Close Menu
Cini ShodhaCini Shodha

    Subscribe to Updates

    Get the latest creative news from FooBar about art, design and business.

    What's Hot

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Facebook X (Twitter) Instagram
    Cini ShodhaCini Shodha
    • ಮುಖಪುಟ
    • ಸ್ಪಾಟ್ ಲೈಟ್
    • ಟೇಕಾಫ್
    • ಜಾಪಾಳ್ ಜಂಕ್ಷನ್
    • ಎಡಿಟೋರಿಯಲ್
    • ಬಣ್ಣದ ಹೆಜ್ಜೆ
    • ಕಿರುತೆರೆ ಕಿಟಕಿ
    • ಹೀಗಿದೆ ಈ ಪಿಚ್ಚರ್
    • ಕಲರ್ ಜೋನ್
      • ಬಾಲಿವುಡ್
      • ಹಾಲಿವುಡ್
      • ಸೌತ್ ಜೋನ್
    • OTT
    Facebook X (Twitter) Instagram
    Cini ShodhaCini Shodha
    You are at:Home»ಸ್ಪಾಟ್ ಲೈಟ್»rave party: ವಿಷಕ್ಕೂ ತಣಿಯದ ವಿಕೃತಿಯ ಕಟ್ಟ ಕಡೆಯ ಹಂತ ಸ್ನೇಕ್ ಬೈಟ್!
    ಸ್ಪಾಟ್ ಲೈಟ್

    rave party: ವಿಷಕ್ಕೂ ತಣಿಯದ ವಿಕೃತಿಯ ಕಟ್ಟ ಕಡೆಯ ಹಂತ ಸ್ನೇಕ್ ಬೈಟ್!

    By Santhosh Bagilagadde10/11/2023
    Facebook Twitter Telegram Email WhatsApp
    dd61c8c5 b469 4cc5 88ca 4ed174d5733c
    Share
    Facebook Twitter LinkedIn WhatsApp Email Telegram

    ದೂರದ ನೋಯ್ಡಾದಲ್ಲಿ (noida) ಮತ್ತೆ ರೇವ್ ಪಾರ್ಟಿಯ (rave party) ಸದ್ದು ಶುರುವಾಗಿದೆ. ಬಿಗ್ ಬಾಸ್ ಓಟಿಟಿ ಸ್ಪರ್ಧಿಯಾಗಿದ್ದ (elvish yadav arrested) ಎಲ್ವಿಶ್ ಯಾದವ್ ಎಂಬಾತನನ್ನು ಪಟಾಲಮ್ಮಿನ ಸಮೇತ ಪೊಲೀಸರು ಜೈಲಿಗೆ ಗದುಮಿದ್ದಾರೆ. ಅದ್ಯಾವುದೋ ಯೂಟ್ಯೂಬ್ ಮೂಲಕ ಒಂದಷ್ಟು ಚಾಲ್ತಿಗೆ ಬಂದಿದ್ದಾತ ಎಲ್ವಿಶ್. ಸಕಲ ಚಟಗಳಿಗೂ ದಾಸನಾಗಿದ್ದ ಈತನನ್ನು ಬರಗೆಟ್ಟ (biggboss) ಬಿಗ್ ಬಾಸ್ ಶೋನಲ್ಲಿ ಮೆರೆಸಲಾಗಿತ್ತು. ಆ ಪ್ರಸಿದ್ಧಿಯ ಮರೆಯಲ್ಲಿಯೇ ಲಾಗಾಯ್ತಿನಿಂದಲೂ (rave party) ರೇವ್ ಪಾರ್ಟಿ, ಡ್ರಗ್ಸ್ ಸರಬರಾಜಿನಂಥಾ ದಂಧೆ ನಡೆಸುತ್ತಿದ್ದವನು ಎಲ್ವಿಶ್. ಸಾಮಾನ್ಯವಾಗಿ ಇಂಥಾ ರೈಡುಗಳಾದಾಗ ನಾನಾ ವೆರೈಟಿಯ (drugs) ಡ್ರಗ್ಸ್ ಗಳನ್ನ ವಶಪಡಿಸಿಕೊಳ್ಳಲಾಗುತ್ತೆ. ಆದರೆ, ಈತನಿಂದ ವಶಪಡಿಸಿಕೊಂಡ ಐಟಮ್ಮುಗಳು ಎದೆ ಅದುರಿಸುವಂತಿವೆ!

