ಸಮಂತಾ ಇದೀಗ ಒಂದು ಸುದೀರ್ಘವಾದ ಅಜ್ಞಾತವಾಸ ಮುಗಿಸಿ ಮತ್ತೆ ನ ಟನೆಯಲ್ಲಿ ಬುಸಿಯಾಗಿದ್ದಾಳೆ. ಖಾಸಗೀ ಬದುಕಿನ ದಾರುಣ ಪಲ್ಲಟಗಳಿಂದ ಕಂಗಾಲೆದ್ದಿದ್ದ ಈಕೆಯನ್ನು ಮಯೋಸೈಟಿಸ್ ಎಂಬ ವಿಚಿತ್ರ ಕಾಯಿಲೆ ಹೈರಾಣು ಮಾಡಿ ಹಾಕಿತ್ತು. ಅತ್ತ ಸಂಸಾರ ಛಿದ್ರವಾದ ಬೇಗುದಿ, ಇತ್ತ ದೇಹ ಸೇರಿಕೊಂಡ ವಿಚಿತ್ರ ಕಾಯಿಲೆಯಿಂದ ಕಂಗೆಟ್ಟಿದ್ದ ಸಮಂತಾ ಇದೀಗ ಒಂದಷ್ಟು ವೆಬ್ ಸೀರೀಸ್‌ಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ಹಾಗಂತ ಸಿನಿಮಾಗಳಲ್ಲಿ ಆಕೆಗೆ ಅವಕಾಶಕ್ಕೆ ಕೊರತೆ ಇದೆ ಅಂದುಕೊಳ್ಳುವಂತಿಲ್ಲ. ಒಂದು ಮೂಲದ ಪ್ರಕಾರ ಸದ್ಯಕ್ಕೆ ಅಂಥಾ ಆಫರುಗಳನ್ನು ಒಪ್ಪಿಕೊಳ್ಳುವ ಮನಃಸ್ಥಿತಿಯಲ್ಲಿ ಸಮಂತಾ ಇಲ್ಲ. ಇದರ ಭಾಗವಾಗಿಯೇ ಬಹುನಿರೀಕ್ಷಿತ ಪೆದ್ದಿ ಚಿತ್ರದ ಭಾಗವಾಗುವ ಅವಕಾಶವನ್ನೂ ಆಕೆ ನಿರಾಕಸಿದ್ದಾಳಂತೆ!
ಪೆಡ್ಡಿ ರಾಮ್‌ಚರಣ್ ನಾಯಕನಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ಚಿತ್ರ. ಬುಚ್ಚಿ ಬಾಬು ನಿರ್ದೇಶನದ ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ರಾಮ್ ಚರಣ್‌ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾಳೆ. ಇಲ್ಲಿ ಜಾನ್ವಿ ಕೂಡಾ ವಿಶಿಷ್ಟವಾದೊಂದು ಪಾತ್ರದ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೀಡು ಮಾಡಲು ಅಣಿಗೊಂಡಿದ್ದಾಳೆ. ಈ ಚಿತ್ರದ ವಿಶೇಷ ಹಾಡೊಂದರಲ್ಲಿ ಸಮಂತಾ ನಟಿಸಲಿದ್ದಾಳೆಂಬ ಸುದ್ದಿ ಬಹು ಹಿಂದಿನಿಂದಲೇ ಹಬ್ಬಿಕೊಂಡಿತ್ತು. ನಿರ್ಮಾಪಕರು ಮತ್ತು ನಿರ್ದೇಶಕರು ಪರಿ ಪರಿಯಾಗಿ ಕೇಳಿಕೊಂಡರೂ ಅದರಲ್ಲಿ ನಟಿಸಲು ಸಮಂತಾ ಒಲ್ಲೆ ಅಂದಿದ್ದಾಳಂತೆ.
ಈ ಹಿಂದೆ ಪುಷೊಪಾ೨ ಚಿತ್ರತಂಡ ಕೂಡಾ ಕಡೇ ಕ್ಷಣದವರೆಗೂ ವಿಶೇಷ ಹಾಡೊಂದಕ್ಕಾಗಿ ಸಮಂತಾಳನ್ನು ಕಾದು ಸುಸ್ತಾಗಿತ್ತು. ಅದು ಕಡೆಗೂ ಶ್ರೀಲೀಲಾ ಪಾಲಾಗಿತ್ತು. ಪುಷ್ಪಾ ಚಿತ್ರದ ಊ ಅಂಟಾವಾ ಮಾವ ಹಾಡಿನ ನಂತರ ಅಂಥಾದ್ದೇ ಸಾಲು ಸಾಲು ಅವಕಾಶಗಳು ಸಮಂತಾಗೆ ಬರಲಾರಂಭಿಸಿದ್ದವಂತೆ. ಒಪ್ಪಿಕೊಳ್ಳುತ್ತಾ ಹೋದರೆ ಐಟಂ ಸಾಂಗಿನಲ್ಲೇ ಕಳೆದು ಹೋಗಬೇಕಾದೀತೆಂಬ ಎಚ ಚರದಿಂದಲೇ ಸಮಂತಾ ಅದೆಲ್ಲದರಿಂದ ನುಣುಚಿಕೊಳ್ಳುತ್ತಿದ್ದಾಳೆ. ಇದೀಗ ಈಕೆ ಒಲ್ಲೆ ಅಂದಿರೋ ಪೆಡ್ಡಿ ಚಿತ್ರದ ಚಿತ್ರೀಕರಣ ಅವ್ಯಾಹತವಾಗಿ ನಡೆದಿದೆ. ಸದ್ಯಕ್ಕೆ ಆ ಐಟಂ ಸಾಂಗಿಗಾಗಿ ಒಲ್ಲದ ಮನ ಸಿಂದಲೇ ಬುಚ್ಚಿ ಬಾಬು ಬೇರೆ ನಟಿಯರ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ.