ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬೇಲ್ ಪಡೆದು ಬಂದಿದ್ದ ದರ್ಶನ್ ಮತ್ತೆ ಜೈಲುಪಾಲಾಗೋ ಕ್ಷಣಗಳು ಹತ್ತಿರಾಗಿವೆ. ದರ್ಶನ್ ಗ್ಯಾಂಗಿಗೆ ಕೊಟ್ಟಿದ್ದ ಬೇಲ್ ರದ್ದುಗೊಳಿಸಬೇಕೆಂದು ಕೋರಿ ಸರ್ಕಾರದ ಪರವಾಗಿ ಸುಪ್ರೀಂ ಮೊರೆ ಹೋಗಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ದರ್ಶನ್ ಗ್ಯಾಂಗಿನ ಅನಾಹುತಕಾರಿ ನಡಾವಳಿಗಳನ್ನು ಗಮನಿಸಿ ಕೆಂಡಾಮಂಡಲರಾಗಿದ್ದರು. ಇದೀಗ ದರ್ಶನ್ ಬೇಲು ರದ್ದುಪಡಿಸಿ ಕೂಡಲೇ ಆರೋಪಿಗಳೆಲ್ಲರನ್ನು ಬಂಧಿಸಬೇಕೆಂದು ಆದೇಶ ನೀಡಿರುವ ನ್ಯಾಯಪೀಠ, ಯಾರೇ ಆಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದನ್ನು ಒತ್ತಿ ಹೇಳಿದೆ. ಇದರೊಂದಿಗೆ ದರ್ಶನ್‌ಗೆ ಅನುಕೂಲವಾಗುವಂತೆ ನಡೆದುಕೊಂಡ ಜೈಲಾಧಿಕಾರಿಗಳಿಗೂ ಶಾಕ್ ಕೊಟ್ಟಿದೆ.
ಅವಳ್ಯಾರೋ ಪವಿತ್ರಾ ಗೌಡಳ ಮೋಹಕ್ಕೆ ಬಿದ್ದಿದ್ದ ದರ್ಶನ್ ಕೊಲೆಯ ಮೂಲಕ ರಕ್ತ ಮೆತ್ತಿಸಿಕೊಳ್ಳುವಾಗ ಕಾನೂನ ಎಂಬುದು ಈ ಪರಿಯಾಗಿ ಪ್ರಹಾರ ನಡೆಸುತ್ತೆ ಅಂದುಕೊಂಡಿರಲಿಕ್ಕಿಲ್ಲ. ಮಾಧ್ಯಮಗಳ ಮುಂದೆ ಎದೆಯುಬ್ಬಿಸಿ ಮಾತಾಡಿ ದಕ್ಕಿಸಿಕೊಂಡಷ್ಟೇ ಸಲೀಸಾಗಿ ಈ ಕೊಲೆ ಕೇಸಿಂದ ಹೊರಬರಬಹುದೆಂಬ ಗಾಢ ವಿಶ್ವಾಸ ಆತನಿಗಿದ್ದಂತಿತ್ತು. ಹಾಗಿಲ್ಲದೇ ಹೋಗಿದ್ದರೆ ತನ್ನನ್ನು ಬಂಧಿಸಲು ಬಂದ ಪೊಲೀಸ್ ಅಧಿಕಾರಿಗಳ ಮುಂದೆ ತಿಮಿರು ತೋರಿಸುತ್ತಿರಲಿಲ್ಲ; ಮುಚ್ಕೊಂಡು ಗಾಡಿ ಹತ್ತುತ್ತೀಯಾ ಅಥವಾ ನಾವೇ ಎಳಕೊಂಡು ಹೋಗ್ಬೇಕಾ ಅಂತ ಪೊಲೀಸ್ ಅಧಿಕಾರಿಯಿಂದಲೇ ಅನ್ನಿಒಸಿಕೊಳ್ಳುತ್ತಲೂ ಇರಲಿಲ್ಲ. ಈ ಕ್ಷಣಕ್ಕೆ ದರ್ಶನ್ ತಲುಪಿರೋ ಸ್ಥಿತಿಗೆ ಕಾರಣ ಏನೆಂಬುದನ್ನು ಅವಲೋಕಿಸಿದರೆ ತಿಮಿರು ಮತ್ತು ತಿಮಿರಿನ ಹೊರತಾಗಿ ಮತ್ತೇನೂ ಕಾಣಿಸೋದಿಲ್ಲ!
