ಕೆಜಿಎಫ್ ಸರಣಿಯ ಮೂಲಕ ಪ್ಯಾನಿಂಡಿಯಾ ಮಟ್ಟದಲ್ಲಿ ಬಹು ಬೇಡಿಕೆ ಪಡೆದುಕೊಂಡಿರುವವರು ನಿರ್ದೇಶಕ (prashanth neel)  ಪ್ರಶಾಂತ್ ನೀಲ್. ಕೆಜಿಎಫ್2 ಬಂದ ಮೇಲಂತೂ ಬೇರೆ ಬೇರೆ ಭಾಷೆಗಳ ಮುಖ್ಯ ನಿರ್ಮಾಪಕರುಗಳೇ ನೀಲ್‍ಗಾಗಿ (neel) ಕಾದು ಕೂತಿದ್ದಾರೆ. ಸದ್ಯದ ಮಟ್ಟಿಗೆ ನೀಲ್ ಹೊಸ ಪ್ರಾಜೆಕ್ಟುಗಳತ್ತ ಗಮನ ಹರಿಸದೆ, ಒಪ್ಪಿಕೊಂಡ ಸಿನಿಮಾಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವತ್ತಲೇ ಪ್ರಧಾನವಾಗಿ ಚಿತ್ತ ನೆಟ್ಟಿದ್ದಾರೆ. ಪ್ರಭಾಸ್ (prabhas) ನಟಿಸಿದ್ದ ಆದಿಪುರುಷ ಚಿತ್ರ ಹೇಳ ಹೆಸರಿಲ್ಲದಂತೆ ಮಾಯವಾಗುತ್ತಲೇ, ನೀಲ್ ನಿರ್ದೇಶನದ ಸಲಾರ್‍ಗೆ (salar) ಹೊಸಾ ವೇಗ ಬಂದಿದೆ. ಒಂದಷ್ಟು ಕಾರಣಗಳಿಂದಾಗಿ ಸಲಾರ್ ಕುಂಠಿತಗೊಂಡಿದ್ದನ್ನು ಕಂಡು ಬೇಸರಾಗಿದ್ದ ಪ್ರಶಾಂತ್, ಇದೀಗ ಆದಷ್ಟು ಬೇಗನೆ ಚಿತ್ರೀಕರಣ ಮುಗಿಸಿಕೊಳ್ಳುವ ಧಾವಂತದಲ್ಲಿದ್ದಾರೆ. ಇದೇ ಹೊತ್ತಿನಲ್ಲಿ ನೀಲ್ ಮತ್ತು ಜ್ಯೂನಿಯರ್ ಎನ್‍ಟಿಆರ್ (junior ntr) ಸಿನಿಮಾದ ಕಥೆ ಏನಾಯ್ತೆಂಬ ಪ್ರಶ್ನೆ ಸಿನಿಮಾ ಪ್ರೇಮಿಗಳನ್ನು ಕಾಡಲಾರಂಭಿಸಿದೆ.

