ಬಾಹುಬಲಿ ಸರಣಿ ಗೆಲುವಿನ ನಂತರದಲ್ಲಿ ಪ್ರಭಾಸ್ನಂಥ ಸೂಪರ್ ಸ್ಟಾರ್ ನಟನೇ ಸರಿಕಟ್ಟಾದ್ದೊಂದು ಗೆಲುವು ಕಾಣಲಾರದೆ ಕಂಗಾಲಾಗಿದ್ದಾನೆ. ಬಹುಶಃ ಅಂಥಾ ದೊಡ್ಡ ಮಟ್ಟದ ಗೆಲುವಿನ ನಂತರ ಇದು ಹೀನಾಯ ಸೋಲು. ಬಹುತೇಕರು ಪ್ರಭಾಸ್ ಬಗ್ಗೆಯಷ್ಟೇ ರ್ಚಿಸುತ್ತಿದ್ದಾರೆ. ಆದರೆ, ಆತನ ಜೊತೆಗೇ ನಟಿಸಿದ್ದ ಅನುಷ್ಕಾ ಶೆಟ್ಟಿ ಕೂಡಾ ವರ್ಷಗಟ್ಟಲೆ ವೃತ್ತಿ ಬದುಕಿನಲ್ಲೊಂದು ನಿರ್ವಾತ ವಾತಾವರಣ ಕಾಣುವಂತಾಗಿತ್ತು. ಘಾಟಿಯಂಥಾ ಚಿತ್ರದಲ್ಲಿ ಚೆಂದದ ಪಾತ್ರ ಮಾಡಿದ್ದರೂ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಗೆಲುವು ದಕ್ಕಿರಲಿಲ್ಲ. ಇದಾದ ನಂತರ ವರ್ಷಗಟ್ಟಲೆ ಅನುಷ್ಕಾ ಸುದ್ದಿಯಲ್ಲಿದ್ದದ್ದು ಅದ್ಯಾರೋ ವೀವ್ಸ್ ಆಸೆಗೆ ಹಬ್ಬಿಸುತ್ತಾ ಬರುತ್ತಿದ್ದ ಮದುವೆ ವದಂತಿಗಳ ವಿಚಾರದಲ್ಲಿ ಮಾತ್ರ. ಹೀಗೆ ವರ್ಷಾಂತರಗಳಿಂದ ನೇಪಥ್ಯಕ್ಕೆ ಸರಿದಂತಿದ್ದ ಅನುಷ್ಕಾ ಇದೀಗ ಭಿನ್ನ ಕಥಾನಕದ ಸಿನಿಮಾವೊಂದರ ನಾಯಕಿಯಾಗಿ ಅಭಿಮಾನಿಗಳನ್ನು ಬೆರಗಾಗಿಸಲು ಸಜ್ಜಾಗಿದ್ದಾರೆ.
ಅನುಷ್ಕಾ ಶೆಟ್ಟಿ ಕಥಾನಾರ್ ಚಿತ್ರದ ಮೂಲಕ ಮಲೆಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಬಗ್ಗೆ ಈ ಹಿಂದೆ ಹೆಚ್ಚೇನೂ ಸುದ್ದಿಯಾಗಿರಲಿಲ್ಲ. ಖುದ್ದು ಅನುಷ್ಕಾ ಕೂಡಾ ಈ ಬಗ್ಗೆ ಹೇಳಿಕೊಂಡಿದ್ದಿಲ್ಲ. ಈ ಹಿಂದೆ ಈ ಸಿನಿಮಾದ್ದೊಂದು ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿತ್ತಷ್ಟೆ. ಅದರಲ್ಲಿನ ಅನುಷ್ಕಾ ಲುಕ್ ಕಂಡೇ ಅಭಿಮಾನಿ ಬಳಗ ಥ್ರಿಲ್ ಆಗಿತ್ತು. ಇದೀಗ ಕಥಾನಾರ್ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಫ್ಯಾಂಟಸಿ ಶೈಲಿಯಲ್ಲಿ ಮೂಡಿ ಬಂದಿರೋ ಈ ಟ್ರೈಲರ್ ಕೇರಳ ಭಾಗದ ಜಾನಪದ ಮೂಲದ ಗಟ್ಟಿ ಕಥೆಯೊಂದರ ಸ್ಪಷ್ಟ ಸುಳಿವನ್ನು ಕಟ್ಟಿ ಕೊಟ್ಟಿದೆ. ಈ ಸಿನಿಮಾ ಹಾರರ್ ಛಾಯೆಯಿಂದಲೂ ಗಮನ ಸೆಳೆದಿದೆ. ಇದರೊಂದಿಗೆ ಮತ್ತೆ ಫ್ಯಾನಿಂಡಿಯಾ ಮಟ್ಟದಲ್ಲಿ ಅನುಷ್ಕಾ ಸದ್ದು ಮಾಡೋ ಲಕ್ಷಣಗಳು ಢಾಳಾಗಿವೆ.
ಕಥಾನಾರ್ ಚಿತ್ರ ಮ ಲೆಯಾಳಂ ಮಾತ್ರವಲ್ಲದೇ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿಯೂ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ. ಈ ಚಿತ್ರವನ್ನು ಶ್ರೋ ಗೋಕುಲ್ ಮೂವೀಸ್ ಬ್ಯಾನರಿನಡಿಯಲ್ಲಿ ಗೋಪಾಲನ್ ನಿರ್ಮಾಣ ಮಾಡಿದ್ದಾರೆ. ಇದು ಒಂಬತ್ತನೇ ಶತಮಾನದಲ್ಲಿ ಇದ್ದನೆನ್ನಲಾದ, ಕೇರಳ ಜಾನಪದದಲ್ಲಿ ಮಿಳಿತವಾಗಿರುವ ಕಥಾನಾರ್ ಎಂಬ ಮಾಂತ್ರಿಕನ ಸುತ್ತ ನಡೆಯೋ ಕಥೆ ಹೊಂದಿರುವ ಚಿತ್ರ. ಕಥಾನಾರ್ ತನ್ನ ಅದ್ಭುತ ಮಾಂತ್ರಿಕ ಶಕ್ತಿಯಿಂದಲೇ ಜನರ ಸಂಕಷ್ಟಗಳನ್ನು ನೀಗಿಸುತ್ತಿದ್ದನೆಂಬ ಥರಹೇವಾಠರಿ ಕಥೆಗಳು ಕೇರಳದಲ್ಲಿ ಜನಜನಿತವಾಗಿವೆ. ಈ ಮೂಲಕ ಕಾಂತಾರಾದಂತೆ ಮತ್ತೊಂದು ನೆಲಮೂಲದ ಕಥನ ಪ್ಯಾನಿಂಡಿಯಾ ಮಟ್ಟದಲ್ಲಿ ಸದ್ದು ಮಾಡೋ ಸಾಧ್ಯತೆಗಳಿದ್ದಾವೆ.
keywords: anushka shetty, kathanar movie, mollywood, ghaati, tollywood