ತಿಂಗಳುಗಟ್ಟಲೆ ಜೈಲು ಪಾಲಾಗಿ ವಾಪಾಸಾದ ನಂತರವೂ ದರ್ಶನ್‌ಗೆ ಹಳೇ ತಿಮಿರು ಇಳಿದಂತೆ ಕಾಣುತ್ತಿರಲಿಲ್ಲ. ವಕೀಲರು ಒತ್ತಿ ಒತ್ತಿ ಹೇಳಿದ್ದ ವಿಚಾರಗಳನ್ನು ಕೇಳಿ ದಾಸನಿಗೆ ಸಹಜವಾಗಿಯೇ ಭಯ ಶುರುವಾಗಿತ್ತು. ಚೂರೇ ಚೂರು ಮಿಸುಜಕಾಡಿದರೂ ಕೂಡಾ ಮತ್ತೆ ಜೈಲು ಪಾಲಾಗುವ ಕಂಟಕ ಆತನನ್ನು ಕೊಂಚ ಹದ್ದುಬಸ್ತಿನಲ್ಲಿಟ್ಟಿತ್ತು. ಆದರೆ ಆತ ಸೆಲೆಬ್ರಿಟೀಸ್ ಅಂತ ಕರೆಯುತ್ತಾ ಕೊಬ್ಬಿಸಿದ್ದ ಕೆಲ ಹಡಬೇ ಅಭಿಮಾನಿಗಳಿದ್ದಾರಲ್ಲಾ? ಅಂಥಾ ಕುನ್ನಿಗಳನ್ನು ಹದ್ದುಬಸ್ತಿನಲ್ಲಿಡುವ ಸಲುವಾಗಿ ಸಣ್ಣದೊಂದು ಪ್ರಯತ್ನವನ್ನೂ ದರ್ಶನ್ ನಡೆಸಿರಲಿಲ್ಲ. ಒಂದು ವೇಳೆ ಹಾಗೊಂದು ಕ್ರಮ ಕೈಗೊಂಡು ತೆಪ್ಪಗಿದ್ದಿದ್ದರೆ ಅಭಿಮಾನಿಗಳೆನ್ನಿಸಿಕೊಂಡಿರೋ ಕೆಲ ಗೂಂಡಾ ಮನಃಸ್ಥಿತಿಯ ಚಿಲ್ಟುಗಳು ಸೋಶಿಯಲ್ ಮೀಡಿಯಾ ಮೂಲಕ ಮೆರೆಯುತ್ತಿರಲಿಲ್ಲ.
ತಮ್ಮ ಬಾಸ್ ದರ್ಶನನನ್ನು ಯಾವ ಕಾನೂನುಗಳೂ ಏನೂ ಮಾಡಲು ಸಾಧ್ಯವಿಲ್ಲ ಎಂಬಂಥಾ ಭ್ರಮೆ ಅಭಿಮಾನಿ ಪಡೆಯನ್ನು ಆವರಿಸಿಕೊಂಡಿತ್ತು. ಅದೀಗ ಎರಡನೇ ಬಾರಿ ಕಳಚಿಕೊಂಡಿದೆ. ದರ್ಶನ್ ಅದೇನೇ ಪ್ರಯತ್ನ ಪಟ್ಟರೂ ಕೂಡಾ ಇನ್ನಾರು ತಿಂಗಳ ಕಾಲ ಜೈಲು ವಾಸ ಖಾಯಂ. ಈತನಿಗೆ ಈಗ ಬಂದೊದಗಿರೋ ಸ್ಥಿತಿಯ ಹಿಂದೆ ಆತನ ಅಭಿಮಾನಿಗಳೆನ್ನಿಸಿಕೊಂಡವರ ಪಾಲಿರೋದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಬೇಲ್ ಕ್ಯಾನ್ಸಲ್ ಮಾಡಬೇಕೆಂದು ಕೋರಿ ಸುಪ್ರೀಂ ಅಂಗಳದಲ್ಲಿ ದರ್ಶನ್ ಭವ್ಯವಿರುವಾಗಲೇ ಅಭಿಮಾನಿ ಬಳಗ ಗೂಂಡಾಗಿರಿಗಿಳಿದಿತ್ತು. ನಟಿ ರಮ್ಯಾ ವಿರುದ್ಧ ಕೆಟ್ಟಾಕೊಳಕು ಪ್ರಹಾರ ಮಾಡುವ ಮೂಲಕ ಕೇಸು ಜಡಿಸಿಕೊಂಡಿತ್ತು. ದರ್ಶನ್ ಯಾವ ರೀತಿ ಬದುಕುತ್ತಿದ್ದಾನೆ? ಆತನ ಅಭಿಮಾನಿಗಳು ಅದೆಷ್ಟು ಅನಾಹುತಕಾರಿಗಳಾಗಿದ್ದಾರೆ? ಕೊಂಚ ಯಾಮಾರಿದರೆ ದರ್ಶನ್ ಅಭಿಮಾನಿ ಪಡೆ ಕಟ್ಟಿಕೊಂಡು ಎಂಥಾ ಅನಾಹುತ ನಡೆಸಬಲ್ಲ? ಇಂಥಾ ದಿಕ್ಕುಗಳಲ್ಲಿ ನ್ಯಾಯಾಂಗ ಆಕಲೋಚಿಸಿಯೇ ಇಂಥಾದ್ದೊಂದು ಖಡಕ್ ಆದೇಶ ಕೊಟ್ಟಿರುವಂತಿದೆ.
ದರ್ಶನ್ ಅದೆಂಥಾ ಮುಠ್ಠಾಳನೆಂದರೆ, ತನ್ನ ಅಪಾರ ಅಭಿಮಾನಿ ಬಳಗವನ್ನು ತನ್ನ ಮಾತು ವರ್ತನೆದಗಳೇ ಪ್ರಭಾವಿಸುತ್ತವೆಂಬ ಸಣ್ಣ ಖಬರೂ ಆತನಿಗಿರಲಿಲ್ಲ. ಈ ಅವಿಕೇಕಿ ಎಣ್ಣೆ ಏಟಲ್ಲಿ ಬಡಬಡಿಸಿದ್ದನ್ನೇ ಕೆಲ ಅಭಿಮಾನಿಗಳು ಬದುಕಾಗಿಸಿಕೊಂಡಿದ್ದಾರೆ. ಅಂಥವರ ಮಾತು, ವರ್ತನೆ, ಭಾಷೆಗಳಲ್ಲಿ ಅದೇ ಛಾತಯೆ ಎದ್ದು ಕಾಣುತ್ತಿದೆ. ಈತ ಒಂದು ಹಂತದಲ್ಲಿ ಮಾಧ್ಯಮಗಳನ್ನು ಎದುರು ಹಾಕಿಕೊಂಡ. ಮೀಡಿಯಾ ತನ್ನ ಶಾಟಕ್ಕೆ ಸಮ ಎಂದ. ಈಗ ಅದೇ ದರ್ಶನ್ ಈ ನೆಲದ ಕಾನೂನು ಕಟ್ಟಳೆಗಳ ಮುಂದೆ ಶಾಟಕ್ಕಿಂತಲೂ ಕಡೆಯಾಗಿ ನಿಂತಿದ್ದಾನೆ. ಕೀರ್ತಿಯ ನಶೆ, ನೆತ್ತಿಗೇರಿ ಅಲ್ಲಿಯೇ ಪರ್ಮನೆಂಟಾಗಿ ನೆಲೆ ಕಂಡುಕೊಳ್ಳೋ ದುರಹಂಕಾರ ಎಂಥಾ ಅನಾಹುತ ಸೃಷ್ಟಿಸುತ್ತದೆಂಬುದಕ್ಕೆ ದರ್ಶನ್ ತಾಜಾ ಉದಾಹರಣೆಯಾಗಿ ಕಾಣಿಸುತ್ತಿದ್ದಾನೆ!