ರಂಗಭೂಮಿಯಿಂದ ಬಂದು ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಂಡ ಪ್ರತಿಭಾನ್ವಿತ ನಟರ ಸಾಲಿನಲ್ಲಿ ಗಿರೀಶ್ ಶಿವಣ್ಣರಿಗೊಂದು ವಿಶಿಷ್ಟ ಸ್ಥಾನವಿದೆ. ದಶಕಗಳಿಗೂ ಹೆಚ್ಚು ಕಾಲ ಒಂದೆ ತೆರನಾಗಿ ಬೇಡಿಕೆ ಉಳಿಸಿಕೊಳ್ಳುವುದು ನಟ ನಟಿಯರ ಪಾಲಿಗೊಂದು ಸವಾಲು. ಅದರಲ್ಲಿಯೂ ಹಾಸ್ಯ ಪಾತ್ರಗಳನ್ನು ಮಾಡುತ್ತಾ ಬಂದಿರುವ ಗಿಎರೀಶ್ ಶಿವಣ್ಣ ಹೊಸಬರ ಆಗಮನದ ಭರಾಟೆಯಲ್ಲಿಯೂ ಭದ್ರ ನೆಲೆ ಕಂಡುಕೊಂಡಿರೋದು ರಂಗಭೂಮಿಯ ಕಸುವಿನ ಕಾರಣದಿಂದಲೇ. ಸ್ಟಾರ್ ನಟರೊಂದಿಗೂ ಮಿಂಚಿರುವ ಗರಿರ್ಶ ಶಿವಣ್ಣ ಹೊಸಬರ ಸಿನಿಮಾಗಳಿಗೂ ಹಿಂದೇಟು ಹಾಕುವುದಿಲ್ಲ. ಯಾವ ಪಾತ್ರಕ್ಕಾದರೂ ಸೈ ಎಂಬ ಸ್ವಭಾವದ ಅವರೀಗ ಚೇತನ್ ಶೆಟ್ಟಿ ನಿರ್ದೇಶನದ ಸೀಟ್ ಎಡ್ಜ್ ಚಿತ್ರದವದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.
ಇದುವರೆಗೂ ಗಿರೀಶ್ ಶಿವಣ್ಣ ಅನೇಕ ಸಿನಿಮಾಗಳಲ್ಲಿ ಪೊಲೀಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೀಟ್ ಎಡ್ಜ್ನಲ್ಲಿಯೂ ಕೂಡಾ ಅವರಿಗೆ ಪೊಲೀಸ್ ಪಾತ್ರವೇ ಸಿಕ್ಕಿದೆ. ಆದರೆ, ಅದು ಈ ಹಿಂದೆ ನಿರ್ವಹಿಸಿದ್ದ ಅಷ್ಟೂ ಪಾತ್ರಗಳಿಗಿಂತಲೂ ಭಿನ್ನ ಛಾಯೆ ಹೊಂದಿದೆ. ಈ ಕಾರಣದಿಂದಲೇ ಚೇತನ್ ಶೆಟ್ಟಿ ಕಥೆ ಹೇಳುತ್ತಲೇ ಖುಷಿಗೊಂಡಿದ್ದ ಅವರು ಅತ್ಯಂತ ಉತ್ಸಾಹದಿಂದಲೇ ಸದರಿ ಪಾತ್ರವನ್ನು ಆವಾಹಿಸಿಕೊಂಡಿದ್ದಾರಂತೆ. ಲಿ ಅವರದ್ದು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರ. ತನ್ನ ಕೆಲಸದ ಮೇಲೆ ಸದಾ ಅತೃಪ್ತ ಆತ್ಮವಾಗಿದ್ದುಕೊಂಡೇ ಬೇರೆಯವರ ಕೆಲಸದಲ್ಲಿ ಕೈಯಾಡಿಸಿ ತೃಪ್ತವಾಗುವ ವಿಲಕ್ಷಣ ವ್ಯಕ್ತಿತ್ವದ ಪಾತ್ರವದು. ಆ ಪಾತ್ರದ ಮೂಲಕವೂ ಈವತ್ತಿನ ಸಮಾಜದ ಮನಃಸ್ಥಿತಿಯನ್ನು ಬಿಂಬಿಸುವ ಚೇತನ್ ಅವರ ಸೂಕ್ಷ್ಮತೆಯ ಬಗೆಗೂ ಗಿರೀಶ್ ಶಿವಣ್ಣರೊಳಗೊಂದು ಮೆಚ್ಚುಗೆ ಇದೆ.
