Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಬಣ್ಣದ ಹೆಜ್ಜೆ»Om shivam director alwin: ಕಂಗೆಟ್ಟು ನಿಂತಾಗಲೂ ಬೆಂಬಿಡದ ಸಿನಿಮಾ ಮಾಯೆ!
    ಬಣ್ಣದ ಹೆಜ್ಜೆ

    Om shivam director alwin: ಕಂಗೆಟ್ಟು ನಿಂತಾಗಲೂ ಬೆಂಬಿಡದ ಸಿನಿಮಾ ಮಾಯೆ!

    By Santhosh Bagilagadde02/08/2025
    Facebook Twitter Telegram Email WhatsApp
    315a2528 478d 49ad b6d4 5c12fb228a5e 1
    Share
    Facebook Twitter LinkedIn WhatsApp Email Telegram

    ಕ್ಷೇತ್ರ ಯಾವುದೇ ಆಗಿರಲಿ; ಅಡಿಗಡಿಗೆ ಆಘಾತವಾದಾಗಲೂ ಸಾವರಿಸಿಕೊಂಡು ಮುಂದುವರೆಯದಿದ್ದರೆ ಗೆಲುವು ದಕ್ಕುವುದಿಲ್ಲ. ಹಾಗೊಂದು ವೇಳೆ ವಾಮ ಮಾರ್ಗದಲ್ಲಿ ನುಸುಳಿ ದಕ್ಕಿಸಿಕೊಂಡರೂ ಅದರ ಆಯಸ್ಸು ಅಲ್ಪಕಾಲಿಕವಷ್ಟೆ. ಅಷ್ಟಕ್ಕೂ ಗೆಲುವೆಂಬುದು ಲೆಕ್ಕಕ್ಕಿಟ್ಟುಕೊಳ್ಳೋದು ಏಟು ಬಿದ್ದ ಮೇಲೂ ಎದ್ದು ನಿಂತು ಅವುಡುಗಚ್ಚಿ ಮುನ್ನಡೆಯೋರನ್ನಷ್ಟೆ. ಹುಡುಕಲು ನಿಂತರೆ ಸಿನಿಮಾ ರಂಗದಲ್ಲಿ ಹಾಗೆ ಏಳುಬೀಳಿನ ಹಾದಿಯಲ್ಲಿ ಮುಂದುವರೆದು ಕನಸು ನನಸಾಗಿಸಿಕೊಂಡ, ಗೆಲುವು ಕಂಡ ಸಾಕಷ್ಟು ಮಂದಿ ಕಾಣ ಸಿಗುತ್ತಾರೆ. ಇದೇ ಸೆಪ್ಟೆಂಬರ್ ೫ರಂದು ಬಿಡುಗಡೆಗೊಳ್ಳಲಿರುವ ಓಂ ಶಿವಂ ಚಿತ್ರದ ನಿರ್ದೇಶಕ ಅಲ್ವಿನ್ ಕೂಡಾ ಅದೇ ಸಾಲಿನಲ್ಲಿ ಸೇರಬಹುದಾದ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಹಲವಾರು ನಿರಾಸೆಗಳನ್ನು ನುಂಗಿಕೊಂಡೇ ಅಲ್ವಿನ್ ಒಂದು ಚೌಕಟ್ಟಿನಲ್ಲಿ ಚೆಂದದ ಚಿತ್ರವೊಂದನ್ನು ನಿರ್ದೇಶನ ಮಾಡಿರುವ ತೃಪ್ತ ಭಾವವನ್ನು ತನ್ನದಾಗಿಸಿಕೊಂಡಿದ್ದಾರೆ.

    eb818355 404d 4b4e 8e83 4db96a2aae43ಹಾಡೊಂದರ ಮೂಲಕ ಸದ್ದು ಮಾಡಿದ್ದ ಓಂ ಶಿವಂ ಚಿತ್ರ ಯಾವ ಗದ್ದಲವೂ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡಿತ್ತು. ಅದೇ ಹಾದಿಯಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಹಂತ ಹಂತವಾಗಿ ಪ್ರೇಕ್ಷಕರ ಮುಂದೆ ಒಂದಷ್ಟು ಬೆರಗಿನ ಅಂಶಗಳನ್ನು ಹರವಲು ಅಣಿಗೊಂಡಿದೆ. ಅಂದಹಾಗೆ, ನಿರ್ದೇಶಕ ಅಲ್ವಿನ್ ಕನ್ನಡ ಸಿನಿಮಾ ರಂಗಕ್ಕೆ ಹೊಸಬರೇನಲ್ಲ. ಆದರೆ, ಹೊಸಬರ ತಂಡ ಕಟ್ಟಿಕೊಂಡು ಅವರು ಈ ಸಿನಿಮಾವನ್ನು ರೂಪಿಸಿದ್ದಾರೆ. ಭಾರ್ಗವ್ ಕೃಷ್ಣ ಓಂ ಶಿವಂ ಮೂಲಕವೇ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕೃಷ್ಣ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹೊಸ ಹುಡುಗಿ ವಿರಾನಿಕಾ ಶೆಟ್ಟಿ ನಾಯಕಿಯಾಗಿ ಜೊತೆಯಾಗಿದ್ದಾರೆ.

