Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    Dangerous Drugs Mafia: ಅಲ್ಲಿ ಸಿಗುವ ಡೇಂಜರಸ್ ಡ್ರಗ್ಸ್ ಯಾವುದು ಗೊತ್ತಾ?

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಸ್ಪಾಟ್ ಲೈಟ್»nishvika naidu: ಲತ್ತೆ ನಸೀಬು ನೆಟ್ಟಗಾಗಿಸಲು ಹೋಮ ಹವನ!
    ಸ್ಪಾಟ್ ಲೈಟ್

    nishvika naidu: ಲತ್ತೆ ನಸೀಬು ನೆಟ್ಟಗಾಗಿಸಲು ಹೋಮ ಹವನ!

    By Santhosh Bagilagadde14/06/2024
    Facebook Twitter Telegram Email WhatsApp
    210cd5d1 be84 4ecf a072 03691b88a872
    Share
    Facebook Twitter LinkedIn WhatsApp Email Telegram

    ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ ಮಿಂಚಲಾರಂಭಿಸುತ್ತಾರೆ. ಆದರೆ, ಇನ್ನೂ ಕೆಲ ನಟಿಯರ ಪಾಲಿಗೆ ಅದೇನೇ ಸರ್ಕಸ್ಸು ನಡೆಸಿದರೂ ಯಶಸ್ಸೆಂಬುದು ಸತಾಯಿಸಿ ಬಿಡುತ್ತೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ನಟಿ (nishvika naidu) ನಿಶ್ವಿಕಾ ನಾಯ್ಡು. ಈಕೆ ವಾಸು ನಾನ್ ಪಕ್ಕಾ ಕಮರ್ಶಿಯಲ್ ಅಂತೊಂದು ಸಿನಿಮಾ ಮೂಲಕ ನಾಯಕಿಯಾಗಿದ್ದಳು. (anishthejeshwar) ಅನೀಶ್ ತೇಜೇಶ್ವರ್ ನಟನೆಯ ಆ ಚಿತ್ರ ತೋಪೆದ್ದು ಹೋಗಿತ್ತು. ತೋಪೆದ್ದದ್ದು ಕೇವಲ ಆ ಚಿತ್ರ ಮಾತ್ರವಲ್ಲ; (nishvika) ನಿಶ್ವಿಕಾಳ ನಸೀಬು ಕೂಡಾ ಅದೇ ಹಾದಿ ಹಿಡಿದಿತ್ತು. ಕರಟಕ ದಮನಕ ಚಿತ್ರವೂ ಅಂದುಕೊಂಡಂಥಾ ಗೆಲುವು ಕಾಣಲಿಲ್ಲ. ಇದೆಲ್ಲದರಿಂದ ಕಂಗಾಲಾದ ನಿಶ್ವಿಕಾ ಖತಾರ್ನಾಕ್ ಜ್ಯೋತಿಷಿ ವೇಣು ಸ್ವಾಮಿಯ ಮೊರೆ ಹೋದಳಾ?

    292339709 601215138033673 5599832469242892361 nಸದ್ಯಕ್ಕೆ ತೆಲುಗಿನ ಕೆಲ ಮೀಡಿಯಾಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಕೆ ವೇಣುಸ್ವಾಮಿಯ ಸಾರಥ್ಯದಲ್ಲಿ ಭಯಂಕರ ಹೋಮವೊಂದನ್ನು ಮಾಡಿದ್ದಾಳಂತೆ. ಅಷ್ಟಕ್ಕೂ ನಟ ನಟಿಯರು ಈ ವೇಣುಸ್ವಾಮಿಯ ಮೊರೆ ಹೋಗೋದು, ದುಬಾರಿ ಹೋಮ ಹವನಗಳನ್ನೆಲ್ಲ ಮಾಡಿಸೋದು ತೆಲುಗು ಚಿತ್ರರಂಗದ ಮಟ್ಟಿಗೆ ಹೊಸತೇನಲ್ಲ. ಆದರೆ, ನಿಶ್ವಿಕಾ ಪಾಲಿಗಿದು ಹೊಸತೇ ಇರಬಹುದು. ಹಾಗಾದರೆ, ನಿಶ್ವಿಕಾ ಏಕಾಏಕಿ ಈ ಹೋಮ ನಡೆಸಲು ಕಾರಣವೇನು? ಅದು ವೈಯಕ್ತಿಕ ಸಮಸ್ಯೆಗಾಗಿಯಾ ಅಥವಾ ಸಿನಿಮಾ ಕರಿಯರ್ ಗೆ ಸಂಬಂಧಿಸಿದ ವಿಚಾರವಾ? ಹೀಗೆ ನಾನಾ ಪ್ರಶ್ನೆಗಳೇಳೋದು ಸಹಜ. ಇದಕ್ಕೆ ಕೆಲ ಇಂಟರೆಸ್ಟಿಂಗ್ ಉತ್ತರಗಳು ಜಾಹೀರಾಗುತ್ತವೆ.