    images 4ಯಾಕಂದ್ರೆ, ಎಲ್ವಿಸ್ ಕಡೆಯಿಂದ ಪೊಲೀಸರು ವಶಪಡಿಸಿಕೊಂಡಿರೋದು ಐದು ಜೀವಂತ ನಾಗರ ಹಾವುಗಳು, ಒಂದು ಹೆಬ್ಬಾವು, ಎರಡು ತಲೆ ಹಾವು ಸೇರಿದಂತೆ ಇಪ್ಪತ್ತು ಬಗೆಯ ವಿಷಕಾರಿ ಹಾವುಗಳನ್ನು. ಡ್ರಗ್ಸ್ ಲೋಕದ ಭಯಾನಕ ಸತ್ಯಗಳ ಅರಿವಿಲ್ಲದವರು ಈ ವಿಚಾರ ಕೇಳಿ ಬೆಚ್ಚಿ ಬೀಳೋದರಲ್ಲಿ ಅಚ್ಚರಿಯೇನಿಲ್ಲ. ಡ್ರಗ್ಸ್ ಎಂಬುದನ್ನ ಮಾತ್ರೆಗಳು, ಪೌಡರ್, ಇಂಜಕ್ಷನ್ನುಗಳ ಮೂಲಕ ತೆಗೆದುಕೊಳ್ಳಲಾಗುತ್ತೆ ಅನ್ನೋದು ಜನಸಾಮಾನ್ಯರ ತಿಳಿವಳಿಕೆ. ಆದರೆ, ರೇವ್ ಪಾರ್ಟಿಗಳಲ್ಲಿ ಮೇಳೈಸುವ ನಶೆಯ ತಿಲ್ಲಾನ ಅಂಥಾದ್ದರಿಂದ ತಣಿಯುವುದಿಲ್ಲ. ರೇವ್ ಪಾರ್ಟಿ ತಲುಪಿಕೊಂಡವರು ನಶೆಯ ವಿಚಾರದಲ್ಲಿಯೂ ಉತ್ತುಂಗದ ಸ್ಥಿತಿ ತಲುಪಿರುತ್ತಾರೆ. ಅಲ್ಲಿ ಭೀಕರ ನಶೆಯ ಮತ್ತೊಂದು ರೌರವ ಜಗತ್ತು ಗರಿ ಬಿಚ್ಚಿಕೊಂಡಿರುತ್ತೆ. ವಿಶೇಷಜವೆಂದರೆ, ಕನ್ನಡವೂ ಸೇರಿದಂತೆ ಬಹುತೇಕ ಚಿತ್ರರಂಗದ ನಟ ನಟಿಯರು ಇಂಥಾ ರೇವ್ ಪಾರ್ಟಿಗಳ ಗುಂಗಿಗೆ ಬಿದ್ದಿದ್ದಾರೆ!

    1689845878 elvish dictator bb ott 2ಹಾಗಾದರೆ, ಈ ರೇವ್ ಪ;ಆರ್ಟಿ ಅಂದರೇನು? ಅದರೊಳಗೆ ಎಂತೆಂಥಾ ವ್ಯವಹಾರಗಳು ನಡೆಯುತ್ತವೆ ಎಂಬ ಕುತೂಹಲ ಮೂಡಿಕೊಳ್ಳುತ್ತೆ. ಅದಕ್ಕೆ ಉತ್ತರ ಹುಡುಕ ಹೊರಟರೆ ಭಯಾನಕ ಜಗತ್ತೊಂದು ತಂತಾನೇ ಕಣ್ಣೆದುರು ತೆರೆದುಕೊಳ್ಳುತ್ತೆ. ಈ ನಶೆ ಅನ್ನೋದಿದೆಯಲ್ಲಾ? ಅದು ಒಂದು ಹಂತಕ್ಕೆ ಮಾತ್ರವೇ ತೃಪ್ತವಾಗುವಂಥಾದ್ದಲ್ಲ. ಅದು ಓರ್ವ ವ್ಯಕ್ತಿಯನ್ನು ಎಂಥಾ ಮಟ್ಟಕ್ಕೂ ಕರೆದೊಯ್ದು ನಿಲ್ಲಿಸಿ ಬಿಡುತ್ತದೆ. ಟ್ಯಾಬ್ಲೆಟ್ಟು, ಪೌಡರ್ರು, ಗಾಂಜಾಗಳ ಘಾಟಿಗೆ ದೇಹ ಒಮ್ಮೆ ಒಗ್ಗಿಕೊಂಡರೆ, ಮತ್ತೊಂದು ಲೆವೆಲ್ಲಿನ ಕಿಕ್ಕಿಗಾಗಿ ಹಾತೊರೆಯಲಾರಂಭಿಸುತ್ತಾರೆ. ಅಂಥಾ ಹಂತ ತಲುಪಿದವರಿಗೆ ಅಕ್ಷರಶಃ ಸ್ವರ್ಗದಂತೆ ಕಾಣಿಸೋದು ಇಂಥಾ ರೇವ್ ಪಾರ್ಟಿಗಳೇ!

