ಇಂಟರ್‌ನೆಟ್ ಯುಗ ಆರಂಭವಾದೇಟಿಗೆ ತೆರೆಮರೆಯಲ್ಲಿದ್ದ ಪ್ರಖಾಂಡ ಪ್ರತಿಭೆಗಳೆಲ್ಲ ಬೆಳಕಿಗೆ ಬರುತ್ತಿವೆ. ಹುಚ್ಚುಚ್ಚಾಗಿ ಒದರುವ ಕಲೆ ಹೊಂದಿರುವವರೂ ಕೂಡಾ ಸೆಲೆಬ್ರಟಿಗಳಂತೆ ಪೋಸು ಕೊಡುತ್ತಿದ್ದಾರೆ. ಇಂಥವರೆಲ್ಲರದ್ದೂ ಖಾಲಿ ಡಬ್ಬಿಗೆ ಕಲ್ಲು ಹಾಕಿ ಗಲಗಲಿಸಿದಂಥಾ ಸ್ಥಿತಿಯೇ. ಇಂಥಾ ಹುಚ್ಚು ಸಂತಾನದ ಆರಂಭಿಕ ಕುಡಿಯಂತಿರುವಾತ ಕೀರ್ತಿ ಶಂಕರಘಟ್ಟ ಅಲಿಯಾಸ್ ಕಿರಿಕ್ ಕೀರ್ತಿ. ಆರಂಭದಲ್ಲಿ ಈತ ಕನ್ನಡ ಪರವಾಗೆಂಬಂತೆ ಮಾತಾಡಲಾರಂಭಿಸಿದಾಗ ಒಂದು ಹಂತದಲ್ಲದು ಹಿತವೆನ್ನಿಸಿದ್ದು ಹೌದು. ಆದರೆ, ಆ ನಂತರದಲ್ಲಿ ಈತ ಪ್ರದರ್ಶಿಸುತ್ತಾ ಬಂದ ಪಟ್ಟುಗಳು ಒಂದೆರಡಲ್ಲ. ಥರ ಥರದ ಅವತಾರವೆತ್ತಿ, ಪತ್ರಕರ್ತನೆಂಬ ಲೇಬಲ್ಲು ಅಂ ಟಿಸಿಕೊಳ್ಳುವಲ್ಲಿಯೂ ವಿಫಲನಾದ ಕಿರಿಕ್ ಕೀರ್ತಿಯೀಗ ಧರ್ಮ ರಕ್ಷಕರನ ಅವತಾರವೆತ್ತಿಬಿಟ್ಟಿದ್ದಾನೆ!
ಇಂಥಾದ್ದೊಂದು ಅವತಾರ ಶುರುವಿಡುತ್ತಲೇ ಕಿರಿಕ್ ಕೀರ್ತಿಗೆ ಬಾಯಿ ಬೇಧಿ ಶುರುವಾಗಿದೆ. ಸದ್ಯದ ಮಟ್ಟಿಗೆ ಧರ್ಮಸ್ಥಳ ಪರಿಸರದಲ್ಲಿ ನಡೆದಿರೋ ಅಸಹಜ ಸಾವುಗಳ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ಆರಂಭವಾಗಿದೆ. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ನಿಗಿನಿಗಿಸುತ್ತಾ ಬಂದಿದ್ದ ಆಕ್ರೋಶವೀಗ ಅಕ್ಷರಶಃ ಧಗಧಗಿಸಲಾರಂಭಿಸಿದೆ. ಎಲ್ಲ ಬೆಳವಣಿಗೆಗಳನ್ನು ಕಂಡ ಸರ್ಕಾರ ಈ ಪ್ರಕರಣದ ಸತ್ಯಾಸತ್ಯತೆ ಹುಡುಕುವ ಹೊಣೆಯನ್ನು ಎಸ್‌ಐಟಿಗೆ ವಹಿಸಿದೆ. ಭೀಮ ಎಂಬಾತನ ನಿರ್ದೇಶನದಂತೆ ಹೂತ ಶವಗಳ ಅಸ್ಥಿಪಂಜರಕ್ಕಾಗಿನ ಹುಡುಕಾಟ ಮುಂದುವರೆದಿದೆ. ಹೀಗೆ ಕಾನೂನು ಚೌಕಟ್ಟಿನಲ್ಲಿ ತನಿಖೆ ಚಾಲ್ತಿಯಲ್ಲಿರುವಾಗಲೇ ಕೀರ್ತಿ ಏಕಾಏಕಿ ಅಖಾಡಕ್ಕಿಳಿದು ಬಿಟ್ಟಿದ್ದಾನೆ.
