ಒಂದು ಬಿಗ್ ಹಿಟ್ ಸಿನಿಮಾದಲ್ಲಿ ನಟಿಸಿದ ನಂತರ, ಅದರ ಭಾಗವಾದ ಎಲ್ಲರ ನಸೀಬು ಖುಲಾಯಿಸಿ ಬಿಡುತ್ತದೆ ಅಂತೊಂದು ನಂಬಿಕೆ ನಮ್ಮಲ್ಲಿದೆ. ಅದು ಕೆಲವೊಮ್ಮೆ ನಿಜವಾಗಿದೆ. ಒಮ್ಮೊಮ್ಮೆ ಸುಳ್ಳಾಗೋದೂ ಇದೆ. ಅಂಆ ಸಿನಿಮಾವನ್ನು ಪ್ರೇಕ್ಷಕರೆಲ್ಲ ಮೆಚ್ಚಿಕೊಂಡು, ಬಾಕ್ಸಾಫೀಸಿನಲ್ಲಿ ಧೂಲೇಬ್ಬಿಸಿದರೂ, ಕೆಲ ನಟ ನಟಿಯದ ವೃತ್ತಿ ಬದುಕಿನ ನೆತ್ತಿಗೆ ಕವುಚಿಕೊಂಡ ಗ್ರಹಣ ಸರಿಯೋದೇ ಇಲ್ಲ. ಸದ್ಯ ತೆಲುಗು ಚಿತ್ರರಂಗದಲ್ಲಿ ಭರ್ಜರಿ ಯಶ ಕಂಡಿರುವ ಬೇಬಿ ಚಿತ್ರದ ನಾಯಕಿ (baby heroin vaishnavi chaitanya)  ವೈಷ್ಣವಿ ಚೈತನ್ಯ ಕೂಡಾ ಇದೀಗ ಅಂಥಾದ್ದೊಂದು ನಿರಾಸೆಗೀಡಾಗಿದ್ದಾಳೆ. ಯಾವ್ಯಾವುದೋ ಭಾಷೆಯಿಂದ ಬಂದವರೆಲ್ಲ ತೆಲುಗು ಚಿತ್ರರಂಗದಲ್ಲಿ ನಾಯಕಿಯರಾಗಿ ಮೆರೆಯುತ್ತಿದ್ದರೂ, ಮೂಲತಃ ತೆಲುಗು ಭಾಷಿಕಳಾದ, ಅಲ್ಲಿಯೇ ಕಲಾವಿದೆಯಾಗಿ ಗುರುತಿಸಿಕೊಂಡ ವೈಷ್ಣವಿಗೆ ಮಾತ್ರ ಅವಕಾಶಗಳಿಗೆ ತತ್ವಾರ ಬಂದೊದಗಿದೆ!

ಇತ್ತೀಚೆಗೆ ತೆರೆಗಂಡಿದ್ದ ಬೇಬಿ ಚಿತ್ರದಲ್ಲಿ ವಿಜಯ್ ದೇವರಕೊಂಡನ ಸಹೋದರ ಆನಂದ್ ದೇವರಕೊಂಡನೊಂದಿಗೆ ವೈಷ್ಣವಿ ತೆರೆ ಹಂಚಿಕೊಂಡಿದ್ದಳು. ವಿಜಯ್ ದೇವರಕೊಂಡ ಇದೀಗ ತೆಲುಗಿನ ಸ್ಟಾರ್ ನಟನೆನ್ನಿಸಿಕೊಂಡಿದ್ದಾನೆ. ಆತನ ತಮ್ಮ ಏಕಾಏಕಿ ನಾಯಕನಾದಾಗ ಒಂದಷ್ಟು ಅಪಸ್ವರಗಳು ಕೇಳಿ ಬಂದಿದ್ದವು. ನಮ್ಮ ಗೋಲ್ಡನ್ ಸ್ಟಾರ್ ಗಣೇಶನ ತಮ್ಮ ಮಹೇಶನಂತೆಯೇ ಆನಂದ ಕೂಡಾ ಹಳ್ಳ ಹಿಡಿಯಬಹುದಾ ಎಂಬಂಥಾ ವಿಶ್ಲೇಷಣೆ ಕನ್ನಡದ ತೆಲುಗು ಸಿನಿಮಾಭಿಮಾನಿಗಳ ನಡುವೆ ಚರ್ಚೆ ನಡೆದಿತ್ತು. ಆದರೆ ಅಚ್ಚರಿದಾಯಕವಾಗಿ ಬೇಬಿ ಚಿತ್ರ ಸೂಪರ್ ಹಿಟ್ ಆಗಿದೆ. ಗಂಡು ಜನ್ಮಕ್ಕೆ ಸಲೀಸಾಗಿ ಕೈಯೆತ್ತಿ ಬಿಡುವ ಹೆಣ್ಣು ಮಗಳೊಬ್ಬಳ ಕಥೆ ಹೊಂದಿದ್ದ ಆ ಚಿತ್ರ ಯುವಕರಿಗೆ ಹತ್ತಿರಾಗಿದೆ.

ಆ ಇತ್ರದ ನಾಯಕಿಯಾಗಿ ವೈಷ್ಣವಿ ನಟಿಸಿದ ರೀತಿಯೂ ಚೆನ್ನಾಗಿತ್ತು. ಕ್ಯೂಟ್ ಆಗಿರುವ, ನಟನೆ ನೃತ್ಯ ಸೇರಿದಂತೆ ಎಲ್ಲದರಲ್ಲಿಯೂ ಪಾರಂಗತೆಯಾಗಿರುವ ವೈಷ್ಣವಿಯ ಭಾಗ್ಯದ ಬಾಗಿಲು ತೆರೆಯಿತೆಂದೇ ಎಲ್ಲರಿಗೂ ಅನ್ನಿಸಿತ್ತು. ಸಾಮಾನ್ಯವಾಗಿ, ಇಂಥಾ ಹಿಟ್ ಸಿನಿಮಾ ತೆರೆಗಂಡ ನಂತರ ನಾಯಕ ನಾಯಕಿಯ ಮುಂದೆ ಅವಕಾಶದ ಸಂತ ನೆರೆಯುತ್ತೆ. ಆದರ ವೈಷ್ಣವಿ ಪಾಲಿಗೆ ಆ ಭಾಗ್ಯವಿಲ್ಲ. ಆಕೆ ಈ ಕ್ಷಣಕ್ಕೂ ಅವಕಾಶವಿಲ್ಲದೆ ಖಾಲಿ ಊತಿದ್ದಾಳೆಂಬ ಮಾತಿದೆ. ಕನ್ನಡದಿಂದ ಹೋದ ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಕೃತಿ ಶೆಟ್ಟಿ ಮುಂತಾದವರು ಒಂದರ ಹಿಂದೊಂದರಂತೆ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ, ಅವರೆಲ್ಲರ ಸಮಕಾಲೀನಳಾದ ವೈಷ್ಣವಿ ಮಾತ್ರ ಅವಕಾಶಗಳತ್ತ ಆಸೆಗಣ್ಣಿನಿಂದ ದಿಟ್ಟಿಸುವಂತಾಗಿದೆ. ಇದು ದುರಂತವಲ್ಲದೆ ಮತ್ತಿನ್ನೇನು?

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!