ದಾ ಚಿತ್ರವಿಚಿತ್ರ ಬಟ್ಟೆಗಳ ಮೂಲಕವೇ ಪ್ರಚಾರ ಪಡೆದುಕೊಳ್ಳುತ್ತಾ ಬಂದಿರುವಾಕೆ (urfi javed) ಉರ್ಫಿ ಜಾವೇದ್. ಸಾಮಾನ್ಯವಾಗಿ ಈ ಕಾಸ್ಟ್ಯೂಮ್ ಡಿಸೈನ್ ಅನ್ನೋದೊಂದು ಕ್ರಿಯೇಟಿವ್ ವಿಚಾರ. ಹಗಲು ರಾತ್ರಿಯೆನ್ನದೆ ಕಷ್ಟಪಟ್ಟು, ಹೊಸ ಬಗೆಯ ದಿರಿಸುಗಳನ್ನು ಸೃಷ್ಟಿಸೋದು ಸಾಮಾನ್ಯದ ವಿಚಾರವೇನಲ್ಲ. ಅಂಥಾದ್ದೊಂದು ಟ್ಯಾಲೆಂಟು (urfi javed controversy) ಉರ್ಫಿಗೆ ಇದ್ದಿದ್ದರೆ ಅಷ್ಟರ ಮಟ್ಟಿಗಾದರೂ ಆಕೆಯನ್ನು ಸಹಿಸಿಕೊಳ್ಳಬಹುದಿತ್ತೇನೋ… ಆದರೆ, ಉರ್ಫಿ ಗೋಣಿ ಚೀಲವನ್ನೂ ಬಿಡದೆ, ಅದನ್ನೇ ಉಡುಗೆಯಾಗಿ ಧರಿಸಿಕೊಳ್ಳುವಂಥಾ ಹುಚ್ಚಾಟವನ್ನೇ ಕ್ರಿಯೇಟಿವಿಟಿ ಅಂದುಕೊಂಡಂತಿದೆ. ಹೀಗಿರೋ ಉರ್ಫಿ ಇದೀಗ ಮತ್ತೊಂದು ಆಯಾಮದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾಳೆ!

ಹರುಕು ಪರುಕು ಬಟ್ಟೆ ಧರಿಸಿ ಸುದ್ದಿಯಲ್ಲಿರುವ ಉರ್ಫಿ, ಇತ್ತೀಚಿನ ದಿನಗಳಲ್ಲಿ ದೇವಾಲಯ ದರ್ಶನದ ಮೂಲಕವೂ ಆಗಾಗ ಸುದ್ದಿ ಮಾಡುತ್ತಿರುತ್ತಾಳೆ. ಇದರ ಸುತ್ತ ಅನೇಕಾನೇಕ ರೂಮರುಗಳೂ ಹಬ್ಬಿಕೊಂಡಿವೆ. ಇತ್ತೀಚೆಗಂತೂ ಉರ್ಫಿ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಾಳೆ, ಆದ್ದರಿಂದಲೇ ದೇವಸ್ಥಾನಗಳಿಗೆ ಪದೇ ಪದೆ ಭೇಟಿ ನೀಡುತ್ತಿದ್ದಾಳೆ ಎಂಬಂಥಾ ಸುದ್ದಿಗಳೂ ಕೂಡಾ ಹರಿದಾಡಿದ್ದವು. ಇದೀಗ ಅದಕ್ಕೆ ಪುಷ್ಟಿ ನೀಡುವಂಥಾ ವಿಚಾರವೊಂದು ಖುದ್ದು ಉರ್ಫಿಯ ಕಡೆಯಿಂದಲೇ ಜಾಹೀರಾಗಿದೆ. ಆ ವಿವರಗಳು ನಿಜಕ್ಕೂ ಅಚ್ಚರಿ ಪಡುವಂತಿವೆ.

ತನ್ನ ಮದುವೆ ಮ್ಯಾಟರಿನ ಬಗ್ಗೆ ಮುಕ್ತವಾಗಿ ಮಾತಾಡಿರುವ ಉರ್ಫಿ, ತಾನು ಯಾವ ಕಾರಣಕ್ಕೂ ಮುಸ್ಲಿಂ ಯುವಕನನ್ನು ಮದುವೆಯಾಗೋದಿಲ್ಲ ಎಂದಿದ್ದಾಳೆ. ಇದೇ ಹೊತ್ತಿನಲ್ಲಿ ತನಗೆ ಹಿಂದೂ ಧರ್ಮದ ಬಗೆಗಿರುವ ಆಸಕ್ತಿಯ ಬಗ್ಗೆಯೂ ಮಾತಾಡಿದ್ದಾಳೆ. ಹಾಗಾದರೆ, ಮುಸ್ಲಿಂ ಧರ್ಮಕ್ಕೆ ಸೇರಿರುವ ಉರ್ಫಿ ಏಕಾಏಕಿ ಹಿಂದೂ ಧರ್ಮದ ಬಗ್ಗೆ ಆಕರ್ಷಿತಳಾಗಲು ಕಾರಣವೇನು? ಇದರ ಹಿಂದಿರೋದು ಆಕೆಯ ಪ್ರೇಮ ಕಥನ ಮಾತ್ರವಾ? ಹೀಗೆ ನಾನಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಉತ್ತರ ಹುಡುಕ ಹೋದರೆ, ಉರ್ಫಿಯ ಬದುಕಿನ ಒಂದಷ್ಟು ಸೂಕ್ಷ್ಮಗಳು ಜಾಹೀರಾಗುತ್ತವೆ.