ಇದೀಗ ಆ ಆಸಾಮಿ ಕೆಲ ಡಿಬೆಟ್ಟುಗಳಲ್ಲಿ ಗಂಟಲು ಹರಿದುಕೊಳ್ಳುತ್ತಿರುವ ರೀತಿ, ಆತನ ವಿಚಾರಧಾರೆಗಳನ್ನು ಗಮನಿಸಿದ ಯಾರಿಗೇ ಆದರೂ ಆಕ್ರೋಶ ಹುಟ್ಟದಿರಲು ಸಾಧ್ಯವಿಲ್ಲ. ಗಮನೀಯ ಅಂಶವೆಂದರೆ, ಮಂಜುನಾಥನ ಆರಾಧಕರು, ಧರ್ಮಸ್ಥಳಕ್ಕೆ ನೇಮ ನಿಷ್ಠ್ಠೆಗಳಿಂದ ನಡೆದುಕೊಳ್ಳುವವರೂ ಕೂಡಾ ಎಸ್‌ಐಟಿ ಯನಿಖೆಯಿಂದ ಹೊರಬರುವ ಸತ್ಯದತ್ತ ಕಣ್ಣಿಟ್ಟು ಕೂತಿದ್ದಾರೆ. ಅಲ್ಲಿ ನಡೆದಿರೋ ಅನಾಚಾರಗಳಿಗೆ ತಕ್ಕ ಶಾಸ್ತಿಯಾಗಲೆಂಬ ಮನಃಸ್ಥಿತಿ ಹೊಂದಿದ್ದಾರೆ. ಆದರೆ, ಈ ಅಯೋಗ್ಯ ಕೀರ್ತಿಗೆ ಸೌಜನ್ಯ ಪರವಾಗಿ ಮೊಳಗುತ್ತಿರುವ ಕೂಗು ಧರ್ಮವಿರೋಧಿಯಾಗಿ ಕಾಣಿಸುತ್ತಿದೆ. ಎದೆಯೆತ್ತರ ಬೆಳೆದ ಕೂಸನ್ನು ಕಳೆದುಕೊಂಡ ಒಡಲ ಸಂಕಟ ಖಾವಂದರನ ವಿರುದ್ಧದ ಮಸಲತ್ತಿನಂತೆ ಕಾಣಿಸುತ್ತಿದೆ. ಇಂಥಾ ಭ್ರಮೆಯಲ್ಲಿಯೇ ಈ ಅಯೋಗ್ಯ ಬಾಯಿಗೆ ಬಂದಂತೆ ಒದರಾಡಲಾರಂಭಿಸಿದ್ದಾನೆ.
ಈತ ಬಾಯ್ಬಿಟ್ಟಾಗೆಲ್ಲ ಅಸಂಬದ್ಧ ಮಾತುಗಳನ್ನೇ ಆಡೋದು ಇತ್ತೀಚಿನ ಬೆಳವಣಿಗೆ. ಅದರಲ್ಲಿಯೂ ಯಾರನ್ನೋ ಓಲೈಸಿಕೊಳ್ಳುವ ಭರದಲ್ಲಿ ಸೌಜನ್ಯಾ ಮೇಲೆ ಅತ್ಯಾಚಾರವಾಗಿದ್ದೇ ಸುಳ್ಳು ಎಂಬರ್ಥದಲ್ಲಿ ಈ ಶ್ವಾನ ಊಳಿಡುತ್ತಿದೆ. ಪವಿತ್ರವಾಗಿ ಸತ್ತ ಸೌಜನ್ಯಾಳ ಆತ್ಮಕ್ಕೆ ಆಕೆಯ ತಾಯಿಯೇ ಹಿಂಸೆ ಕೊಡುತ್ತಿದ್ದಾರೆ ಎಂಬರ್ಥದಲ್ಲಿ ಮಾತಾಡಿದ್ದಾನೆ. ಈ ಹುಡುಗಿ ಧರ್ಮಸ್ಥಳದ ಕಾಡಿನಲ್ಲಿ ನಿರ್ಜೀವವಾಗಿ ಸಿಕ್ಕ ಫೋಟೋಗಳು ಮನುಷ್ಯತ್ವ ಇರುವವರನ್ನು ಕಂಗಾಲು ಮಾಡಿ ಹಾಕುತ್ತವೆ. ಅದನ್ನು ಮಾಡಿದವರು ಅದೆಂಥಾ ಪ್ರಭಾವಶಾಲಿಗಳೇ ಆಗಿದ್ದರೂ ಆ ಹಲಾಲುಕೋರರ ಅಂಡಿಗೊದ್ದು ಜೈಲಿಗೆ ಗದುಮಬೇಕೆಂಬ ಆಕ್ರೋಶ ಹುಟ್ಟುತ್ತದೆ. ಅಂಥಾ ಬರ್ಭರ ಸಾವೊಂದು ಈ ಲಫಂಗನಿಗೆ ಪವಿತ್ರ ಸಾವಿನಂತೆ ಕಾಣುತ್ತದೆಂದರೆ ಇವನನ್ನು ಮನುಷ್ಯನೆನ್ನಲು ಸಾಧ್ಯವಾ?
ಇನ್ನೂ ಮುಂದುವರೆದ ಈ ಕಿರಿಕ್ಕು ಹೆತ್ತಮ್ಮನಿಗಿಂತಲೂ ದೇವರೇ ಮುಖ್ಯ ಎಂಬರ್ಥದಲ್ಲಿಯೂ ಮಾತಾಡಿದ್ದಾನೆ. ಬಹುಶಃ ಈತನಿಗೆ ಅಂಥಾ ಮನಃಸ್ಥಿತಿ ಇಲ್ಲದೇ ಹೋಗಿದ್ದರೆ ಭೀಕರವಾಗಿ ಅತ್ಯಾಚಾರಕ್ಕೀಡಾದ ಸೌಜನ್ಯಾಳದ್ದು ಪವಿತ್ರ ಸಾವೆಂದು ಕಾಣಿಸುತ್ತಲೇ ಇರಲಿಲ್ಲ. ಇನ್ನು ಕಿರಿಕ್ ಕೀರ್ತಿಯ ಇಂಥಾ ಮಾತುಗಳಿಂದ ರೊಚ್ಚಿಗೆಲ್ಲ ಕೆಲ ಮಂದಿ ಕೀರ್ತಿಯ ಮೂಲಕ್ಕೆ ಕೈ ಹಾಕಿದ್ದಾರೆ. ಆತನ ಖಾಸಗಿ ಬದುಕಿನ ಬಗ್ಗೆ ಒಂದಷ್ಟು ವಿಚಾರಗಳನ್ನು ತೆರೆದಿಡುತ್ತಿದ್ದಾರೆ. ಆದರೆ, ಕಿರಿಕ್ ಕೀರ್ತಿಯ ಖಾಸಗಿ ಬದುಕಿನ ಬಗ್ಗೆ ನಮಗ್ಯಾವ ಆಸಕ್ತಿಯೂ ಇಲ್ಲ. ಆದರೆ, ಸೌಜನ್ಯಾ ಹೋರಾದ ಹಿಂದಿರೋದು ಯಾವ ಹೆಣ್ಣುಮಗಳೂ ಇಂಥಾ ಸಾವಿಗೀಡಾಗಬಾರದೆಂಬ ಕಕ್ಕುಲಾತಿಯಷ್ಟೆ. ಹಾಗೆ ಧ್ವನಿಯೆತ್ತಿದರೆ ಅದ್ಯಾರದ್ದೋ ಘನತೆಗೆ ಧಕ್ಕೆಯಾಗುತ್ತದೆಂದಾದರೆ, ಸೌಜನ್ಯಾಳನ್ನು ಕಳೆದುಕೊಂಡ ಕರುಳ ಸಂಕಟದ ಮುಂದೆ ಅಂಥಾ ಘನತೆ ಗೌರವಗಳ ಮಾತೂ ಕೂಡಾ ಅಮಾನುಷವೇ!
