ಸೂರ್ಯ ವಸಿಷ್ಠ (surya vasista) ನಿರ್ದೇಶನದ ಸಾರಾಂಶ ಚಿತ್ರ ಬಿಡುಗಡೆಗೊಂಡಿದೆ. ನೋಡುಗರೆಲ್ಲರಿಂದ ಮೆಚ್ಚುಗೆ ಮೂಡಿಕೊಂಡು, ಅದು ಮೆಲ್ಲಗೆ ಪ್ರೇಕ್ಷಕ ವಲಯಕ್ಕೆಲ್ಲ ಹಬ್ಬಿಕೊಳ್ಳುತ್ತಿದೆ. ಆರಂಭದಿಂದ ಇಲ್ಲಿಯವರೆಗೂ ಭಿನ್ನ ಪಥದಲ್ಲಿಯೇ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾ ಬಂದಿದ್ದ ಚಿತ್ರ ಸಾರಾಂಶ. ಇದೀಗ ರಾಜ್ಯದಲ್ಲಿ ಬಿಡುಗಡೆಗೊಂಡು ಯಶಸ್ವೀ ಪ್ರದರ್ಶನ ಕಾಣುತ್ತಿರುವ ಈ ಚಿತ್ರ ಸಾಗರದಾಚೆಗೂ ಸದ್ದು ಮಾಡುವ ಸನ್ನಾಹದಲ್ಲಿದೆ. ಈ ಮೂಲಕ ಕನ್ನಡ ಚಿತ್ರರಂಗದ ಮಟ್ಟಿಗೊಂದು ದಾಖಲೆ ಸೃಷ್ಟಿಸಲು, ಈ ಮೂಲಕ ವಿದೇಶದಲ್ಲಿಯೂ ಕನ್ನಡ ಸಿನಿಮಾಗಳಿಗೆ ಪೂರಕ ವಾತಾವರಣ ಸೃಷ್ಟಿಸಲು ನಿರ್ಮಾಪಕ (ravi kashyap) ರವಿ ಕಶ್ಯಪ್ ಮುಂದಾಗಿದ್ದಾರೆ.

ರವಿ ಕಶ್ಯಪ್ ಕನ್ನಡ ಸಿನಿಮಾರಂಗದ ಪಾಲಿಗೆ ಚಿರಪರಿಚಿತರು. ಲೂಸಿಯಾ ಕಾಲದಿಂದಲೂ ಹೊಸಬರನ್ನು ಬೆನ್ತಟ್ಟಿ ಪ್ರೋತ್ಸಾಹಿಸುತ್ತಾ, ಕನ್ನಡ ಸಿನಿಮಾಗಳ ಮಾರುಕಟ್ಟೆಯನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಾ ಬಂದಿದ್ದಾರೆ. ಅದರ ಭಾಗವಾಗಿಯೇ ಅವರು ನಿರ್ಮಾಣ ಮಾಡಿರುವ ಸಾರಾಂಶದ ಪ್ರೀಮಿಯರ್ ಶೋವನ್ನು ಯುಎಸ್ ನಲ್ಲಿ ಆಯೋಜಿಸಿದ್ದಾರೆ. ಬಹುಶಃ ಇದು ಕನ್ನಡ ಚಿತ್ರರಂಗದ ಮಟ್ಟಿಗೊಂದು ದಾಖಲೆಯೂ ಹೌದು. ಇದರಿಂದಾಗಿಯೇ ಹೊಸಾ ಪರಂಪರೆಯೊಂದಕ್ಕೆ ರವಿ ನಾಂದಿ ಹಾಡಿದಂತಾಗಿದೆ.

ಅಂದಹಾಗೆ, ಇದೇ ತಿಂಗಳ 17ರಂದು ಬೆಳಗ್ಗೆ 9.45ಕ್ಕೆ ನ್ಯಾಶ್‍ವಿಲ್ ಎಂಬಲ್ಲಿನ ಮಾಲ್ಕೊ ಸ್ಮೈರ್ನಾ ಸಿನಿಮಾ, ಖಿಓ, USಂ ಚಿತ್ರಮಂದಿರದಲ್ಲಿ ಸಾರಾಂಶದ ಪ್ರೀಮಿಯರ್ ಶೋ ನಡೆಯಲಿದೆ. ಇದರಿಂದಾಗಿ ಆ ಭಾಗದಲ್ಲಿ ನೆಲೆಸಿರುವ ಕನ್ನಡಿಗರೆಲ್ಲ ಖುಷಿಗೊಂಡಿದ್ದಾರೆ. ಯಾಕೆಂದರೆ, ಇಂಥಾದ್ದೊಂದು ಅವಕಾಶ ಅವರೆಲ್ಲರ ಮುಂದೆ ತೆರೆದುಕೊಳ್ಳುತ್ತಿರೋದು ಇದೇ ಮೊದಲು. ಅವರೆಲ್ಲರೂ ಸಾರಾಂಶ ಪ್ರೀಮಿಯರ್ ಶೋನಲ್ಲಿ ಭಾಗಿಯಾಗಲಿದ್ದಾರೆ. ಇಂಥಾದ್ದೊಂದು ಕ್ರಾಂತಿಕಾರಕ ಹೆಜ್ಜೆಯೊಂದಿಗೆ ನಿರ್ಮಾಪಕರಾದ ರವಿ ಕಶ್ಯಪ್ ಮತ್ತು ಆರ.ಕೆ ನಲ್ಲಮ್ ಬೆರಗು ಮೂಡಿಸಿದ್ದಾರೆ. ಈ ಚಿತ್ರದಲ್ಲಿ ದೀಪಕ್ ಸುಬ್ರಮಣ್ಯ, ಸೂರ್ಯ ವಸಿಷ್ಠ, ಶೃತಿ ಹರಿಹರನ್, ಶ್ವೇತಾ ಗುಪ್ತ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪೆÇ?ರಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ಸಾರಾಂಶದ ಮೂಲಕ ಅನಂತ್ ಭಾರದ್ವಾಜ್ ಎಂಬ ಪ್ರತಿಭಾನ್ವಿತ ಛಾಯಾಗ್ರಾಹಕನ ಆಗಮನವೂ ಆಗುತ್ತಿದೆ. ಈ ಚಿತ್ರದ ಒಟ್ಟಾರೆ ಆಕರ್ಷಣೆಗಳಲ್ಲಿ ಛಾಯಾಗ್ರಹಣವೂ ಒಂದಾಗಿ ಸೇರಿಕೊಂಡಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!