    download 5ಅಲ್ಲಿ ಹೊರ ಜಗತ್ತಿಗೆ ಗೊತ್ತಿಲ್ಲದ ನಶೆಯ ಮೂಲಗಳಿರುತ್ತವೆ. ಕಾರ್ಕೋಟಕ ವಿಷದ ಹಾವುಗಳಿಂದ ಕಚ್ಚಿಸಿಕೊಂಡು ಸುಖಿಸುವ ಸೈಕೋಗಳೇ ಅಲ್ಲಿ ಹಬೆಚ್ಚಾಗಿ ತುಂಬಿಕೊಂಡಿರುತ್ತವೆ. ಅದರಲ್ಲಿಯೂ ವಿಶೇಷವಾಗಿ ಕ್ಯಾಂಡಿ ಪ್ಲಿಪ್ ಅಂತ ಕರೆಯಲಾಗೋ ಡ್ರಗ್ಸ್ ಅಂತೂ ನಿಜಕ್ಕೂ ಭಯಾನಕ. ಹೆಚ್ಚಾಗಿ ರೇವ್ ಪಾರ್ಟಿಗೆ ಹೋಗುವವರ ಪ್ರಧಾನ ಆಕರ್ಷಣೆಯಾಗಿರೋದು ಅದೇ ಡ್ರಗ್ ಕಂಟೆಂಟು. ಈ ಕ್ಯಾಂಡಿ ಪ್ಲಿಪ್ ಅದ್ಯಾವ ಪರಿ ಡೇಂಜರಸ್ ಅಂದ್ರೆ, ಅದರ ಪ್ರಭಾವ ವ್ಯಕ್ತಿಯೋರ್ವನ ಮೇಲೆ ಕನಿಷ್ಠ ಏಳು ಗಂಟೆಗಳ ಕಾಲ ಇರುತ್ತದೆ. ಆ ಅವಧಿಯಲ್ಲಿ ಆತನೊಳಗೋರ್ವ ರಕ್ಕಸನ ಪ್ರವೇಶವಾದಂತಿರುತ್ತದೆ.

    download 12ಆ ಹಂತದಲ್ಲಿ ಸೊಕ್ಕಿ ಕೆನೆಯುವ ನಿರ್ಭೀತ ಮನಃಸ್ಥಿತಿಯೊಂದು ಆವರಿಸಿಕೊಳ್ಳುತ್ತೆ. ಆ ಘಳಿಗೆಯಲ್ಲಿ ಕ್ಯಾಂಡಿ ಪ್ಲಿಪ್ ತೆಗೆದುಕೊಂಡವರು ಯಾರ ಎದೆ ಬಗೆಯಲೂ ಸೈ, ಅದೆಂಥಾ ಶಕ್ತಿ ಶಾಲಿಗಳೊಂದಿಗೆ ಬಡಿದಾಡಲೂ ಸೈ ಎಂಬಂತಿರುತ್ತಾರೆ. ಅಕ್ಷರಶಃ ಸೈಕೋ ಮನಃಸ್ಥಿಒತಿಗೀಡಾದ ಇಂಥವರು ರೇವ್ ಪಾರ್ಟಿಗಳಲ್ಲಿ ವಿಕೃತ ಕಾಮದಲ್ಲಿಯೂ ತೊಡಗಿಕೊಳ್ಳುತ್ತಾರೆ. ಮನುಷ್ಯ ಜಗತ್ತೇ ಹೇಸಿಗೆ ಪಟ್ಟುಕೊಳ್ಳುವಂತೆ, ಅಕ್ಷರಶಃ ಮೃಗಗಳಂತೆ ಕೆನೆದಾಡುತ್ತಾರೆ. ಈವತ್ತಿಗೂ ಬೆಂಗಳೂರಿನಂಥಾ ನಗರದ ಇಕ್ಕೆಲಗಳಲ್ಲಿ, ಅಲ್ಲಿಂದ ಕಿಲೋಮೀಟರುಗಟ್ಟಲೆ ದೂರದಲ್ಲಿರೋ ರೆಸಾರ್ಟುಗಳಲ್ಲಿ ಇಂಥಾ ರೇವ್ ಪಾರ್ಟಿಗಳು ಎಗ್ಗಿಲ್ಲದೆ ನಡೆಯುತ್ತವೆ.

