Dulquer Salmaan: ದುಲ್ಕರ್‌ಗೆ ಸಾಲು ಸಾಲು ಆಘಾತ!

Dulquer Salmaan: ದುಲ್ಕರ್‌ಗೆ ಸಾಲು ಸಾಲು ಆಘಾತ!

ಲೆಯಾಳಂ ಚಿತ್ರರಂಗದ ಎಲ್ಲೆ ಮೀರಿ ದೇಶಾದ್ಯಂತ ತನ್ನ ಪ್ರತಿಭೆಯಿಂದಲೇ ಸದ್ದು ಮಾಡಿರುವ ನಟ ದುಲ್ಕರ್ ಸಲ್ಮಾನ್. ತೆಲುಗು ಸೇರಿದಂತೆ ನಾನಾ ಭಾಷೆಗಳಲ್ಲಿ ಬ್ಯುಸಿಯಾಗಿರುವ ದುಲ್ಕರ್ ಇದೀಗ ತನ್ನದೇ ಆದೊಂದು ಸಿನಿಮಾ ನಿರ್ಮಾಣ ಸಂಸ್ಥೆಯನ್ನೂ ಆರಂಭಿಸಿದ್ದಾನೆ. ಅಷ್ಟ ದಿಕ್ಕುಗಳಿಂದಲೂ ಅವಕಾಶ, ಮನೆ ಮುಂದೆ ಸಾಲುಗಟ್ಟಿ ನಿಂತಿರುವ ಐಷಾರಾಮಿ ಕಾರುಗಳು… ವರ್ಷಗಟ್ಟಲೆ ಸೈಕಲ್ಲು ಹೊಡೆದಿದ್ದ ದುಲ್ಕರ್ ಬದುಕೀಗ ಎಲ್ಲ ರೀತಿಯಿಂದಲೂ ಸಮೃದ್ಧಗೊಂಡಿದೆ. ಆದರೆ, ಈ ಹಂತದಲ್ಲಿಯೇ ನಾನಾ ರೀತಿಯ ಆಘಾತಗಳು ಒಂದರ ಹಿಂದೊಂದರಂತೆ ಆತನನನು ಮುತ್ತಿಕೊಳ್ಳುತ್ತಿವೆ!


ಐಷಾರಾಮಿ ಕಾರುಗಳಿಗೆ ತೆರಿಗೆ ಕಟ್ಟದೆ ವಂಚಿಸಿದ ಆರೋಪವೊಂದು ದುಲ್ಕರ್ ವಿರುದ್ಧ ಕೇಳಿ ಬಂದಿತ್ತು. ಈ ಸಂಬಂಧವಾಗಿ ಅಧಿಕಾರಿಗಳು ರೇಡು ನಡೆಸಿದ ಬಗ್ಗೆಯೂ ಸುದ್ದಿಯಾಗಿತ್ತು. ಇದೆಲ್ಲದರಾಚೆಗೆ ದುಲ್ಕರ್ ಸಲ್ಮಾನ್ ತನ್ನ ಕನಸಿನ ಕೂಸಿನಂತಿರುವ ವೆಫೇರರ್ ಫಿಲ್ಮ್ ಪ್ರೊಡಕ್ಷನ್ ಹೌಸ್ ನ ದೇಖಾರೇಖಿಯಲ್ಲಿ ತೊಡಗಿಸಿಕೊಂಡಿದ್ದ. ಅಂದಹಾಗೆ ಈ ಪ್ರೊಡಕ್ಷನ್ ಹೌಸ್ ಮೂಲಕ ದುಲ್ಕರ್ ಅದೆಷ್ಟೋ ಪ್ರತಿಭಾನ್ವಿತರಿಗೆ ಕೆಲಸ ಕೊಟ್ಟಿದ್ದ. ನೂರಾರು ಮಂದಿ ಈ ಮೂಲಕವೇ ನೆಮ್ಮದಿಯಾಗಿ ಅನ್ನದ ಮೂಲ ಹುಡುಕಿಕೊಂಡಿದ್ದರು. ಇಂಥಾ ಸಂಸ್ಥೆಯ ಭಾಗವಾಗಿರುವ ನಿರ್ದೇಶಕನೊಬ್ಬನ ಮೇಲೆ ಮಹಿಳೆಯೊಬ್ಬಾಕೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.


ಇಂಥಾದ್ದೊಂ ದು ಆರೋಪಕ್ಕೀಡಾಗಿರೋದು ಈ ಸಂಸ್ಥೆಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ದಿನಿಲ್ ಬಾಬು ಎಂಬಾತ. ಈತ ದುಲ್ಕರ್ ಸಲ್ಮಾನ್ ನಿರ್ಮಾಣ ಸಂಸ್ಥೆಯ ಸಿನಿಮಾದಲ್ಲಿ ಅವಕಾಶ ಕೊಡಿಸೋದಾಗಿ ನಂಬಿಸಿ ತನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದನೆಂಬುದು ಆ ಮಹಿಳೆಯ ದೂರಿನ ಸಾರಾಂಶ. ದಿನಿಲ್ ಬಾಬು ಎಂಬಾತನ ಮೇಲೆ ಆ ಮಹಿಳೆ ಆರೋಪ ಮಾಡಿದ್ದರೆ ಈ ಮಟ್ಟಕ್ಕೆ ಸುದ್ದಿಯಾಗುತ್ತಿರಲಿಲ್ಲವೇನೋ. ಆದರೆ ಆತ ದುಲ್ಕರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರೋದರಿಂದಾಗಿ ಸದರಿ ನಟನೇ ಆರೋಪಿ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಇದೀಗ ಇದರ ಸುತ್ತ ನಾನಾ ದಿಕ್ಕಿನಲ್ಲಿ ಚರ್ಚೆಗಳು ನಡೆಯುತ್ತಿವೆ. ದುಲ್ಕರ್ ವಿರೋಧಿ ಪಾಳೆಯ ಮಹಿಳೆಯನ್ನು ಮುಂದಿಟ್ಟುಕೊಂಡು ದ್ವೇಷದ ಆಟ ಕಟ್ಟಿದೆ ಎಂಬಂಥಾ ಘನ ಗಂಭೀರ ಆರೋಪವೂ ಕೇಳಿ ಬರುತ್ತದೆ. ಆದರೆ ದಿನಿಲ್ ಬಾಬು ಬಹು ಹಿಂದೆಯೇ ಈ ಸಂಸ್ಥೆಯಿಂದ ಕೆಲಸ ಬಿಟ್ಟಿರೋದರಿಂದ ದುಲ್ಕರ್ ತುಸು ನಿರಾಳವಾಗುವಂತಾಗಿದೆ.

About The Author