ಚೇತನ್ ಶೆಟ್ಟಿ ನಿರ್ದೇಶನದ ಸೀಟ್ ಎಡ್ಜ್ ಚಿತ್ರ ನಾಳೆ ಅಂದರೆ, ಜನವರಿ ೩೦ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಈಗಾಗಲೇ ಈ ಸಿನಿಮಾ ಕಥನದ ಬಗ್ಗೆ ಒಂದಷ್ಟು ಸೂಕ್ಷ್ಮ ವಿಚಾರಗಳು ಜಾಹೀರಾಗಿವೆ. ಸಾಮಾನ್ಯವಾಗಿ ಹಾರರ್ ಸಿನಿಮಾಗಳನ್ನು ಸದಾ ಬಯಸುವ ಪ್ರೇಕ್ಷಕರ ಸಂಖ್ಯೆ ಕನ್ನಡದಲ್ಲಿ ಹೆಚ್ಚಿದೆ. ಅದರಲ್ಲಿಯೂಇನ ಯುವ ಆವೇಗದ ಕಥನದೊಂದಿಗೆ ಹೊಸೆದುಂಡಿರೋ ಹಾರರ್ ಸಿನಿಮಾಗಳ ಸೆಳೆತವಂತೂ ತುಸು ಹೆಚ್ಚೇ ಇದೆ. ನಿರ್ದೇಶಕ ಚೇತನ್ ಶೆಟ್ಟಿ ಪ್ರೇಕ್ಷಕರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡೇ ಈಗಿನ ಪೀಳಿಗೆಯ ವ್ಲಾಗಿಂಗ್ ಹುಚ್ಚಿನ ಸುತ್ತಾ ಈ ಸಿನಿಮಾವನ್ನು ಕಟ್ಟಿಕೊಟ್ಟಿರೋ ಸೂಚನೆಗಳಿದ್ದಾವೆ. ಈಗಾಗಲೇ ನಿರೀಕ್ಷೆ ಮೂಡಿಸಿರುವ ಸೀಟ್ ಎಡ್ಜ್ ಮೂಲಕ ಕೊಡಗಿನ ಹುಡುಗಿ ರವೀಕ್ಷಾ ಶೆಟ್ಟಿ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಕೊಡಗಿನಿಂದ ಸಿನಿಮಾ ರಂಗಕ್ಕೆ ಸದಾ ಕಾಲವೂ ನಾಯಕಿಯರ ಆಗಮನವಾಗುತ್ತಲೇ ಇರುತ್ತದೆ. ಅದೇ ರೀತಿ ಐಟಿ ಜಗತ್ತಿನಿಂದಲೂ ಸಿನಿಮಾ ರಂಗದತ್ತ ಆಕರ್ಶಿತರಾಗೋದು ಮಾಮೂಲಿ. ಸಾಮಾನ್ಯವಾಗಿ ಸಿನಿಮಾ ಜಗತ್ತಿನಲ್ಲಿ ಏನೋ ಗಹನವಾದದ್ದನ್ನು ಸಾಧಿಸೋ ಕನಸು ಹೊತ್ತು ವು ಮಾಡುತ್ತಿದ್ದ ಕೆಲಸವನ್ನೇ ಬಿಟ್ಟು ಬರುವವರಿದ್ದಾರೆ. ಈ ಸಾಲಿನಲ್ಲಿ ರವೀಕ್ಷಾ ಶೆಟ್ಟಿ ಭಿನ್ನವಾಗಿ ಕಾಣಿಸುತ್ತಾರೆ. ಯಾಕೆಂದರೆ, ಶಾಲಾ ಕಾಲೇಜು ದಿನಗಳಲ್ಲಿಯೇ ನಟಿಯಾಗೋ ಕನಸು ಹೊತ್ತಿದ್ದ ರವೀಕ್ಷಾಂತ ತಾಳ್ಮೆಯಿಂದಲೇ ಗುರಿಯ ನೇರಕ್ಕೆ ಬಂದು ನಿಂತಂತಿದೆ. ದ್ಯದ ಮಟ್ಟಿಗೆ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ರವೀಕ್ಷಾ ಒಂದಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಕೆ ನಟಿಸಿರುವ ಎರಡ್ಮೂರು ಸಿನಿಮಾಗಳು ಬಿಡುಗಡೆಯ ಸರದಿಯಲ್ಲಿವೆಯಾದರೂ ಸೀಟ್ ಎಡ್ಜ್ ಚಿತ್ರವಾಗಿ ದಾಖಲಾಗಲಿದೆ.
