ಈಗ ಎಲ್ಲೆಂದರಲ್ಲಿ ಟಾಕ್ಸಿಕ್ ಚಿತ್ರದ್ದೇ ಸುದ್ದಿ. ಟೀಸರ್, ಟ್ರೈಲರ್ಗಳ ಮೂಲಕ ತಲೆಗೆ ಹುಳ ಬಿಟ್ಟರೆ ಬಿಟ್ಟಿಯಾಗಿಯೇ ಪಬ್ಲಿಸಿಟಿ ಸಿಗುತ್ತದೆಂಬುದು ಸಿನಿಮಾ ಮಂದಿಯ ಹಳೇ ಫಾರ್ಮುಲಾ. ಇದನ್ನು ಟಾಕ್ಸಿಕ್ ನಿರ್ದೇಶಕ ಗೀತು ಮೋಹನ್ ದಾಸ್ ಬಲವಾಗಿಯೇ ನೆಚ್ಚಿಕೊಂಡಿದ್ದಾರೆ. ಹಾಗೆನೋಡಿದರೆ, ಟಾಕ್ಸಿಕ್ ಟೀಸರ್ ಅನ್ನು ಬೇರೆ ರೀತಿಯಲ್ಲಿ ಪ್ರೇಕ್ಷಕರ ಮುಂದಿಡುವ ಅವಕಾಶ ಗೀತು ಮುಂದಿತ್ತು. ಆದರೆ, ಆಕೆ ಹಾಲಿವುಡ್ ಶೈಲಿಯ ಕಾಮಸೂತ್ರದ ಬೆಂಬಿದ್ದು, ಅದಕ್ಕನುಗುಣವಾಗಿ ಟೀಸರ್ ಅನ್ನು ರೂಪಿಸಿದ್ದಾರೆ. ಆಕೆಯ ನಿರೀಕ್ಷೆ ನಿಜವಾಗಿದೆ. ಕಾರೊಳಗಿನ ಮುಲುಕಾಟವನ್ನು ಪಿಸ್ಟನ್ನಿನ ಲಯದಲ್ಲಿ ತಲೆತುಂಬಿಕೊಂಡ ಮಂದಿ ಆ ಗುಂಗಿಗೆ ಬಿದ್ದಿದ್ದಾರೆ. ಈ ನಿಟ್ಟಿನಲ್ಲಿ ಒಂದಷ್ಟು ಚರ್ಚೆಗಳೂ ನಡೆಯುತ್ತಿವೆ. ಆದರೆ, ಆತ್ಯಂತಿಕವಾಗಿ ಟಾಕ್ಸಿಕ್ ಟೀಸರಿನ ಪರಿಣಾಮ ಇತರೇ ಸಿನಿಮಾಗಳ ಮೇಲೂ ಆಗುವ ವಿಷಮ ಸನ್ನಿವೇಷವೂ ಇದೀಗ ಸೃಷ್ಟಿಯಾಗಿದೆ!
ಟಾಕ್ಸಿಕ್ ಟೀಸರ್ನಲ್ಲಿ ಕಾಮಪ್ರಯೋಗ ಮಾಡಿರೋದರ ಬಗ್ಗೆ ಎಲ್ಲೆಡೆ ವಿರೋಧಾಭಾಸಗಳು ವ್ಯಕ್ತವಾಗಲಾರಂಭಿಸಿವೆ. ಯಾವಾಗ ಇದರ ಬಗ್ಗೆ ಅಮೂಲಾಗ್ರವಾಗಿ ವಿಮರ್ಶೆಗಳು ಕೇಳಿ ಬರಲಾರಂಭಿಸಿದವೋ, ಆಗ ಎಚ್ಚೆತ್ತುಕೊಂಡ ಚಿತ್ರತಂಡ ಇದು ಅಪ್ರಾಪ್ತರು ನೋಡೋ ಟೀಸರ್ ಅಲ್ಲ ಎಂಬುದನ್ನು ಒತ್ತಿಹೇಳುವ ಮೂಲಕ ತಿಪ್ಪೆ ಸಾರಿಸಲೆತ್ನಿಸಿದೆ. ಇದು ಚಿತ್ರತಂಡದ ಅತೀಬುದ್ಧಿವಂತಿಕೆಯ ಮುಠ್ಠಾಳತನ. ಯಾಕೆಂದರೆ, ಯೂಟೈಬಿನಲ್ಲಿ ಬಿಡುಗಡೆಗೊಂಡಿರುವ ಸದರಿ ಟೀಸರ್ ಅನ್ನು ಅಪ್ರಾಪ್ತರು ನೋಡದಿರಲು ಸಾಧ್ಯವೇ? ಈ ಕಾರಣದಿಂದಲೇ ಅನೇಕರು, ಯಾವುದೇ ಸಿನಿಮಾ ಟೀಸರ್, ಟ್ರೈಲರ್ಗೂ ಸೆನ್ಸಾರ್ ಮಾನದಂಡ ವಿಧಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
Toxic Movie Controvercy: ತತ್ತರಿಸಿದ ಹಿಂದಿವಾಲಾಗಳ ಟಾಕ್ಸಿಕ್ ವಾರ್!
ಒಂದುಯ ದಿಕ್ಕಿನಿಂದ ಆಲೋಚಿಸಿದರೆ ಅಂಥಾದ್ದೊಂದು ಮಾನದಂಡ ವಿಧಿಸಿದರೆ ಹಸಿಬಿಸಿ ದೃಷ್ಯಗಳ ಮೂಲಕ ಪಬ್ಲಿಸಿಟಿ ಮಾಡೋ ಗಿಮಿಕ್ಕನ್ನು ಕೊಂಚ ಹತೋಟಿಗೆ ತರಬಹುದು. ಆದರೆ, ಇದು ನಾನಾ ಸಂಕಷ್ಟಗಳ ನಡುವೆ ಕಂಗಾಲಾಗಿರುವ ಚಿತ್ರ ನಿರ್ಮಾಪಕರಿಗೆ ಮತ್ತೊಂದು ತಲೆ ನೋವಿನಂಥಾ ವಿಚಾರ. ಯಾಕೆಂದರೆ, ಕೆಲ ಸಿನಿಮಾಗಳು ಸೆನ್ಸಾರ್ ಒಂದು ಸೆನ್ಸಾರ್ ಅನ್ನು ದಾಟಿಕೊಳ್ಳೋದೇ ಕಷ್ಟ. ಅಂಥಾದ್ದರಲ್ಲಿ ಟೀಸರ್, ಟ್ರೈಲರಿಗೂ ಸೆನ್ಸಾರ್ ಮೊರೆ ಹೋಗಬೇಕಾಗಿ ಬಂದರೆ ಎಲ್ಲವೂ ತ್ರಾಸದಾಯಕವಾಗಲಿದೆ. ಈ ಕಂಟಕ ತಂದೊಡ್ಡಿರುವ ಟಾಕ್ಸಿಕ್ ಚಿತ್ತಂಡದ ವಿರುದ್ಧ ಒಂದಷ್ಟು ನಿರ್ಮಾಪಕರು ಕೆಂಡ ಕಾರಲಾರಂಭಿಸಿದ್ದಾರೆ. ಇದರಿಂದಾಗಿ ನಿರ್ದೇಶಕಿ ಗೀತು ಮೋಹನ್ದಾಸ್ ಕೂಡಾ ಕಂಗಾಲಾದಂತಿದೆ!
keywords: toxic, controvercy, yash, geethumohandas, toxicteaser

