ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (shivaraj kumar) ನಟನೆಯ ಖದರ್ ಈಗ ಪ್ಯಾನಿಂಡಿಯಾ ಮಟ್ಟಕ್ಕೆ ಹಬ್ಬಿಕೊಂಡಿದೆ. (rajanikanth jailer movie) ರಜನೀಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ನರಸಿಂಹ ಅಂತೊಂದು ಪುಟ್ಟ ಪಾತ್ರ ಮಾಡಿದ್ದರು ಶಿವಣ್ಣ. ಆ ಪಾತ್ರದಿಂದಲೇ ಅವರಿಗೆ ಸಿಕ್ಕ ಅಭಿಮಾನವಿದೆಯಲ್ಲಾ? ಅದು ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಇದುವರೆಗೆ (shivarajkumar new tamil movie) ಶಿವರಾಜ್ ಕುಮಾರ್ ಅವರ ಒಂದೇ ಒಂದು ಸಿನಿಮಾ ನೋಡದ ಪಪಭಾಷಿಕರು ಕೂಡಾ ಅವರ ನಟನೆಯನ್ನು ಕೊಂಡಾಡುತ್ತಿದ್ದಾರೆ. ಪ್ಯಾನಿಂಡಿಯಾ ಲೆವೆಲ್ಲಿಗೆ ಹೋಗೋ ಆತುರ, ಅದರ ಸುತ್ತಲಿನ ಬಿಟ್ಟಿ ಬಿಲ್ಡಪ್ಪು…ಹೀಗೆ ಯಾವುದೆಂದರೆ ಯಾವುದೂ ಇಲ್ಲದೆ ಗೆದ್ದಿರುವ ಶಿವರಾಜ್ ಕುಮಾರ್ ಪ್ರೇಕ್ಷಕರನ್ನೆಲ್ಲ ಆವರಿಸಿಕೊಂಡಿದ್ದಾರೆ. ಜೈಲರ್ ಪ್ರಭೆಯಿನ್ನೂ ಪ್ರಜ್ವಲಿಸುತ್ತರುವಾಗಲೇ ಮತ್ತೊಂದು ತಮಿಳು ಚಿತ್ರದ ಮೂಲಕ ಶಿವಣ್ಣ ಸುದ್ದಿ ಕೇಂದ್ರದಲ್ಲಿದ್ದಾರೆ!

ಕೆಲವೇ ನಿಮಿಷಗಳಲ್ಲಿ ಪ್ರೇಕ್ಷಕರನ್ನು ಪಟ್ಟಂಪೂರಾ ಹಿಡಿದಿಡುವಲ್ಲಿ ಯಶ ಕಂಡ ಶಿವಣ್ಣ ಇದೀಗ ರಜನೀ ಅಳಿಯ ಧನುಷ್ ಜೊತೆಗೂ ತೆರೆ ಹಂಚಿಕೊಂಡಿದ್ದಾರೆ. ಈ ಸುದ್ದಿ ಜಾಹೀರಾಗಿ ಒಂದಷ್ಟು ತಿಂಗಳುಗಳೇ ಕಳೆದಿವೆ. ಆದರೀಗ ಆ ಚಿತ್ರದ ಕಡೆಯಿಂದ ಶಿವಣ್ಣನ ಪಾತ್ರದ ಬಗ್ಗೆ ಮತ್ತೊಂದಷ್ಟು ಹೊಸಾ ವಿಚಾರಗಳು ಜಾಹೀರಾಗಿವೆ. ಈ ಹಿಂದೆ ಟೀಸರ್ ನಲ್ಲಿಯೇ ಶಿವರಾಜ್ ಕುಮಾರ್ ಪಾತ್ರದ ಚಹರೆ ಗೋಚರಿಸಿತ್ತು. ಆದರೆ, ಆವತ್ತಿಗೂ, ಜೈಲರ್ ಚಿತ್ರದ ನಾಗಾಲೋಟ ನಡೆಯುತ್ತಿರುವ ಈವತ್ತಿಗೂ ಸ್ಥಿತಿಗತಿಗಳು ಬದಲಾಗಿವೆ. ಓಟಿಟಿಯಲ್ಲಿ ಶಿವಣ್ಣನ ಚಿತ್ರಗಳನ್ನು ತಡಕಾಡಿ ನೋಡುತ್ತಿರುವ ಪರಭಾಷಾ ಸಿನಿಮಾ ಪ್ರೇಮಿಗಳು ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿನ ಅವರ ಪಾತ್ರದ ಸುತ್ತ ಒಂದಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ಸಂಭ್ರಮಿಸುತ್ತಿದ್ದಾರೆ.