ಕೆಜಿಎಫ್2 ತೆರೆ ಕಂಡ ನಂತರದಲ್ಲಿ ಪ್ರಶಾಂತ್ ನೀಲ್‍ಗೆ ಗಾಳ ಹಾಕಿ ಕುಂತವರ ಸಂಖ್ಯೆ ನಾನಾ ಭಾಷೆಗಳಲ್ಲಿ ಹೆಚ್ಚಿಕೊಂಡಿತ್ತು. ಈ ಬಗ್ಗೆ ನಾನಾ ಅಂತೆಕಂತೆಗಳೂ ಸರಿದಾಡಿದ್ದವು. ಅದೆಲ್ಲದರ ನಡುವೆ ಅಭಿಮಾನಿಗಳನ್ನೆಲ್ಲ ಅಕ್ಷರಶಃ ಥ್ರಿಲ್ ಆಗಿಸಿದ್ದದ್ದು ಜ್ಯೂನಿಯರ್ ಎನ್‍ಟಿಆರ್ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆಂಬ ಸುದ್ದಿ. ಈ ವಿಚಾರವನು ಖುದ್ದು ನೀಲ್ ಒಪ್ಪಿಕೊಂಡಿದ್ದರು. ಜ್ಯೂನಿಯರ್ ಎನ್‍ಟಿಆರ್ ಮತ್ತು ನೀಲ್ ಬಗ್ಗೆ ಈ ಬಗ್ಗೆ ಸುದೀರ್ಘವಾದ ಚರ್ಚೆಗಳೂ ಕೂಡಾ ನಡೆದಿದ್ದವು. ಅವರಿಬ್ಬರೂ ಒಟ್ಟಿಗಿರುವ ಭಾವಚಿತ್ರಗಳಂತೂ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಇಟ್ಟಾಡಿದ್ದವು. ಆದರೆ, ಆ ನಂತರದಲ್ಲಿ ನೀಲ್ ಕೈಗೆತ್ತಿಕೊಂಡಿದ್ದದ್ದು ಪ್ರಭಾಸ್ ನಾಯಕನಾಗಿರುವ ಸಲಾರ್ ಚಿತ್ರವನ್ನು!

ಒಂದು ಮೂಲದ ಪ್ರಕಾರ, ಕೆಜಿಎಫ್ ಸರಣಿಗಿಂತಲೂ ವೇಗವಾಗಿ ಸಲಾರ್ ಅನ್ನು ಮುಗಿಸಿಕೊಳ್ಳಲು ನೀಲ್ ಪಕ್ಕಾ ಪ್ಲಾನು ಮಾಡಿಕೊಂಡಿದ್ದರು. ಒಂದಷ್ಟು ಕಾಲ ಅದರನುಸಾರವಾಗಿಯೇ ವೇಗವಾಗಿ ಚಿತ್ರೀಕರಣವೂ ನಡೆದಿತ್ತು. ಆದರೆ, ಆ ಬಳಿಕ ನಾನಾ ಕಾರಣಗಳಿಂದ ಚಿತ್ರೀಕರಣಕ್ಕೆ ಹಿನ್ನಡೆಯಾಗಿತ್ತು. ಈ ಪ್ರಕ್ರಿಯೆಯಲ್ಲಿಯೇ ಈವತ್ತಿಗೆ ಜ್ಯೂನಿಯರ್ ಎನ್‍ಟಿಆರ್ ಸಿನಿಮಾ ಬಗೆ ಉಟ್ಟಿಕೊಂಡಿರುವ ಪ್ರಶ್ನೆಗಳಿಗೆಉತ್ತರವಿದೆ. ಯಾಕೆಂದರೆ, ಒಂದು ರೀತಿಯಲ್ಲಿ ಈ ಸಿನಿಮಾಗೆ ಸಲಾರ್ ಚಿತ್ರವೇ ಒಂದು ರೀತಿಯಲ್ಲಿ ಅಡ್ಡಗಾಲು ಹಾಕಿದಂತಿದೆ. ಇದೀಗ ಸಲಾರ್ ಕೆಲ ಕಾರ್ಯಗಳು ಭರದಿಂದ ಸಾಗುತ್ತಿವೆ. ಚಿತ್ರೀಕರಣ ಮುಕ್ತಾಯವಾಗುತ್ತಲೇ ನೀಲ್, ಎನ್‍ಟಿಆರ್ ಜೊತೆಗಿನ ಪ್ರಾಜೆಕ್ಟಿನ ಬಗ್ಗೆ ಮಾತಾಡಲಿದ್ದಾರೆ. ನಿಖರವಾಗಿ ಹೇಳಬೇಕೆಂದರೆ, ಸಲಾರ್ ನಂತರ ಹತ್ತಾರು ಅವಕಾಶಗಳಿದ್ದರೂ ನೀಲ್ ಜ್ಯೂನಿಯರ್ ಎನ್‍ಟಿಆರ್ ಚಿತ್ರದತ್ತಲೇ ಗಮನ ಹರಿಸಲಿದ್ದಾರೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!