತ ವ್ಯವಹಾರ ಮಾಡಿದ್ದವರೆಲ್ಲರೂ ದಿಕ್ಕೆಟ್ಟು ನಿಂತಿದ್ದರು. ಇಂಥಾ ಹೊತ್ತಿನಲ್ಲಿಯೇ ಧನ್ವೀರ್ ತನಗೆ ಸ್ವಾಮೀಜಿಯೊಬ್ಬ ಪರಿಚಯವಿದ್ದಾರೆ, ಜಡ್ಜ್ ಅನ್ನೇಪಳಗಿಸಿಕೊಳ್ಳುತ್ತೇನೆ ಅಂತೆಲ್ಲ ದರ್ಶನ್ಗೆ ನಂಬಿಕೆ ಮೂಡಿಸಿದ್ದ. ಇದನ್ನು ನಂಬಿ ಆಶಾವಾದ ಚಿಗುರಿಸಿಕೊಂಡಿದ್ದ ದರ್ಶನ್ ಯಾವುದೋ ಒಂದು ಮಾರ್ಗದ ಮೂಲಕ ಐದು ಕೋಟಿಯನ್ನು ಧನ್ವೀರನಿಗೆ ತಲುಪಿಸಿದ್ದನೆಂಬುದು ಇದೀಗ ಭೂಗತದಿಂದ ಹೊರಬಿದ್ದಿರುವ ಸುದ್ದಿಯ ಸಾರಾಂಶ.

ಹಾಗೆ ದರ್ಶನ್ ಪಾಳೆಯದಿಂದ ಐದು ಕೋಟಿ ಪೀಕಿಕೊಂಡಿದ್ದ ಧನ್ವೀರ, ಅದರಲ್ಲೊಂದೆರಡು ಕೋಟಿಯನ್ನು ಡೀಲು ಕುದುರಿಸಲು ಯಾರಿಗಾದರೂ ಕೊಟ್ಟಿದ್ದರೆ, ಅವರ ಕಡೆಯಿಂದ ಕೆಲಸವಾಗಲೆ, ಕಾಸೂ ವಾಪಾಸಾಗದೆಯೂ ಇರುವ ಸಾಧ್ಯತೆಗಳಿವೆ. ಮತ್ತುಳಿದ ದೊಡ್ಡ ಮೊತ್ತವನ್ನು ಧನ್ವೀರನೇ ನುಂಗಿಕೊಂಡಿದ್ದಾನೆಂಬುದು ಈಗೆದ್ದಿರೋ ಆರೋಪ. ಒಂದು ಕಡೆಯಿಂದ ಕಾನೂನಿನ ಕುಣಿಕೆ ಬಿಗಿಯಾಗುತ್ತಲೇ, ಸಾಂದರ್ಭಿಕ ಸಾಕ್ಷಿಗಳ ಜೊತೆಗೆ, ಆಪ್ತ ರೇ ದರ್ಶನ್ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ಇಂಥಾ ಹೊತ್ತಿನಲ್ಲಿಯೇ ಅದಾಗಲೇ ಸಿನಿಮಾ ಸಂಬಂಧವಾಗಿ ಮಾಡಿಕೊಂಡಿದ್ದ ಒಡಂಬಡಿಕೆಗಳು, ಹಣಕಾಸಿನ ವ್ಯವಹಾರಗಳೂ ಕೂಡಾ ದರ್ಶನ್ನ ನ್ನು ಕಂಗೆಡಿಸಿದ್ದವು. ದರ್ಶನ್ ಥರದ ಸೂಪರ್ ಸ್ಟಾರ್ ಒಬ್ಬನ ದಿನದ ಆಯವ್ಯಯಗಳೇ ಅಂದಾಜಿಗೆ ನಿಲುಕದಂತಿರುತ್ತವೆ. ಹಾಗಿರುವಾಗ ವರ್ಷಗಟ್ಟಲೆ ದರ್ಶನ್ ಜೈಲೊಳಗಿರಬೇಕಾಗಿ ಬಂದಿರುವಾಗ, ಆತನ ಆರ್ಥಿಕ ಪರಿಸ್ಥಿತಿ ಯಾವ ಹಂತಕ್ಕಿಳಿದಿರಬಹುದೆಂಬ ಅಂದಾಜಂತೂ ಸಹಜವಾಗಿಯೇ ಸಿಗುತ್ತದೆ.
