ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೆದ್ದಿ. ಪ್ಯಾನಿಂಡಿಯಾ ಮಟ್ಟದಲ್ಲಿ ಕ್ರೇಜ್ ಮೂಡಿಸಿರೋ ಈ ಸಿನಿಮಾದ ಕೆಲಸ ಕಾರ್ಯಗಳೀಗ ಅಂತಿಮ ಘಟ್ಟ ತಲುಪಿಕೊಳ್ಳುತ್ತಿವೆ. ಆದರೆ, ನಿರೀಕ್ಷೆಗಿಂತಲೂ ಚಿತ್ರೀಕರಣದ ಕೆಲಸ ಕಾರ್ಯಗಳು ಕೊಂಚ ತಡವಾಗಿವೆ. ಸದ್ಯದ ಮಟ್ಟಿಗೆ ಒಂದು ವಿಶೇಷ ಹಾಡೂ ಸೇರಿದಂತೆ ಒಂದಷ್ಟು ಕೆಲಸ ಕಾರ್ಯಗಳು ಬಾಕಿ ಉಳಿದುಕೊಂಡಿವೆ. ಇದೇ ಹೊತ್ತಿನಲ್ಲಿ ವಿಶೇಷವಾದ ಹಾಡೊಂದರ ಚಿತ್ರೀಕರಣಕ್ಕೆ ಅಖಾಡ ಸಜ್ಜುಗೊಳ್ಳಲಿದೆ. ಈ ಅಖಾಡಕ್ಕೆ ಮೃಣಾಲ್ ಠಾಕೂರ್ಳನ್ನೇ ಕರೆತರಬೇಕೆಂಬುದು ನಿರ್ದೇಶಕ ಬುಚ್ಚಿ ಬಾಬು ಇರಾದೆಯಾಗಿತ್ತು. ಆದರೆ, ಮೃಣಾಲ್ ಠಾಕೂರ್ ಒಂದು ಹಾಡಿಗೆ ಸೊಂಟ ಬಳುಕಿಸಲು ಕೇಳಿದ ಸಂಭಾವನೆ ಕಂಡು ರಾಮ್ಚರಣ್ ಸೇರಿದಂತೆ ಒಂದಿಡೀ ಚಿತ್ರತಂಡ ಬೆಚ್ಚಿಬಿದ್ದಿದೆ!
ಮೃಣಾಲ್ ಠಾಕೂರ್ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ಡಿಗಿಂತಲೂ ಹೆಚ್ಚಾಗಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾಳೆ. ಧನುಷ್ ಜೊತೆಗಿನ ಅಫೇರ್ ರೂಮರಿನ ಕಾರಣದಿಂದ ಮತ್ತಷ್ಟು ಚರ್ಚೆಗೀಡಾಗಿರೋ ಈಕೆಯ ನಟನೆ ಪ್ರೇಕ್ಷಕರಿಗೆಲ್ಲ ಬಹುವಾಗಿ ಹಿಡಿಸಿದೆ. ಈ ಕಾರಣದಿಂದಲೇ ಹೆಚ್ಚೆಚ್ಚು ಅವಕಾಶಗಳು ಮೃಣಾಲ್ಳನ್ನು ಅರಸಿ ಬರುತ್ತಿವೆ. ಇದೇ ಕಾರಣಕ್ಕೆ ಬುಚ್ಚಿ ಬಾಬು ಆಕೆಯನ್ನೇ ಕರೆತರಬೇಕೆಂಬ ಸಂಕಲ್ಪ ತೊಟ್ಟಂತಿದ್ದರು. ಆದರೆ ಮೃಣಾಲ್ ಒಂದು ಹಾಡಿಗೆ ಮೂರು ಕೋಟಿ ಡಿಮ್ಯಾಂಡ್ ಮಾಡಿದ್ದಾಳಂತೆ. ಸದ್ಯಕ್ಕೆ ಚೌಕಾಶಿ ಚಾಲ್ತಿಯಲ್ಲಿದೆ. ಕೊಂಚ ಸಂಭಾವನೆಯಲ್ಲಿ ಕಡಿತ ಮಾಡಿಕೊಂಡರೂ, ಮೂರು ಕೇಟಿಗೇ ಅಂಟಿಕೊಂಡರೂ ಮೃಣಾಲ್ ಪೆದ್ದಿ ಚಿತ್ರದ ಸ್ಪೆಷಲ್ ಸಾಂಗಿಗೆ ಹೆಜ್ಜೆ ಹಾಕೋದು ಪಕ್ಕಾ ಎನ್ನಲಾಗುತ್ತಿದೆ.
Love Mocktail3 Movie: ಡಾರ್ಲಿಂಗ್ ಕೃಷ್ಣಗೆ ಹೊಡೆದಂತಾಯ್ತು ಲಾಟ್ರಿ!
ಪೆದ್ದಿ ಚಿತ್ರ ಗ್ರಾಮೀಣ ಭಾಗದ ವಿಶೇಷವಾದ ಕ್ರೀಡೆಯೊಂದರ ಭೂಮಿಕೆ ಹೊಂದಿದೆ. ಇದರಲ್ಲಿ ರಾಮ್ ಚರಣ್ ಪಕ್ಕಾ ರಗಡ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದುದ್ದಕ್ಕೂ ಮೈ ನವಿರೇಳಿಸುವಂಥಾ ಸಾಹಸ ದೃಷ್ಯಗಳಿರೋದರಿಂದಲೇ ಚಿತ್ರೀಕರಣ ಕೊಂಚ ತಡವಾಗಿದೆಯಂತೆ. ಈ ಕಾರಣದಿಂದಲೇ ಬಿಡುಗಡೆ ದಿನಾಂಕ ಕೂಡಾ ಏಕಾಏಕಿ ಮುಂದೂಡಲ್ಪಟ್ಟಿತ್ತು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಪೆದ್ದಿ ಈ ತಿಂಗ ೨೭ರಂದು ಬಿಡುಗಡೆಗೊಳ್ಳಬೇಕಿತ್ತು. ಆದರೀಗ ಏಪ್ರಿಲ್ ಮೂವತ್ತಕ್ಕೆ ಮುಹೂರ್ತ ನಿಗಧಿಯಾಗಿದೆ. ಮೃಣಾಲ್ ಕುಣಿಯಲಿರುವ ವಿಶೇಷ ಹಾಡಿನ ಜೊತೆಗೆ ಚಿತ್ರೀಕರಣ ಸಮಾಪ್ತಿಗೊಳ್ಳಲಿದೆ.
keywords: peddi movie, mrunal thakur, special song, tollywood

