ಚಿತ್ರೀಕರಣದ ಆರಂಭಿಕ ಹಂತದಿಂದಲೇ ಸದ್ದು ಮಾಡುತ್ತಾ ಮುಂದುವರೆಯುತ್ತಿರುವ ಚಿತ್ರ (shabbash movie) `ಶಭ್ಬಾಷ್’. ರುದ್ರಶಿವ (director rudrashiva) ನಿರ್ದೇಶನದ ಈ ಸಿನಿಮಾ ಎಲ್ಲರೂ ಅಚ್ಚರಿಗೊಳ್ಳುವ ಮಟ್ಟಿಗೆ ವೇಗವಾಗಿ ಕಾರ್ಯಗತವಾಗಿದೆ. ಸಂಕ್ರಾಂತಿಯ ಹೊತ್ತಿಗೆಲ್ಲ ಮುಹೂರ್ತ ಮುಗಿಸಿಕೊಂಡಿದ್ದ ಚಿತ್ರತಂಡ, ಅದರ ಬೆನ್ನಲ್ಲಿಯೇ ಬೆಂಗಳೂರು ಮತ್ತು ಚನ್ನಗಿರಿಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡಿತ್ತು. ಆ ವಿವರಗಳಿನ್ನೂ ಹಸಿಯಾಗಿರುವಾಗಲೇ, ಮಡಿಕೇರಿ ಸೀಮೆಯ ಸುಂದರ ವಾತಾವರಣದಲ್ಲಿ ಎರಡನೇ ಹಂತದ ಚಿತ್ರೀಕರಣ ಮುಗಿಸಿಕೊಂಡಿರುವ ಸುದ್ದಿ ಜಾಹೀರಾಗಿದೆ. ಇಂಥಾದ್ದೊಂದು ಸುದ್ದಿಯ ಜೊತೆ ಜೊತೆಗೇ ಚಿತ್ರತಂಡ ಒಂದಷ್ಟು ಚಿತ್ರೀಕರಣದ ಅನುಭವಗಳನ್ನೂ ಹಂಚಿಕೊಂಡಿದೆ!

ಅತ್ಯಂತ ವ್ಯವಸ್ಥಿತವಾದ ಪ್ಲಾನಿಂಗ್ ಮಾತ್ರವೇ ಒಂದು ಸಿನಿಮಾವನ್ನು ಯಶಸ್ಸಿನ ದಡ ಸೇರಿಸಲು ಸಾಧ್ಯ. ಆ ನಿಟ್ಟಿನಲ್ಲಿ ನೋಡಹೋದರೆ, ನಿಇರ್ದೇಶಕ ರುದ್ರಶಿವ ಅತ್ಯಂತ ಅಚ್ಚುಕಟ್ಟಾಗಿ ನೀಲನಕ್ಷೆ ತಯಾರು ಮಾಡಿಕೊಂಡು ಅದಕ್ಕನುಗುಣವಾಗಿಯೇ ಚಿತ್ರೀಕರಣ ನಡೆಸುತ್ತಿದ್ದಾರೆ. ಅದರ ಭಾಗವಾಗಿಯೇ ಇದೀಗ ಮಡಿಕೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಎರಡನೇ ಹಂತದ ಚಿತ್ರೀಕರಣ ಸಾಂಘವಾಗಿ ನೆರವೇರಿದೆ. ಇಲ್ಲಿನ ಬಿರನಾಣಿ, ಗೋಣಿಕೊಪ್ಪ ಮುಂತಾದ ಪ್ರದೇಶಗಳಲ್ಲಿ ದೃಷ್ಯಗಳನ್ನು ಸೆರೆಹಿಡಿಯಲಾಗಿದೆ. ಚೆಂದದ ಜಲಪಾತಗಳು, ಬೆಟ್ಟಗುಡ್ಡ, ಟಾಟಾ ಟೀ ಎಸ್ಟೇಟ್ ಮುಂತಾದೆಡೆಗಳಲ್ಲಿ ಚಿತ್ರೀಕರಣ ನೆರವೇರಿದೆ.

