ವರ್ ಸ್ಟಾರ್ ಪವನ್ ಕಲ್ಯಾಣ್ ಇದೀಗ ಪೂರ್ಣ ಪ್ರಮಾಣದ ರಾಜಕಾರಣಿಯಾಗಿದ್ದಾರೆ. ಜಗನ್ಮೋಹನ್ ರೆಡ್ಡಿಯ ದರ್ಭಾರಿನಲ್ಲಿ ಜುಟ್ಟು ಕೆದರಿಕೊಂಡು ಅಖಾಡಕ್ಕಿಳಿದಿದ್ದ ಪವನ್ ಕಲ್ಯಾಣ್ ಅತ್ಯಂತ ಹುಮ್ಮಸ್ಸಿನಿಂದಲೇ ರಾಜಕಾರಣಿಯಾಗಿ ಬದಲಾಗಿದ್ದಾರೆ. ನಿರಂತವಾದ ಸಂಘಟನೆಯ ಮೂಲಕ ಚುನಾವಣಾ ರಾಜಕೀಯದಲ್ಲಿ ಗೆದ್ದು ಬೀಗಿದ್ದಾರೆ. ರಾಜಕಾರಣಿಯಾದ ನಂತರದಲ್ಲಿ ಪವನ್ ಕಲ್ಯಾಣ್ ಸಿನಿಮಾ ರಂಗದಿಂದ ದೂರ ಸರಿಯುತ್ತಾರೆಂಬ ಮಾತುಗಳು ಬಲವಾಗಿಯೇ ಕೇಳಿ ಬಂದಿತ್ತು. ಹೇಳಿಕೇಳಿ ಈತ ವಿಶಾಲವಾದ ಫ್ಯಾನ್ ಬೇಸ್ ಹೊಂದಿರುವ ನಟ. ಇಂಥವರು ನಟನೆಯಿಂದ ದೂರ ಸರಿಯುವ ರೂಮರುಗಳು ಹಬ್ಬಿಕೊಂಡಾಗ ಸಹಜವಾಗಿಯೇ ಅಭಿಮಾನಿಗಳು ಬೇಸರಗೊಂಡಿದ್ದರು. ಆದರೀಗ ಅಭಿಮಾನ ಪಾಳೆಯ ನಿರಾಳವಾಗುವ ವಿದ್ಯಮಾನ ಘಟಿಸಿದೆ!


ಪವನ್ ಕಲ್ಯಾಣ್ ರಾಜಕೀಯಕ್ಕಿಳಿಯುವ ಹೊತ್ತಿಗೆಲ್ಲ ಓಜಿ, ಹರಿಹರ ವೀರಮಲ್ಲು ಮತ್ತು ಭಗತ್ ಸಿಂಗ್ ಎಂಬ ಮೂರು ಬಿಗ್ ಬಜೆಟ್ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ರಾಜಕೀಯ ಬಡಿದಾಟದ ನಡುವೆಯೇ ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದರು. ಆದರೆ, ಒಂದು ಹಂತದಲ್ಲಿ ಮಾತ್ರ ಆ ಮೂರೂ ಸಿನಿಮಾಗಳ ಕಥೆ ಮುಗಿದಂತೆಯೇ ಎಂಬಂಥಾ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಅಚ್ಚರಿದಾಯಕವೆಂಬಂತೆ ಬ್ಯುಸಿಯ ನಡುವೆಯೂ ಪವನ್ ಕಲ್ಯಾಣ್ ಆ ಮೂರೂ ಸಿನಿಮಾಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿಕೊಟ್ಟಿದ್ದರು. ಅದರಲ್ಲಿ ಎರಡು ಸಿನಿಮಾಗಳು ಬಿಡುಗಡೆಗೊಂಡು ಒಂದು ಮಟ್ಟದಲ್ಲಿ ಗೆದ್ದಿವೆ. ಭಗತ್ ಸಿಂಗ್ ಇಷ್ಟರಲ್ಲಿಯೇ ಬಿಡುಗಡೆಗೊಳ್ಳಲಿದೆ.


ಅದಾಗಲೇ ಒಪ್ಪಿಕೊಂಡಸಿದ್ದರಿಂದ ಮಾತ್ರವೇ ಪವನ್ ಆ ಮೂರೂ ಸಿನಿಮಾಗಳನ್ನು ಪೂರ್ಣಗೊಳಿಸಿದ್ದಾರೆ. ಅದಾದ ನಂತರ ಅವರು ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೆಂಬ ಸುದ್ದಿಗಳೂ ಹರಡಿದ್ದವು. ಆದರೀಗ ಅದೆಲ್ಲ ಸುಳ್ಳಾಗಿದೆ. ಯಾಕೆಂದರೆ, ಪವರ್ ಸ್ಟಾರ್ ಮತ್ತೊಂದಷ್ಟು ಹೊಸಾ ಪ್ರಾಜೆಕ್ಟುಗಳಿಗೆ ಸಹಿ ಹಾಕಿದ್ದಾರೆ. ದಿಲ್ ರಾಜು ಚಿತ್ರವನ್ನು ಒಪ್ಪಿಕೊಂಡಿರುವ ಪವನ್, ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ರಾಮ್ ತಲ್ಲೂರಿಗೂ ಕಾಲ್ ಶೀಟ್ ಕೊಟ್ಟಿದ್ದಾರೆ. ಅಲ್ಲಿಗೆ ಪವನ್ ಕಲ್ಯಾಣ್ ಯಾವ ಕಾರಣಕ್ಕೂ ಸಿನಿಮಾ ರಂಗಕ್ಕೆ ಟಾಟಾ ಹೇಳೋದಿಲ್ಲ ಎಂಬ ವಿಚಾರ ಖಾತರಿಯಾಗಿದೆ. ಈ ಸುದ್ದಿ ಪವರ್ ಸ್ಟಾರ್ ಅಭಿಮಾನಿಗಳನ್ನು ಥ್ರಿಲ್ ಆಗಿಸಿರೋದಂತೂ ಸತ್ಯ!

About The Author