ಈವತ್ತಿಗೂ ಸಂಕಟ ಸುತ್ತಿಕೊಂಡಾಗ ಧರ್ಮಸ್ಥಳದ ಮಂಜುನಾಥನ ಮೊರೆ ಹೋಗುವ ಲಕ್ಷಾಂತರ ಮಂದಿಯಿದ್ದಾರೆ. ಆ ಗುಂಪಿನಲ್ಲಿಯೇ ಸೌಜನ್ಯ ಸಾವಿಗೆ ನ್ಯಾಯ ಸಿಕ್ಕಬೇಕೆಂಬ ಮಾನವೀಯ ಆಶಯವಿದೆ. ಈ ವಿಚಾರ ಕಿರಿಕ್ ಕೀರ್ತಿ ಎಂಬೋ ಅವಿವೇಕಿಯ ಅರಿವಿಗೆ ಬರುತ್ತಿಲ್ಲವೇನೋ. ಈಗಂತೂ ಕೀರ್ತಿ ಧರ್ಮ ಸಂರಕ್ಷಕನಂತೆ ಪೋಸು ಕೊಡುತ್ತಿದ್ದಾನೆ. ಸೌಜನ್ಯಾ ಪರ ಹೋರಾಟದಿಂದ ಶ್ರೀ ಕ್ಷೇತ್ರದ ಘನತೆ ಮುಕ್ಕಾಗುತ್ತದೆಂಬಂಥಾ ಜೋಕು ಹರಿಯ ಬಿಡುತ್ತಿದ್ದಾನೆ. ಈವತ್ತಿಗೆ ಏನೇನೆಲ್ಲ ನಡೆಯುತ್ತಿದೆಯೋ ಅದೆಲ್ಲವೂ ಮಂಜುನಾಥ್ ಸ್ವಾಮಿಯ ಇಚ್ಛೆಯೇ ಆಗಿರಬಹುದಲ್ಲಾ? ಅಷ್ಟಕ್ಕೂ ಈ ಕೀರ್ತಿ ಮಂಜುನಾಥನಿಗಂಟಿದ ಕಳಂಕಕ್ಕೆ ಅಡ್ಡ ನಿಲ್ಲಬಲ್ಲ ಪುಡಾಂಗು ಅಂದುಕೊಂಡಿರೋದೇ ಆ ಶಕ್ತಿಗೆ ಮಾಡುವ ನಿಜವಾದ ಅವಮಾನ. ನಿಖರವಾಗಿ ಹೇಳಬೇಕೆಂದರೆ, ಯಾವುದೋ ಶಕ್ತಿ ಕಣ್ತೆರೆದಿದೆ. ಆ ಪ್ರಭೆಯಲ್ಲಿ ಅಸಲೀ ಸತ್ಯ ಇಷ್ಟರಲ್ಲೇ ಜಾಹೀರಾಗಲಿದೆ. ಅದನ್ನು ತಡೆಯುತ್ತೇವಂದುಕೊಂಡರೆ ಅದು ಕೀರ್ತಿಯಂಥಾ ಕುನ್ನಿಯ ಭ್ರಮೆಯಷ್ಟೆ. ಯಾಕೆಂದರೆ, ಒಂದು ಪವಿತ್ರ ಸ್ಥಳದಲ್ಲಿ ಅನಾಚಾರವಾದಾಗ ಅದಕ್ಕೆ ಕಾರಣರಾದವರ ಅಂಡಿಗೊದ್ದು ಜೈಲಿಗಟ್ಟೋದೇ ನಿಜವಾದ ದೈವೀಕ ನಡೆ. ಅದುವೇ ನೈಜ ಧರ್ಮ ಸಂರಕ್ಷಣೆ!