ಆದಿತ್ಯ ಧಾರ್ ನಿರ್ದೇಶನದ ಧುರಂಧರ್೨ ಚಿತ್ರ ದಿನದಿಂದ ದಿನಕ್ಕೆ ಯಶಸ್ವೀ ಪ್ರದರ್ಶನ ನೀಡುತ್ತಾ ದಾಖಲೆಯತ್ತ ದಾಪುಗಾಲಿಡುತ್ತಿದೆ. ಭಾಷೆ ಯಾವುದೇ ಇದ್ದರೂ ಒಂದು ಸಿನಿಮಾವಾಗಿ ಧುರಂಧರ್ ಪ್ರೇಕ್ಷಕರ ಮನಗೆದ್ದಿರೋದು ನಿಜ. ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯ ಹೊಂದಿದ್ದವರೂ ಕೂಡಾ ಒಟ್ಟಾರೆ ಚಿತ್ರವನ್ನು ಮೆಚ್ಚಿಕೊಳ್ಳುತ್ತಾರೆಂಬುದೇ ಧುರಂಧರ್೨ನ ನಿಜವಾದ ಗೆಲುವು. ಹೀಗೆ ಚೆಂದಗೆ ಮೂಡಿ ಬಂದಿರುವ ಸಿನಿಮಾಗಳನ್ನು ಒಪ್ಪಿಕೊಳ್ಳೋದು, ಅಪ್ಪ್ಪಿಕೊಳ್ಳೋದು ಕನ್ನಡಿಗರ ಬುದ್ಧಿ. ಆದರೆ, ಬಾಲಿವುಡ್ ಸಿನಿಮಾಗಳನ್ನು ಮಾತ್ರವೇ ಕಣ್ಣು ಮುಂತಾದೆಡೆಗಳಿಗೆ ಒತ್ತಿಕೊಂಡು ಆರಾಧಿಸುವ ಹಿಂದೀವಾಲಗಳಿಗೆ ಬೇರೆ ಬಾಷೆಗಳ ಅದೆಷ್ಟೇ ಚೆಂಣದದ ಸಿನಿಮಾಗಳನ್ನಾದರೂ ಮೆಚ್ಚಿಕೊಳ್ಳುವ ಔದಾರ್ಯ ಖಂಡಿತಾ ಇಲ್ಲ. ಅಂಥಾ ಮನಃಸ್ಥಿತಿ ಇದ್ದಿದ್ದರೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ಯಾನಿಂಡಿಯಾ ಸಿನಿಮಾ ಟಾಕ್ಸಿಕ್ ವಿರುದ್ಧ ಆ ಪರಿಯಾಗಿ ಜಿದ್ದು ಸಾಧಿಸುತ್ತಿರಲಿಲ್ಲ!
ಯಶ್ ಅಭಿನಯದ ಕೆಜಿಎಫ್ ಸರಣಿ ಗೆಲುವಿನ ಮೂಲಕ ಬಾಲಿವುಡ್ ಮಂದಿಯ ಅಳ್ಳೆ ಅದುರಿತ್ತು. ಅದು ದಕ್ಷಿಣ ಭಾರತೀಯ ಚಿತ್ರರಂಗದಿಂದ ಬಾಲಿವುಡ್ ನೆತ್ತಿಗೆ ಬಿದ್ದ ಬಹುದೊಡ್ಡ ಏಟು. ಯಾಕೆಂದರೆ, ದಕ್ಷಿಣ ಭಾರತೀಯ ಸಿನಿಮಾಗಳನ್ನು ಬಾಲಿವುಡ್ ಮಂದಿ ಅತ್ಯಂತ ತುಚ್ಛವಾಗಿ ನೋಡುತ್ತಾ ಬಂದಿದ್ದಾರೆ. ಅದರಲ್ಲಿಯೂ ಕನ್ನಡ ಸಿನಿಮಾ ರಂಗವನ್ನು ಲೆಕ್ಕಕ್ಕಿಟ್ಟುಕೊಳ್ಳದ ದುರಹಂಕಾರವೊಂದು ಬಾಲಿವುಡ್ಡಿಗೆ ಅಪಾದಮಸ್ತಕ ಅಮರಿಕೊಂಡಿತ್ತು. ಅಂಥಾ ಚಿತ್ರರಂಗದಿಂದ ತಯಾರಾದ ಚಿತ್ರವೊಂದು ಬಾಲಿವುಡ್ ಸಿನಿಮಾಗಳನ್ನೇ ಮಂಕಾಗಿಸಿ ಮೆರೆಯತ್ತದೆಂದರೆ ಹಿಂದೀವಾಲಾಗಳಿಗೆ ಅಂಡುರಿ ಬಾಧಿಸದಿರಲು ಸಾಧ್ಯವೇ? ಅಂಥಾ ಉರಿಯೆಲ್ಲವೂ ಧುರಂಧರ್ ಗೆಲುವಿನ ನಂತರ ಮತ್ತಷ್ಟು ಉಲ್ಬಣಿಸಿದೆ.