ಮೇಲು ನೋಟಕ್ಕೆ ಸೋಶಿಯಲ್ ಮೀಡಿಯಾ ಭರಾಟೆಯಲ್ಲಿ ಹೊಸ ಪೀಳಿಗೆದಂತೆ ಭಾಸವಾಗುತ್ತೆ. ಆದರೆಠಾತ್ತನೆ ಹೆಸರು ಮಾಡುವ, ಕಾಸು ಮಾಡುವ ಉಮೇದೆಂಬುದು ಎಲ್ಲ ವಯೋಮಾನದವರನ್ನೂ, ವೃತ್ತಿಯವರನ್ನೂ ಆವರಿಸಿಕೊಂಡಿರೋದು ಸತ್ಯ. ಗಿರೀಶ್ ಶಿವಣ್ಣ ನಿಭಾಯಿಸಿರುವ ಪಾತ್ರ ಕೂಡಾಉ ಪೊಲೀಸ್ ಅಧಿಕಾರಿನ ಎಂಬುದನ್ನೇ ಮರೆತಂತೆ, ಘೋಸ್ಟ್ ಹಂಟಿಂಗಿಗಿಳಿದು, ಆ ಮೂಲಕ ಫೇಮಸ್ಸಾಗೋ ಆಸೆ ಹೊಂದಿದ್ದ ಯುವ ವ್ಲಾಗರ್ ಜೊತೆ ಸೇರಿಕೊಳ್ಳುತ್ತಾನೆ. ಆ ನಂತರ ಒಂದಿಡೀ ಕಥೆ ರೋಚಕ ತಿರುವ ಪಡೆದುಕೊಳ್ಳುತ್ತದಂತೆ. ಅಂಥಾ ಸೀಟ್ ಎಡ್ಜಿಗೆ ತಂದು ಕೂರಿಸಬಲ್ಲ ದೃಷ್ಯಾವಳಿಗಳ ಭಾಗವಾಗಿರುವ ತುಂಬು ತೃಪ್ತಿ ಗಿರೀಶ್ ಶಿವಣ್ಣರದ್ದು.
ಕಾಮಿಡಿ ಥ್ರಿಲ್ಲರ್ ಹಾರರ್ ಜಾನರಿಗೆ ಒಳಪಡಬಹುದಾದ ಈ ಚಿತ್ರದಲ್ಲಿ ಗಿರೀಶ್ ಶಿವಣ್ಣರ ಭಾಗದ ಚಿತ್ರೀಕರಣವೆಲ್ಲ ರಾತ್ರಿ ಹೊತ್ತಲ್ಲಿಯೇ ನಡೆದಿತ್ತಂತೆ. ಬಿಡುವಿರದಂತೆ ವಾರಗಟ್ಟಲೆ ಚಿತ್ರೀಕರಣ ನಡೆದರೂ ಕೂಡಾ ದಣಿವು ಮೂಡದಂತೆ ಕಾಪಾಡಿಕೊಂಡಿದ್ದ ಈ ಕಥನದ ಅಸಲೀ ಶಕ್ತಿ ಎಂಬುದು ಗಿರೀಶ್ ಶಿವಣ್ಣರ ಮಾತು. ಈ ಸಿನಿಮಾ ತನ್ನ ವೃತ್ತಿಯಾನದಲ್ಲಿ ಮಹತ್ವದ್ದಾಗಿ ನಿಲ್ಲುತ್ತದೆಂಬ ಭರವಸೆಯೂ ಅವರಲ್ಲಿದೆ. ಎನ್.ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಸಿದ್ದು ಮೂಲಿಮನಿ, ರವಿಕ್ಷಾ ಶೆಟ್ಟಿ, ರಾಘು ರಾಮನಕೊಪ್ಪ, ಕಿರಣ್ ಕುಮಾರ್, ಗಿರೀಶ್ ಶಿವಣ್ಣ ಮುಂತಾದವರ ತಾರಾಗಣವಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನ, ವೆಂಕಟೇಶ್ ಚಂದ್ರ ಸಹ ನಿರ್ದೇಶನ, ದೀಪಕ್ ಕುಮಾರ್ ಜೆ ಛಾಯಾಗ್ರಹಣ, ನಾಗೇಂದ್ರ ಉಜ್ಜನಿ ಸಂಕಲನ ಈ ಚಿತ್ರಕ್ಕಿದೆ. ಈ ಚಿತ್ರ ನಾಳೆ ಅಂದರೆ, ಜನವರಿ ೩೦ರಂದು ರಾಜ್ಯಾದ್ಯಂತ ತೆರೆಗಾಣಲಿದೆ.
keywords: girishshivanna, seatedge, sandalwood

