ದೂರದ ನೋಯ್ಡಾದಲ್ಲಿ (noida) ಮತ್ತೆ ರೇವ್ ಪಾರ್ಟಿಯ (rave party) ಸದ್ದು ಶುರುವಾಗಿದೆ. ಬಿಗ್ ಬಾಸ್ ಓಟಿಟಿ ಸ್ಪರ್ಧಿಯಾಗಿದ್ದ (elvish yadav arrested) ಎಲ್ವಿಶ್ ಯಾದವ್ ಎಂಬಾತನನ್ನು ಪಟಾಲಮ್ಮಿನ ಸಮೇತ ಪೊಲೀಸರು ಜೈಲಿಗೆ ಗದುಮಿದ್ದಾರೆ. ಅದ್ಯಾವುದೋ ಯೂಟ್ಯೂಬ್ ಮೂಲಕ ಒಂದಷ್ಟು ಚಾಲ್ತಿಗೆ ಬಂದಿದ್ದಾತ ಎಲ್ವಿಶ್. ಸಕಲ ಚಟಗಳಿಗೂ ದಾಸನಾಗಿದ್ದ ಈತನನ್ನು ಬರಗೆಟ್ಟ (biggboss) ಬಿಗ್ ಬಾಸ್ ಶೋನಲ್ಲಿ ಮೆರೆಸಲಾಗಿತ್ತು. ಆ ಪ್ರಸಿದ್ಧಿಯ ಮರೆಯಲ್ಲಿಯೇ ಲಾಗಾಯ್ತಿನಿಂದಲೂ (rave party) ರೇವ್ ಪಾರ್ಟಿ, ಡ್ರಗ್ಸ್ ಸರಬರಾಜಿನಂಥಾ ದಂಧೆ ನಡೆಸುತ್ತಿದ್ದವನು ಎಲ್ವಿಶ್. ಸಾಮಾನ್ಯವಾಗಿ ಇಂಥಾ ರೈಡುಗಳಾದಾಗ ನಾನಾ ವೆರೈಟಿಯ (drugs) ಡ್ರಗ್ಸ್ ಗಳನ್ನ ವಶಪಡಿಸಿಕೊಳ್ಳಲಾಗುತ್ತೆ. ಆದರೆ, ಈತನಿಂದ ವಶಪಡಿಸಿಕೊಂಡ ಐಟಮ್ಮುಗಳು ಎದೆ ಅದುರಿಸುವಂತಿವೆ!

ಯಾಕಂದ್ರೆ, ಎಲ್ವಿಸ್ ಕಡೆಯಿಂದ ಪೊಲೀಸರು ವಶಪಡಿಸಿಕೊಂಡಿರೋದು ಐದು ಜೀವಂತ ನಾಗರ ಹಾವುಗಳು, ಒಂದು ಹೆಬ್ಬಾವು, ಎರಡು ತಲೆ ಹಾವು ಸೇರಿದಂತೆ ಇಪ್ಪತ್ತು ಬಗೆಯ ವಿಷಕಾರಿ ಹಾವುಗಳನ್ನು. ಡ್ರಗ್ಸ್ ಲೋಕದ ಭಯಾನಕ ಸತ್ಯಗಳ ಅರಿವಿಲ್ಲದವರು ಈ ವಿಚಾರ ಕೇಳಿ ಬೆಚ್ಚಿ ಬೀಳೋದರಲ್ಲಿ ಅಚ್ಚರಿಯೇನಿಲ್ಲ. ಡ್ರಗ್ಸ್ ಎಂಬುದನ್ನ ಮಾತ್ರೆಗಳು, ಪೌಡರ್, ಇಂಜಕ್ಷನ್ನುಗಳ ಮೂಲಕ ತೆಗೆದುಕೊಳ್ಳಲಾಗುತ್ತೆ ಅನ್ನೋದು ಜನಸಾಮಾನ್ಯರ ತಿಳಿವಳಿಕೆ. ಆದರೆ, ರೇವ್ ಪಾರ್ಟಿಗಳಲ್ಲಿ ಮೇಳೈಸುವ ನಶೆಯ ತಿಲ್ಲಾನ ಅಂಥಾದ್ದರಿಂದ ತಣಿಯುವುದಿಲ್ಲ. ರೇವ್ ಪಾರ್ಟಿ ತಲುಪಿಕೊಂಡವರು ನಶೆಯ ವಿಚಾರದಲ್ಲಿಯೂ ಉತ್ತುಂಗದ ಸ್ಥಿತಿ ತಲುಪಿರುತ್ತಾರೆ. ಅಲ್ಲಿ ಭೀಕರ ನಶೆಯ ಮತ್ತೊಂದು ರೌರವ ಜಗತ್ತು ಗರಿ ಬಿಚ್ಚಿಕೊಂಡಿರುತ್ತೆ. ವಿಶೇಷಜವೆಂದರೆ, ಕನ್ನಡವೂ ಸೇರಿದಂತೆ ಬಹುತೇಕ ಚಿತ್ರರಂಗದ ನಟ ನಟಿಯರು ಇಂಥಾ ರೇವ್ ಪಾರ್ಟಿಗಳ ಗುಂಗಿಗೆ ಬಿದ್ದಿದ್ದಾರೆ!

