Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»OTT»dhoomam: ಫಹಾದ್ ಫಾಸಿಲ್ ನಟನೆಯ ಚಿತ್ರ ಬೆರಳ ಮೊನೆಯಲ್ಲಿ!
    OTT

    dhoomam: ಫಹಾದ್ ಫಾಸಿಲ್ ನಟನೆಯ ಚಿತ್ರ ಬೆರಳ ಮೊನೆಯಲ್ಲಿ!

    By Santhosh Bagilagadde03/07/2023
    Facebook Twitter Telegram Email WhatsApp
    ae60fcc1 e4da 4eb0 a6d3 dff496910a12
    Share
    Facebook Twitter LinkedIn WhatsApp Email Telegram

    ಸಿನಿಮಾ ಜಗತ್ತಿನ ಭವಿಷ್ಯದ ನಿಲ್ದಾಣವಾಗಿ ಸದ್ಯಕೆ ಓಟಿಟಿ (ott) ಪ್ಲಾಟ್ ಫಾರ್ಮ್ ಗಮನ ಸೆಳೆಯುತ್ತಿದೆ. ಅದೊಂಥರಾ ಮಾಯೆಯಿದ್ದಂತೆ. ಒಂದು ಕಾಲದಲ್ಲಿ ಇದು ಬರಖತ್ತಾಗೋ ಐಡಿಯಾನಾ ಅಂತೊಂದು ಸಂಶಯ ಮೂಡಿಸಿದ್ದ ಓಟಿಟಿ (ott) ಇದೀಗ ಸಿನಿ ಪ್ರೇಮಿಗಳ ಮೆಚ್ಚುಗೆ ಗಳಿಸಿಕೊಂಡಿದೆ. ಬಹುಶಃ ಜಗತ್ತಿನ ಜೀವಕೋಟಿಗಳನ್ನು ಸಂಕಷ್ಟಕ್ಕೆ ತಳ್ಳಿದ್ದ ಕೊರೋನಾ ಮಹಾಮಾರಿಯೇ ಓಟಿಟಿ ಫ್ಲಾಟ್ ಫಾರ್ಮಿಗೆ ವರವಾದಂತಿದೆ. ಯಾಕೆಂದರೆ, ಕೊರೋನಾ (corona) ಕಾಲಘಟ್ಟದಲ್ಲಿಯೇ ಓಟಿಟಿಯಲ್ಲಿ ಒಂದಷ್ಟು ಸಿನಿಮಾಗಳು ಬಿಡುಗಡೆಗೊಂಡಿದ್ದವು. ಅಲ್ಲಿಯೇ ಯಶ ಕಂಡಿದ್ದವು. ಅದರ ದೆಸೆಯಿಂದ ಈಗ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರಗಳೂ ಒಂದಷ್ಟು ಕಾಲದ ಬಳಿಕ ಓಟಿಟಿ ಎಂಟ್ರಿ ಕೊಡುತ್ತವೆ; ಅದೃಷ್ಟ ಪರೀಕ್ಷೆಗಿಳಿಯುತ್ತವೆ.

    dhoomam review 1200ಇಷ್ಟೆಲ್ಲವನ್ನು ಯಾಕೆ ಹೇಳಬೇಕಾಯಿತೆಂದರೆ, ವಾರಗಳ ಹಿಂದೆ ತೆರೆಕಂಡು ಅಷ್ಟೇನೂ ಯಶ ಕಾಣದಿದ್ದ ಧೂಮಂ (dhoomam) ಚಿತ್ರವೀಗ ಓಟಿಟಿ ಹೊಸ್ತಿಲಿನಲ್ಲಿದೆ. ಇದು ಮಲೆಯಾಳಂ ಭಾಷೆಯಲ್ಲಿ ಕನ್ನಡದ ಹೆಮ್ಮೆಯ ಸಂಸ್ಥೆ ಹೊಂಬಾಳೆ ನಿರ್ಮಾಣ ಮಾಡಿದ್ದ ಚಿತ್ರ. ಹೇಳಿಕೇಳಿ ಅದ್ಭುತ ಕಲಾವಿದ ಫಹಾದ್ ಫಾಸಿಲ್ ನಟನೆಯ ಚಿತ್ರ. ವಿಶಿಷ್ಟ ಕಥಾನಕವನ್ನೊಳಗೊಂಡಿದ್ದ ಧೂಮಂ ದೊಡ್ಡ ಮಟ್ಟದಲ್ಲಿಪಯೇ ಗೆಲುವು ಕಾಣುತ್ತದೆಂದು ನಿರೀಕ್ಷಿಸಲಾಗಿತ್ತು. ಅದು ಕನ್ನಡದಲ್ಲಿಯೂ ಬಿಡುಗಡೆಗೊಂಡಿತ್ತು. ಆದರೆ, ಅವತರಣಿಕೆಯಲ್ಲಿ ಹೇಳಿಕೊಳ್ಳುವಂಥಾ ಗೆಲುವು ಕಾಣಲಿಲ್ಲ. ಅತ್ತ ಮಲೆಯಾಳಿಗರಿಗಾದರೂ ಇಷ್ಟವಾಯಿತಾ ಅಂತ ನೋಡ ಹೋದರೆ, ಆ ದಿಕ್ಕಿನಿಂದಲೂ ಸಪ್ಪೆಯೆನಿಸುವಂಥಾ ವಾತಾವರಣವೇ ಕಾಣಿಸುತ್ತಿದೆ.