ಒಂದು ಕಾಲದಲ್ಲಿ ಒಂದೇ ಒಂದು ಸನ್ನೆ, ಫೋನ್ ಕರೆಯ ಮೂಲಕ ಕೋಟಿ ಕೋಟಿ ತರಿಸಿಕೊಳ್ಳುವ ಛಾತಿ ದರ್ಶನ್ಗಿತ್ತು. ಆದರೀಗ ಪರಿಸ್ಥಿತಿ ಹಾಗಿಲ್ಲ. ದರ್ಶನ್ಗೆ ಕಠಿಣ ಸಜೆ ಆಗಬಹುದೆಂಬ ಭಯವಿರೋದರಿಂದ ಸಿನಿಮಾ ವಲಯದಲ್ಲಿಯೂ ಕಾಸು ಹುಟ್ಟೋದು ಕಷ್ಟ. ಹೀಗಿರುವಾಗಲೇ ಧನ್ವೀರನ ನೌಟಂಕಿ ಆಟದ ಬಗ್ಗೆ ದರ್ಶನ್ಗೆ ಸುಳಿವು ಸಿಕ್ಕಿತಾ? ಆಪ್ತ ವಲಯದ ಮಂದಿ ಇಂಥಾದ್ದೊಂದು ವಿಚಾರವನ್ನು ಜೈಲೊಳಗಿದ್ದ ದರ್ಶನ್ಗೆ ದಾಟಿಸಿದ್ದರಾ? ಅದಾಗಲೇ ಎಲ್ಲವೂ ಮುಕ್ತಾಯವಾಯ್ತೆಂಬಂಥಾ ಆಘಾತದಿಂದ ಕಂಗೆಟ್ಟಿದ್ದ ದರ್ಶನ್, ಧನ್ವೀರನ ದ್ರೋಹದ ಸತ್ಯ ತಿಳಿದು ವ್ಯಘ್ರಗೊಂಡನಾ? ಇದೆಲ್ಲರ ಫಲವಾಗಿಯೇ ಧನ್ವೀರ ದರ್ಶನ್ ಆಪ್ತ ವಲಯದಿಂದ ಓಡಿಸಲ್ಪಟ್ಟಿರೋ ಸಾಧ್ಯತೆಗಳೇ ಹೆಚ್ಚಿವೆ!
ಈಗಾಗಲೇ ದರ್ಶನ್ ವಲಯದಲ್ಲಿದ್ದ ಕೆಲ ಭೂಗತ ಜೀವಿಗಳು ಧನ್ವೀರನಿಗೆ ಹಣ ವಾಪಾಸು ಕೊಡುವಂತೆ ತಾಕೀತು ಮಾಡಿದ್ದಾರೆಂಬ ಮಾತಿದೆ. ತೀರಾ ದರ್ಶನ್ ಆಪ್ತ ವಲಯದ ಕೆಲ ಮಂದಿ ಕೂಡಾ ಇಂಥಾ ಕಷ್ಟ ಕಾಲದಲ್ಲಿಯೂ ದೋಖಾ ಮಾಡಿರೋ ಧನ್ವೀರನಿಗೆ ಶಪಿಸುತ್ತಿದ್ದಾರೆಂಬ ವಿಚಾರವೂ ಹಬ್ಬಿಕೊಂಡಿದೆ. ಸದ್ಯದ ಮಟ್ಟಿಗೆ ಈ ಎಲ್ಲ ಸುದ್ದಿಗಳಿಗೂ ಪೂರಕವಾದ ನಡೆಯೇ ಧನ್ವೀರನ ಕಡೆಯಿಂದಲೂ ಹೊಮ್ಮಲಾರಂಭಿಸಿದೆ. ದರ್ಶನ್ ತಪ್ಪು ಮಾಡಿರಬಹುದು. ತನ್ನ ದುರಹಂಕಾರದಿಂದಲೇ ಯಡವಟ್ಟುಗಳನ್ನು ಮಾಡಿಕೊಂಡಿರಬಹುದು. ಆದರೆ, ಇಂಥಾ ಕಷ್ಟ ಕಾಲದಲ್ಲಿ ಧನ್ವೀರ ದರ್ಶನ್ ಕಾಸು ನುಂಗಿದ್ದೇ ಹೌದಾಗಿದ್ದರೆ ಆತ ಬರಖತ್ತಾಗಲು ಸಾಧ್ಯವೇ?