    Astrologer Venu Swamy prediction Pawan Kalyan his third wife Anna Lezhneva divorce in 2024 768x576 1ನಿಶ್ವಿಕಾಗೀಗ ಕನ್ನಡ ಚಿತ್ರರಂಗದಲ್ಲಿ ಬರಖತ್ತಾಗೋದು ಕಷ್ಟವೆಂಬಂತೆ ಕಂಡಿದೆ. ಈಕೆ ಯೋಗರಾಜ ಭಟ್ಟರ ಕರಟಕ ಧಮನಕ ಚಿತ್ರದಲ್ಲಿ ನಟಿಸುವ ಸುದ್ದಿ ಬಂದಿತ್ತಲ್ಲಾ? ಆ ಹೊತ್ತಿನಲ್ಲಿ ಸದರಿ ಸಿನಿಮಾ ಮೂಲಕವಾದರೂ ಈಕೆಯ ಅದೃಷ್ಟ ಖುಲಾಯಿಸಬಹುದೆಂಬ ನಿರೀಕ್ಷೆಯಿತ್ತು. ಪ್ರಭುದೇವನೊಂದಿಗೆ ಸೊಂಟ ಬಳುಕಿಸಿ, ಭಟ್ಟರ ಜೊತೆ ಸೇರಿ ನಾನಾ ಕಿತಾಪತಿ ನಡೆಸಿದ್ದಳು. ಆದರೂ ಬಿಡುಗಡೆಗೊಂಡ ಕರಟಕ ದಮನಕರಿಗೆ ಮೊದಲ ವಾರವೇ ಧಮ್ಮು ಕಟ್ಟಲಾರಂಭಿಸಿತ್ತು. ಯಾವಾಗ ಈ ಚಿತ್ರವೂ ತೋಪಾಯ್ತೋ, ಆಗಲೇ ನಿಶ್ವಿಕಾ ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿಯುವ ನಿರ್ಧಾರ ಕೈಗೊಂಡಿದ್ದಳಂತೆ. ಹೀಗಂತ ಆಕೆಯ ಆಪ್ತ ವಲಯದಲ್ಲಿಯೇ ಗುಲ್ಲೆದ್ದಿದೆ.

