ಇದೀಗ ಕನ್ನಡದ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಲು ಅಣಿಗೊಂಡಿರುವವವರು ನಿಮಿಕಾ ರತ್ನಾಕರ್. ನಟನೆ ಮಾತ್ರವಲ್ಲದೇ ಮತ್ತೊಂದಷ್ಟು ಕ್ರಿಯಾಶೀಲ ಹವ್ಯಾಸಗಳನ್ನು ಹೊಂದಿರುವ ನಿಮಿಕಾ ಪಾಲಿಗೆ ಕ್ರಿಕೆಟ್ ಎಂಬುದು ಸಿನಿಮಾದಷ್ಟೇ ಆಪ್ಯಾಯವಾದ ಸೆಳೆತ. ಅಪ್ಪಟ ಆರ್ಸಿಬಿ ಅಭಿಮಾನಿಯೂ ಆಗಿರುವ ನಿಮಿಕಾ ಇತ್ತೀಚೆಗೆ ಖ್ಯಾತ ಕ್ರಿಕೆಟರ್ ಪೃಥ್ವಿ ಶಾ ನಿಶ್ಚಿತಾರ್ಥ ಸಮಾರಂಭಕ್ಕೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಅಚಾನಕ್ಕಾಗಿ ಭೇಟಿಯಾಗಿದ್ದಾರೆ.
ಭಾರತೀಯ ಕ್ರಿಕೆಟ್ ಟೀಮಿನ ಭರವಸೆಯ ಆಟಗಾರ ಶ್ರೇಯಸ್ ಅಯ್ಯರ್ ಅವರ ಅನಿರೀಕ್ಷಿತ ಭೇಟಿಯಿಂದ ನಿಮಿಕಾ ರತ್ನಾಕರ್ ಖುಷಿಗೊಂಡಿದ್ದಾರೆ. ನಿಮಿಕಾ ಈ ಹಿಂದೆ ಆರ್ ಸಿಬಿ ಕಪ್ ಗೆದ್ದಾಗ ಅಹಮದಾಬಾದಿಗೆ ತೆರಳಿ, ಒಂದಿಡೀ ಪಂದ್ಯಾಟವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದ್ದರು. ಎಲ್ಲಿಯೇ ಕ್ರಿಕೆಟ್ ಪಂದ್ಯಾಟವಿದ್ದರೂ ಹಾಜರಾಗುವ ಹವ್ಯಾಸವಿಟ್ಟುಕೊಂಡಿರೋ ನಿಮಿಕಾಗೆ ಕ್ರಿಕೆಟ್ ಜಗತ್ತಿನಲ್ಲಿ ಸ್ನೇಹ ವಲಯವಿದೆ. ಈ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಮುಂಬೈನಲ್ಲಿ ನಡೆದಿದ್ದ ಪೃಥ್ವಿ ಶಾ ನಿಶ್ಚಿತಾರ್ಥ ಸಮಾರಂಭಕ್ಕೆ ಕುಟುಂಬ ಸಮೇತರಾಗಿ ಹಾಜರಾಗಿದ್ದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದಲ್ಲಿ ಶೇಕ್ ಇಟ್ ಪುಷ್ಪವತಿ ಹಾಡಿನ ಮೂಲಕ ಖ್ಯಾತಿ ಪಡೆದುಕೊಂಡಿರುವವರು ನಿಮಿಕಾ ರತ್ನಾಕರ್. ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಎಚ್ಚರದ ನಡೆ ಅನುಸರಿಸುತ್ತಾ ಬಂದಿರುವ ಅವರೀಗ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ವರ್ಷದಲ್ಲಿ ಕೆಲ ಸಿನಿಮಾಗಳು ತೆರೆಗಾಣಲಿದ್ದಾವೆ.
keywords: nimika ratnakar, shreyas iyer, sandalwood, indian cricket team