ಜೈಲರ್ ನಲ್ಲಿ ನರಸಿಂಹನಾಗಿ ಮಿಂಚಿದ್ದ ಶಿವಣ್ಣನ ಗೆಟಪ್ಪು ಕಂಡು ಅನೇಕರು ಕನ್ನಡ ಸಿನಿಮಾ ನಿರ್ಮಾತೃಗಳ ಬಗ್ಗೆ ಮಾತಾಡಿದ್ದರು. ಇಂಥಾ ಭಿನ್ನ ಬಗಯಲ್ಲಿ ಶಿವಣ್ಣನನ್ನು ಕನ್ನಡದ ಮಂದಿ ಯಾಕೆ ತೋರಿಸಲು ಪ್ರಯತ್ನಿಸೋದಿಲ್ಲ ಎಂಬರ್ಥದಲ್ಲಿ ಚರ್ಚೆಗಳು ನಡೆದಿದ್ದವು. ಆದರೀಗ ಕ್ಯಾಪ್ಟನ್ ಮಿಲ್ಲರ್ ನಿರ್ದೇಶಕ ಕನ್ನಡ ಸಿನಿಮಾದಿಂದಲೇ ಪ್ಭಾವಿತರಾಗಿ ಶಿವಣ್ಣನ ಪಾತ್ರವನ್ನು ಕಟ್ಟಿದಂತೆ ಭಾಸವಾಗುತ್ತಿದೆ. ಅದು ಎಷ್ಟ ಮಟ್ಟಿಗೆ ಸತ್ಯ ಎಂಬುದು ಸಿನಿಮಾ ಬಿಡುಗಡೆಗೊಂಡ ನಂತರವಷ್ಟೇ ಗೊತ್ತಾಗಬೇಕಿದೆ. ಒಂದು ವೇಳೆ ಶಿವಣ್ಣನ ಪಾತ್ರ, ಗೆಟಪ್ಪಿಗೆ ನರ್ತನ್ ನಿರ್ದೇಶನದ ಮಫ್ತಿ ಸ್ಫೂತಿಯಾಗಿದ್ದೇ ಹೌದಾದರೆ, ಅದು ಕನ್ನಡಿಗರೆಲ್ಲ ಸಂಭ್ರಮಿಸೋ ವಿಚಾರ ಎಂಬುದರಲ್ಲಿ ಎರಡು ಮಾತಿಲ್ಲ.

ಹೀಗೆ ಕ್ಯಾಪ್ಟನ್ ಮಿಲ್ಲರ್ ಸುತ್ತ ಚರ್ಚೆ ನಡೆದಿರುವ ಹೊತ್ತಲ್ಲಿಯೇ, ಶಿವಣ್ಣ ಹಾಡೊಂದರ ಮೂಲಕ ಲಕಲಕಿಸುವ ಲಕ್ಷಣಗಳು ಕಾಣಿಸಲಾರಂಭಿಸಿದ್ದಾವೆ. ಇದರಲ್ಲೊಂದು ವಿಶೇಷವಾದ ಹಾಡಿದೆ. ಮಾಸ್ ಶೈಲಿಯಲ್ಲಿ ಮೂಡಿ ಬಂದಿರೋ ಆ ಹಾಡಿನಲ್ಲಿ ಧನುಷ್ ಮತ್ತು ಶಿವಣ್ಣ ಕಾಣಿಸಿಕೊಂಡಿದ್ದಾರಂತೆ. ದರ ಮೂಲಕವೇ ಕ್ಯಾಪ್ಟನ್ ಮಿಲ್ಲರ್ ನ ಅಸಲೀ ಫ್ಲೇವರ್ ಏನೆಂಬುದರ ಅಂದಾಜು ಸಿಗುವ ಸಾಧ್ಯತೆಗಳಿದ್ದಾವೆ. ಇದೀಗ ತಮಿಳುನಾಡಿನ ತುಂಬಾ ಹಬ್ಬಿಕೊಂಡಿರುವ ಶಿವರಾಜ್ ಕುಮಾರ್ ಅಭಿಮಾನಿ ಬಳಗ ಆ ಹಾಡಿಗಾಗಿ ಎದುರು ನೋಡುತ್ತಿದೆ. ಆದಷ್ಟು ಬೇಗನೆ ಅದನ್ನು ಬಿಡುಗಡೆಗೊಳಿಸುವಂತೆ ಆಗ್ರಹಗಳೂ ಕೇಳಿ ಬರುತ್ತಿವೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!