ನಗಂಭೀರ ವಿಚಾರವನ್ನೂ ಕೂಡಾ ಪರಿಶುದ್ಧ ಭೋಳೇ ಶೈಲಿಯಲ್ಲಿ ದಾಟಿಸುವಲ್ಲಿ ನಿರ್ದೇಶಕ ಯೋಗರಾಜ್ ಭಟ್ಟರದ್ದು (yogaraj bhat) ಎತ್ತಿದ ಕೈ. ಇದುವರೆಗಿನ ಅವರ ಸಿನಿಮಾ ಗ್ರಾಫ್ ಅನ್ನೊಮ್ಮೆ ಗಮನಿಸಿದರೆ, ಒಲಿದು ಬಂದು ಒಂದಷ್ಟು ಗೆಲುವಿನ ಹಿಂದಿರುವ ರಸಹ್ಯವೂ ಅದೇ ಮೂಲದ್ದೆಂಬುದು ಸಾಬೀತಾಗುತ್ತದೆ. ಅದೇ ರೀತಿ ಭಟ್ಟರು ಸಾಕಷ್ಟು ಬಾರಿ ಮುಗ್ಗರಿಸಿದ್ದರ ಹಿಂದಿರುವ ಅಸಲೀ ಕಾರಣಗಳು ಸಹ ಅದೇ ಮೂಲದಲ್ಲಿಯೇ ಗಹಗಹಿಸಿ ನಗುವಂತೆಯೂ ಭಾಸವಾಗುತ್ತದೆ. ಇಂಥಾ ಯೋಗರಾಜ್ ಭಟ್ಟರು ಏಕಾಏಕಿ ವರಸೆ ಬದಲಿಸಿದಾ? ಸಿನಿಮಾ ವಿಚಾರದಲ್ಲಿ ಘನಗಂಭೀರ ಹೆಜ್ಜೆ ಇಡಲಾರಂಭಿಸಿದ್ದಾರಾ ಎಂಬಂಥಾ ಪ್ರಶ್ನೆಗಳು ಸ್ಪಷ್ಟವಾಗಿಯೇ ಮೂಡಿಕೊಂಡಿವೆ. ಅದಕ್ಕೆ ಕಾರಣವಾಗಿರೋದು (karataka damanaka) ಕರಟಕ ದಮನಕ ಚಿತ್ರದ ಫಸ್ಟ್ ಲುಕ್!

ಇತ್ತೀಚಿನ ದಿನಗಳಲ್ಲಿ ಗರಡಿ ಚಿತ್ರದ ಚಿತ್ರೀಕರಣದಲಿ ಯೋಗರಾಜ್ ಭಟ್ ಬ್ಯುಸಿಯಾಗಿದ್ದರು. ಈ ಸಿನಿಮಾ ಮೂಲಕವೇ ಬಟ್ಟರು ಮಾಮೂಲಿ ದಾರಿಯನ್ನು ಬಿಟ್ಟು, ಭಿನ್ನ ಪಥದತ್ತ ಹೊರಳಿಕೊಂಡಿರುವ ಮುನ್ಸೂಚನೆ ಸಿಕ್ಕಿದಂತಾಗಿತ್ತು. ಗರಡಿಯ ಬಗ್ಗೆ ಒಂದಷ್ಟು ಸುದ್ದಿಗಳು ಆಗಾಗ ಜಾಹೀರಾಗುತ್ತಿತ್ತಾದರೂ ಭಟ್ಟರ ಮುಂದಿನ ನಡೆ ನಿಗೂಢವಾಗಿತ್ತು. ಇದೀಗ ಗರಡಿಯ ಚಿತ್ರೀಕರಣ ಮುಕ್ತಾಯದ ಘಟ್ಟ ತುಪಿರುವ ಕರಟಕ ದಮನಕರು ಸದ್ದು ಮಾಡಲಾರಂಭಿಸಿದ್ದಾರೆ. ಈ ಸಿನಿಮಾದಲ್ಲಿ ಶಿವರಾ ಕುಮಾರ್ ಮತ್ತು ಪ್ರಭುದೇವ ಸಲಿದ್ದಾರೆಂಬ ಬಗ್ಗೆ ಬಹು ಹಿಂದಿನಿಂದಲೇ ಮಾಹಿತಿಗಳು ಹೊರಬಂದಿದ್ದವು. ಇದೀಗ ಫಸ್ಟ್ ಲುಕ್ ಪೋಸ್ಟರ್‍ನಲ್ಲಿ ಅವರಿಬ್ಬರ ಲುಕ್ ಹೇಗಿರಲಿದೆ ಎಂಬುದನ್ನು ಭಟ್ಟರು ತೋರಿಸಿದ್ದಾರೆ.

ಶೀರ್ಷಿಕೆಯ ವಿನ್ಯಾಸ, ಶಿವಣ್ಣ ಮತ್ತು ಪ್ರಭುದೇವ ಲುಕ್ಕು ಗಮನಿಸುತ್ತಿದ್ದರೆ ಯೋಗರಾಜ್ ಭಟ್ ಈ ಬಾರಿ ಪ್ರೇಕ್ಷಕರನ್ನು ಚಕಿತಗೊಳಿಸೋದು ಪಕ್ಕಾ ಎಂದೆನಿಸುತ್ತದೆ. ಸದ್ಯದ ವಾತಾವರಣ ಗಮನಿಸಿದೆ ಭಟ್ಟರೇಕೋ ಸೈಲೆಂಟಾಗಿ ರೊಚ್ಚಿಗೆದ್ದಂತಿದೆ. ಯಾಕೆಂದರೆ, ಒಂದಷ್ಟು ಸೋಲಿನ ನಂತರದಲ್ಲಿ ಮತ್ತೆ ಎದೆ ಸೆಟೆಸಿ ಮೇಲೆದ್ದು ನಿಲ್ಲುವ ಅನಿವಾರ್ಯತೆ ಅವರ ಮುಂದಿದೆ. ಅಷ್ಟಕ್ಕೂ ಅದೆಷ್ಟೋ ವರ್ಷಗಳ ಕಾಲ ಕಾದು ಮುಂಗಾರು ಮಳೆ ಗೆಲುವಿಗೆ ಮೈಯೊಡ್ಡಿದ್ದವರು ಯೋಗರಾಜ ಭಟ್. ಆದರೆ, ಆ ನಂತರ ಆ ಗೆಲುವಿನ ಹನಿಗಳಿಗೆ ಮೈಯೊಡ್ಡಿ ಪ;ಉಳಕಗೊಂಡರೇ ಹೊರತು, ಅದನ್ನು ಮೀರಿಕೊಂಡು ಮತ್ತೊಂದು ಗೆಲುವಿನತ್ತ ಅವುಡುಗಚ್ಚಿ ನಡೆಯಲು ಅವರಿಂದ ಸಾಧ್ಯವಾಗಿಲ್ಲ. ಗಾಳಿಪಟ2 ಒಂದಷ್ಟು ಕಲೆಕ್ಷನ್ನು ಮಾಡಿತ್ತಾದರೂ ಅದೇನು ಸಮ್ಮೋಹಕ ಗೆಲುವಲ್ಲ. ಕರಟಕ ದಮನಕ ಚಿತ್ರದ ಮೂಲಕ ಭಟ್ಟರಿಗೆ ಮಹಾ ಗೆಲುವು ಸಿಕ್ಕಲೆಂಬುದು ಹಾರೈಕೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!