    images 9ಇಂಥಾ ಪಾರ್ಟಿಗಳಲ್ಲಿಯೇ ನಶೆಯ ತೆಕ್ಕೆಗೆ ಬಿದ್ದವರು ಸ್ನೇಕ್ ಬೈಟ್ ಗಾಗಿ ಹಾತೊರೆಯುತ್ತಾರೆ. ವಿಷ ಸರ್ಪಗಳಿಂದ ಕಚ್ಚಿಸಿಕೊಂಡು, ನರನಾಡಿಗಳಿಗೆ ವಿಷವೇರಿಕೊಳ್ಳೋದನ್ನೂ ಕೂಡಾ ಸುಖಿಸುತ್ತಾರೆ. ಒಂದಷ್ಟು ಕಾಲ ಡ್ರಗ್ಸ್ ಬಲದಿಂದ ಬದುಕಿದ್ದು, ನಂತರದಲ್ಲಿ ದುರಂತ ಅಂತ್ಯ ಕಾಣುತ್ತಾರೆ. ಈವತ್ತಿಗೆ ಕೆಲ ರಾಜಕಾರಣಿಗಳ ಖೂಳ ಮಕ್ಕಳು, ಶ್ರೀಮಂತರ ಸಂತಾನಗಳು, ಅನೇಕ ನಟ ನಟಿಯರೂ ಇಂಥಾ ಡ್ರಗ್ಸ್ ನಶೆಗೆ ದಾಸರಾಗಿದ್ದಾರೆ. ಅವಳ್ಯಾರೋ ರಾಗಿಣಿಯಂಥವಳನ್ನು ಡ್ರಗ್ಸ್ ಕೇಸಿನಲ್ಲಿ ಬಂಧಿಸುವ ಖಾಖಿಗಳು, ಎಗ್ಗಿಲ್ಲದೆ ನಡೆಯೋ ರೇವ್ ಪಾರ್ಟಿಗಳತ್ತ ಕುರುಡಾಗೋದೇ ಹೆಚ್ಚು. ಯಾಕಂದ್ರೆ, ಅಂಥಾ ಪಾರ್ಟಿಗಳಲ್ಲಿ ಹಣವಂತರ ಪಾಲಿರುತ್ತೆ. ಅದು ರಾತ್ರಿ ಬೆಳಗಾಗೋದರೊಳಗೆ ಲಕ್ಷ, ಕೋಟಿಯ ಕಮಾಯಿ ಮಾಡೋ ದಂಧೆ. ಅಲ್ಲಿ ಡ್ರಗ್ಸು, ಸೆಕ್ಸು ಸೇರಿದಂತೆ ಎಲ್ಲವೂ ಇರುತ್ತೆ. ಹಾಗಿದ್ದ ಮೇಲೆ ಈ ಸೋ ಕಾಲ್ಡ್ ಸೆಲೆಬ್ರಿಟಿಗಳು ಅದರತ್ತ ವಾಲದಿರಲು ಸಾಧ್ಯವೇ?

    bollywood cinishodha drugscase elvishyadav sandalwooddrugscase
    Share. Facebook Twitter LinkedIn WhatsApp Telegram Email
    Previous Articlesalman khan-ishwarya rai: ಐಶ್ವರ್ಯಾ ರೈಗೆ ಅದೆಷ್ಟು ಕಾಟ ಕೊಟ್ಟಿದ್ದ ಗೊತ್ತಾ ಸಲ್ಮಾನ್ ಖಾನ್?
    Next Article prabhas: ಕಾಲಿಗಷ್ಟೇ ಅಲ್ಲ; ಬಾಹುಬಲಿಯ ಮನಸಿಗೂ ಆಗಿದೆ ಗಾಯ!
    Santhosh Bagilagadde

    Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

    Related Posts

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    02/01/2026

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    01/01/2026

    Dhurandhar Movie Updates no 1 : ಬಾಲಿವುಡ್ಡಿಗೆ ಬಿಗ್ ರಿಲೀಫ್!