ಹಾಗಾದರೆ, ಈ ರೇವ್ ಪ;ಆರ್ಟಿ ಅಂದರೇನು? ಅದರೊಳಗೆ ಎಂತೆಂಥಾ ವ್ಯವಹಾರಗಳು ನಡೆಯುತ್ತವೆ ಎಂಬ ಕುತೂಹಲ ಮೂಡಿಕೊಳ್ಳುತ್ತೆ. ಅದಕ್ಕೆ ಉತ್ತರ ಹುಡುಕ ಹೊರಟರೆ ಭಯಾನಕ ಜಗತ್ತೊಂದು ತಂತಾನೇ ಕಣ್ಣೆದುರು ತೆರೆದುಕೊಳ್ಳುತ್ತೆ. ಈ ನಶೆ ಅನ್ನೋದಿದೆಯಲ್ಲಾ? ಅದು ಒಂದು ಹಂತಕ್ಕೆ ಮಾತ್ರವೇ ತೃಪ್ತವಾಗುವಂಥಾದ್ದಲ್ಲ. ಅದು ಓರ್ವ ವ್ಯಕ್ತಿಯನ್ನು ಎಂಥಾ ಮಟ್ಟಕ್ಕೂ ಕರೆದೊಯ್ದು ನಿಲ್ಲಿಸಿ ಬಿಡುತ್ತದೆ. ಟ್ಯಾಬ್ಲೆಟ್ಟು, ಪೌಡರ್ರು, ಗಾಂಜಾಗಳ ಘಾಟಿಗೆ ದೇಹ ಒಮ್ಮೆ ಒಗ್ಗಿಕೊಂಡರೆ, ಮತ್ತೊಂದು ಲೆವೆಲ್ಲಿನ ಕಿಕ್ಕಿಗಾಗಿ ಹಾತೊರೆಯಲಾರಂಭಿಸುತ್ತಾರೆ. ಅಂಥಾ ಹಂತ ತಲುಪಿದವರಿಗೆ ಅಕ್ಷರಶಃ ಸ್ವರ್ಗದಂತೆ ಕಾಣಿಸೋದು ಇಂಥಾ ರೇವ್ ಪಾರ್ಟಿಗಳೇ!

ಅಲ್ಲಿ ಹೊರ ಜಗತ್ತಿಗೆ ಗೊತ್ತಿಲ್ಲದ ನಶೆಯ ಮೂಲಗಳಿರುತ್ತವೆ. ಕಾರ್ಕೋಟಕ ವಿಷದ ಹಾವುಗಳಿಂದ ಕಚ್ಚಿಸಿಕೊಂಡು ಸುಖಿಸುವ ಸೈಕೋಗಳೇ ಅಲ್ಲಿ ಹಬೆಚ್ಚಾಗಿ ತುಂಬಿಕೊಂಡಿರುತ್ತವೆ. ಅದರಲ್ಲಿಯೂ ವಿಶೇಷವಾಗಿ ಕ್ಯಾಂಡಿ ಪ್ಲಿಪ್ ಅಂತ ಕರೆಯಲಾಗೋ ಡ್ರಗ್ಸ್ ಅಂತೂ ನಿಜಕ್ಕೂ ಭಯಾನಕ. ಹೆಚ್ಚಾಗಿ ರೇವ್ ಪಾರ್ಟಿಗೆ ಹೋಗುವವರ ಪ್ರಧಾನ ಆಕರ್ಷಣೆಯಾಗಿರೋದು ಅದೇ ಡ್ರಗ್ ಕಂಟೆಂಟು. ಈ ಕ್ಯಾಂಡಿ ಪ್ಲಿಪ್ ಅದ್ಯಾವ ಪರಿ ಡೇಂಜರಸ್ ಅಂದ್ರೆ, ಅದರ ಪ್ರಭಾವ ವ್ಯಕ್ತಿಯೋರ್ವನ ಮೇಲೆ ಕನಿಷ್ಠ ಏಳು ಗಂಟೆಗಳ ಕಾಲ ಇರುತ್ತದೆ. ಆ ಅವಧಿಯಲ್ಲಿ ಆತನೊಳಗೋರ್ವ ರಕ್ಕಸನ ಪ್ರವೇಶವಾದಂತಿರುತ್ತದೆ.

