ಈ ಸಿನಿಮಾ ನಟನ ನಟಿಯರ ಬಗ್ಗೆ ಅದ್ಯಹಾವ್ಯಾವ ದಿಕ್ಕುಗಳಲ್ಲಿ ಸುದ್ದಿಗಳು ಹುಟ್ಟಿಕೊಳ್ಳುತ್ತವೋ ಹೇಳಲು ಬರುವುದಿಲ್ಲ. ಈಗಂತೂ ಸಾಮಾಜಿಕ ಜಾಲತಾಣಗಳ ಜಮಾನ. ಇಲ್ಲಿ ಮಂದಿ ಕಂಟೆಂಟ್ ಕ್ರಿಯೇಟ್ ಮಾಡೋ ಭರದಲ್ಲಿ ಸುಳ್ಳು ಸುದ್ದಿಗಳನ್ನು ಕ್ರಿಯೇಟು ಮಾಡಿ ಹಬ್ಬಿಸಿ ಒಂದಷ್ಟು ಮೈಲೇಜು ಗಿಟ್ಟಿಸಿಕೊಳ್ಳೋದಿದೆ. ಸಾಮಾನ್ಯವಾಗಿ, ಒಂದೇ ಸಿನಿಮಾದಲ್ಲಿ ನಟಿಸಿದ ನಟ ನಟಿಯರ ಬಗ್ಗೆ ಅಫೇರಿನ ಬಗ್ಗೆ ಗುಲ್ಲೇಳುತ್ತೆ. ಅದನ್ನೂ ಮೀರಿ ಸಿನಿಮಾ ಭಾಗವಾಗಿ ಸೃಷ್ಟಿಯಾದ ದೃಶ್ಯಗಳ ಸುತ್ತಲೂ ಚರ್ಚೆಗಳು ಹುಟ್ಟಿಕೊಳ್ಳೋದಿದೆ. ಬಾಹುಬಲಿ ಭಾಗ ಒಂದರಲ್ಲಿ ಪ್ರಭಾಸ್ ಮತ್ತು ತಮನ್ನಾ ಭಾಟಿಯಾ ಜೊತೆಯಾಗಿ ನಟಿಸಿದ್ದ ದೃಶ್ಯವೊಂದು ಕೂಡಾ ಅಂಥಾದ್ದೇ ವಿವಾದದ ಕೇಂದ್ರ ಬಿಂದುವಾಗಿತ್ತು.
ತಮನ್ನಾ ಭಾಟಿಯಾ ಬಾಹುಬಲಿ ಚಿತ್ರದಲ್ಲಿ ಆವಂತಿಕಾ ಎಂವಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಪ್ರತಿಮ ಸೌಂದರ್ಯದ ಗಣಿಯಾಗಿದ್ದರೂ, ಸೌಂದರ್ಯ ಮತ್ತು ಶೃಂಗಾರದ ಬಗ್ಗೆ ಯಾವ ಗಮನವೂ ಇಲ್ಲದ ಪಾತ್ರವದು. ಆಕೆಯ ಮೇಲೆ ಮೋಹಗೊಳ್ಳುವ ಬಾಹುಬಲಿಯನ್ನು ವ್ಯಘ್ರ ಶೈಲಿಯಲ್ಲಿ ಹಿಮ್ಮೆಟ್ಟಿಸುತ್ತಾ ಸಾಗೋದು ಆವಂತಿಕಾ ಪಾತ್ರದ ಪ್ರಧಾನ ಆಕರ್ಷಣೆಯಾಗಿತ್ತು. ಅಂಥಾ ಆವಂತಿಕಾಳನ್ನು ಮೋಹಿಸಿ, ಆಕೆಗೆ ಸೌಂದರ್ಯ ಪ್ರಜ್ಞೆ ಬರುವಂತೆ ಮಾಡುವಲ್ಲಿ ಬಾಹುಬಲಿ ಪ್ರಯತ್ನಿಸುತ್ತಾನೆ. ಆ ದೃಷ್ಯದಲ್ಲಿಬ ರೊಮ್ಯಾನ್ಸಿನ ಅಂಚಿಗೆ ತಲುಪಿದ ಶೃಂಗಾರ ಕಾವ್ಯದಂಥಾ ದೃಶ್ಯವನ್ನು ರಾಜಮೌಳಿ ಸೃಸ್ಟಿಸಿದ್ದರು.
ಆ ಸೀನನ ನಿಟ್ಟುಕೊಂಡೇ ಕೆಲ ಮಂದಿ ವಿಕೃತರುಆವಂತಿಕಾ ಮೇಲೆ ಅತ್ಯಾಚಾರ ಅಂತೆಲ್ಲ ತಮನ್ನಾ ವಿರುದ್ಧ ಷಡ್ಯಂತ್ರ ನಡೆಸಲಾರಂಭಿಸಿದ್ದರು. ಲೈಂಗಿಕ ಮಡಿವಂತಿಕೆಯ ಮರೆಯಲ್ಲಿಯೇ ವಿಕೃತಿ ಮೆರೆಯುವ ಇಂಥಾ ಪ್ರುಯತ್ನಗಳ ಬಗ್ಗೆ ತಮನ್ನಾ ಕಡೆಗೂ ಮಾತಾಡಿದ್ದಾಳೆ. ಅಂಥಾ ಮನಃಸ್ಥಿತಿಯವರ ವಿರುದ್ಧ ಸಮರ ಸಾರಿದ್ದಾರೆ. ಲೈಂಗಿಕತೆ ಕೆಟ್ಟದ್ದಾಗಿದ್ದರೆ ನಾವ್ಯಾರೂ ಈ ಭೂಮಿ ಮೇಲಿರುತ್ತಿರಲಿಲ್ಲ. ಅದನ್ನು ಮಡಿವಂತಿಕೆಯ ಭೂಮಿಕೆಯಲ್ಲಿ ವಿಶ್ಲೇಶಿಸುವವರು ಅದರ ಬಗ್ಗೆ ಗಮನ ಹರಿಸಬೇಕು. ತಾನಂತೂ ಇಂಥಾ ವಿನಾ ಕಾರಣ ತೇಜೋವಧೆಗಳ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ ಎಂದಿದ್ದಾಳೆ ತಮನ್ನಾ!