ಉರ್ಫಿ ಕಟ್ಟರ್ ಮುಸಲ್ಮಾನ ಕುಟುಂಬದಲ್ಲಿ ಹುಟ್ಟಿ ಬೆಳೆದವಳು. ಆದರೆ, ಆಕೆ ಹದಿನೇಳು ವರ್ಷದವಳಿರುವಾಗ ತಂದೆ ಒಂದಿಡೀ ಸಂಸಾರವನ್ನು ತೊರೆದು ಹೋಗಿ ಬಿಟ್ಟಿದ್ದ. ಅದಕ್ಕೆ ತನ್ನ ಧರ್ಮದಲ್ಲಿರುವ ಕೆಲ ವಿಚಾರಗಳೇ ಕಾರಣ ಅಂತ ಆ ವಯಸ್ಸಿನಲ್ಲಿಯೇ ಉರ್ಫಿಗೆ ಮನವರಿಕೆಯಾಗಿತ್ತೋ ಏನೋ… ಅದರಿಂದಾಗಿಯೇ ಕಟ್ಟುಪಾಡುಗಳಿಗೆ ಸೆಡ್ಡು ಹೊಡೆಯುತ್ತಾ ಸಾಗಿ ಬಂದಿದ್ದಳು. ಆ ನಂತರ ಮಾಡೆಲಿಂಗ್, ಬಿಗ್ ಬಾಸ್ ಅಂತೆಲ್ಲ ಪ್ರವರ್ಧಮಾನಕ್ಕೆ ಬಂದಿದ್ದ ಉರ್ಫಿಯನ್ನು ನೋಡಿ ಅನೇಕರು ಉರಿದು ಬೀಳಲಾರಂಭಿಸಿದ್ದರು. ಸ್ವತಃ ಉರ್ಫಿಯೇ ಹೇಳಿಕೊಂಡಿರೋ ಪ್ರಕಾರ, ಹಾಗೆ ಉರಿದುಕೊಳ್ಳುತ್ತಿರುವವರಲ್ಲಿ ಹೆಚ್ಚಿನವರು ಮುಸ್ಲಿಮರಿದ್ದಾರಂತೆ.

ಹೀಗೆಲ್ಲ ಇರೋದರಿಂದಲೇ ಈ ಹುಡುಗಿಯನ್ನು ಹಿಂದೂ ಧರ್ಮ ಸೆಳೆದುಕೊಂಡಂತಿದೆ. ಆ ಬಗೆಗಿನ ಒಂದಷ್ಟು ವಿಚಾರಗಳನ್ನು ತಿಳಿದುಕೊಳ್ಳುತ್ತಾ ಬಂದಿರುವ ಉರ್ಫಿ ಈಗ, ಭಗವದ್ಗೀತೆ ಓದೋದರಲ್ಲಿ ತಲ್ಲೀನಳಾಗಿದ್ದಾಳಂತೆ. ಅತ್ತ ಅದೆಷ್ಟೇ ಆಘಾತಗಳಾದರೂ ಈಕೆಯ ತಾಯಿ ಮಾತ್ರ ಕರ್ಮಠ ಧರ್ಮ ಶ್ರದ್ಧೆ ಹೊಂದಿದ್ದಾರೆ. ಅದರ ಧಾರ್ಮಿಕ ಮುಖಂಡರಂತೂ ಆಗಾಗ ಉರ್ಫಿ ವಿರುದ್ಧ ಒಳಗೊಳಗೇ ಫತ್ವಾ ಹೊರಡಿಸುತ್ತಿದ್ದಾರೆ. ಇದೆಲ್ಲದರ ಬಗ್ಗೆ ತಲೆ ಕೆಡಿಸಿಕೊಳ್ಳದ ಉರ್ಫಿ ದಿನೇ ದಿನೆ ಹಿಂದೂ ಧರ್ಮದತ್ತ ವಾಲುತ್ತಿದ್ದಾಳೆ. ಒಂದು ವೇಳೆ ಆಕೆ ಹಿಂದೂ ಯುವಕನನ್ನು ಪ್ರೀತಿಸುತ್ತಿರೋದೇ ಹೌದಾದರೆ, ಇಷ್ಟರಲ್ಲೇ ಉರ್ಫಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಸುದ್ದಿ ಜಾಹೀರಾದರೂ ಅಚ್ಚರಿಯೇನಿಲ್ಲ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!