ವರಸ ನಾಯಕ ಜಗ್ಗೇಶ್, ಡಾಲಿ ಧನಂಜಯ್ (daali dhananjay) ಮುಂತಾದವರು ನಟಿಸಿರುವ ತೋತಾಪುರಿ2 ಚಿತ್ರ ಆಗಸ್ಟ್ 11ರಂದು ಬಿಡುಗಡೆಗೊಳ್ಳುತ್ತಿದೆ. ಒಂದಷ್ಟು ಕಾಲದಿಂದಲೂ ಚಿತ್ರತಂಡ ಬಿಡುಗಡೆ ದಿನಾಂಕ ಘೋಶಿಸುವ ಸೂಚನೆ ನೀಡುತ್ತಾ ಬಂದಿತು. ಯಾವಾಗ ಆ ದಿನ ಆಗಸ್ಟ್ ಹನ್ನೊಂದು ಅಂತ ಗೊತ್ತಾಯಿತೋ, ಆಗ ಸಿನಿಮಾ ಪ್ರೇಮಿಗಳಲ್ಲೊಂದು ಬೆರಗು ಮೂಡಿಕೊಂಡಿದ್ದದ್ದು ಸಹಜ. ಯಾಕೆಂದರೆ, ಅದರ ಮುನ್ನಾದಿನ ಅಂದರೆ, ಆಗಸ್ಟ್ ಹತ್ತರಂದು (rajanikant) ರಜನೀಕಾಂತ್ ಅಭಿನಯದ ಜೈಲರ್ (jailer) ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಪ್ಯಾನಿಂಡಿಯಾ ಮಟ್ಟದಲ್ಲಿ ದೊಡ್ಡ ಕ್ರೇಜ್ ಹುಟ್ಟುಹಾಕಿರುವ ಚಿತ್ರ ಜೈಲರ್. ಅದಕ್ಕೆದುರಾಗಿ ಬಡುಗಡೆಗೆ ಸಜ್ಜಾಗಿರೋ (thotapuri2) ತೋತಾಪುರಿಯ ಖದರ್ ಕಂಡು ಅನೇಕರು ಆಶ್ಚರ್ಯಚಕಿತರಾಗಿರೋದು ನಿಜ!

ಸಾಮಾನ್ಯವಾಗಿ ಇಂಥಾ ದೊಡ್ಡ ಸಿನಿಮಾಗಳು ಬಿಡುಗಡೆಯಾದಾಗ ಸಿನಿಮಾ ಮಂದಿ ತಮ್ಮ ಚಿತ್ರಗಳನ್ನು ಅಖಾಡಕ್ಕಿಳಿಸಲು ಹಿಂದ ಮುಂದೆ ನೋಡುತ್ತಾರೆ. ಥಿಯೇಟರ್ ಸಮಸ್ಯೆ ಸೇರಿದಂಎ ಆನಾ ಬಾಧೆಗಳು ಅಮರಿಕೊಳ್ಳುತ್ತವೆಂಬ ಭಯ ಅದಕ್ಕೆ ಕಾರಣ. ಆದರೆ, ನಿರ್ಮಾಪಕ ಸುರೇಶ್ ಮತ್ತು ನಿರ್ದೇಶಕ ವಿಜಯ ಪ್ರಸಾದ್ ಅಂಥಾದ್ದೊಂದು ಧೈರ್ಯ ಮಾಡಿದ್ದಾರೆ. ಅದರ ಹಿಂದೆ ಕಂಟೆಂಟಿನ ಬಗ್ಗೆ ಅವರಿಗಿರುವ ವಿಶ್ವಾಸದ ಬಲವಿದ್ದರೂ ಇದ್ದೀತು. ಅದೆಲ್ಲ ಏನೇ ಇದ್ದರೂ ಕೂಡಾ ಜೈಲರ್‍ಗೆ ಸೆಡ್ಡು ಹೊಡೆಯಲು ಅಣಿಯಾದ ತೋತಾಪುರಿ2 ಗುಂಡಿಗೆಯನ್ನು ಮೆಚ್ಚಿಕೊಳ್ಳಲೇಬೇಕು.

ಈ ಹಿಂದೆ ತೋತಾಪುರಿ ಮೊದಲ ಭಾಗ ಕೂಡಾ ಭಾರೀ ನಿರೀಕ್ಷೆ ಮೂಡಿಸಿತ್ತು. ಜಗ್ಗೇಶ್ ಮತ್ತು ಅದಿತಿ ಕಾಂಬಿನೇಷನ್ನಿನಲ್ಲಿ ಮೂಡಿ ಬಂದಿದ್ದ ಹಾಡು ಕೂಡಾ ಸಂಚಲನ ಸೃಷ್ಟಿಸಿತ್ತು. ಇದೀಗ ಎರಡನೇ ಆವೃತ್ತಿ ಕೂಡಾ ಮೆಲ್ಲಗೆ ಟೇಕಾಫ್ ಆಗುತ್ತಿದೆ. ಗಂಭೀರ ವಿಚಾರವನ್ನೂ ಕೂಡಾ ಹಾಸ್ಯದ ಧಾಟಿಯಲ್ಲಿ ದಾಟಿಸುವ ಛಾತಿ ಹೊಂದಿರುವವರು ನಿರ್ದೇಶಕ ವಿಜಯ ಪ್ರಸಾದ್. ಅವರು ಎರಡನೇ ಆವೃತ್ತಿಯಲ್ಲೊಂದು ಕಮಾಲ್ ಮಾಡಬಹುದೆಂಬ ನಿರೀಕ್ಷೆ ಇದ್ದೇ ಇದೆ. ಇಲ್ಲಿ ಜಗ್ಗಣ್ಣನ ಜೊತೆಗೆ ಡಾಲಿ ಧನಂಜಯ್ ಕೂಡಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೋತಾಪುರಿ ಮಧ್ಯ ಮಳೆಗಾಲದಲ್ಲಿ ಮನಸು ಬೆಚ್ಚಗಾಗಿಸೋ ಹಾಸ್ಯದ ಸ್ಪರ್ಶದೊಂದಿಗೆ ತೆರೆಗಾಣಲು ಸಜ್ಜಾಗಿದೆ.

About The Author