ರಿಷಭ್ ಶೆಟ್ಟಿಯೀಗ (rishabh shetty) ಕಾಂತಾರಾ (kanthara movie) ಅಧ್ಯಾಯ ಒಂದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಹಾಗಂತ ಸಿನಿಮಾ ಪ್ರೇಕ್ಷಕರೆಲ್ಲ ಅಂದುಕೊಂಡಿದ್ದಾರೆ. ಅದು ಸತ್ಯವೂ ಹೌದು. ಯಾಕೆಂದರೆ, ಈಗೊಂದಷ್ಟು ತಿಂಗಳಿಂದ ಅವ್ಯಾಹತವಾಗಿ ತಯಾರಿ ನಡೆಯುತ್ತಿದೆ. ಮಲೆಯಾಳದ (mohan lal) ಮೋಹನ್ ಲಾಲ್ ಸೇರಿದಂತೆ ಒಂದಷ್ಟು ಪರಭಾಷಾ ಸ್ಟಾರ್ ನಟರನ್ನು ರಿಷಭ್ ಸಂಪರ್ಕಿಸುತ್ತಿದ್ದಾರೆ. ಅಲ್ಲಿಯೇ ಕಾಂತಾರ ಮುಂದಿನ ಭಾಗ ಘಟಾನುಘಟಿ ನಟ ನಟಿಯರಿಂದ ಕಳೆಗಟ್ಟಿಕೊಳ್ಳಲಿದೆಂಯೆಂಬ ಸ್ಪಷ್ಟ ಸಂದೇಶ ರವಾನೆಯಾದಂತಾಗಿದೆ. ಇದೆಲ್ಲದರ ಜೊತೆ ಜೊತೆಗೇ ಓರ್ವ ನಟನಾಗಿ ಮತ್ತೊಂದು ಮಜಲಿನತ್ತ ರಿಷಭ್ (rishabh shetty) ಹೊರಳಿಕೊಂಡಂತಿದೆ. ಅದರ ಭಾಗವಾಗಿಯೇ, ಅವರು ತೆಲುಗು ಸಿನಿಮಾವೊಂದರಲ್ಲಿ ನಟಿಸಲು ಒಪ್ಪಿಕೊಂಡಿರುವ ಸುದ್ದಿ ಜಾಹೀರಾಗಿದೆ.

ಈಗ ಹರಿದಾಡುತ್ತಿರೋ ಮಾಹಿತಿಗಳ ಪ್ರಕಾರ ಹೇಳೋದಾದರೆ, ರಿಷಭ್ ತೆಲುಗಿನ ಜೈ ಹನುಮಾನ್ (jai hanuman movie) ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ. (director prashanth varma) ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಮೂಡಿ ಬರಲಿರೋ ಈ ಚಿತ್ರದಲ್ಲಿ ರಿಷಭ್ ಅಚ್ಚರಿದಾಯಕ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಕುರಿತಾಗಿ ತೆಲುಗು ಚಿತ್ರರಂಗದಲ್ಲಿ (telugu film industry) ಈಗಾಗಲೇ ರಂಗುರಂಗಾದ ಸುದ್ದಿಗಳು ಹಬ್ಬಿಕೊಳ್ಳುತ್ತಿವೆ. ಹಾಗಂತ ಇದೇ ರಿಷಭ್ ಅಭಿನಯದ ಮೊದಲ ತೆಲುಗು ಚಿತ್ರ ಅಂದುಕೊಳ್ಳಬೇಕಿಲ್ಲ. ಈಗಾಗಲೇ ಅವರು ಮತ್ತೊಂದು ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. ಅದರ ಚಿತ್ರೀಕರಣವೂ ಮುಕ್ತಾಯಗೊಂಡಿದೆ. ಪ್ರಖ್ಯಾತ ನಿರ್ಮಾಣ ಸಂಸ್ಥೆಯಿಂದ ರೂಪುಗೊಂಡಿರುವ ಸದರಿ ಚಿತ್ರದಲ್ಲಿನ ರಿಷಭ್ ಪಾತ್ರದ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಆದರೆ, ಈ ಬಗ್ಗೆ ತೆಲುಗು ಚಿತ್ರರಂಗದಲ್ಲೀಗ ನಾನಾ ರೂಮರುಗಳು ಹಬ್ಬಿಕೊಳ್ಳುತ್ತಿವೆ.

ಹೆಚ್ಚೇನೂ ಹೇಳಿಕೊಳ್ಳದೆ, ಯಾವ ಸುಳಿವನ್ನೂ ಬಿಟ್ಟುಕೊಡದೆ ಸಿನಿಮಾವನ್ನೇ ಅಚ್ಚರಿಯಂತೆ ಜನರ ಮುಂದಿಡೋದು ರಿಷಭ್ ಸ್ಪೆಷಾಲಿಟಿ. ಸಿನಿಮಾದ ಶುರುವಾತಿನಲ್ಲೇ ಭಯಂಕರ ಬಿಲ್ಡಪ್ಪು ಕೊಟ್ಟ ಅದೆಷ್ಟೋ ಸಿನಿಮಾಗಳು ಭೀಕರವಾಗಿ ಸೋಲು ಕಂಡ ಉದಾಹರಣೆಗಳಿದ್ದಾವೆ. ಈ ಕಾರಣದಿಂದಲೇ ಅವರು ಬುದ್ಧಿವಂತಿಕೆಯ ನಡೆ ಅನುಸರಿಸಿಕೊಂಡು ಬರುತ್ತಿದ್ದಾರೆ. ತಾವು ನಟಿಸಿರುವ, ನಟಿಸುತ್ತಿರುವ ತೆಲುಗು ಚಿತ್ರಗಳ ವಿಚಾರದಲ್ಲಿಯೂ ರಿಷಭ್ ಅದೇ ಫಾರ್ಮುಲಾವನ್ನು ಪ್ರಯೋಗಿಸಿದಂತಿದೆ. ಅಷ್ಟಕ್ಕೂ ಕಾಂತಾರ ಗೆಲುವಿನ ನಂತರ ತೆಲುಗು, ಮಲೆಯಾಳಂ ಸೇರಿದಂತೆ ನಾನಾ ಭಾಷೆಗಳಿಂದ ಅವರಿಗೆ ನಟನೆಯ ಆಫರುಗಳು ಬಂದಿದ್ದವಂತೆ. ಆದರೆ, ಮೊದಲ ಹಂತದಲ್ಲಿ ಎರಡು ತೆಲುಗು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಅಲ್ಲಿಗೆ ರಿಷಭ್ ತೆಲುಗಿನಲ್ಲಿಯೂ ನೆಲೆ ಕಂಡುಕೊಳ್ಳುವ ಲಕ್ಷಣಗಳು ದಟ್ಟವಾಗಿ ಗೋಚರಿಸಲು ಶುರುವಿಟ್ಟಿವೆ!

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!