Subscribe to Updates
Get the latest creative news from FooBar about art, design and business.
Author: Santhosh Bagilagadde
Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.
ಕನ್ನಡ ಚಿತ್ರರಂಗ ಕಂಡ ಹೊಸ ತಲೆಮಾರಿನ ಪ್ರತಿಭಾನ್ವಿತ ನಟರ ಸಾಲಿನಲ್ಲಿ ಡಾಲಿ ಧನಂಜಯ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಒಂದು ಗೆಲುವು ದಕ್ಕಿಸಿಕೊಳ್ಳುವುದಕ್ಕೆ ಅದೆಷ್ಟು ಸರ್ಕಸ್ಸು ನಡೆಸಬೇಕು, ಅದೆಂತೆಂಥಾ ನಿರಾಸೆ, ನೋವುಗಳನ್ನು ಅನುಭವಿಸಬೇಕೆಂಬುದಕ್ಕೂ ಕೂಡಾ ಡಾಲಿಯ ವೃತ್ತಿ ಬದುಕು ಉದಾಹರಣೆಯಂತಿದೆ. ಅದೆಷ್ಟೋ ವರ್ಷಗಳ ಕಾಲ ಅಂಡಲೆದು, ಒಂದಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದರೂ ಕೂಡಾ ಧನಂಜಯ್‌ಗೆ ದೊಡ್ಡ ಮಟ್ಟದಲ್ಲಿ ಗೆಲುವು ಸಿಕ್ಕಿದ್ದು ಟಗರು ಚಿತ್ರದ ವಿಲನ್ ಪಾತ್ರದ ಮೂಲಕ. ಆ ನಂತರದಲ್ಲಿ ಡಾಲಿ ಅಂಥಾದ್ದೇ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆಂಬ ನಿರೀಕ್ಷೆಯನ್ನ ಧನಂಜಯ್ ಅಕ್ಷರಶಃ ಸುಳ್ಳಾಗಿಸಿದ್ದಾರೆ. ಎಂಥಾ ಪಾತ್ರಗಳನ್ನಾದರೂ ಮಾಡಬಲ್ಲ ಕಸುವಿದ್ದರೂ ಕೂಡಾ, ಈಗಿನ ಜಮಾನದಲ್ಲಿ ಬೇಕಿರೋದು ಕಮರ್ಶಿಯಲ್ ಸಿನಿಮಾಗಳಲ್ಲಿನ ಗೆಲುವು. ಈ ಕಾರಣದಿಂದಲೇ ಅನೇಕ ನಟರು ಬೇರ್‍ಯಾವ ಬಗೆಯ ಪಾತ್ರಗಳು, ಸಿನಿಮಾಗಳತ್ತಲೂ ಲಕ್ಷ್ಯ ವಹಿಸೋದಿಲ್ಲ. ಆದರೆ, ಧನಂಜಯ್ ಮಾತ್ರ ಅಚ್ಚರಿದಾಯಕ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಅದರ ಭಾಗವಾಗಿಯೇ ಈಗ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಟೀಶರ ವಿರುದ್ಧ ಸಿಡಿದೆದ್ದಿದ್ದ ಬೇಡ ಸಮುದಾಯದ ನಾಯಕನ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಅವರು ನಟಿಸುತ್ತಿರೋ…
