ಅರ್ಜುನ್ ರೆಡ್ಡಿ ಅಂತೊಂದು ಸಿನಿಮಾ ಮೂಲಕ ದೇಶಾದ್ಯಂತ ಪ್ರಸಿದ್ಧಿ ಪಡೆದಿದ್ದಾತ ವಿಜಯ್ ದೇವರಕೊಂಡ. ವಿಕ್ಷಿಪ್ತವಾದ, ಈ ತಲೆಮಾರನ್ನು ಆವರಿಸಿಕೊಳ್ಳುವಂಥಾ ಪಾತ್ರದ ಮೂಲಕ ಈತ ಮಿಂಚಿದ ಪರಿ ಕಂಡು ಬಾಲಿವುಡ್ ನಟರೇ ಅವಾಕ್ಕಾಗಿಕದ್ದರು. ಆ ಸಿನಿಮಾ ಬಾಲಿವುಡ್ಡಿಗೂ ರೀಮೇಕಾಗಿತ್ತು. ಹಾಗಂತ ವಿಜಯ್ ದೇವರಕೊಂಡನಿಗೆ ಅರ್ಜುನ್ ರೆಡ್ಡಿಯ ಮೂಲಕ ಏಕಾಏಕಿ ಗೆಲುವು ಒಲಿದಿರಲಿಲ್ಲ. ಅದಕ್ಕೂ ಮುನ್ನ ವರ್ಷಗಟ್ಟಲೆ ವಿಜಯ್ ಸೈಕಲ್ಲು ಹೊಡೆದಿದ್ದ. ಒಂದಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರೂ ಕೂಡಾ ಗೆಲುವೆಂಬುದು ಒಲಿಯದೆ ಸತಾಯಿಸಿತ್ತು. ದುರಂತವೆಂದರೆ, ಅರ್ಜುನ್ ರೆಡ್ಡಿ ಮೂಲಕ ಲಭಿಸಿದ್ದ ಅಗಾಧ ಯಶಸ್ಸಿನ ಬೆನ್ನಲ್ಲಿಯೇ ಮತ್ತೆ ದೇವರಕೊಂಡನ ವೃತ್ತಿ ಬದುಕಿಗೆ ಹಿನ್ನಡೆಯ ಕಾರ್ಮೋಡ ಕವಿದುಕೊಂಡಿದೆ. ಇದೀಗ ಬಿಡುಗಡೆಗೊಂಡಿರೋ ಕಿಂಗ್ಡಮ್ ಚಿತ್ರದ ಮೂಲಕ ಅದು ಮತ್ತೆ ಮುಂದುವರೆದಿದೆ!
ಜೆರ್ಸಿ ಖ್ಯಾತಿಯ ಗೌತಮ್ ತಿನ್ನನೂರಿ ಕಿಂಗ್ಡಮ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಆರಂಭದಿಂದಲೂ ಸಹ ಈ ಸಿನಿಮಾ ಸಾಕಷ್ಟು ಸುದ್ದುಇ ಮಾಡುತ್ತಲೇ ಬಂದಿತ್ತು. ವಿಜಯ್ ದೇವರಕೊಂಡ ಕೂಡಾ ಬಲು ಆಸ್ಥೆಯಿಂದಲೇ ಈ ಸಿನಿಮಾದ ಭಾಗವಾಗಿದ್ದ. ಕಿಂಗ್ಡಮ್ ಈ ಪರಿಯ ಚರ್ಚೆ ಹುಟ್ಟು ಹಾಕಿರೋದಕ್ಕೂ ಕಾರಣವಿತ್ತು. ಸತತ ಸೋಲು ಕಾಣುತ್ತಾ ಬಂದಿರುವ ವಿಜಯ್ ಪಾಲಿಗೆ ಈ ಚಿತ್ರ ಮಾಡು ಇಲ್ಲವೇ ಮಡಿ ಎಂಬಂತಿತ್ತು. ಅದೆಲ್ಲದರ ಫಲವಾಗಿ ಕಿಂಗ್ಡಮ್ ಅದ್ದೂರಿಯಾಗಿ ಮೂಡಿ ಬಂದಿದೆ. ಮೊದಲ ದಿನ ಭರ್ಜರಿ ಕಲೆಕ್ಷನ್ನನ ನೂ ಮಾಡಿದೆ. ಆದರೆ, ನಿರೀಕ್ಷೆಗೆ ತಕಮ್ಕುದಾಗಿ ಮೂಡಿ ಬಂದಿಲ್ಲ ಎಂಬಂಥಾ ಅಪಸ್ವರವೂ ಕೇಳಿ ಬರುತ್ತಿದೆ.
ಈ ಚಿತ್ರ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿದೆ. ಆದರೆ ಕಥೆಯಲ್ಲಿನ ಬಿಗು ಕಳೆದುಕೊಂಡು ಖುದ್ದು ವಿಜಯ್ ದೇವರಕೊಂಡನ ಅಭಿಮಾನಿಗಳನ್ನೇ ತೃಪ್ತಗೊಳಿಸಿಲ್ಲ. ಇನ್ನು ಸಿನಿಮಾ ತಂಡ, ನಿರ್ಮಾಪಕರು ಅದೇನೇ ಸರ್ಕಸ್ಸು ನಡೆಸಿದರೂ ಕೂಡಾ ನೆಗೆಟಿವ್ ವಿಮರ್ಶೆಗಳು ಹಬ್ಬಿಕೊಳ್ಳುತ್ತಿವೆ. ಅಂತೂ ಕಿಂಗ್ಡಮ್ ಕೂಡಾ ನಿರೀಕ್ಷೆಯಂತೆ ಮೂಡಿ ಬಂದಿಲ್ಲ ಎಂಬುದು ನಿಚ್ಚಳವಾಗಿದೆ. ಅಲ್ಲಿಗೆ ಲೈಗರ್ ಮೂಲಕ ಸುತ್ತಿಕೊಂಡಿದ್ದ ಸೋಲಿನ ಪರ್ವ ದೇವರಕೊಂಡನನ್ನು ಮತ್ತಷ್ಟು ಬಿಗಿಯಾಗಿ ಅಪ್ಪಿಕೊಂಡಿದೆ. ಒಂದು ಮಟ್ಟಕ್ಕೆ ಆತನ ವೃತ್ತಿ ಬದುಕೀಗ ಸೋಲಿನ ಪ್ರಪಾತದ ಅಂಚಿಗೆ ಬಂದು ನಿಂತಿದೆ. ಮುಂದಿನ ಸಿನಿಮಾದಲ್ಲಿಯಾದರೂ ಗೆಲುವು ದಕ್ಕದಿದ್ದರೆ ದೇವರಕೊಂಡನ ವೃತ್ತಿ ಬದುಕು ಸಂಪೂರ್ಣವಾಗಿ ಮಾಸಲಾಗೋದು ಗ್ಯಾರಂಟಿ!