    00712bd3 c35b 468c 8adc ce88794d3ffd ಹೀಗೆ ಒಂದಷ್ಟು ಸಕಾರಾತ್ಮಕ ವಾತಾವರಣದಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ಈ ಸಿನಿಮಾ ಅಲ್ವಿನ್ ಅವರ ಜೀವಮಾನದ ಕನಸು. ಇದರ ಗೆಲುವಿನಿಂದಲೇ ಈ ಹಾದಿಯಗುಂಟ ಕಂಡುಂಡ ಒಂದಷ್ಟು ನೋವು, ನಿರಾಸೆಗಳ ಗಾಯ ಮಾಯುವ ಗಾಢ ನಿರೀಕ್ಷೆ ಅಲ್ವಿನ್‌ಗಿದ್ದಂತಿದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ರಾಗಿಗುಡ್ಡದವರಾಗ ಅಲ್ವಿನ್ ಎಳವೆಯಿಂದಲೇ ರಂಗಭೂಮಿಯ ನಂಟು ಹೊಂದಿದ್ದವರು. ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಯಾಗಿದ್ದ ಅವರು ಮಧುಸೂಧನ್ ಘಾಟ್ ಮತ್ತು ಲವ ಜಿಯಾರ್ ಅವರಿಂದ ರಂಗ ತರಬೇತಿ ಪಡೆದುಕೊಂಡಿದ್ದರು. ಕಾಲೇಜು ದಿನಗಳಲ್ಲಿಯೇ ನಾಟಕ ರಚಿಸಿ, ನಿರ್ದೇಶನ ಮಾಡಿ ನಟಿಸುವ ಮೂಲಕ ಗಮನ ಸೆಳೆದುಕೊಂಡಿದ್ದವರು ಅಲ್ವಿನ್.

    90a90249 f0cf 47a9 af5d 52f15d8c6175ಆ ನಂತರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಡೆಯಿಂದಲೂ ಸೇರಿದಂತೆ ಆರು ನೂರಕ್ಕೂ ಹೆಚ್ಚಿನ ಬೀದಿ ನಾಟಕಗಳಲ್ಲಿ ಅಲ್ವಿನ್ ನಟಿಸಿದ್ದರು. ಶಾಲಾ ಕಾಲೇಜು ದಿನಗಳಲ್ಲಿಯೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ಈತ, ಪದವಿ ಪಡೆದುಕೊಂಡಾದ ನಂತರ ಒಂದೊಳ್ಳೆ ವೃತ್ತಿಯಲ್ಲಿ ಮುಂದುವರೆಯಬಹುದಾದ ವಿಪುಲ ಅವಕಾಶಗಳಿದ್ದವು. ಆದರೆ, ಆ ಕ್ಷಣದಲ್ಲಿ ಕೈಹಿಡಿದು ಸೆಳೆದುಕೊಂಡಿದ್ದು ಸಿನಿಮಾ ಕನಸು. ಅದರ ಸೆಳವಿಗೆ ಸಿಕ್ಕ ಅಲ್ವಿನ್ ಬ್ಯಾಗೇರಿಸಿಕೊಂಡು ಊರು ಬಿಟ್ಟು ಸೀದಾ ಗಾಂಧಿನಗರದ ಗಲ್ಲಿಗೆ ಬಂದು ನಿಂತಾಗಲೇ ಬದುಕಿನ ಮತ್ತೊಂದು ಮಗ್ಗುಲಿನ ವಾಸ್ತವದರ್ಶನವಾಗಲಾರಂಭಿಸಿತ್ತು. ಅವರ ಒಂದಷ್ಟು ರಾತ್ರಿಗಳು ಪಾರ್ಕುಗಳಲ್ಲಿ ಕಳೆದಿದ್ದವು. ಅದೆಷ್ಟೋ ಮುಂಜಾವುಗಳು ಸಾರ್ವಜನಿಕ ಶೌಚಾಲಯಗಳಲ್ಲಿ ತೆರೆದುಕೊಂಡಿದ್ದವು. ಮತ್ತೊಂದಷ್ಟು ವರ್ಷಗಳು ಯಾರದ್ದೋ ರೂಮುಗಳಲ್ಲಿ ಮುದುರಿಕೊಂಡಿದ್ದವು.