    nishvika2ಸೀದಾ ತೆಲುಉಗು ಚಿತ್ರರಂಗಕ್ಕೆ ಎಂಟರಿ ಕೊಟ್ಟರೆ, ಇಲ್ಲಿನ ಲತ್ತೆ ಪುರಾಣ ಅಲ್ಲೀವರೆಗೂ ಹಿಂಬಾಲಿಸುತ್ತದೆಂಬ ಭಯ ನಿಶ್ವಿಕಾಳನ್ನು ಕಾಡಿರಬಹುದು. ಈ ಕಾರಣದಿಂದಲೇ ಪ್ರಳಯಾಂತಕ ಜ್ಯೋತಿಶಿ ವೇಣು ಸ್ವಾಮಿಯ ಮೊರೆ ಹೋಗಿ, ಆತನ ಮನೆಯಲ್ಲಿಯೇ ಮಹಾ ಯಾಗವೊಂದನ್ನ ಮಾಡಿಸಿದ್ದಾಳಂತೆ. ಅಷ್ಟಕ್ಕೂ ಈ ಹಿಂದೆ ರಶ್ಮಿಕಾ ಮಂದಣ್ಣ ಕೂಡಾ ವೇಣು ಸ್ವಾಮಿಯ ಮೊರೆ ಹೋಗಿದ್ದಳು. ಹೋಮ ಹವನ ನಡೆಸಿದ್ದಳು. ನಿಶ್ವಿಕಾ ಅದನ್ನು ಮುಗಿಸಿಕೊಂಡೇ ತೆಲುಉಗಿಗೆ ಎಂಟ್ರಿ ಕೊಡಲು ತೀರ್ಮಾನಿಸಿದಂತಿದೆ. ಈ ವೇಣು ಸ್ವಾಮಿ ಸೆಲೆಬ್ರಿಟಿಗಳ ಮೌಢ್ಯವನ್ನೇ ಕಾಸೆಣಿಸುವ ಮೂಲವಾಗಿಸಿಕೊಂಡಿರೋ ಹೈಟೆಕ್ ವಂಚಕ. ಸಿನಿಮಾ, ರಾಜಕೀಯ ಸೇರಿದಂತೆ ಎಲ್ಲದರ ಭವಿಷ್ಯಕ್ಕೂ ಬಾಯಿ ಹಾಕೋ ವೇಣುಗೆ ಅನೇಕ ಸಾರಿ ಮುಜುಗರ ಎದುರಾಗಿದೆ. ಆದರೂ ಆತನ ಮಾರ್ಕೆಟ್ಟು ಕುಗ್ಗಿಲ್ಲ. ಯಾಕಂದ್ರೆ, ನಿಶ್ವಿಕಾಳಂಥಾ ಸೆಲೆಬ್ರಿಟಿಗಳ ಸಂಖ್ಯೆಯಿನ್ನೂ ತಗ್ಗಿಲ್ಲ!

    #actressnishvika #nishvikanaidu #venuswamy karatakadamanaka kfi sandalwood
    Share. Facebook Twitter LinkedIn WhatsApp Telegram Email
    Previous Articledarsha-pavithra gowda: ದರ್ಶನ್-ಪವಿತ್ರಾಗೆ ಜೈಲು ಫಿಕ್ಸು!
    Next Article darshan manager malli: ತಿರ್ಪೆ ಕಾಸಲ್ಲಿ ತೀರ್ಥ ಯಾತ್ರೆ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Dangerous Drugs Mafia: ಅಲ್ಲಿ ಸಿಗುವ ಡೇಂಜರಸ್ ಡ್ರಗ್ಸ್ ಯಾವುದು ಗೊತ್ತಾ?

    03/01/2026

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    02/01/2026

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    01/01/2026
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (10)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (81)
    • ಸೌತ್ ಜೋನ್ (138)
    • ಸ್ಪಾಟ್ ಲೈಟ್ (219)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಸ್ಪಾಟ್ ಲೈಟ್ 03/01/2026

    Dangerous Drugs Mafia: ಅಲ್ಲಿ ಸಿಗುವ ಡೇಂಜರಸ್ ಡ್ರಗ್ಸ್ ಯಾವುದು ಗೊತ್ತಾ?

    ರೇವ್ ಪಾರ್ಟಿಯ ಕಾರಣದಿಂದ ಬೆಂಗಳೂರು ಮತ್ತೆ ಮತ್ತೆ ಸುದ್ದಿಯಲ್ಲಿರುತ್ತೆ. ಹಣವಂತರ ತೆವಲಿನ ಕಾರಣಕ್ಕೆ ಬೆಂಗಳೂರಿಗೊಂದಷ್ಟು ಕುಖ್ಯಾತಿಯೂ ಅಂಟಿಕೊಂಡಿದೆ. ಈವತ್ತಿಗೆ ಮಹಾರಾಷ್ಟ್ರ…

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Stay In Touch
    • Facebook
    • Instagram
    • YouTube
    • WhatsApp
    Tags
    #actress (19) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (74) challengingstardarshan (10) cinishodha (139) cinishodhareview (16) coolie (6) crime (9) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (170) kgf (8) kicchasudeep (11) kicchasudeepa (6) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (199) shivarajkumar (9) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 26, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.