    01/01/2026
    Search
    Category
    • Cinema (5)
    • OTT (4)
    • ಕಿರುತೆರೆ ಕಿಟಕಿ (5)
    • ಜಾಪಾಳ್ ಜಂಕ್ಷನ್ (37)
    • ಟೇಕಾಫ್ (10)
    • ಬಣ್ಣದ ಹೆಜ್ಜೆ (25)
    • ಬಾಲಿವುಡ್ (81)
    • ಸೌತ್ ಜೋನ್ (138)
    • ಸ್ಪಾಟ್ ಲೈಟ್ (218)
    • ಹಾಲಿವುಡ್ (2)
    • ಹೀಗಿದೆ ಈ ಪಿಚ್ಚರ್ (20)
    Recommended Host
    ಶೋಧ ನ್ಯೂಸ್ ಗೆ ಭೇಟಿ ನೀಡಿ
    Shodha News
    Top Posts

    mavalli karthik: ರಂಗಭೂಮಿ ನಟನ ಸಿನಿಮಾ-ಮಾಧ್ಯಮ ಯಾನ!

    21/11/202332 Views

    bhajarangi loki: ಅಬ್ಬರಿಸೋ ಲೋಕಿಗೆ ಸಿಕ್ಕಿದ್ದು ಎಂಥಾ ಪಾತ್ರ?

    30/05/202526 Views

    Jailer2 Movie Updates: ಆಮೀರ್ ಖಾನ್ ಕಾಮಿಡಿ ಪೀಸಾಗಿದ್ದ ಫ್ಲಾಶ್‌ಬ್ಯಾಕ್!

    05/12/202521 Views

    arjun krishna is no more: ಅದು ನಿರ್ದೇಶಕನಾಗಲೆಂದೇ ಹುಟ್ಟಿದಂತಿದ್ದ ಆಪ್ತ ಜೀವ!

    09/03/202520 Views
    Don't Miss
    ಸ್ಪಾಟ್ ಲೈಟ್ 02/01/2026

    Nishvika Naidu: ಮಾರ್ಕ್ ಮೂಲಕ ಖುಲಾಯಿಸಿತಾ ಅದೃಷ್ಟ?

    ಕೆಲ ನಟಿಯರು ಒಂದೇ ಒಂದು ಸಿನಿಮಾ ಮೂಲಕ ಸ್ಟಾರುಗಿರಿ ಪಡೆದು ಮೆರೆದುಬಿಡುತ್ತಾರೆ. ನೋಡ ನೋಡುತ್ತಲೇ ಬೇರೆ ಭಾಷೆಗಳಿಗೂ ಹಾರಿ ಮಿರಮಿರ…

    rajinikanth movie: ಮಹಿಳಾ ನಿರ್ದೇಶಕಿಯ ಕಥೆಗೆ ರಜನಿ ಒಪ್ಪಿಗೆ?

    Pyaar Kannada #1 Movie: ಪ್ರೇಮಕಥನಕ್ಕೆ ಕನಸುಗಾರನ ಸಾಥ್!

    Jananayagan Trailer : ರೀಮೇಕ್ ಸರಕು ಹೇಗಿದ್ದೀತೆಂಬ ಕೌತುಕ!