    8691f3a0 0697 4f9b 9a59 c952082a6417 ಇಷ್ಟೆಲ್ಲ ಆಗುವ ಹೊತ್ತಿಗೆ ಅಲ್ವಿನ್ ಒಂದಷ್ಟು ಸೀರಿಯಲ್ಲಿಗಳಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ, ಸಾಕಷ್ಟು ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಾ ಪಳಗಿಕೊಂಡಿದ್ದರು. ಆ ಹಂತದಲ್ಲಿಯೇ ನಿರ್ದೇಶನವೇ ತನ್ನ ಭವಿಷ್ಯ ಎಂಬ ತೀರ್ಮಾನಕ್ಕೆ ಬಂದಿದ್ದ ಅಲ್ವಿನ್ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಅದರಲ್ಲೊಂದು ಬಿಡುಗಡೆಗೊಂಡರೆ, ಮತ್ತೊಂದು ಎಲ್ಲ ಚೆಂದಗಿದ್ದರೂ ಬಿಡುಗಡೆ ಭಾಗ್ಯ ಸಿಗದ ಆಘಾತ ಕಾಡಿತ್ತು. ಈಗಲೂ ಬುಡಕಟ್ಟು ಸಮುದಾಯದ ಹೆಣ್ಣು ಜೀವಗಳನ್ನು ಕಾಡುತ್ತಿರುವ ಅನಿಷ್ಠ ಪದ್ಧತಿಯೊಂದರ ಸುತ್ತಾ ಮತ್ತೊಂದು ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದರು. ಸಾಮಾನ್ಯವಾಗಿ ಓರ್ವ ನಿರ್ದೇಶಕನಾಗಿ ಸಿನಿಮಾಗಳಿಗೆ ಹಿನ್ನಡೆ ಉಂಟಾದರೆ ಅದರ ಸುತ್ತಾ ನಾನಾ ರೂಮರುಗಳೇಳುತ್ತವೆ. ವೃತ್ತಿ ಬದುಕಿಗೆ ಹೊಡೆತವೂ ಬೀಳುತ್ತದೆ. ಅಂಥಾ ಎಲ್ಲ ಆಘಾತ, ಅವಮಾನಗಳನ್ನು ದಾಟಿಕೊಂಡ ಅಲ್ವಿನ್ ಪಾಲಿಗೆ ವರವಾಗಿ ಸಿಕ್ಕ ಚಿತ್ರ ಓಂ ಶಿವಂ!

    fd9b1682 85a8 4a42 893b e6b59bcc3f70ಕೆ.ಎನ್ ಕೃಷ್ಣ ಅವರಿಗೆ ಅಲ್ವಿನ್ ಕಥೆ ಹೇಳಿದಾಗಲೇ ಅವರು ಖುಷಿಗೊಂಡಿದ್ದರಂತೆ. ಆ ಹಂತದಲ್ಲಿಯೇ ಕೃಷ್ಣರ ಪುತ್ರ ಭಾರ್ಗವ್ ಈ ಕಥೆಯ ನಾಯಕನ ಪಾತ್ರಕ್ಕೆ ಒಗ್ಗುತ್ತಾರೆಂದು ಅಲ್ವಿನ್‌ಗೆ ಅನ್ನಿಸಿತ್ತಂತೆ. ಅದಾಗಲೇ ಸರ್ವ ತಯಾರಿಗಳನ್ನು ಮುಗಿಸಿಕೊಂಡು ಒಂದೊಳ್ಳೆ ಅವಕಾಶಕ್ಕಾಗಿ ಕಾದಿದ್ದ ಭಾರ್ಗವ್‌ಗೂ ಈ ಕಥೆ ಇಷ್ಟವಾದದ್ದೇ ಓಂ ಶಿವಂಗೆ ವಿದ್ಯುಕ್ತ ಚಾಲನೆ ಸಿಕ್ಕಿತ್ತು. ಆರಂಭದಲ್ಲಿಯೇ ಚೌಕಟ್ಟು ಹಾಕಿಕೊಂಡು, ಆ ಪರಿಧಿಯಲ್ಲಿ ಹೊಸತನದ ಸಿನಿಮಾವೊಂದನ್ನು ಕಟ್ಟಿ ಕೊಟ್ಟಿರುವ ತೃಪ್ತಿ ಅಲ್ವಿನ್ ಅವರಲ್ಲಿದೆ. ಗಾಢ ಪ್ರೇಮದ ಸುತ್ತ ಹಬ್ಬಿಕೊಂಡಿರುವ ಡ್ರಗ್ಸ್ ಜಾಲ ಮುಂತಾದ ವಾಸ್ತವಿಕ ಅಂಶಗಳನ್ನು ಹೊಂದಿರುವ ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸಲಿದೆ ಎಂಬ ತುಂಬು ಭರವಸೆಯೂ ಅಲ್ವಿನ್‌ಗಿದೆ.