ನಟಿಸಿದ್ದು ಮೂರು ಮತ್ತೊಂದು ಚಿತ್ರಗಳಲ್ಲಿ ಮಾತ್ರವಾದರೂ, ಅದರಲ್ಲಿ ಗೆದ್ದ ಲೆಕ್ಕ ಕಡಿಮೆಯಿದ್ದರೂ ನಾನೇ ಸೂಪರ್ ಸ್ಟಾರ್ ಎಂಬಂತೆ ತಿಮಿರು ತೋರಿಸಲಾರಂಭಿಸಿದ್ದವನು ಧನ್ವೀರ್. ಬೆಳೆದಷ್ಟೂ ಬಾಗಬೇಕೆಂಬ ತಿಳಿವಳಿಕೆಯ ಪರಿಚಯವೇ ಇಲ್ಲದಂತೆ ಮೆರೆದಾಡುತ್ತಾ ಬಂದಿದ್ದ ಈತ, ಥೇಟು ದರ್ಶನ್ ಸ್ಟೈಲಿನಲ್ಲಿಯೇ ಖದರ್ರು ಪ್ರದರ್ಶಿಸುವ ಮೂಲಕ ನಗೆಪಾಟಲಿಗೀಡಾಗುತ್ತಲೂ ಬಂದಿದ್ದ. ದರ್ಶನ್ ಸಖ್ಯವನ್ನೇ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾನೆಂಬ ಅಸಹನೆಯೊಂದು ಅಭಿಮಾನಿ ಬಳಗದಲ್ಲಿಯೇ ಒಂದು ಕಾಲದಲ್ಲಿದ್ದದ್ದು ಸುಳ್ಳಲ್ಲ. ರೇಣುಕಾಸ್ವಾಮಿ ಪ್ರಕರಣ ನಡೆದ ನಂತರದಲ್ಲಿ ಅಭಿಮಾನಿ ಬಳಗದಲ್ಲಿದ್ದ ಅಸಹನೆಗಳೆಲ್ಲವೂ ಮಾಫಿಯಾಗಿದ್ದವು. ಆದರೀಗ ಈ ನಂಬಿಕೆದ್ರೋಹದ ವಿಚಾರದಲ್ಲಿ ಮತ್ತೆ ಅಭಿಮಾನಿ ಪಡೆಯ ಕಣ್ಣಲ್ಲಿ ಧನ್ವೀರ್ ವಿಲನ್ ಆಗಿಬಿಟ್ಟಿದ್ದಾನೆ.