    Stay In Touch
    • Facebook
    • Instagram
    • YouTube
    • WhatsApp
    Tags
    #actress (18) #alluarjun (8) #bilichukkihallihakki (8) #bilichukkihallihakkimovie (6) #gunsandrosesmovie) (6) #kannadamovie (11) #kiccha (6) #maheshgowda (7) #pavithragowda (8) #renukaswamymurdercase (10) 'santhoshbagilagadde (7) bahubali (8) bannadahejje (17) biggbosskannada (6) bollywood (74) challengingstardarshan (10) cinishodha (139) cinishodhareview (16) coolie (6) crime (8) darshan (18) jailer (8) kanthara (7) kerebete_gowrishankar_titlesong_kfi_byvijayendra_shivamogga_sandalwood_kfi_cinishodha (10) kfi (170) kgf (8) kicchasudeep (11) kicchasudeepa (6) krishnegowda (6) lifestory (19) mollywood (10) pawankalyan (8) pinkielli (5) prabhas (19) prashanthneel (7) rajani (6) rajanikanth (12) rashmikamandanna (9) ravike_prasanga_kannadamovie_geethabharathibhat_santhoshkodenkeri_kfi_sandalwood_cinishodha (7) rip (6) rukminivasanth (7) sandalwood (198) shivarajkumar (9) tollywood (60) yash (11)
    ನಮ್ಮ ಬಗ್ಗೆ

    ಈ ನಾಡಿನಲ್ಲಿ ಹೆಸರಾಗಿರುವ ಹಾಯ್ ಬೆಂಗಳೂರ್, ಅಗ್ನಿ, ಲಂಕೇಶ್ ಪತ್ರಿಕೆ, ಹಿಮಾಗ್ನಿ ಮಂತಾದ ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ, ತಮ್ಮದೇ ಆದ ಛಾಪು ಮೂಡಿಸಿರುವವರು ಪತ್ರಕರ್ತ ಸಂತೋಷ್ ಬಾಗಿಲಗದ್ದೆ. ರಾಜಕೀಯ, ಅಪರಾಧ, ಸಿನಿಮಾ ಸೇರಿದಂತೆ ತನಿಖಾ ಪತ್ರಿಕೋದ್ಯಮದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡು, ಅನೇಕ ಭ್ರಷ್ಟರನ್ನು ಬಯಲಾಗಿಸಿರುವ ಬಾಗಿಲಗದ್ದೆ ಆರಂಭಿಸಿರುವ ವಿಭಿನ್ನ ಡಿಜಿಟಲ್ ಹೆಜ್ಜೆ ಶೋಧ ಮತ್ತು ಸಿನಿ ಶೋಧ. ಇದು ಹೊಸಾ ಆಯಾಮದ ಪತ್ರಿಕೋದ್ಯಮ. ಸತ್ಯದ ಭೂಮಿಕೆಯ ನೇರ-ನಿಷ್ಠುರ ವರದಿಗಳ ಸಂಕಲ್ಪದೊಂದಿಗೆ, ಭಿನ್ನ ಶೈಲಿಯ ಬರವಣಿಗೆಯ ಮೂಲಕ ಹೊಸತೊಂದು ಜಗತ್ತು ನಿಮ್ಮೆದುರು ನಿರಂತವಾಗಿ ತೆರೆದುಕೊಳ್ಳಲಿದೆ; ಅಚ್ಚರಿಗೀಡುಮಾಡಲಿದೆ!
    ಅಂದಹಾಗೆ, ಇಲ್ಲಿ ಪ್ರಕಟವಾಗೋ ಯಾವುದೇ ಬರಹಗಳನ್ನು ಯಾರೂ ಭಟ್ಟಿ ಇಳಿಸುವಂತಿಲ್ಲ. ಅಂಥಾ ಕಳವು ವೃತ್ತಾಂತ ಗಮನಕ್ಕೆ ಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು.

    All Rights Reserved by dreamwings media
    Email: dreamwingsmedia@gmail.com

    Facebook X (Twitter) YouTube WhatsApp
    Most Popular

    jeevasakhi: ಕಿರುಚಿತ್ರದೊಂದಿಗೆ ಪರೀಕ್ಷೆಗೊಡ್ಡಿಕೊಂಡ ಸಂಗಮೇಶ್ ಪಾಟೀಲ್!

    01/06/20230 Views

    samantha ruth prabhu: ನೋವಿನ ಬಳಿಕ ಕಣ್ತೆರೆಯಿತು ನಲಿವಿನ ಪರ್ವ!

    02/06/20230 Views

    pinki elli review: ಅಬ್ಬರವಿಲ್ಲದೆ ಆದ್ರ್ರಗೊಳಿಸುವ ಅಪರೂಪದ ಚಿತ್ರ!

    03/06/20230 Views
    Copyrights © 2022 - 26, All Rights Reserved by Cini Shodha | Developed by: DIGICUBE SOLUTIONS |
    Follow us on

    Type above and press Enter to search. Press Esc to cancel.