ಈವತ್ತಿಗೆ ಕನ್ನಡ ಕಿರುತೆ ಜಗತ್ತು ಪಕ್ಕಾ ಟಿಆರ್‌ಪಿ ಭೂಮಿಕೆಯಲ್ಲಿ ಕಾರ್ಯನಿರ್ವಹಿಸುತ್ತಾ ಪ್ರೇಕ್ಷಕ ವಲಯದಲ್ಲೊಂದು ರೇಜಿಗೆ ಮೂಡಿಕೊಳ್ಳುವಂತೆ ಮಾಡಿದೆ. ಅಲ್ಲಿ ಅದರದ್ದೇ ಆದ ಆರ್ಥಿಕ ಲೆಕ್ಕಾಚಾರಗಳಿದ್ದಾವೆ. ಇಂಥಾ ವಹಿವಾಟುಗಳ ಅಬ್ಬರದಲ್ಲಿ ಕ್ರಿಯೇಟಿವಿಟಿ ಎಂಬುದು ಹೆಚ್ಚೂಕಮ್ಮಿ ಕಳೆದೇ ಹೋಗಿದೆ. ಕಥೆಯ ಹುಟ್ಟೂ ಕೂಡಾ ವಾಹಿನಿ ಮಂದಿಯ ಕೈಯಲ್ಲಿ ಸಿಕ್ಕು ನರಳುವಂಥಾ ಸ್ಥಿತಿ ಕಿರುತೆರೆ ಜಗತ್ತನ್ನು ಮೆಲ್ಲಗೆ ಪ್ರೇಕ್ಷಕರಿಂದ ವಿಮುಖಗೊಳ್ಳುವಂತೆ ಮಾಡುತ್ತಿದೆ. ಕಾಸು ಕೊಟ್ಟ ಮಂದಿಯ ಕೈಯಲ್ಲಿ ರಿಮೋಟು ಇದೆಯಾದರೂ, ಯಾವ ಚಾನೆಲ್ಲು ಬದಲಾಯಿಸಿದರೂ ಮತ್ತದೇ ರೋಧನೆ. ಇಂಥಾ ಹೊತ್ತಿನಲ್ಲಿ ಕಿರುತೆರೆ ಪ್ರೇಕ್ಷಕರು ಹೊರಳಿಕೊಳ್ಳೋದು ದಶಕಗಳ ಹಿಂದಿನ ಧಾರಾವಾಹಿಗಳ ಜಮಾನದತ್ತ! ಅಂಥಾ ಕಿರುತೆರೆ ಜಗತ್ತಿನ ಸುವರ್ಣ ಯುಗವೊಂದರ ಭಾಗವಾಗಿದ್ದುಕೊಂಡೇ, ಕಿರುತೆ ಪ್ರೇಕ್ಷಕರ ಅಭಿರುಚಿಯನ್ನು ಹೆಚ್ಚುವಂತೆ ಮಾಡಿದ್ದವರು ಟಿ.ಎನ್ ಸೀತಾರಾಮ್. ಮಾಯಾಮೃಗ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಸೀತಾರಾಮ್ ಅವರದ್ದು ಯಾವಾಗಲೂ ಭಿನ್ನ ಪಥ. ಈವತ್ತಿಗೂ ಅವರು ನಿರ್ದೇಶನ ಮಾಡಿದ ಧಾರಾವಾಹಿಗಳ ಟೈಟಲ್ ಸಾಂಗ್ ಅನ್ನು ಹುಡುಕಿ ಹುಡುಕಿ ಕೇಳುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಬಹುಶಃ ಅದು…
ಈಗೊಂದು ಹನ್ನೊಂದು ವರ್ಷಗಳ ಹಿಂದೆ ಬಿಗ್‌ಬಾಸ್ ಅಂತೊಂದು ಶೋ ಕನ್ನಡದಲ್ಲಿ ಶುರುವಾದಾಗ ಕಿರುತೆರೆ ಪ್ರೇಕ್ಷಕರ ಥ್ರಿಲ್ ಆಗಿದ್ದದ್ದು ನಿಜ. ಅಂಥಾದ್ದೊಂದು ಕಾತರ ಮೊದಲ ಸೀಜನ್ನಿನಲ್ಲಿ ಸಾರ್ಥಕ್ಯ ಕಂಡಿತ್ತು. ಆ ನಂತರದ ಸೀಜನ್ನುಗಳ ಮೂಲಕ ಕಿಚ್ಚಾ ಸುದೀಪ್ ಸಾರಥ್ಯದಲ್ಲಿ ಪ್ರೇಕ್ಷಕರನ್ನೆಲ್ಲ ನಿರಾಸೆಗೆ ತಳ್ಳುತ್ತಾ, ಬೆಚ್ಚಿ ಬೀಳಿಸುತ್ತಾ ಸಾಗಿದ್ದೇ ಸಾಧನೆ. ಆರಂಭಿಕವಾಗಿ ಒಂದಷ್ಟು ಸೀಜನ್ನುಗಳಲ್ಲಿ ತಲೆ ಒಂದಷ್ಟು ನೆಟ್ಟಗಿರುವವರ ನಡುವೆ ಒಬ್ಬೊಬ್ಬರು ಹುಚ್ಚು ಆಸಾಮಿಗಳನ್ನು ಸೇರಿಸಿಕೊಳ್ಳಲಾಗುತ್ತಿತ್ತು. ಇತ್ತೀಚೆಗೆ ಇರೋ ಹುಚ್ಚರ ನಡುವೆ ಸರಿಕಟ್ಟಾಗಿರುವವರನ್ನು ಹುಡುಕುವಷ್ಟರ ಮಟ್ಟಿಗೆ ಬಿಗ್‌ಬಾಸು ಹಡಾಲೆದ್ದಾಗಿದೆ. ಹನ್ನೊಂದನೇ ಸೀಜನ್ನು ದಾಟಿಕೊಳ್ಳುವ ಹೊತ್ತಿಗೆಲ್ಲ ಬಿಗ್‌ಬಾಸ್ ಅನ್ನೋದು ಅಕ್ಷರಶಃ ಹುಚ್ಚರ ಕಾರ್ಖಾನೆಯಂತಾಗಿತ್ತು. ಇದೀಗ ಮತ್ತೆ ಅದರ ಕದ ತೆರೆಯೋ ಹೊತ್ತು ಸಮೀಪಿಸುತ್ತಿದೆ! ಇದೀಗ ಆ ಕಾರ್ಖಾನೆಗೆ ಯಾರ್‍ಯಾರು ಸೇರಿಕೊಳ್ಳುತ್ತಾರೆಂಬ ಬಗ್ಗೆ ಅಂತೆ ಕಂತೆಗಳು, ಊಹಾಪೋಹಗಳು ಹರಿದಾಡುತ್ತಿವೆ. ಆ ಸಾಲಿನಲ್ಲೀಗ ನಟ ನಟಿಯರೂ ಸೇರಿದಂತೆ ಒಂದಷ್ಟು ಮಂದಿಯ ಹೆಸರುಗಳು ಕೇಳಿ ಬರುತ್ತಿವೆ. ಅಷ್ಟಕ್ಕೂ ಈ ಶೋನ ಮೂಲ ಪರಿಕಲ್ಪನೆ ನಮ್ಮ ದೇಶದ್ದಲ್ಲ. ಆದರೆ, ಅದರ ಮೂಲಕ…
ದರ್ಶನ್ ಪಟಾಮ್ಮು ಪವಿತ್ರಾ ಗೌಡಾಳ ಸಮೇತ ಜೈಲುಪಾಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣವೆಂಬುದು ಈ ಗ್ಯಾಂಗನ್ನು ಬಿಟ್ಟೂ ಬಿಡದಂತೆ ಕಾಡಿಸಿ, ಜೀವಾವಧಿ ಶಿಕ್ಷೆಯಾದೀತೇನೋ ಎಂಬಂಥಾ ಭಯವನ್ನೂ ತುಂಬಿದಂತಿದೆ. ಹೀಗೆ ದರ್ಶನ್ ಮತ್ತೆ ಕಂಬಿ ಹಿಂದೆ ಸರಿಯುತ್ತಲೇ ಆತನ ಅಭಿಮಾನಿಗಳು ಮಾತ್ರವಲ್ಲದೇ, ಓರ್ವ ನಟನಾಗಿ ಆತನನ್ನು ಮೆಚ್ಚಿಕೊಳ್ಳುವವರ ಸಿಟ್ಟೆಲ್ಲವೂ ಪವಿತ್ರಾಳತ್ತ ಹೊರಳಿಕೊಂಡಿದೆ. ಅಭಿಮಾನಿಗಳ ಮಾತು ಒತ್ತಟ್ಟಿಗಿರಲಿ; ಖುದ್ದು ಸುಪ್ರೀಂ ಕೋರ್ಟಿನ ನ್ಯಾಯಾಧೀಶರೇ ಒಟ್ಟಾರೆ ಅನಾಹುತಕ್ಕೆ ಮೂಲ ಕಾರಣ ಪವಿತ್ರಾ ಎಂಬ ಮಾತನ್ನಾಡಿದ್ದರು. ಅತ್ತ ರೇಣುಕಾಸ್ವಾಮಿಯ ಜೀವ ಹೋಗಿದೆ. ಇತ್ತ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದ ದರ್ಶನ್ ವೃತ್ತಿಬದುಕೇ ಅಡಕತ್ತರಿಗೆ ಸಿಲುಕಿದೆ. ಇನ್ನೊಂದಷ್ಟು ಹುಡುಗರ ಬದುಕೂ ಹಾಳಾಗಿದೆ. ಆದರೆ, ಅದಕ್ಕೆಲ್ಲ ಕಾರಣನಾದೆನಲ್ಲಾ ಎಂಬಂಥಾ ಪಶ್ಚಾತ್ತಾಪದ ಚೂರು ಪಸೆಯೂ ಪವಿತ್ರಾಳ ಮುಖದಲ್ಲಿ ಕಾಣಿಸಿಲ್ಲ! ಅದೆಂಥಾ ದುಷ್ಟರೇ ಆಗಿದ್ದರೂ ಇಂಥಾ ಅನಾಹುತದ ಪರಿಣಾಮವೊಂದರ ಅಂಚಿನಲ್ಲಿ ನಿಂತಾದ ಪಶ್ಚಾತ್ತಾಪದಿಂದ ಮನಸು ಮುರುಟುತ್ತೆ. ಆದರೆ, ಈ ಪವಿತ್ರಾ ಗೌಡಳ ಮನಸಲ್ಲಿ ಅಂಥಾ ಮನುಷ್ಯತ್ವಕ್ಕೆ ಒಂದಿನಿತೂ ಜಾಗವಿದ್ದಂತಿಲ್ಲ. ಆರಂಭದಲ್ಲಿ ಜೈಲಿಗೆ ಹೋದಲ್ಲಿಂದ ಹಿಡಿದು,…
ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬೇಲ್ ಪಡೆದು ಬಂದಿದ್ದ ದರ್ಶನ್ ಮತ್ತೆ ಜೈಲುಪಾಲಾಗೋ ಕ್ಷಣಗಳು ಹತ್ತಿರಾಗಿವೆ. ದರ್ಶನ್ ಗ್ಯಾಂಗಿಗೆ ಕೊಟ್ಟಿದ್ದ ಬೇಲ್ ರದ್ದುಗೊಳಿಸಬೇಕೆಂದು ಕೋರಿ ಸರ್ಕಾರದ ಪರವಾಗಿ ಸುಪ್ರೀಂ ಮೊರೆ ಹೋಗಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ದರ್ಶನ್ ಗ್ಯಾಂಗಿನ ಅನಾಹುತಕಾರಿ ನಡಾವಳಿಗಳನ್ನು ಗಮನಿಸಿ ಕೆಂಡಾಮಂಡಲರಾಗಿದ್ದರು. ಇದೀಗ ದರ್ಶನ್ ಬೇಲು ರದ್ದುಪಡಿಸಿ ಕೂಡಲೇ ಆರೋಪಿಗಳೆಲ್ಲರನ್ನು ಬಂಧಿಸಬೇಕೆಂದು ಆದೇಶ ನೀಡಿರುವ ನ್ಯಾಯಪೀಠ, ಯಾರೇ ಆಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬುದನ್ನು ಒತ್ತಿ ಹೇಳಿದೆ. ಇದರೊಂದಿಗೆ ದರ್ಶನ್‌ಗೆ ಅನುಕೂಲವಾಗುವಂತೆ ನಡೆದುಕೊಂಡ ಜೈಲಾಧಿಕಾರಿಗಳಿಗೂ ಶಾಕ್ ಕೊಟ್ಟಿದೆ. ಅವಳ್ಯಾರೋ ಪವಿತ್ರಾ ಗೌಡಳ ಮೋಹಕ್ಕೆ ಬಿದ್ದಿದ್ದ ದರ್ಶನ್ ಕೊಲೆಯ ಮೂಲಕ ರಕ್ತ ಮೆತ್ತಿಸಿಕೊಳ್ಳುವಾಗ ಕಾನೂನ ಎಂಬುದು ಈ ಪರಿಯಾಗಿ ಪ್ರಹಾರ ನಡೆಸುತ್ತೆ ಅಂದುಕೊಂಡಿರಲಿಕ್ಕಿಲ್ಲ. ಮಾಧ್ಯಮಗಳ ಮುಂದೆ ಎದೆಯುಬ್ಬಿಸಿ ಮಾತಾಡಿ ದಕ್ಕಿಸಿಕೊಂಡಷ್ಟೇ ಸಲೀಸಾಗಿ ಈ ಕೊಲೆ ಕೇಸಿಂದ ಹೊರಬರಬಹುದೆಂಬ ಗಾಢ ವಿಶ್ವಾಸ ಆತನಿಗಿದ್ದಂತಿತ್ತು. ಹಾಗಿಲ್ಲದೇ ಹೋಗಿದ್ದರೆ ತನ್ನನ್ನು ಬಂಧಿಸಲು ಬಂದ ಪೊಲೀಸ್ ಅಧಿಕಾರಿಗಳ ಮುಂದೆ ತಿಮಿರು ತೋರಿಸುತ್ತಿರಲಿಲ್ಲ; ಮುಚ್ಕೊಂಡು…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಟಾಲಮ್ಮಿಗೆ ರೇಣುಕಾಸ್ವಾಮಿ ಕೊಲೆ ಕೇಸು ಬೆಂಬಿಡದಂತೆ ಕಾಡಲಾರಂಭಿಸಿದೆ. ತಿಂಗಳುಗಟ್ಟಲೆ ಜೈಲುವಾಸ ಅನುಭವಿಸಿದ್ದ ದರ್ಶನ್ ಇದೀಗ ಬೇಲ್ ಮೇಲೆ ಹೊರ ಬಂದು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹೇಗಾದರೂ ಮಾಡಿ ಬೇಗ ಬೇಗನೆ ಡೆವಿಲ್ ಚಿತ್ರೀಕರಣ ಮುಗಿಸಿಕೊಳ್ಳುವ ತರಾತುರಿ ದಾಸನದ್ದು. ಒಂದಷ್ಟು ಕಾಲ ಹಳೇ ವರಸೆ ತೋರಿಸದೆ ಸುಮ್ಮನಿದ್ದು ಹೇಗೋ ಈ ಕೊಲೆ ಕೇಸಿನ ಕಂಟಕವನ್ನು ದಾಟಿಕೊಳ್ಳುವ ಹವಣಿಕೆಯಲ್ಲಿದ್ದ ದರ್ಶನ್ ಇದೀಗ ಕಂಗಾಲಾಗಿದ್ದಾರೆ. ಯಾಕೆಂದರೆ, ಸರ್ಕಾರದ ಕಡೆಯಿಂದ ಬೇಲ್ ಕ್ಯಾನ್ಸಲ್ ಮಾಡುವಂತೆ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗಿಗೆ. ಆ ಬಗೆಗಿನ ಅಂತಿಮ ತೀರ್ಪು ಹೊರಬೀಳಲು ಇದೀಗ ಕ್ಷಣಗಣನೆ ಆರಂಭವಾಗಿದೆ. ಬೇಲ್ ಸಿಗಲೂ ಕೂಡಾ ದರ್ಶನ್‌ಗೆ ಅಡಿಗಡಿಗೆ ಕಂಟಕಗಳು ಎದುರಾಗಿದ್ದವು. ಯಾರೂ ಊಹಿಸಿರದಂತೆ ದರ್ಶನ್ ತಿಂಗಳುಗಟ್ಟಲೆ ಜೈಲಲ್ಲಿ ಕೊಳೆಯುವಂತಾಗಿತ್ತು. ಅಲ್ಲಿ ತೆಪ್ಪಗಿದ್ದಿದ್ದರೆ ಒಂದಷ್ಟು ಬೇಗ ಬಿಡುಗಡೆಯ ಭಾಗ್ಯ ಸಿಗುತ್ತಿತ್ತೇನೋ. ಆದರೀತ ತನ್ನ ಪರಿಚಾರಿಕೆಗೆ ಪರಪ್ಪನ ಅಗ್ರಹಾರ ಸೇರಿಕೊಂಡಿದ್ದ ರೌಡಿ ಎಲಿಮೆಂಟುಗಳು, ಡಾನ್ ಅನ್ನಿಸಿಕೊಂಡಿರುವ ವಿಲ್ಸನ್ ಗಾರ್ಡನ್ ನಾಗನಂಥವರ ಜೊತೆ ಸೇರಿಕೊಂಡು ಯಡವಟ್ಟು ಮಾಡಿಕೊಂಡಿದ್ದ.…
