ಯಾವುದೇ ಸಮಸ್ಯೆಗಳ ಕಾವಳ ಸರಿದು ಹೊಸಾ ದಿಕ್ಕು ಗೋಚರಿಸುತ್ತದೆಂಬುದು ಪ್ರತೀ ಜೀವಗಳ ನಂಬುಗೆ. ಆದರೆ, ಕೆಲವರ ಜೀವನದಲ್ಲಿ ಮಾತ್ರವೇ ಅದು ಬಹುಬೇಗನೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹೇಳೋದಾದರೆ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಸಮಂತಾ (samantha) ಪಾಲಿಗೆ ಅಂಥಾದ್ದೊಂದು ಅದೃಷ್ಟ ಕೈ ಹಿಡಿದಿದೆ. ಅತ್ತ ತೀರಾ ಪ್ರೀತಿಯಿಂದ ನೆಚ್ಚಿಕೊಂಡಿದ್ದ ಮದುವೆ ಮುರಿಬಿದ್ದ ಸಂಕಟ, ಇತ್ತ ಒಂಟಿಯಾಗಿ ನಿಂತ ಘಳಿಗೆಯಲ್ಲಿ ಅಮರಿಕೊಂಡ ವಿಚಿತ್ರ ಕಾಯಿಲೆ… ಬಹುಶಃ ಎಂಥಾ ಗಟ್ಟಿಗರನ್ನೇ ಆದರೂ ಇಂಥಾ ಸಂದರ್ಭ ಹೈರಾಣು ಮಾಡಿ ಹಾಕುತ್ತೆ. ಓರ್ವ ಹೆಣ್ಣು ಮಗಳಾಗಿ ಎಲ್ಲವನ್ನೂ ಏಕಾಂಗಿಯಾಗೇ ಎದುರಿಸಿದ್ದ ಸಮಂತಾ (samantha) ಈಗ ಮತ್ತೆ ಎದ್ದು ನಿಂತಿದ್ದಾಳೆ. ಇದು ಆಕೆಯ ಪಾಲಿಗೆ ಅಕ್ಷರಶಃ ಪುನರ್ಜನ್ಮ. ವೃತ್ತಿ ಬದುಕಿನ ಪಾಲಿಗೆ ಅದ್ಭುತ ಸೆಕೆಂಡ್ ಇನ್ನಿಂಗ್ಸ್. ಇದೀಗ ಸಾಲು ಸಾಲು ಅವಕಾಶ ಪಡೆದುಕೊಂಡು, ಕೋಟಿ ಕೋಟಿ ಸಂಭಾವನೆ ಗಳಿಸುತ್ತಿರೋ ಸಮಂತಾಗೀಗ ಎದುರಾಳಿಯೊಬ್ಬಳು ಹುಟ್ಟಿಕೊಂಡಿದ್ದಾಳೆ. ಆಕೆ ಬಹುಭಾಷಾ ನಟಿ (trisha krishnan) ತ್ರಿಷಾ!

ಸಮಂತಾ (samantha) ಅನುಭವಿಸಿದ್ದ ಸಾಲು ಸಾಲು ಸಂಕಷ್ಟ ಕಂಡವರನೇಕರು ಇನ್ನು ಈಕೆಯ ವೃತ್ತಿ ಬದುಕಿಗೆ ಫುಲ್ ಸ್ಟಾಪ್ ಬಿತ್ತೆಂದೇ ಅಂದುಕೊಂಡಿದ್ದರು. ಅದರಲ್ಲಿ ಅಚ್ಚರಿ ಪಡುವಂಥಾದ್ದೇನೂ ಇಲ್ಲ. ಆದರೆ, ಸಮಂತಾ ಬಹುಬೇಗನೆ ರೇಸಿಗೆ ಮರಳಿದ್ದಾಳೆ. ಪುಷ್ಪ ಚಿತ್ರದ ಹಾಡೊಂದಕ್ಕೆ ಮಾದಕವಾಗಿ ಮೈ ಬಳುಕಿಸಿದ್ದ ಸಮಂತಾಳ ನಸೀಬೇ ಇದೀಗ ಬದಲಾಗಿ ಹೋಗಿದೆ. ಆಕೆ ನೋಡ ನೋಡುತ್ತಲೇ ದಕ್ಷಿಣ ಭಾರತೀಯ ಚಿತ್ರರಂಗದ ಟಾಪ್ ನಟಿಯರ ಸಾಲಿನಲ್ಲಿ ಮುಂಚೂಣಿ ಪಟ್ಟ ಗಿಟ್ಟಿಸಿಕೊಂಡಿದ್ದಾಳೆ. ಅದರ ಭಾಗವಾಗಿಯೇ ಈ ಹಿಂದಿನದ್ದ್ಕಿಂತೂ ಹೆಚ್ಚಿನ ಅವಾಶಗಳು ಆಕೆಯನ್ನು ಅರಸಿ ಬರುತ್ತಿವೆ. ಸಿಟಾಡೆಲ್ ಇಂಡಿಯಾ ಅಂತೊಂದು ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾಳಲ್ಲಾ? ಅದಕ್ಕೆ ಆಕೆ ಪಡೆದುಕೊಂಡಿರೋ ಸಂಭಾವನೆ ಭರ್ತಿ ಹತ್ತು ಕೋಟಿ!