ಮಡಿಕೇರಿ ಅಂದರೇನೇ ಅನೇಕ ವೈಚಿತ್ರ್ಯ, ಸವಾಲುಗಳನ್ನು ಅಡಕವಾಗಿಸಿಕೊಂಡಿರುವ ಭೂ ಭಾಗ. ಅದರ ಭಾಗವಾಗಿರುವ ದುರ್ಗಮ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿರುವ ಖುಷಿ ಚಿತ್ರತಂಡಕ್ಕಿದೆ. ಈ ಹಂತದಲ್ಲಿ ಪ್ರಧಾನವಾಗಿ ಎರಡು ಹಾಡುಗಳನ್ನು ಚಿತ್ರೀಕರಸಲಾಗಿದೆ. ಅದರಲ್ಲೊಂದು ತುಂಬಾನೇ ವಿಶೇಷವಾಗಿದೆ. ಈ ಭಾಗದಲ್ಲಿ ಕಾಡಿನೊಂದಿಗೆ ನಿಕಟ ನಂಟು ಹೊಂದಿರುವ ಜೇನುಕುರುಬರ ಹಾಡಿಗಳಿದ್ದಾವೆ. ಅಲ್ಲಿಗೆ ಭೇಟಿ ಕೊಟ್ಟಿರುವ ಚಿತ್ರತಂಡ, ಆ ಜನಾಂಗದವರಿಂದ ಸ್ಫುರಿಸಿದ ಹಾಡನ್ನು, ಅವರದ್ದೇ ಧಾಟಿಯಲ್ಲಿ ಈ ಸಿನಿಮಾಗೆ ಅಳವಡಿಸಿಕೊಂಡಿದ್ದಾರಂತೆ. ಈ ಚಿತ್ರೀಕರಣವೂ ವಿಶೇಷವಾಗಿತ್ತಂತೆ. ಅಂದಹಾಗೆ, ಈ ಹಾಡು ಒಟ್ಟಾರೆ ಸಿನಿಮಾದ ಹೈಲೈಟುಗಳಲ್ಲಿ ಒಂದಾಗಿ ದಾಖಲಾಗಲಿದೆ ಎಂಬ ಭರವಸೆ ನಿರ್ದೇಶಕರದ್ದು!

ಒಟ್ಟು ಆರು ದಿನಗಳ ಕಾಲ ಒಂದಿಡೀ ಚಿತ್ರತಂಡ ಮಡಿಕೇರಿಯಲ್ಲಿ ಬೀಡು ಬಿಟ್ಟಿತ್ತು. ಇಡೀ ತಂಡ ಒಂದಿನಿತೂ ವಿರಾಮವಿಲ್ಲದೆ ಅವ್ಯಾಹತವಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದೆ. ಅದರಲ್ಲಿಯೂ ಒಂದು ದಿನ ಸಂಜೆ ಆರರಿಂದ ಬೆಳಗ್ಗೆ ಆರರವರೆಗೆ ಸತತವಾಗಿ ನಡೆಸಿರುವ ಚಿತ್ರೀಕರಣ ಎಲ್ಲರ ಪಾಲಿಗೆ ಸವಾಲಿನದ್ದಾಗಿತ್ತು. ಮಡಿಕೇರಿಯ ಹವಾಗುಣ, ಅಲ್ಲಿನ ಮಂಜು ಮತ್ತು ಚಳಿಯ ತೀವ್ರತೆಯ ಅರಿವಿರುವವರಿಗೆ, ಅಲ್ಲಿ ರಾತ್ರಿ ಚಿತ್ರೀಕರಣ ನಡೆಸೋದು ಅದೆಷ್ಟು ಕಷ್ಟವೆಂಬ ಅರಿವಿರುತ್ತದೆ. ಅದನ್ನೆಲ್ಲ ನೀಗಿಕೊಂಡು ಡ್ಯಾನ್ಸರ್ ಗಳು, ಕಲಾವಿದರು, ತಾಂತ್ರಿಕ ವರ್ಗ ಅತ್ಯಂತ ಉತ್ಸಾಹದಿಂದ ಈ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಓಂ ಸಾಯಿ ಪ್ರಕಾಶ್ ಸೇರಿದಂತೆ ಘಟಾನುಘಟಿ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವ ರುದ್ರಶಿವ ನಿರ್ದೇಶನದ ಮೊದಲ ಚಿತ್ರವಿದು. ಪವೀಂದ್ರ ಮುತ್ತಪ್ಪ ಈ ಚಿತ್ರವನ್ನು ಏಸ್ 22 (ace 22) ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ `ಕ’ ಮತ್ತು `ಮಳೆಬಿಲ್ಲು’ ಸಿನಿಮಾಗಳಲ್ಲಿ ನಟಿಸಿರುವ ಶರತ್ ನಾಯಕನಾಗಿ ನಟಿಸಿದ್ದರೆ, ನಿಸರ್ಗ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇದೀಗ ಎರಡನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡಿರುವ ಚಿತ್ರತಂಡ, ಮೂರನೇ ಹಂತದ ಚಿತ್ರೀಕರಣದತ್ತ ಸಾಗುತ್ತಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!