    imagesಇಂಥಾ ಹೊತ್ತಿನಲ್ಲಿಯೇ ಧೂಮಂ ಓಟಿಟಿಗೆ ಎಂಟರಿ ಕೊಡಲು ತಯಾರಿನಡೆಯುತ್ತಿದೆ. ಈಗಾಗಲೇ ಒಂದಷ್ಟು ಸಂಸ್ಥೆಗಳ ಜೊತೆಗೆ ವ್ಯವಹಾರ ಕುದುರಿಸಿಕೊಳ್ಳುವ ಕಾರ್ಯದಲ್ಲಿ ಹೊಂಬಾಳೆ ಮಂದಿ ಬ್ಯುಸಿಯಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆದರೆ, ಧೂಮಂ ಇಷ್ಟರಲ್ಲಿಯೇ ಓಟಿಟಿಯಲ್ಲಿ ಪ್ರತ್ಯಕ್ಷವಾಗಲಿದೆ. ಇದುವರೆಗೂ ಗೆಲುವು ಕಾಣುತ್ತಾ ಬಂದಿರುವ ಹೊಂಬಾಳೆಗೆ ಧೂಮಂ ಮೂಲಕ ಒಂದಷ್ಟು ಹಿನ್ನಡೆಯಾಗಿರೋದು ನಿಜ. ಆದರೆ, ಕಡೇ ಕ್ಷಣದ ಭರವಸೆ ಎಂಬಂತೆ ಓಟಿಟಿ ಈ ಸಂಸ್ಥೆಯ ಮುಂದಿದೆ. ಯಾಕೆಂದರೆ, ಸಿನಿಮಾ ಮಂದಿರಗಳಲ್ಲಿ ಜೈಸಿಕೊಳ್ಳಲಾರದ ಒಂದಷ್ಟು ಚಿತ್ರಗಳು ಓಟಿಟಿಯಲ್ಲಿ ಚಿಗಿತುಕೊಂಡಿವೆ. ಧೂಮಂ ಕಥೆ ಏನಾಗಲಿದೆ ಎಂಬುದು ಸದ್ಯದ ಕುತೂಹಲ…

    cinishodha dhoomam fahadhfaasil hombalefilmes mollywood ott sandalwood
    Share. Facebook Twitter LinkedIn WhatsApp Telegram Email
    Previous Articleamisha patel: ಗದರ್2 ಚಿತ್ರತಂಡದ ಮೇಲೆ ಆರೋಪಗಳ ಸುರಿಮಳೆ!
    Next Article Iswarya Menon: ಈ ಬಾರಿಯಾದರೂ ಕೈ ಹಿಡಿದೀತೇ ಗೆಲುವು?
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    09/12/2025

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    08/12/2025

    Andhra King Taluka #1 Best Movie : ಬೆದರಿದ್ದ ಆಂಧ್ರ ಕಿಂಗ್‌ಗೆ `ಅಖಂಡ’ ಅಭಯ!

    06/12/2025
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (9)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (80)
    • ಸೌತ್ ಜೋನ್ (135)
    • ಸ್ಪಾಟ್ ಲೈಟ್ (216)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಬಾಲಿವುಡ್ 12/12/2025

    allu arjun with lokesh kanagarajan : :ಪುಷ್ಪರಾಜ್ ಒಲ್ಲೆ ಅಂದ್ರೆ ಆಮೀರ್ ಅಲ್ಲಿಗೆ ಹಾಜರ್!

    ಕೂಲಿ ಚಿತ್ರದ ಸೋಲಿನ ನಂತರದಲ್ಲಿ ಯುವ ನಿರ್ದೇಶಕ (lokesh kanagaraj) ಲೋಕೇಶ್ ಕನಗರಾಜ್ ಪಾಲಿಗೆ ಮುಂದಿನ ಹೆಜ್ಜೆಗಳು ತುಸು ತ್ರಾಸದಾಯಕ…

    mark movie 1 trailer magic : ಬಿಗ್‌ಬಾಸ್ ಭ್ರಾಂತಿಯ ಕಿಚ್ಚ ಹಳಿಗೆ ಮರಳಿದ ಲಕ್ಷಣ!

    Darshan Devil Movie no1trailer : ಡೆವಿಲ್ ಟ್ರೈಲರ್‌ನಲ್ಲಿ ಮಿಶ್ರ ಛಾಯೆ!

    Yogaraj Bhat Talks About Super Hit Movie: ಗಿಲ್ಲಿ ನಟ ನಾಯಕನಾಗಿರೋ ಚಿತ್ರಕ್ಕೆ ಪಾಸಿಟಿವ್ ಕಿಕ್!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (73) challengingstardarshan (10) cinishodha (138) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (167) kgf (8) kicchasudeep (11) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (195) shivarajkumar (9) sreeleela (5) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 25, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.