    8702106e 1aee 4531 9721 f96c1221310eಇದೇ ವರ ಮಹಾಲಕ್ಷ್ಮಿ ಹಬ್ಬದ ದಿನದಂದು ಈ ಸಿನಿಮಾದ ಹಾಡೊಂದು ಬಿಡುಗಡೆಯಾಗಲಿದೆ. ಇದೇ ತಿಂಗಳ ಇಪ್ಪತೈದರಂದು ಜಬರ್ದಸ್ತಾದ ಟ್ರೈಲರ್ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದೆ. ಆ ಮೂಲಕ ಒಟ್ಟಾರೆ ಚಿತ್ರದ ಆಂತರ್ಯದ ಚಿತ್ರಣ ಪ್ರೇಕ್ಷಕರನ್ನು ದಾಟಿಕೊಳ್ಳಲಿದೆ. ಇದು ಹೊಸಬರ ಚಿತ್ರ. ಇದರ ಹಿಂದೆ ಅಪ್ಪಟ ಸಿನಿಮಾ ವ್ಯಾಮೋಹಿಗಳ ಪರಿಶ್ರಮವಿದೆ. ಖುದ್ದು ನಿರ್ದೇಶಕ ಅಲ್ವಿನ್ ಇದುವರೆಗೂ ಸಾಕಷ್ಟು ಎಡರು ತೊಡರುಗಳನ್ನು ದಾಟಿ ಬಂದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಒಂದು ಹಂತದಲ್ಲಿ ಸಿನಿಮಾ ರಂಗದ ಬಾಗಿಲು ಮುಚ್ಚಿದ ಸ್ಥಿತಿ ಎದುರಾದಾಗ, ಉಪನ್ಯಾಸಕರಾಗಿಯಾದರೂ ಬದುಕೋ ಅವಕಾಶ ಅವರ ಮುಂದಿತ್ತು. ಆದರೆ, ಅದರತ್ತ ಓಗೊಟ್ಟು ಸೇಫ್ ಝೋನಿನತ್ತ ವಾಲದಂತೆ ನೋಡಿಕೊಂಡಿದ್ದದ್ದು ಅವರೊಳಗೆ ಉತ್ಕಟವಾಗಿದ್ದ ಸಿನಿಮಾ ವ್ಯಾಮೋಹ. ಅಂಥಾ ದೃಢವಾದ ಹೆಜ್ಜೆಗಳ ಪ್ರತಿಫಲದಂತಿರುವ ಓಂ ಶಿವಂ ಚಿತ್ರ ತೆರೆಗಾಣಲು ತಿಂಗಳಷ್ಟೇ ಬಾಕಿ ಉಳಿದುಕೊಂಡಿದೆ.

    #alwin apoorva bannadahejje bhargavkrishna cinishodha cockroachsudhi directoralwin kfi knkrishna lifestory Omshivam omshivammovie sandalwood vardhan viranikashetty yashshetty
    Share. Facebook Twitter LinkedIn WhatsApp Telegram Email
    Previous Articlevijay devarakonda kingdom: ರಶ್ಮಿಕಾ ಸಖನ ಮುಂದಿನ ಹಾದಿ ದುರ್ಗಮ!
    Next Article chandrashekhar siddi: ಕಾಡು ಹುಡುಗನ ಬದುಕಲ್ಲಿ ಘಟಿಸಿದ್ದು ಎಂಥಾ ದುರಂತ?
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    09/12/2025

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    08/12/2025

    Andhra King Taluka #1 Best Movie : ಬೆದರಿದ್ದ ಆಂಧ್ರ ಕಿಂಗ್‌ಗೆ `ಅಖಂಡ’ ಅಭಯ!

    06/12/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (9)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (80)
    • ಸೌತ್ ಜೋನ್ (135)
    • ಸ್ಪಾಟ್ ಲೈಟ್ (216)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಬಾಲಿವುಡ್ 12/12/2025

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    ಕೂಲಿ ಚಿತ್ರದ ಸೋಲಿನ ನಂತರದಲ್ಲಿ ಯುವ ನಿರ್ದೇಶಕ (lokesh kanagaraj) ಲೋಕೇಶ್ ಕನಗರಾಜ್ ಪಾಲಿಗೆ ಮುಂದಿನ ಹೆಜ್ಜೆಗಳು ತುಸು ತ್ರಾಸದಾಯಕ…

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (73) challengingstardarshan (10) cinishodha (138) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (167) kgf (8) kicchasudeep (11) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (195) shivarajkumar (9) sreeleela (5) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.