ಕೆಲ ನಟ ನಟಿಯರ ನಸೀಬೆಂಬುದು ವಿಶ್ಲೇಷಣೆಗಳ ನಿಲುಕಿಗೆ ಸಿಗುವುದಿಲ್ಲ. ಮೊದಲ ಹೆಜ್ಜೆಯಲ್ಲಿಯೇ ಅಪೂರ್ವ ಅವಕಾಶಗಳು ಜೊತೆಯಾಗರುತ್ತವೆ. ಆದರೆ, ಅದೃಷ್ಟವೆಂಬುದೇಕೋ ಗಾವುದ ದೂರದಲ್ಲಿಯೇ ನಿಂತು ಬಿಟ್ಟಿರುತ್ತದೆ. ಈ ಮಾತಿಗೆ ಉದಾರಣೆಯಾಗಬಲ್ಲ ಒಂದಷ್ಟು ನಟನ ನಟಿಯರು ನಾನಾ ಭಾಷೆಗಳ ಚಿತ್ರರಂಗದಲ್ಲಿ ಕಾಣ ಸಿಗುತ್ತಾರೆ. ಆ ಸಾಲಿನಲ್ಲಿ ಈ ಹೊತ್ತಿಗೆ ಗುರುತಿಸಬಹುದಾದ ಹೆಸರು (iswarya menon)  ಐಶ್ವರ್ಯಾ ಮೆನನ್. ಕನ್ನಡವೂ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗವನ್ನು ಒಂದು ಸುತ್ತು ಹೊಡೆದು, ನಿರೀಕ್ಷಿತ ಗೆಲುವು ಕಣದಿದ್ದ ಈಕೆಯೀಗ ಪವನ್ ಕಲ್ಯಾಣ್‍ಗೆ (pawan kalyan) ಜೋಡಿಯಾಗೋ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ.

ಪವನ್ ಕಲ್ಯಾಣ್ ಇತ್ತೀಚಿನ ವರ್ಷಗಳಲ್ಲಿ ರಾಜಕಾರಣದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಈ ಮೂಲಕ ಒಂದಷ್ಟು ವಿವಾದಗಳನ್ನೂ ಆಗಾಗ ಮೈಮೇಲೆಳೆದುಕೊಳ್ಳುತ್ತಿದ್ದಾರೆ. ಆಜಕೀಯವಾಗಿ ದೊಡ್ಡ ಮಟ್ಟಕ್ಕೇರುವ ಮಹತ್ವಾಕಾಂಕ್ಷೆ ಹೊಂದಿರೋ ಪವನ್ ಕಲ್ಯಾಣ್‍ಗೀಗ ಅದೊಂದು ಸುದೀರ್ಘ ಪಯಣವೆಂಬ ಜ್ಞಾನೋದಯವಾದಂತಿದೆ. ಅದರ ಫಲವಾಗಿಯೇ ಇದೀಗ ಮತ್ತೆ ಸಿನಿಮಾ ರಂಗದತ್ತ ಹೊರಳಿಕೊಂಡಿದ್ದಾರೆ. ಅವರೀಗ ಯುವ ನಿರ್ದೇಶಕ ಸುಜೀತ್ ಸಾರಥ್ಯದ ಓಜಿ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರೀಕರಣದ ಹಂತದಲ್ಲಿರೋ ಓಜಿಗೆ ಇಮ್ರಾನ್ ಹಶ್ಮಿ ಸೇರಿದಂತೆ ಘಟಾನುಘಟಿಗಳು ಜೊತೆಯಾಗುತ್ತಿದ್ದಾರೆ. ಐಶ್ವರ್ಯಾ ಮೆನನ್ ಕೂಡಾ ತಾರಾ ಬಳಗ ಸೇರಿಕೊಂಡಿರುವ ಸುದ್ದಿ ಹೊರಬಿದ್ದಿದೆ.

ಐಶ್ವರ್ಯಾ ಮೆನನ್ ಕೇರಳ ಮೂಲದ ಹುಡುಗಿ. ಆದರೆ ನಟಯಾಗಿ ಹೊರಹೊಮ್ಮಿದ್ದದ್ದು ಮಾತ್ರ ತಮಿಳು ಚಿತ್ರದ ಮೂಲಕ. ಆ ಬಳಿಕ ತಮಿಳಿಗೆ ಹೋಗಿ, ನಂತರ ತೆಲುಗಿನ ಲವ್ ಫೇಲ್ಯೂರ್ ಎಂಬ ಚಿತ್ರದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದದಳು. ತರುವಾಯ ದಾಸವಾಳ ಅಂತೊಂದು ಚಿತ್ರದ ಮೂಲಕ ಕನ್ನಡಕ್ಕೂ ಆಗಮಿಸಿದ್ದ ಐಶ್ವರ್ಯಾ ದಶಕದ ನಂತರ ತೆಲುಗಿನ ಸ್ಪೈ ಎಂಬ ಚಿತ್ರದಲ್ಲಿ ನಟಿಸಿದ್ದಳು. ಅದಕ್ಕೆ ನಕಾರಾತ್ಮಕ ವಿಮರ್ಶೆಗಳೇ ಬಂದಿದ್ದವು. ಈ ಹುಡುಗಿಯ ವೃತ್ತಿ ಬದುಕಿನ ಗ್ರಾಫ್ ಅನ್ನೊಮ್ಮೆ ಗಮನಿಸಿದರೆ, ನಿರೀಕ್ಷಿತ ಗೆಲುವು ದಕ್ಕಿದ ಉದಾಹರಣೆಗಳಿಲ್ಲ. ಇಂಥಾ ವಾತಾವರಣದಲ್ಲಿಯೂ ಪವನ್ ಕಲ್ಯಾಣ್ ಜೊತೆ ನಟಿಸುವ ಅದೃಷ್ಟು ಐಶ್ವರ್ಯಾಗೆ ಒಲಿದು ಬಂದಿದೆ. ಇದರಿಂದಾದರೂ ಆಕೆಯ ಲಕ್ಕು ಕುದುರಬಹುದೇನೋ…

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!