ರಜನೀಕಾಂತ್ ಅಭಿನಯದ ಕೂಲಿ ಚಿತ್ರವೀಗ ದೇಶಾದ್ಯಂತ ಸದ್ದು ಮಾಡುತ್ತಿದೆ. ದೇಶದ ಗಡಿ ದಾಟಿ ವಿದೇಶಗಳಲ್ಲಿಯೂ ಕೂಡಾ ಕೂಲಿಯನ್ನು ಎದುರುಗೊಳ್ಳುವ ಉತ್ಸಾಹ ಮೇರೆ ಮೀರಿಕೊಂಡಿದೆ. ಜೈಲರ್ ಸಿನಿಮಾದ ಭಾರೀ ಯಶಸ್ಸಿನ ನಂತರದಲ್ಲಿ ಬಿಡುಗಡೆಗೊಳ್ಳುತ್ತಿರುವ ಕೂಲಿ ಬಾಕ್ಸಾಫೀಸ್‌ನಲ್ಲಿ ಭಾರೀ ದಾಖಲೆ ಸೃಷ್ಟಿಸುವ ಸೂಚನೆಗಳು ಈಗಾಗಲೇ ಕಾಣಿಸಲಾರಂಭಿಸಿವೆ. ಒಂದು ಮಹಾ ಸೋಲಿನ ಪರ್ವವನ್ನು ಜೈಲರ್ ಮೂಲಕ ದಾಟಿಕೊಂಡಿದ್ಚದ ತಲೈವಾ ಕೂಲಿಯ ಅವತಾರದಲ್ಲಿ ಮತ್ತೆ ಮೈಕೊಡವಿಕೊಳ್ಳಲಿರೋದು ಪಕ್ಕಾ ಎಂಬಂಥಾ ವಾತಾವರಣ ಈಗ ಚಾಲ್ತಿಯಲ್ಲಿದೆ. ಈ ಸಿನಿಮಾ ಮ ಉಂಗಡ ಬುಕ್ಕಿಂಗ್‌ನಲ್ಲಿ ಮಾಡಿರುವ ಕಲೆಕ್ಷನ್ನಿನ ಮೊತ್ತವೇ ಮಹಾ ಗೆಲುವಿನ ಮುನ್ಸೂಚನೆಯಂತಿರೋದು ಸುಳ್ಳಲ್ಲ! ಈಗ ಜಾಹೀರಾಗಿಕರುವ ಲೆಕ್ಕಾಚಾರವೊಂದರ ಪ್ರಕಾರವಾಗಿ ಹೇಳೋದಾದರೆ, ಮುಂಗಡ ಬುಕ್ಕಿಂಗ್‌ನಿಂದಲೇ ಕೂಲಿ ನೂರು ಕೋಟಿ ಕಲೆಕ್ಷನ್ನು ಮಾಡಿದೆ. ಕೇವಲ ತಮಿಳು ನಾಡು ಮಾತ್ರವಲ್ಲ; ಕರ್ನಾಟಕವೂ ಸೇರಿದಂತೆ ನಾನಾ ರಾಜ್ಯಗಳಲ್ಲಿ ಕೂಲಿ ಕ್ರೇಜ್ ಯಾವ ಮಟ್ಟದಲ್ಲಿದೆ ಅನ್ನೋದಕ್ಕೆ ಈ ಕಲೆಕ್ಷನ್ ಮೊತ್ತಕ್ಕಿಂತಲೂ ಬೇರೆ ಸಾಕ್ಷಿ ಬೇಕಿಲ್ಲ. ಈ ಮೊತ್ತದಲ್ಲಿ ವಿದೇಶಗಳ ಪಾಲು ಐವತ್ತು ಕೋಟಿಗಳಷ್ಟಿದೆ ಅನ್ನೋದು ಮತ್ತೊಂದು ವಿಶೇಷ.…
ಬೀದಿನಾಯಿಗಳ ಹಾವಳಿ ನಮ್ಮ ರಾಜ್ಯದಲ್ಲಿಯೂ ಆಗಾಗ ಸುದ್ದಿಯಾಗೋದಿದೆ. ವ್ಯಘ್ರಗೊಂಡ ಬೀದಿ ಶ್ವಾನಗಳು ಯಾರದ್ದೋ ಮೇಲೆ ಮುಗಿಬಿದ್ದು ದಾಳಿ ನಡೆಸಿದಾಗ, ಅವುಗಳ ನಿಯಂತ್ರಣದ ಬಗ್ಗೆ, ಹತೋಟಿ ಕ್ರಮಗಳ ಬಗ್ಗೆ ಒಂದಷ್ಟು ಚರ್ಚೆಗಳು ನಡೆಯುತ್ತವೆ. ಕರ್ನಾಟಕದಲ್ಲಂತೂ ಬಿಬಿಎಂಪಿ ಮಂದಿ ಬೀದಿ ನಾಯಿಗಳಿಗೆ ಬಿರ್ಯಾನಿ ವ್ಯವಸ್ಥೆ ಮಾಡ ಹೊರಟಿದ್ದ ವಿಚಾರ ದೇಶವ್ಯಾಪಿ ಸುದ್ದಿಯಾಗಿತ್ತು. ಇದೀಗ ದೆಹಲಿಯ ಬೀದಿನಾಯಿಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವೊಂದು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸ್ವತಃ ಶ್ವಾನ ಪ್ರೇಮಿಯಾಗಿರುವ ಕಿಚ್ಚಾ ಸುದೀಪ್ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ! ದೆಹಲಿಯಲ್ಲಿ ದಿನೇ ದಿನೆ ಹೆಚ್ಚಾಗುತ್ತಿದ್ದ ಬೀದಿ ನಾಯಿಗಳ ಉಪಟಳದ ಬಗ್ಗೆ ಸುಪ್ರೀಂ ಕೋರ್ಟ್ ಸುಮೋಟೋ ಪ್ರಕರಣ ದಾಖಲಿಸಿಕೊಂಡಿತ್ತು. ಈ ಬಗ್ಗೆ ಆದೇಶವೊಂದನ್ನು ನೀಡಿರುವ ಸುಪ್ರೀಂ ದೇಹಲಿಯಲ್ಲಿನ ನಾಯಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಅವುಗಳಿಗೆ ಬದುಕುವ ವಾತಾವರಣ ಕಲ್ಪಿಸುವಂತೆ ನಿರ್ದೇಶನ ನೀಡಿದೆ. ಈ ತೀರ್ಪನ್ನು ಗೌರವಿಸುತ್ತಲೇ ದೇಶಾದ್ಯಂತ ನಾನಾ ಮಂದಿ ತಂತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಸುದೀಪ್ ಸಾಮಾಜಿಕ ಜಾಲತಾಣದ ಮೂಲಕ…
ಬಿಗ್ ಬಾಸ್ ಎಂಬೋ ಭಳಾಂಗು ಶೋವೊಂದು ಮತ್ತೆ ಆರಂಭವಾಗಲು ದಿನಗಣನೆ ಶುರುವಾಗಿದೆ. ಕನ್ನಡ ಚಿತ್ರರಂಗ ಕಂಡ ಅತೀ ಬುದ್ಧಿವಂತ ಕಿಚ್ಚಾ ಸುದೀಪ್ ಕಳೆದ ಬಾರಿಯ ಶೋ ಮುಗಿಯುತ್ತಲೇ ಇನ್ನು ಮುಂದೆ ಈ ಶೋವನ್ನು ನಡೆಸಿಕೊಡೋದಿಲ್ಲ ಅಂತೊಂದು ನಿರ್ಧಾರ ಪ್ರಕಟಿಸಿದ್ದರು. ಆ ಹೊತ್ತಿನಲ್ಲಿ ಇದು ಕಿಚ್ಚನ ನೌಟಂಕಿಕ ನಾಟಕ ಎಂಬ ವಿಚಾರ ಬಹುತೇಕರಿಗೆ ಖಚಿತವಾಗಿತ್ತು. ಇದೀಗ ಮತ್ತೆ ಮತ್ತದೇ ಅತೀ ಬುದ್ಧಿವಂತಿಕೆಯ ಪೋಷಾಕು ತೊಟ್ಟ ಕಿಚ್ಚ ಮತ್ತೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಬೃಹನ್ನಾಟಕದಲ್ಲಿ ಯಾರ್‍ಯಾರು ಸ್ಪರ್ಧಿಗಳಾಗಿ ಭಾಗಿಯಾಗುತ್ತಾರೆ ಅಂತೊಂದು ಮಾಮೂಲಿ ಶೈಲಿಯ ಚರ್ಚೆ ಶುರುವಾಗಿದೆ. ರೂಢಿಯಂತೆಯೇ ಈ ಯಾದಿಯಲ್ಲಿ ಒಂದಷ್ಟು ಮಂದಿಯ ಹೆಸರುಗಳೂ ಕೂಡಾ ಕೇಳಿ ಬರಲಾರಂಭಿಸಿವೆ. ಆ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಹೆಸರು ಕಾಮಿಡಿ ಕಿಲಾಡಿ ಗಿಲ್ಲಿ ನಟನದ್ದು! ಬಿಗ್ ಬಾಸ್ ಎಂಬುದು ಪಕ್ಕಾ ಫೇಕ್ ಶೋ ಎಂಬ ವಿಚಾರ ಈಗಾಗಲೇ ಸಾಬೀತಾಗಿದೆ. ತಕರಾರುಗಳು ಏನೇ ಇದ್ದರೂ ಈ ಶೋ ಚೂರು ಪಾರಾದರೂ ಆಕರ್ಷಣೆ ಉಳಿಸಿಕೊಂಡಿರೋದೇ ಕಿಚ್ಚಾ ಸುದೀಪ್ ಕಾರಣದಿಂದ.…
ಮೊಡವೆ ಸುಂದರಿ ಸಾಯಿಪಲ್ಲವಿ ಇದೀಗ ಬಹು ನಿರೀಕ್ಷಿತ ರಾಮಾಯಣ ಚಿತ್ರದಲ್ಲಿ ಬ್ಯುಸಿಯಾಗಿದ್ದಾಳೆ. ಸಾಮಾನ್ಯವಾಗಿ ಸಿನಿಮಾ ನಟಿಯರೆಂದರೆ ಗ್ಲಾಮರ್‌ಗೆ ಮಾತ್ರವೇ ಬಹಳಷ್ಟು ಒತ್ತು ಕೊಡುವವರೆಂಬ ನಂಬಿಕೆ ಇದೆ. ಇದು ಆ ಜಗತ್ತಿನಲ್ಲಿ ನೆಲೆ ಕಂಡುಕೊಳ್ಳುವ ಅನಿವಾರ್ಯ ಸೂತ್ರವೂ ಹೌದು. ಆದರೆ, ದಕ್ಷಿಣ ಭಾರತೀಯ ಚಿತ್ರರಂಗ ಬಹು ಬೇಡಿಕೆಯ ನಟಿಯಾಗಿ, ಈಗ ಬಾಲಿವುಡ್ಡಿಗೂ ಹಾರಿರುವ ಸಾಯಿಪಲ್ಲವಿ ಮಾತ್ರ ತದ್ವಿರುದ್ಧ. ಇಂಥಾ ಸಾದಾ ಸೀದಾ ನಟಿ ರಾಮಾಯಣದ್ಲಿ ಸೀತೆಯಾಗಿ ನಟಿಸುತ್ತಿರೋದರ ಬಗ್ಗೆ ಬಹುತೇಕರಲ್ಲಿ ಹೆಮ್ಮೆ ಇದೆ. ಈ ರಾಮಾಯಣದ ನಡುವೆಯೇ ಸಾಯಿಪಲ್ಲವಿ ಮತ್ತೊಮ್ಮೆ ನಟ ನಾನಿಗೆ ಜೋಡಿಯಾಗಲಿರುವ ಸುದ್ದಿಯೊಂದು ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿದೆ. ನ್ಯಾಚುರಲ್ ಸ್ಟಾರ್ ನಾನಿಯೊಂದಿಗೆ ಸಾಯಿಪಲ್ಲವಿ ಈಗಾಗಲೇ ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದ್ದಾಳೆ. ಆ ಮೂರು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲ್ಲದೇ ಹೋದರೂ ಕೂಡಾ ನಾನಿ ಮತ್ತು ಸಾಯಿಪಲ್ಲವಿ ಜೋಡಿ ಪ್ರೇಕ್ಷಕರನ್ನು ಮೋಡಿಗೀಡು ಮಾಡಿತ್ತು. ಆ ಜೋಡಿಯನ್ನು ಮತ್ತೆ ಮತ್ತೆ ತೆರೆಯ ಮೇಲೆ ನೋಡುವ ಬಯಕೆ ಅದೆಷ್ಟೋ ಪ್ರೇಕ್ಷಕರಲ್ಲಿ ಮೂಡಿಕೊಳ್ಳುವಷ್ಟರ ಮಟ್ಟಿಗೆ ಆ ಕೆಮಿಸ್ಟ್ರಿ…

ನಮ್ಮ ಬಗ್ಗೆ
ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!