ಕೆಜಿಎಫ್ ಸರಣಿಯ ಮೂಲಕ ಕನ್ನಡ ಚಿತ್ರರಂಗದ ಘನತೆಯನ್ನು ಪ್ಯಾನಿಂಡಿಯಾ ಮಟ್ಟಕ್ಕೇರಿಸಿದ ಕೀರ್ತಿ ಹೊಂಬಾಳೆ ಫಿಲಂಸ್‌ಗೆ ಸಲ್ಲುತ್ತದೆ. ಹೀಗೆ ಕನ್ನಡ ಸಿನಿಮಾಗಳು ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಮಿಂಚುವಂತೆ ಮಾಡಿರೋ ಹೊಂಬಾಳೆ ಕೂಡಾ ಇದೀಗ ತನ್ನ ವಹಿವಾಟನ್ನು ಆ ಮಟ್ಟಕ್ಕೆ ವಿಸ್ತರಿಸಿಕೊಂಡಿದೆ. ಕೆಜಿಎಫ್ ಸರಣಿಯ ನಂತಗರವೂ ಹೊಂಬಾಳೆಯ ಗೆಲುವಿನ ಯಾನ ಯಥಾ ಪ್ರಕಾರವಾಗಿ ಸಾಗಿದೆ. ಇದೀಗ ಪ್ಯಾನಿಂಡಿಯಾ ಸ್ಟಾರ್‌ಗಳಾದ ಹೃತಿಕ್ ರೋಶನ್ ಮತ್ತು ಪ್ರಭಾಸ್ ಜೊತೆಗೊಂದು ಸಿನಿಮಾ ಮಾಡಲು ಹೊಂಬಾಳೆ ಫಿಲಂಸ್ ಸರ್ವ ತಯಾರಿಯನ್ನೂ ಮಾಡಿಕೊಂಡಿದೆ.
ಹೃತಿಕ್ ರೋಶನ್ ಜೊತೆಗೆ ಹೊಂಬಾಳೆ ನಿರ್ಮಾಣದ ಸಿನಿಮಾಕ್ಕೆ ಈಗಾಗಲೇ ಎಲ್ಲ ಬಗೆಯ ತಯಾರಿಯೂ ಆರಂಭವಾಗಿದೆ. ಅದು ಇನ್ನೇ ಚಿತ್ರೀಕರಣ ಆರಂಭಿಸಿ ಶೀಘ್ರದಲ್ಲಿಯೇ ಬಿಡುಗಡೆಗೆ ವೇದುಇಕೆ ಸಿದ್ಧಗೊಂಡಿದೆ. ಹೊಂಬಾಳೆ ನಿರ್ಮಾಣದ ಸಿನಿಮಾಗಳು ಒಂದೆರಡು ವರ್ಷ ಚಿತ್ರೀಕರಣಾವಧಿ ಬೇಡುತ್ತವೆ. ಆದರೆ, ಈ ಚಿತ್ರದ ಮೂಲಕ ಆ ಪರಿಪಾಠದಾಚೆಗೆ ಹೊರಳಿಕೊಳ್ಳಲು ಕಿರಗಂದೂರು ತೀರ್ಮಾನಿಸಿದಂತಿದೆ. ಸದ್ಯಕ್ಕೆ ಹೊಂಬಾಳೆ ಫಿಲಂಸ್ ಜೊತೆಗಿನ ಹೃತಿಕ್ ಸಹಯೋಗ ಆರಂಭಿಕವಾಗಿಯೇ ದೊಡ್ಡ ಮಟ್ಟದಲ್ಲಿ ಕುತೂಹಲ ಮೂಡಿಸಿದೆ. ಅಂತೂ ಈ ಚಿತ್ರದ ಮೂಲಕ ಮತ್ತೊಂದು ಮೈಲಿಗಲ್ಲು ನೆಡಲು ಹೊಂಬಾಳೆ ತಯಾರಾಗಿರೋದು ಸತ್ಯ.
ಹೊಂಬಾಳೆಯ ಈ ನಡೆ ಬಾಲಿವುಡ್ ಅಂಗಳದಲ್ಲಿಯೂ ಕೂಡಾ ದೊಡ್ಡ ಮಟ್ಟದಲ್ಲಿಯೇ ಚರ್ಚೆ ಹುಟ್ಟು ಹಾಕಿದೆ. ಇನ್ನುಳಿದಂತೆ ಪ್ರಭಾಸ್ ಸಹಿ ಹಾಕಿರೋದು ಸಲಾರ್೨ ಚಿತ್ರಕ್ಕೆ. ಇದೂ ಕೂಡಾ ಬಿಗ್ ಬಜೆಟ್ ಚಿತ್ರವಾದರೂ ಕೂಡಾ ಅದರ ಬಗ್ಗೆ ಹೇಳಿಕೊಳ್ಳುವಂಥಾ ಕ್ರೇಜ್ ಇಲ್ಲ. ಯಾಕೆಂದರೆ, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದ ಸಲಾರ್ ಹೇಳಿಕೊಳ್ಳುವಂಥಾ ಯಶ ಕಂಡಿರಲಿಲ್ಲ. ಹಾಗಿದ್ದ ಮೇಲೆ ಮುಂದುವರೆದ ಭಾಗದ ಬಗ್ಗೆ ಸಹಜವಾಗಿಯೇ ನೀರಸ ಕ್ರೇಜ್ ಮೂಡಿಕೊಂಡಿದೆ. ಸದ್ಯಕ್ಕಂತೂ ಪ್ರಭಾಸ್ ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆ ಮೂಲಕ ಕಲ್ಕಿ ಚಿತ್ರ ನೀಡಿದ್ದ ಉಸಿರು ಉಳಿಸಿಕೊಳ್ಳುವ ಅನಿವಾರ್ಯತೆ ಬಾಹುಬಲಿಯ ಮುಂದಿದೆ!