ಹೀಗೆ ಸಮಂತಾ ಮೈ ಕೊಡವಿಕೊಂಡು ಎದ್ದು ನಿಲ್ಲುತ್ತಲೇ, ಅದೇ ದಕ್ಷಿಣ ಭಾರತೀಯ ಚಿತ್ರರಂಗದ ಮತ್ತೋರ್ವ ಸುಂದರಿ ತ್ರಿಷಾ ಲಕ್ಕು ಕೂಡಾ ಅಚ್ಚರಿದಾಯಕವಾಗ ಕುದುರಿಕೊಂಡಿದೆ. ಬಾಲ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಯಶಸ್ಸಿನ ಉತ್ತುಂಗ ಕಂಡಿದ್ದಾಕೆ ತ್ರಿಷಾ. ಈಕೆಯನ್ನು ಹೀರೋಯಿನ್ನಾಗಿ ತಮ್ಮ ಸಿನಿಮಾಕ್ಕೆ ಕರೆತರಬೇಕೆಂಬುದೇ ಅನೇಕರ ಕನಸಾಗಿತ್ತು. ನಮ್ಮದೇ ಕನ್ನಡದಲ್ಲಿಯೂ ಅಂಥಾ ಸಾಕಷ್ಟು ವಿಫಲ ಪ್ರಯತ್ನಗಳು ನಡೆದಿದ್ದವು. ಆದರೆ, ಇಂಥಾ ಜನಪ್ರಿಯತೆ ಒಂದಿದ್ದ ತ್ರಿಷಾ ಕೂಡಾ ವರ್ಷಗಟ್ಟಲೆ ಮಂಕಾಗ ಕೂರುವಂಥಾ ವಾತಾವರಣ ಸೃಷ್ಟಿಯಾಗಿತ್ತು. ಆ ಬಗ್ಗೆ ನಾನಾ ರೂಮರುಗಳು ಹಬ್ಬಿಕೊಂಡಿದ್ದವು. ಅದಕ್ಕೆ ಸರಿಯಾಗಿ ಸದಾ ಫಳಫಳಿಸುವ ಆಕೆಯ ಸ್ನಿಗ್ಧ ಸೌಂದರ್ಯ ಒಂದಷ್ಟು ಮಂಕಾದಂತೆ ಕಂಡು ಬರಲಾಂಭಿಸಿತ್ತು.

ಇಂಥಾ ತ್ರಿಷಾ ಕೂಡಾ ಇದೀಗ ಮತ್ತೆ ರೇಸಿಗೆ ಮರಳಿದ್ದಾಳೆ. ಇತ್ತೀಚೆಗೆ ತೆರೆ ಕಂಡಿದ್ದ ಪೊನ್ನಿಯಿನ್ ಸೆಲ್ವನ್ ಚಿತ್ರ ನಿರೀಕ್ಷಿತ ಪ್ರಮಾಣದಲ್ಲಿ ಗೆಲುವು ಕಂಡಿರಲಿಲ್ಲ. ಆದರೆ, ಅದರಲ್ಲಿ ನಟಿಸಿದ್ದ ತ್ರಿಷಾ ಬಗೆಗಿನ ಕ್ರೇಜ್ ಮಾತ್ರ ಇಮ್ಮಡಿಸಿದೆ. ಅದಾದ ನಂತರದಲ್ಲಿ ಹಲವಾರು ಸ್ಟಾರ್‍ಗಳ ಸಿನಿಮಾಗಳಲ್ಲಿ ತ್ರಿಷಾಗೆ ಆಫರುಗಳು ಬರುತ್ತಿವೆ. ಒಂದು ಮೂಲದ ಪರಕರ ಆಕೆಯ ಸಂಭಾವನೆ ಕೂಡಾ ಹತ್ತು ಕೋಟಿಯ ಗಡಿ ಮೀರುವ ಸನ್ನಾಹದಲ್ಲಿದೆ. ತ್ರಿಷಾ ಇದೀಗ ವಿಜಯ್ ಜೊತೆ ಲಿಯೋ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. ಹದಿನಾಲಕ್ಕು ವರ್ಷಗಳ ನಂತರ ಈ ಜೋಡಿ ಮತ್ತೆ ಒಂದಾಗಿದೆ. ತ್ರಿಷಾ ಕೃಷ್ಣನ್ ಕೂಡಾ ಖಾಸಗಿ ಬದುಕಿನ ತೊಳಲಾಟಗಳಿಂದ ನೊಂದಿದ್ದವಳು. ರಾಣಾ ದಗ್ಗುಬಾಟಿಯೊಂದಿಗಿನ ಅಫೇರು ಮುರಿಉಬಿದ್ದ ಬಳಿಕ ಆಕೆ ಮಾನಸಿಕವಾಗಿ ಜರ್ಝರಿತಳಾಗಿದ್ದಳು. ಈ ವಿಚಾರದಲ್ಲಿ ಒಂದೇ ದೋಣಿಯ ಪಯಣಿಗರಂತೆ ಕಾಣುವ ಸಮಂತಾ ಮತ್ತು ತ್ರಿಷಾ ಒಟ್ಟೊಟ್ಟಿಗೇ ಮೇಲೆದ್ದು ನಿಂತಿರೋದನ್ನು ಕಂಡು ಅಭಿಮಾನಿ ಬಳಗ ಖುಷಿಗೊಂಡಿದೆ.

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!