ಆ ಹಂತದಲ್ಲಿ ಸೊಕ್ಕಿ ಕೆನೆಯುವ ನಿರ್ಭೀತ ಮನಃಸ್ಥಿತಿಯೊಂದು ಆವರಿಸಿಕೊಳ್ಳುತ್ತೆ. ಆ ಘಳಿಗೆಯಲ್ಲಿ ಕ್ಯಾಂಡಿ ಪ್ಲಿಪ್ ತೆಗೆದುಕೊಂಡವರು ಯಾರ ಎದೆ ಬಗೆಯಲೂ ಸೈ, ಅದೆಂಥಾ ಶಕ್ತಿ ಶಾಲಿಗಳೊಂದಿಗೆ ಬಡಿದಾಡಲೂ ಸೈ ಎಂಬಂತಿರುತ್ತಾರೆ. ಅಕ್ಷರಶಃ ಸೈಕೋ ಮನಃಸ್ಥಿಒತಿಗೀಡಾದ ಇಂಥವರು ರೇವ್ ಪಾರ್ಟಿಗಳಲ್ಲಿ ವಿಕೃತ ಕಾಮದಲ್ಲಿಯೂ ತೊಡಗಿಕೊಳ್ಳುತ್ತಾರೆ. ಮನುಷ್ಯ ಜಗತ್ತೇ ಹೇಸಿಗೆ ಪಟ್ಟುಕೊಳ್ಳುವಂತೆ, ಅಕ್ಷರಶಃ ಮೃಗಗಳಂತೆ ಕೆನೆದಾಡುತ್ತಾರೆ. ಈವತ್ತಿಗೂ ಬೆಂಗಳೂರಿನಂಥಾ ನಗರದ ಇಕ್ಕೆಲಗಳಲ್ಲಿ, ಅಲ್ಲಿಂದ ಕಿಲೋಮೀಟರುಗಟ್ಟಲೆ ದೂರದಲ್ಲಿರೋ ರೆಸಾರ್ಟುಗಳಲ್ಲಿ ಇಂಥಾ ರೇವ್ ಪಾರ್ಟಿಗಳು ಎಗ್ಗಿಲ್ಲದೆ ನಡೆಯುತ್ತವೆ.

ಇಂಥಾ ಪಾರ್ಟಿಗಳಲ್ಲಿಯೇ ನಶೆಯ ತೆಕ್ಕೆಗೆ ಬಿದ್ದವರು ಸ್ನೇಕ್ ಬೈಟ್ ಗಾಗಿ ಹಾತೊರೆಯುತ್ತಾರೆ. ವಿಷ ಸರ್ಪಗಳಿಂದ ಕಚ್ಚಿಸಿಕೊಂಡು, ನರನಾಡಿಗಳಿಗೆ ವಿಷವೇರಿಕೊಳ್ಳೋದನ್ನೂ ಕೂಡಾ ಸುಖಿಸುತ್ತಾರೆ. ಒಂದಷ್ಟು ಕಾಲ ಡ್ರಗ್ಸ್ ಬಲದಿಂದ ಬದುಕಿದ್ದು, ನಂತರದಲ್ಲಿ ದುರಂತ ಅಂತ್ಯ ಕಾಣುತ್ತಾರೆ. ಈವತ್ತಿಗೆ ಕೆಲ ರಾಜಕಾರಣಿಗಳ ಖೂಳ ಮಕ್ಕಳು, ಶ್ರೀಮಂತರ ಸಂತಾನಗಳು, ಅನೇಕ ನಟ ನಟಿಯರೂ ಇಂಥಾ ಡ್ರಗ್ಸ್ ನಶೆಗೆ ದಾಸರಾಗಿದ್ದಾರೆ. ಅವಳ್ಯಾರೋ ರಾಗಿಣಿಯಂಥವಳನ್ನು ಡ್ರಗ್ಸ್ ಕೇಸಿನಲ್ಲಿ ಬಂಧಿಸುವ ಖಾಖಿಗಳು, ಎಗ್ಗಿಲ್ಲದೆ ನಡೆಯೋ ರೇವ್ ಪಾರ್ಟಿಗಳತ್ತ ಕುರುಡಾಗೋದೇ ಹೆಚ್ಚು. ಯಾಕಂದ್ರೆ, ಅಂಥಾ ಪಾರ್ಟಿಗಳಲ್ಲಿ ಹಣವಂತರ ಪಾಲಿರುತ್ತೆ. ಅದು ರಾತ್ರಿ ಬೆಳಗಾಗೋದರೊಳಗೆ ಲಕ್ಷ, ಕೋಟಿಯ ಕಮಾಯಿ ಮಾಡೋ ದಂಧೆ. ಅಲ್ಲಿ ಡ್ರಗ್ಸು, ಸೆಕ್ಸು ಸೇರಿದಂತೆ ಎಲ್ಲವೂ ಇರುತ್ತೆ. ಹಾಗಿದ್ದ ಮೇಲೆ ಈ ಸೋ ಕಾಲ್ಡ್ ಸೆಲೆಬ್ರಿಟಿಗಳು ಅದರತ್ತ ವಾಲದಿರಲು ಸಾಧ್ಯವೇ?

Share.

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

error: Content is protected !!