ಹೀಗೆ ಒಂದು ಕಡೆಯಿಂದ ದರ್ಶನ್ಗೆ ಭೀತಿಯೆಂಬುದು ಒತ್ತರಿಸಿಕೊಂಡು ಬರುತ್ತಿದ್ದರೆ, ಹೊರಜಗತ್ತಿನಲ್ಲಿ ಸುಪ್ತವಾಗೊಂದಷ್ಟು ಬದಲಾವಣೆಗಳು ಘಟಿಸುತ್ತಿವೆ. ಒಂದು ಹಂತದವರೆಗೂ ದೂರ ನಿಂತಿದ್ದ ಒಂದಷ್ಟು ಮಂದಿಯೀಗ ದರ್ಶನ್ನನ್ನು ಬಚಾವು ಮಾಡಲು ಪ್ರಯತ್ನ ನಡೆಸಲಾರಂಭಿಸಿದ್ದಾರೆ. ಅದರ ಭಾಗವಾಗಿಯೇ ದರ್ಶನ್ ಪುಟ್ಟಣ್ಣಯ್ಯ, ಜಮೀರ್ ಅಹ್ಮದ್ ಮಗ ಝೈದ್ ಖಾನ್ ಮುಂತಾದವರು ಪರಪ್ಪನ ಅಗ್ರಹಾರಕ್ಕೆ ತೆರಳಿ ದರ್ಶನ್ನನ್ನು ಭೇಟಿಯಾಗಿದ್ದಾರೆ. ಆಮೀರ್ ಅಧಿಕಾರ ಕೇಂದ್ರದಲ್ಲಿರೋದರಿಂದ, ಆತನ ಕಡೆಯಿಂದಲೂ ದರ್ಶನ್ಗೆ ಸಹಾಯ ಮಾಡುವಂಥಾ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೊಂದೆಡೆಯಲ್ಲಿ ಚಿತ್ರರಂಗದ ನಿರ್ಮಾಪಕ ರಾಕಿಂಗ್ ಮುದುಕಪ್ಪ ಮತ್ತು ಮಂಡ್ಯದ ಮಾಜಿ ಎಂಪಿ ಗ್ಲಾಮರಸ್ ಮುದುಕವ್ವ ಒಗ್ಗೂಡಿ ದರ್ಶನ್ನನ್ನು ಪಾರುಗಾಣಿಸಲು ಪ್ರಯತ್ನಿಸುತ್ತಾ ಡ್ಯಾಮೇಜ್ ಕಂಟ್ರೋಲಿಗೆ ಮುಂದಾದಂತಿದೆ. ಇದರಾಚೆಗೆ, ದರ್ಶನ್ ಪರವಾಗಿ ಚಿತ್ರರಂಗದ ದಿಕ್ಕಿಂದ ಸಾಥ್ ಕೊಡುವವರಿಲ್ಲ.
ಸದ್ಯದ ಮಟ್ಟಿಗೆ ಪ್ರದೋಶ್ ಮಾಫಿ ಸಾಕ್ಷಿಯ ಕಂಟಕದ ನಡುವೆಯೂ, ಒಂದಷ್ಟು ನಿರಾಳತೆ ಬಂದಂತೆ ಕಾಣಿಸುತ್ತಿರೋದು ಭ್ರಮೆ ಮಾತ್ರ. ಯಾಕೆಂದರೆ, ಎಲ್ಲ ವಾತಾವರಣವೂ ದರ್ಶನ್ಗೆ ವಿರುದ್ಧವಾಗಿರೋದು ವಾಸ್ತವ. ಇದರಲ್ಲಿ ದರ್ಶನ್ಗೆ ಸಜೆಯಾಗೋದು ಪಕ್ಕಾ ಎಂಬಂಥಾ ವಾತಾವರಣವಿದೆ. ಇಂಥಾ ಹೊತ್ತಿನಲ್ಲಿ ತೀರಾ ಆಪ್ತನಾಗಿದ್ದ ಧನ್ವೀರನ ದೋಖಾ ಕೂಡಾ ದರ್ಶನ್ನನ್ನು ಕಂಗೆಡಿಸಿರೋದು ನಿಜ. ಇಂಥಾ ಸಂದಿಗ್ಧ ಸಮಯದಲ್ಲಿ ದರ್ಶನ್ ಪಾಲಿನ ಏಕೈಕ ಬೆಳಕಿಂಡಿಯಂತೆ ಕಾಣಿಸುತ್ತಿರುವವವರು ಖ್ಯಾತ ವಕೀಲ ಹಶ್ಮತ್ ಪಾಶಾ. ಕೆಳ ಹಂತದ ನ್ಯಾಯಾಯದಲ್ಲಿ ಸಜೆಯಾದರೂ, ಮೇಲ್ಮನವಿಯ ಮೂಲಕ ಪಾಶಾ ದರ್ಶನ್ನನ್ನು ಪಾರುಮಾಡುತ್ತಾರೆಂಬ ಏಕೈಕ ನಂಬಿಕೆಯಷ್ಟೆ ಇದೀಗ ಉಳಿದುಕೊಂಡಿದೆ!
keywords: darshan, dhanveer, renukaswamy murder case, crime, exclusive story