೨೦೨೨ರ ಕೊರೋನಾ ಕಾಲಘಟ್ಟದಿಂದಲೇ ನಟಿಯಾಗುವ ಸಲುವಾಗಿ ಪ್ರಯತ್ನ ಆರಂಭಿಸಿದ್ದವರು ರವೀಕ್ಷಾ. ಕಡೆಗೂ ಆಡಿಷನ್ನಿನಲ್ಲಿ ಪಾಲ್ಗೊಳ್ಳುವ ಮೂಲಕ ಈಕೆಗೆ ಸೀಟ್ ಎಡ್ಜ್ ಚಿತ್ರದ ನಾಯಕಿಯಾಗೋ ಅವಕಾಶ ಒದಗಿ ಬಂದಿತ್ತು. ಇಲ್ಲಿರೋದು ಹಾರರ್ ಕಥನವಾದರೂ ಮತ್ತೊಂದು ಮಜಲಿನ ಪಾತ್ರಕ್ಕೆ ರವೀಕ್ಷಾ ಜೀವ ತುಂಬಿದ್ದಾರೆ. ಪೌಢ ಸ್ವಭಾವ ಹೊಂದಿರುವ, ಸ್ವಾಭಿಮಾನದ ಗುಣದ ಆ ಪಾತ್ರ ಸೀಮಿತ ಕಾಲಾವಧಿ ಹೊಂದಿದ್ದರೂ ಗುರುತಾಗುವಂತಿದೆ ಎಂಬ ನಂಬಿಕೆ ರವೀಕ್ಷಾರದ್ದು. ನಿರ್ದೇಶಕರ ಆಶಯಕ್ಕನುಗುಣವಾಗಿ ಆ ಪಾತ್ರಕ್ಕೆ ಜೀವ ತುಂಬಿದ ತೃಪ್ತ ಭಾವ ಹೊಂದಿರುವ ರವೀಕ್ಷಾ ಪಾಲಿಗೆ ತನ್ನ ಮೊದಲ ಹೆಜ್ಜೆಯಲ್ಲಿಯೇ ಗೆಲುವು ದಕ್ಕುವ ಭರವಸೆ ಗಟ್ಟಿಯಾಗಿದೆ.
ಕೊಡಗು ಮೂಲದವರಾದ ರವೀಕ್ಷಾ ಶೆಟ್ಟಿ ವ್ಯಾಸಂಗ ನಡೆಸಿದ್ದೆಲ್ಲವೂ ಮೈಸೂರಿನಲ್ಲಿ. ಶಾಲಾ ಕಾಲೇಜು ದಿನಗಳಲ್ಲಿಯೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಈಕೆಯ ಪಾಲಿಗೆ ಆ ಹಂತದಲ್ಲಿಯೇ ಸಿನಿಮಾ ಸೆಳೆತವಿತ್ತು, ನಟಿಯಾಗೋ ಹಂಬಲವಿತ್ತು. ಈ ನಡುವೆ ಇಂಜಿನಿಯರಿಂಗ್ ಪದವಿ ಪೂರೈಸಿದ್ದ ರವೀಕ್ಷಾಗೆ ಬೆಂಗಳೂರಿನ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತ್ತು. ಇದೀಗ ಕೆಲಸ ಮತ್ತು ಸಿನಿಮಾ ಯಾನವನ್ನು ಒಟ್ಟೊಟ್ಟಿಗೆ ಸಂಭಾಳಿಸುತ್ತಿರೋ ರವೀಕ್ಷಾ ಖಾತೆಯಲ್ಲಿಘ್ರದಲ್ಲಿಯೇ ಬಿಡುಗಡೆಯಾಗಲಿರೋ ಮತ್ತೊಂದಷ್ಟು ಸಿನಿಮಾಗಳಿದ್ದಾವೆ. ದರ್ಶನ್ ಅಳಿಯ ಮನೋಜ್ ಕುಮಾರ್ ನಾಯಕನಾಗಿ ನಟಿಸಿರುವ ಧರಣಿ ಚಿತ್ರದಲ್ಲಿಯೂ ರವೀಕ್ಷಾ ನಾಯಕಿಯಾಗಿ ನಟಿಸಿದ್ದಾರೆ. ಆ ಚಿತ್ರವೂ ಬಿಡುಗಡೆಗೆ ಅಣಿಗೊಂಡಿದೆ.
ಇನ್ನುಳಿದಂತೆ, ನಟಿಯರೆಲ್ಲ ಒಂದಷ್ಟು ಅನುಭವ ದಕ್ಕಿಸಿಕೊಂಡ ನಂತರ ಬಯಸುವಂಥಾ ಮಹಿಳಾ ಕೇಮದ್ರಿತ ಕಥನಗಳು ಮೊದಲ ಹೆಜ್ಜೆಯಲ್ಲಿಯೇ ರವೀಕ್ಷಾಗೆ ಸಿಗಲಾರಂಭಿಸಿವೆ. ಮಹಿಳಾ ಕೇಂದ್ರಿತ ಕಥೆ ಹೊಂದಿರುವ ಮಾರಿಕಾ ಎಂಬ ಚಿತ್ರದಲ್ಲಿಯೂ ಈಕೆ ನಟಿಸಿದ್ದಾರೆ.ಅದರ ಚಿತ್ರೀಕರಣ ಅರ್ಧ ಭಾಗ ಮುಗಿದಿದೆ. ಅದರಾಚೆಗೆ ಮತ್ತೊಂದಷ್ಟು ಅವಕಾಶಗಳನ್ನು ಪಡೆಯುತ್ತಿರೋ ರವೀಕ್ಷಾ, ಸೀಟ್ ಎಡ್ಜ್ ಮೂಲಕ ತನ್ನ ಯಾನಕ್ಕೆ ಮತ್ತಷ್ಟು ಆವೇಗ ಸಿಗುವ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಎನ್.ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಸಿದ್ದು ಮೂಲಿಮನಿ, ರವಿಕ್ಷಾ ಶೆಟ್ಟಿ, ರಾಘು ರಾಮನಕೊಪ್ಪ, ಕಿರಣ್ ಕುಮಾರ್, ಗಿರೀಶ್ ಶಿವಣ್ಣ ಮುಂತಾದವರ ತಾರಾಗಣವಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನ, ವೆಂಕಟೇಶ್ ಚಂದ್ರ ಸಹ ನಿರ್ದೇಶನ, ದೀಪಕ್ ಕುಮಾರ್ ಜೆ ಛಾಯಾಗ್ರಹಣ, ನಾಗೇಂದ್ರ ಉಜ್ಜನಿ ಸಂಕಲನ ಈ ಚಿತ್ರಕ್ಕಿದೆ.