ಟಾಕ್ಸಿಕ್ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದ್ದರ ಹಿಂದೆ ಉತ್ತರ ಭಾರತದ ದಿಕ್ಕಿನ ವಿತರಕರಿಂದ ಬಂದ ಒತ್ತಡವೇ ಕಾರಣವೆಂಬ ವಾಸ್ತವಿಕ ಸುದ್ದಿಯೊಂದು ಹಬ್ಬಿಕೊಂಡಿದೆ. ಆದರೆ ಹಿಂದಿ ಮಂದಿ ಮಾತ್ರ ಧುರಂಧರ್೨ಗೆ ಹೆದರಿಯೇ ಟಾಕ್ಸಿಕ್ ಪೇರಿ ಕಿತ್ತಿದೆ ಅಂತೆಲ್ಲ ಟ್ರೋಲ್ ಮಾಡುತ್ತಾ ಸುಖಿಸುತ್ತಿದ್ದಾರೆ. ಅದೇ ಮಂದಿಯೀಗ ಧುರಂಧರ್೩ ಜೂನ್ ಹದಿನಾಲಕಕ್ಕೆ ಬಿಡುಗಡೆಗೊಂಡು ಟಾಕ್ಸಿಕ್ ಅನ್ನು ಮಣ್ಣುಮುಕ್ಕಿಸಲಿದೆ ಎಂಬರ್ಥದಲ್ಲಿ ಸುದ್ದಿ ಹಗರಿಯಬಿಡುತ್ತಿದ್ದಾರೆ. ಆದರೆ, ಧುರಂಧರ್ ಭಾಗವಾಗಿರುವವರೇ ಮೂರನೇ ಆವೃತ್ತಿಯ ವಿಚಾರವನ್ನು ತಳ್ಳಿ ಹಾಕಿದ್ದಾರೆ. ಒಟ್ಟಾರೆಯಾಗಿ ಟಾಕ್ಸಿಕ್ ಚಿತ್ರ ಗೆಲ್ಲಕೂಡದು, ಕನ್ನಡದ ಹೀರೋ ಥಂಡಾ ಹೊಡೆಯ ಬೇಕೆಂಬ ವಿಕೃತಿ ಹಿಂದಿ ವಾಲಾಗಳಿಗೆ ಇದ್ದಂತಿದೆ. ಅದು ಸುಳ್ಳಾಗಿ ಬಿಟ್ಟಿರೆ ಕನ್ನಡದ ಪ್ರೇಕ್ಷಕರ ಪಾಲಿಗೆ ಅದಕ್ಕಿಂತಲೂ ಖುಷಿ ಬೇರೇನಿರಲು ಸಾಧ್ಯ?
keywords: yash, toxic movie, dhurandhar, toxic v/s dhurandhar

